ದಿನವು ಸಮೀಪಿಸುತ್ತಿರುವಂತೆ ಒಬ್ಬರನ್ನೊಬ್ಬರು ಎಚ್ಚರಿಸುತ್ತಾ ಇರ್ರಿ
“ಒಬ್ಬರು ಇನ್ನೊಬ್ಬರಿಗೆ ಎಚ್ಚರಿಸುವವರಾಗಿ ಇರ್ರಿ, ಮತ್ತು ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವುದರಿಂದ ಇದನ್ನು ಮತ್ತಷ್ಟು ಮಾಡಿರಿ.”—ಇಬ್ರಿಯರಿಗೆ 10:25.
1, 2. ಯಾವ ದಿನವು ಹತ್ತರಿಸುತ್ತಾ ಇದೆ, ಮತ್ತು ಯೆಹೋವನ ಜನರ ಮನೋಭಾವವು ಏನಾಗಿರತಕ್ಕದ್ದು?
ಇಂದು ‘ಬಾ, ಜೀವಜಲದಲ್ಲಿ ಪಾಲು ತೆಗೆದುಕೊಳ್ಳಿರಿ’ ಹೇಳುವುದರಲ್ಲಿ ಭಾಗವಹಿಸುವವರು ತಮ್ಮನ್ನು ಪ್ರತ್ಯೇಕಿಸಿ ಕೊಳ್ಳುವುದಿಲ್ಲ. ಯೆಹೋವನ ವಿಜಯದ ಮಹಾದಿನವು ಸನ್ನಿಹಿತವಾಗುತ್ತಿರುವಂತೆಯೇ, ಅವರು ಬೈಬಲಿನ ಹಿತೋಪದೇಶವನ್ನು ಅನ್ವಯಿಸುವರು: “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ, ಸತ್ಕಾರ್ಯ ಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸೋಣ. ಸಭೆಯಾಗಿ ಕೂಡಿಕೊಳ್ಳುವದನ್ನು ಕೆಲವರು ರೂಢಿಯಾಗಿ ಬಿಟ್ಟಿರುವ ಪ್ರಕಾರ ನಾವು ಬಿಟ್ಟು ಬಿಡದೆ ಒಬ್ಬರನ್ನೊಬ್ಬರು ಎಚ್ಚರಿಸೋಣ. ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವುದರಿಂದ ಇದನ್ನು ಮತ್ತಷ್ಟುಮಾಡಿರಿ.”— ಇಬ್ರಿಯರಿಗೆ 10: 24, 25.
2 ಶಾಸ್ತ್ರವಚನಗಳು “ದಿನ” ಅಂದರೆ “ಯೆಹೋವನ ದಿನ” ಎಂದು ಪ್ರವಾದಿಸುತ್ತವೆ. (2 ಪೇತ್ರ 3:10) ಯೆಹೋವನು ಸರ್ವೂನ್ನತನೂ, ಸರ್ವಶಕ್ತ ದೇವರೂ ಆಗಿರುವ ತನಕ ಬೇರೆ ಯಾವದಿನವೂ ಅವನ ದಿನಕ್ಕಿಂತ ಹೆಚ್ಚು ಬೆಳಗಲು ಪ್ರಾಯಶಃ ಅಸಾಧ್ಯವೇ. (ಅ.ಕೃತ್ಯಗಳು 2:20) ಇದರ ಅರ್ಥ ಇಡೀ ವಿಶ್ವದಲ್ಲಿ ದೇವರೋಪಾದಿ ಅವನ ಸಾರ್ವಭೌಮತ್ವವನ್ನು ಸಮರ್ಥಿಸುವುದೆಂದೇ ಆಗಿದೆ. ಎಣೆಯಿಲ್ಲದ ಪ್ರಾಮುಖ್ಯತೆಯ ಆ ದಿನವು ಸಮೀಪಿಸುತ್ತಾ ಇದೆ.
3. ಮೊದಲನೆಯ ಶತಕದ ಕ್ರೈಸ್ತರಿಗೆ ಯೆಹೋವನ ದಿನವು ಸಮೀಪಿಸಿದ್ದು ಹೇಗೆ, ಮತ್ತು ಇಂದು ನಮ್ಮ ಕುರಿತಾಗಿ ಏನು?
3 ಯೆಹೋವನ ದಿನವು ಸಮೀಪಿಸುತ್ತಾ ಇದೆ ಎಂದು ಅಪೊಸ್ತಲ ಪೌಲನು ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಕದ ಕ್ರೈಸ್ತರಿಗೆ ಹೇಳಿದನು. ಅವರು ಆ ದಿನದ ಬರೋಣಕ್ಕಾಗಿ ಮುನ್ನೋಡುತ್ತಾ ಇದ್ದರು, ಆದರೆ ಆ ಸಮಯದಿಂದ ಆ ದಿನವು ಸುಮಾರು 1,900 ಕ್ಕಿಂತಲೂ ಹೆಚ್ಚು ಸಮಯ ದೂರದಲ್ಲಿತ್ತು. (2 ಥೆಸಲೋನಿಕದವರಿಗೆ 2:1-3) ಈ ವಿಷಯದ ಹೊರತಾಗಿಯೂ, ಅವರಿಗೆ ಪ್ರೋತ್ಸಾಹವು ಬೇಕಾಗಿತ್ತು ಮತ್ತು ಆ ನಂಬಿಕೆಯಲ್ಲಿ ಅವರು ಸ್ಥಿರತೆಯಿಂದ ಮುಂದುವರಿದರೆ, ಅವರು ಆ ಆಶೀರ್ವದಿತ ದಿನದಲ್ಲಿ ಪ್ರವೇಶಿಸಲಿದ್ದರು. (2 ತಿಮೊಥಿ 4:8) ಆ ಸಮಯದಲ್ಲಿ ಆ ದಿನವು ಹತ್ತರಿಸಿದೆ ಎಂಬಂತೆ ಕಾಣಲ್ಪಡುತ್ತಿತ್ತು. ಇಂದಿರುವ ನಮಗಾದರೋ, ಯೆಹೋವನ ದಿನವು ಖಂಡಿತವಾಗಿಯೂ ಸಮೀಪಿಸಿದೆ. ಬೈಬಲಿನ ಅದ್ಭುತವಾದ ಎಲ್ಲಾ ಪ್ರವಾದನೆಗಳ ನೆರವೇರಿಕೆಗಳು ಈ ಆನಂದವನ್ನುಂಟುಮಾಡುವ ವಾಸ್ತವಾಂಶವನ್ನು ದೃಢೀಕರಿಸುತ್ತವೆ. ಬೇಗನೇ, ನಮ್ಮ ದೇವರಾದ ಯೆಹೋವನ ಹೆಸರು ನಿತ್ಯನಿರಂತರಕ್ಕೂ ಪವಿತ್ರೀಕರಿಸಲ್ಪಡುವುದು.—ಲೂಕ 11: 2.
ದೈವಿಕ ನಾಮದಿಂದ ಪ್ರೋತ್ಸಾಹಿಸಲ್ಪಟ್ಟದ್ದು
4. ಪ್ರಕಟನೆ 19:6 ಕ್ಕನುಸಾರ, ಅರಸನಾಗಲಿರುವವನು ಯಾರು, ಮತ್ತು ಅವನ ಹೆಸರನ್ನು ವಿವೇಚಿಸುವುದು ಹೇಗೆ?
4 ಸಮಗ್ರ ಮಾನವ ಕುಲಕ್ಕೆ ದೈವಿಕ ನಾಮವು ಒಂದು ಆಸಕ್ತಿಯ ಸಂಗತಿಯಾಗಿರತಕ್ಕದ್ದು. ಟುಡೇಸ್ ಇಂಗ್ಲಿಷ್ ವರ್ಶನ್ ಹೇಳುವುದು: “ದೇವರನ್ನು ಸ್ತುತಿಸಿರಿ (ಹಲ್ಲಿಲೂಯಾ)! ನಮ್ಮ ಕರ್ತನಾದ, ನಮ್ಮ ಸರ್ವಶಕ್ತ ದೇವರು ಅರಸನಾಗಿದ್ದಾನೆ!” (ಪ್ರಕಟನೆ 19: 6) 20 ನೆಯ ಶತಕದ ಬೈಬಲ್ ತರ್ಜುಮೆಗನುಸಾರ, ಅವನು ಕರ್ತನಾಗಿದ್ದಾನೆ, ಸರ್ವಶಕ್ತ ದೇವರಾಗಿದ್ದಾನೆ. ಆ ತರ್ಜುಮೆ ಮತ್ತು ಇನ್ನಿತರ ಆಧುನಿಕ ದಿನಗಳ ತರ್ಜುಮೆಗಳು, ಅರಸನಾಗಿ ಆಳಲು ಆರಂಭಿಸಿದ ದೈವಿಕ ವ್ಯಕ್ತಿಯ ಹೆಸರನ್ನು ಕೊಡುವುದಿಲ್ಲ. ಆದಾಗ್ಯೂ, ರಿವೈಸ್ಡ್ ಸ್ಟಾಂಡರ್ಡ್ ವರ್ಶನ್, ದ ನ್ಯೂ ಇಂಟರ್ ನ್ಯಾಶನಲ್ ವರ್ಶನ್ ಮತ್ತು ಮೊಫಾಟ್ ತರ್ಜುಮೆಗಳಲ್ಲಿ ಪ್ರಕಟನೆ 19:6 ರಲ್ಲಿ ಇರುವ, ಹಲ್ಲಿಲೂಯಾ!” (“ಯಾಹುವನ್ನು ಸ್ತುತಿಸಿರಿ” ಯಾ, “ಯೆಹೋವನನ್ನು ಸ್ತುತಿಸಿರಿ”) ಎಂಬ ಉದ್ಘೋಷದಲ್ಲಿ ದೈವಿಕ ನಾಮವು ಒಳಗೂಡಿರುತ್ತದೆ. ನಮ್ಮ ಸಾಮಾನ್ಯ ಶಕದ ಹೆಚ್ಚಿನ ಸಮಯಗಳಲ್ಲಿ, ಬೈಬಲ್ ತರ್ಜುಮೆಗಳಲ್ಲಿ ದೈವಿಕ ನಾಮವು ಮೂಲತಃ ಮರೆಮಾಡಲ್ಪಟ್ಟಿತ್ತು. ಆದಾಗ್ಯೂ, ನಾವು ನೋಡಲಿರುವಂತೆ, ಪ್ರಾಚೀನ ಮತ್ತು ಆಧುನಿಕ ಸಮಯಗಳ ದೇವಜನರಿಗೆ ಆ ದೈವಿಕ ನಾಮವು ಮಹಾ ಪ್ರೋತ್ಸಾಹದಾಯಕವಾಗಿತ್ತು.
5, 6. (ಎ) ಅವನು ಪ್ರತಿನಿಧಿಸಿದ ದೇವರ ಹೆಸರನ್ನು ಮೋಶೆಯು ತಿಳಿ ಯುವ ಅಗತ್ಯ ವಿತ್ತೇಕೆ? (ಬಿ) ದೈವಿಕ ಹೆಸರನ್ನು ಮೋಶೆಯು ಒತ್ತಿಹೇಳಿದ್ದರಿಂದ ಇಸ್ರಾಯೇಲ್ಯರ ಮೇಲೆ ಯಾವ ಪ್ರಭಾವ ಬೀರಿದಿರ್ದಬೇಕು?
5 ಐಗುಪ್ತದಲ್ಲಿ ದಾಸತ್ವದಲ್ಲಿದ್ದ ಇಸ್ರಾಯೇಲ್ಯ ಜನರ ಬಳಿಗೆ ಸರ್ವೋನ್ನತನಾದ ದೇವರಿಂದ ಮೋಶೆಯು ಕಳುಹಿಸಲ್ಪಟ್ಟ ಸಮಯದಲ್ಲಿ, ಯಾರ ಬಳಿಗೆ ಮೋಶೆಯು ಕಳುಹಿಸಲ್ಪಟ್ಟನೋ, ಅದೇ ಜನರ ಮನಸ್ಸಿನಲ್ಲಿ ಇವನನ್ನು ಕಳುಹಿಸಿದವನು ಯಾರು ಎಂಬ ಪ್ರಶ್ನೆ ಎದ್ದಿತ್ತು ಎಂಬದನ್ನು ನೆನಪಿಗೆ ತನ್ನಿರಿ. ಅವನು ಪ್ರತಿನಿಧಿಸಿದ ದೇವರ ನಾಮವನ್ನು ಸಂಕಟಕ್ಕೀಡಾದ ಯೆಹೂದ್ಯರುತಿಳಿಯಲು ಬಯಸುವರು ಎಂದು ಮೋಶೆಯು ನಿರೀಕ್ಷಿಸಿದ್ದನು. ಇದರ ಕುರಿತು ನಾವು ವಿಮೋಚನಕಾಂಡ 3:15 ರಲ್ಲಿ ಓದುವುದು: “ದೇವರು ಮೋಶೆಗೆ ಮತ್ತೂ ಹೇಳಿದ್ದೇನಂದರೆ—ನೀನು ಇಸ್ರಾಯೇಲ್ಯರಿಗೆ ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು, ಇದು ತಲತಲಾಂತರಕ್ಕೂ ನನ್ನನ್ನು ಸ್ಮರಿಸಬೇಕಾದ ನಾಮ.”
6 ಈ ಸಮಾಚಾರವನ್ನು ಒತ್ತಿ ಅವರಿಗೆ ಹೇಳಿದಾಗ, ಇಸ್ರಾಯೇಲ್ಯರಿಗೆ ಅದು ತುಂಬಾ ಪ್ರೋತ್ಸಾಹದಾಯಕವಾಗಿದ್ದಿರಬೇಕು ಏಕ ಸತ್ಯ ದೇವರಾದ ಯೆಹೋವನಿಂದ ಅವರ ಬಿಡುಗಡೆಯ ಆಶ್ವಾಸನೆಯು ಕೊಡಲ್ಪಟ್ಟಿತ್ತು. ತನ್ನನ್ನು ದರ್ಪದಿಂದ ಪ್ರತ್ಯೇಕಿಸಿಕೊಳ್ಳುವುದರ ಬದಲು, ತನ್ನ ವೈಯಕ್ತಿಕ ಹೆಸರಿನ ಅರ್ಥವನ್ನು ಅವನು ಪ್ರದರ್ಶಿಸಲಿರುವಾಗ, ದೇವರ ಪರಿಚಯವನ್ನು ಮಾಡಿಕೊಳ್ಳಲು ಅವರಿಗಿರುವ ಪ್ರತೀಕ್ಷೆಯು, ಎಷ್ಟೊಂದು ಪ್ರೋತ್ಸಾಹನೀಯವಾಗಿದ್ದಿರಬೇಕು!—ವಿಮೋಚನ ಕಾಂಡ 3:13; 4: 29-31.
7. (ಎ) ದೈವಿಕ ಹೆಸರಿನ ಪರಿಚಯ ಯೇಸುವಿನ ಶಿಷ್ಯರಿಗೆ ಇತ್ತು ನಮಗೆ ತಿಳಿದಿರುವುದು ಹೇಗೆ? (ಬಿ) ದೇವರ ಹೆಸರು ಹಿನ್ನೆಲೆಗೆ ಹೇಗೆ ದೂಡಲ್ಪಟ್ಟಿತು?
7 ಕರ್ತನಾದ ಯೇಸು ಕ್ರಿಸ್ತನ ಶಿಷ್ಯರು ಕೂಡಾ ಯೆಹೋವ ಎಂಬ ದೈವಿಕ ನಾಮ ದಿಂದ ಮತ್ತು ಅದು ಯಾವುದನ್ನು ಪ್ರತಿನಿಧಿಸುತ್ತದೋ ಅದರಿಂದ ಬಹಳಷ್ಟು ಹುರಿದುಂಬಿಸಲ್ಪಟ್ಟರು. (ಯೋಹಾನ 17: 6, 26) ಯೇಸುವಿನ ಐಹಿಕ ಶುಶ್ರೂಷೆಯ ಸಮಯದಲ್ಲಿ, ಅವನು ದೈವಿಕ ಹೆಸರನ್ನು ಹಿನ್ನೆಲೆಗೆ ಖಂಡಿತವಾಗಿ ದೂಡಲಿಲ್ಲ ಮತ್ತು ಯೇಸು ಎಂಬ ಅವನ ಹೆಸರನ್ನು, ಅಗ್ರ ಸ್ಥಾನಕ್ಕೆ ತರುವ ಉದ್ದೇಶವು ಅವನದ್ದಾಗಿರಲಿಲ್ಲ. ನಿಜ ಕ್ರೈಸ್ತ ವಿಶ್ವಾಸದಿಂದ ಮುಂತಿಳಿಸಲ್ಪಟ್ಟ ಧರ್ಮಭೃಷ್ಟತೆಯ ಆರಂಭದಿಂದ ದೈವಿಕ ನಾಮವು ಹಿನ್ನೆಲೆಗೆ ದೂಡಲ್ಪಟ್ಟಿತು, ಹೌದು, ಕ್ರೈಸ್ತ ಸಂಭಾಷಣೆಯ ಪರಸ್ಪರ ವಿನಿಮಯದಲ್ಲಿ ಕಾರ್ಯತಃ ಅಳಿಸಲ್ಪಟ್ಟಿತು. (ಅ.ಕೃತ್ಯಗಳು 20: 29, 30) ಒಮ್ಮೆ ದೇವರ ಮಗನ ಹೆಸರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲು ಆರಂಭಿಸಿ ತಂದೆಯ ಹೆಸರನ್ನು ಮಬ್ಬುಗವಿಸಿದ ಮೇಲೆ, ಕೌಟುಂಬಿಕ ನಿಕಟ ಸಂಬಂಧದ ಕೊರತೆಯಿಂದ ಅವರು ತಂದೆಗೆ ಮಾಡುವ ಆರಾಧನೆಯು ವ್ಯಕ್ತಿಸ್ವರೂಪವಿಲ್ಲದ್ದಾಗಿ ಕ್ರೈಸ್ತರೆನಿಸಿಕೊಳ್ಳುವವರಿಗೆ ತೋರಿಬಂತು ಮತ್ತು ಅದು ಅಷ್ಟೊಂದು ಪ್ರೋತ್ಸಾಹಕವಾಗಿ ಇರಲಿಲ್ಲ.
8. ಯೆಹೋವನ ಸಾಕ್ಷಿಗಳು ಎಂಬ ಹೆಸರು ಸ್ವೀಕರಿಸಿದ್ದರಿಂದ ದೇವರ ಜನರ ಮೇಲೆ ಮುಂದುವರಿದ ಪರಿಣಾಮವೇನು?
8 ಈ ರೀತಿಯಲ್ಲಿ, 1931 ರಲ್ಲಿ ವಾಚ್ ಟವರ್ ಸೊಸೈಟಿ ಯೊಂದಿಗೆ ಜತೆಗೂಡಿರುವ ಇಂಟರ್ನ್ಯಾಶನಲ್ ಬೈಬಲ್ ಸ್ಟೂಡೆಂಟ್ಸ್ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದಾಗ ಅದೊಂದು ಹೇಳಲಸಾಧ್ಯವಾದ ಸಂತೋಷಕ್ಕೆ ಕಾರಣವಾಗಿತ್ತು. ಇದು ಕೇವಲ ಆನಂದ-ಪ್ರೇರಕವಾಗಿದ್ದದ್ದು ಮಾತ್ರವಲ್ಲ, ಇದು ಮಹಾ ಪ್ರೋತ್ಸಾಹದಾಯಕವಾಗಿತ್ತು. ಇದರಿಂದ ಹೊಸತಾಗಿ ಹೆಸರು ಪಡೆದ ಬೈಬಲ್ ವಿದ್ಯಾಥಿಗಳು ಒಬ್ಬರು ಇನ್ನೊಬ್ಬರನ್ನು ಪರಸ್ಪರ ಪ್ರೋತ್ಸಾಹಿಸಬಹುದು.—ಹೋಲಿಸಿರಿ ಯೆಶಾಯ 43: 12.
9. ಯಾರ ಸಾಕ್ಷಿಗಳಾಗಿದ್ದಾರೋ ಆತನ ಕುರಿತಾಗಿ ನಿಜ ಕ್ರೈಸ್ತರ ಭಾವನೆಯೇನು?
9 ಆದುದರಿಂದ ಸತ್ಯ ಕ್ರೈಸ್ತರು ಇಂದು ತಕ್ಕದ್ದಾಗಿಯೇ, ಮುಂತಿಳಿಸಲ್ಪಟ್ಟ ಸಾಕ್ಷಿಗಳಾಗಿರುವವರು ಎಂದು ಯಾರು ಹೇಳಿದ್ದನೋ ಅವನೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ, ಅವನ ಮುಂದಾಳುವಾದ ಯೇಸುಕ್ರಿಸ್ತನು ಕೂಡಾ, ಭೂಮಿಯಲ್ಲಿರುವಾಗ ಅದನ್ನೇ ಮಾಡಿದ್ದನು. (ಪ್ರಕಟನೆ 1: 1, 2) ಹೌದು, ಯೆಹೋವನೆಂದು ಹೆಸರಿರುವ ಅವನೊಬ್ಬನನ್ನೇ ಅವರು ಗುರುತಿಸುತ್ತಾರೆ.—ಕೀರ್ತನೆ 83: 18.
ಸಂತೋಷ ಮತ್ತು ಪವಿತ್ರಾತ್ಮ ಭರಿತರಾದರು
10-12. (ಎ) ಯೇಸುವಿನ ಹಿಂಬಾಲಕರ ಮೇಲೆ ಕಾರ್ಯಕಾರೀ ಶಕ್ತಿಯ ಪರಿಣಾಮವೇನಾಗಲಿರುವುದು? (ಬಿ) ಸಂತೋಷ-ಪ್ರೇರಕ ಯೆಹೋವನ ಸಾಕ್ಷಿ ಗಳು ಒಬ್ಬರು ಇನ್ನೊಬ್ಬರನ್ನು ಹೇಗೆ ಸತ್ಕರಿಸಲು ಬಯಸುತ್ತಾರೆ?
10 ಯೇಸು ಕ್ರಿಸ್ತನು ತನ್ನ ವಿದಾಯಕೋರಿಕೆಯ ಮಾತುಗಳಲ್ಲಿ ಅವನ ಅಪೊಸ್ತಲರಿಗೆ ಅಂದದ್ದು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿ ಕೊಳ್ಳುವುದಕ್ಕೆ ಅವರಿಗೆ ಉಪದೇಶಮಾಡಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.”—ಮತ್ತಾಯ 28: 19, 20,NW
11 ಹೊಸತಾಗಿ ಕಲಿಸಲ್ಪಟ್ಟ ಕ್ರೈಸ್ತರು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಪಡೆಯಬೇಕು ಎಂಬದನ್ನು ಗಮನಿಸಿರಿ. ಈ ಪವಿತ್ರಾತ್ಮನು ಒಬ್ಬ ವ್ಯಕ್ತಿಯಲ್ಲ, ಬದಲು ಯೆಹೋವ ದೇವರ ಕಾರ್ಯಕಾರೀ ಶಕ್ತಿಯಾಗಿದೆ, ಮತ್ತು ಇದನ್ನು ಯೇಸು ಕ್ರಿಸ್ತನ ಮೂಲಕ ಅವನದನ್ನು ಪ್ರಯೋಗಿಸುತ್ತಾನೆ. ಪಂಚಾ ಶತಮ ದಿನದಲ್ಲಿ, ಯೇಸುವಿನ ಮೂಲಕ ಯೆಹೋವ ದೇವರು ಯೇಸು ಕ್ರಿಸ್ತನ ಸಮರ್ಪಿತ ಹಿಂಬಾಲಕರ ಮೇಲೆ ಈ ಕಾರ್ಯಕಾರೀ ಶಕ್ತಿಯನ್ನು ಸುರಿಸಿದನು. (ಅ.ಕೃತ್ಯಗಳು 2:33) ಅವರು ಈ ಪವಿತ್ರಾತ್ಮನಿಂದ ಭರಿತರಾದರು ಮತ್ತು ಪವಿತ್ರಾತ್ಮನ ವ್ಯಕ್ತಪಡಿಸುವಿಕೆಗಳಲ್ಲಿ ಯಾ ಫಲಗಳಲ್ಲಿ ಒಂದು ಸಂತೋಷವಾಗಿರುತ್ತದೆ. (ಗಲಾತ್ಯದವರಿಗೆ 5: 22, 23; ಎಫೆಸದವರಿಗೆ 5: 18-20) ಸಂತೋಷವು ಒಂದು ಪ್ರಚೋದಕ ಗುಣವಾಗಿರುತ್ತದೆ. ಶಿಷ್ಯರು ಪವಿತ್ರಾತ್ಮನ ಸಂತೋಷದಿಂದ ತುಂಬಲಿಕ್ಕಿದ್ದರು. ಅಪೊಸ್ತಲ ಪೌಲನಿಂದ ರಚಿಸಲ್ಪಟ್ಟ ಪ್ರಾರ್ಥನೆಯು ಬಹಳ ಸಮಂಜಸತೆಯದ್ದಾಗಿದೆ: “ನಿರೀಕ್ಷೆಯ ಮೂಲನಾದ ದೇವರು ನಂಬಿಕೆಯಿಂದುಂಟಾಗುವ ಸಂತೋಷವನ್ನೂ ಮನಶ್ಶಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಿ ನೀವು ಪವಿತ್ರಾತ್ಮನ ಬಲಗೂಡಿದವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ.”—ರೋಮಾಪುರದವರಿಗೆ 15: 13.
12 ಈ ಸಂತೋಷ-ಪ್ರೇರಕ ಆತ್ಮದಿಂದ ತುಂಬಿದವರಾಗಿ, ಇಂದಿನ ಯೆಹೋವನ ಸಾಕ್ಷಿಗಳು, “ಮಹಾ ಸಮೂಹದವರ” ಸಹಿತ ಬಯಸುತ್ತಾರೆ, ಹೌದು, ಸ್ನೇಹರಹಿತ ವಿಷಯಗಳ ವ್ಯವಸ್ಥೆಯ ಮಧ್ಯದಲ್ಲಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಪ್ರಚೋದಿಸಲ್ಪಡುತ್ತಾರೆ. ಅದರಂತೆಯೇ, ಅಪೊಸ್ತಲ ಪೌಲನು “ಒಬ್ಬರು ಇನ್ನೊಬ್ಬರಿಂದ ಪರಸ್ಪರ ಪ್ರೋತ್ಸಾಹ” ಪಡೆಯುವುದರ ಕುರಿತು ಮಾತಾಡುತ್ತಾನೆ.—ಪ್ರಕಟನೆ 7: 9, 10; ರೋಮಾಪುರದವರಿಗೆ 1:12; 14: 17.
ಪ್ರೋತ್ಸಾಹಿಸಲ್ಪಡಲು ಪ್ರತಿಯೊಂದು ಕಾರಣ
13. ಪ್ರೋತ್ಸಾಹಿಸಲ್ಪಡಲು ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿನಲು ನಮ್ಮ ಬಳಿ ಯಾವ ಕಾರಣಗಳಿವೆ?
13 ಎಲ್ಲಾ ಥರಹದ ಸದ್ಧರ್ಮವನ್ನು ವಿರೋಧಿಸುವವನು ಅಧಿಪತಿಯೂ, ದೇವರೂ ಆಗಿರುವವನ ಕೈ ಕೆಳಗಿರುವ ವಿಷಯಗಳ ವ್ಯವಸ್ಥೆಯ ಮಧ್ಯದಲ್ಲಿ ನಮ್ಮನ್ನು ಕಂಡುಕೊಳ್ಳುವಾಗ, ಯೆಹೋವ ದೇವರ ಪವಿತ್ರ ಆತ್ಮವು ವ್ಯಾಪಿಸಿರುವ ಲೋಕವ್ಯಾಪಕ ಕ್ರೈಸ್ತ ಸಭೆಯೊಳಗೆ ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸಲು ಕ್ರೈಸ್ತರು ಬಯಸುತ್ತಾರೆ. (ಇಬ್ರಿಯರಿಗೆ 10: 24, 25; ಅ.ಕೃತ್ಯಗಳು 20:28) ಪ್ರೋತ್ಸಾಹಿಸಲ್ಪಡಲು ನಮಗೆ ಪ್ರತಿಯೊಂದು ಕಾರಣವಿದೆ. ಹೌದು, ಯೆಹೋವ ದೇವರ ಮತ್ತು ಅವನ ಮಗನ ಮತ್ತು ಅವರು ಬಳಸುವ ಕಾರ್ಯಕಾರೀ ಶಕ್ತಿಯ, ಅಂದರೆ ಪವಿತ್ರಾತ್ಮನ ಕುರಿತಾಗಿ ನಮಗಿರುವ ಸ್ಪಷ್ಟ ಜ್ಞಾನಕ್ಕಾಗಿ ನಾವೆಷ್ಟು ಅಭಾರಿಗಳಾಗಿದ್ದೇವೆ! ಅವರು ಕೊಡುವ ನಿರೀಕ್ಷೆಗಾಗಿ ನಾವೆಷ್ಟು ಕೃತಜ್ಞರಾಗಿದ್ದೇವೆ! ಈ ರೀತಿಯಲ್ಲಿ ನಮ್ಮ ಆರಾಧನೆಯು ಸಂತೋಷದಿಂದ ತುಂಬಿರುತ್ತದೆ. ತನ್ನ ಪತ್ರವನ್ನು ಬರೆದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೇಳಿದ್ದೇನಂದರೆ ಅವರು ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸಬೇಕು ಮತ್ತು ಅವರ ಅತ್ಯಧಿಕ ಪವಿತ್ರ ವಿಶ್ವಾಸವನ್ನು ಪರಸ್ಪರ ಕಟ್ಟಬೇಕು. ‘ದಿನವು ಸಮೀಪಿಸುತ್ತಾ ಬರುತ್ತದೆ ಎಂದು ಸಾಂಕೇತಿಕವಾಗಿ ನೋಡುವುದರಿಂದ ಇದನ್ನು ಮತ್ತಷ್ಟು ಮಾಡಲು’ ಅವರಿಗೆ ಹೇಳಲಾಗಿದೆ. ಅದಲ್ಲದೇ ಈ ಭೂಮಿಯ ರಾಜಕೀಯ ಶಕ್ತಿಗಳು ನಾಮ ಮಾತ್ರದ ಕ್ರೈಸ್ತತ್ವವನ್ನು ಇತರ ಸುಳ್ಳು ಧರ್ಮದೊಂದಿಗೆ ಅಳಿಸಿ ಬಿಡುವಾಗ, ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವುದನ್ನು ಆ ಸನ್ನಿವೇಶವು ಅಧಿಕವಾಗಿ ಕೇಳಿಕೊಳ್ಳುತ್ತದೆ.
14. ಒಬ್ಬರು ಇನ್ನೊಬ್ಬರನ್ನು ಪ್ರೋತ್ಸಾಹಿಸುವುದನ್ನು ಯಾರುಮಾಡಬೇಕು ಮತ್ತು ಹೇಗೆ?
14 ತಮ್ಮ ಸ್ವಂತ ಸಭೆಗಳಲ್ಲಿ ಮಂದೆಯನ್ನು ಪ್ರೋತ್ಸಾಹಿಸುವುದರಲ್ಲಿ ಹಿರಿಯರು ಮುಂದಾಳುತನವನ್ನು ವಹಿಸುತ್ತಾರಾದರೂ, ಇಬ್ರಿಯರಿಗೆ 10:25 ರಲ್ಲಿ ಎಚ್ಚರಿಸಿರುವಂತೆ, ಎಲ್ಲಾ ಕ್ರೈಸ್ತರೂ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುವ ಜರೂರಿಯಿದೆ. ವಾಸ್ತವದಲ್ಲಿ ಇದು ಕ್ರೈಸ್ತ ಆವಶ್ಯಕತೆಯಾಗಿದೆ. ನೀವೊಂದು ಸಭೆಯ ಸದಸ್ಯರಾಗಿರುವುದಾದರೂ, ನೀವು ಇಂತಹ ಪ್ರೋತ್ಸಾಹವನ್ನು ನೀಡುತ್ತಿದ್ದೀರೋ? ನೀವು ವಿಸ್ಮಿತರಾಗ ಬಹುದು: ‘ನಾನು ಹೇಗೆ ನೀಡಸಾಧ್ಯವಿದೆ? ನಾನು ಏನು ಮಾಡ ಸಾಧ್ಯವಿದೆ?’ ಮೊದಲನೆಯದಾಗಿ, ಇತರು ನಂಬಿಕೆಯಿಂದ ಸಭಾಕೂಟಗಳಿಗೆ ಹಾಜರಾಗುವುದನ್ನು ನೋಡಿ ಪ್ರಾಯಶಃ ನೀವು ಪ್ರೋತ್ಸಾಹಿಸಲ್ಪಟ್ಟಂತೆ, ಕೂಟಗಳಲ್ಲಿ ನಿಮ್ಮ ಹಾಜರಿಯು ಮತ್ತು ಸಭಾ ಏರ್ಪಾಡುಗಳಿಗೆ ನಿಮ್ಮ ಬೆಂಬಲದಿಂದಾಗಿ ಇತರ ಎಲ್ಲಾ ಸಹೋದರ, ಸಹೋದರಿಯರು ಪ್ರೋತ್ಸಾಹಿಸಲ್ಪಡುತ್ತಾರಲ್ಲವೇ? ನಿಮ್ಮ ನಂಬಿಗಸ್ತ ತಾಳ್ಮೆಯ ಉದಾಹರಣೆಯಿಂದ ಅವರೂ ಪ್ರೋತ್ಸಾಹಿಸಲ್ಪಡಸಾಧ್ಯವಿದೆ. ಜೀವಿತದ ಸಮಸ್ಯೆಗಳ ಮತ್ತು ಕಷ್ಟಗಳ ನಡುವೆಯೂ, ಎಂದಿಗೂ ಬಿಟ್ಟು ಕೊಡದೆ ಕ್ರೈಸ್ತ ಮಾರ್ಗದಲ್ಲಿ ನಿಮ್ಮ ಮುಂದುವರಿಯುವಿಕೆಯಿಂದಾಗಿ, ನೀವು ಒಂದು ಪ್ರೇರಕ ಉದಾಹರಣೆಯಾಗಿರಬಲ್ಲಿರಿ.
ಪಿಶಾಚನ ಧೈರ್ಯಗೆಡಿಸುವಿಕೆಯನ್ನು ಪ್ರತಿರೋಧಿಸಿರಿ
15. ಪಿಶಾಚನಿಗೆ “ಮಹಾ ರೌದ್ರ” ಉಳ್ಳವನಾಗಿರುವುದು ಯಾಕೆ, ಮತ್ತು ಯಾರ ವಿರುದ್ಧ?
15 ಯೆಹೋವನ ದಿನವು ಸಮೀಪಿಸಿದೆ ಎಂದು ತಿಳಿದಿರುವವರಲ್ಲಿ ನಾವು ಮಾತ್ರ ಇರುವುದಲ್ಲ. ಪಿಶಾಚನಾದ ಸೈತಾನನಿಗೆ ಕೂಡಾ ಗೊತ್ತಿದೆ. ಈಗ ಭೂಮಿಯಲ್ಲಿ ವಿಪತ್ತು ಇದೆ ಎಂದು ಪ್ರಕಟನೆ 12:12 ನಮಗನ್ನುತ್ತಾ, ಹೇಳುವುದು, “ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದು ಬಂದಿದ್ದಾನೆ.” ಪ್ರಕಟನೆ 12:17 ಸೂಚಿಸುವಂತೆ, ಅವನ ಮಹಾ ರೌದ್ರವು “ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾದ ಸಾಕ್ಷಿಯನ್ನು ಹೇಳಿರುವವರ ಮೇಲೆ” ಅದು ನಿರ್ದೇಶಿಸಲ್ಪಟ್ಟಿದೆ. ಇದರ ಕುರಿತು ಸಂದೇಹವಿಲ್ಲ—ಪಿಶಾಚನು ನಮ್ಮನ್ನು ಧೈರ್ಯಗೆಡಿಸಲು ಬಯಸುತ್ತಾನೆ! ಮತ್ತು ಇದನ್ನು ಹೇಗೆ ಪ್ರಯತ್ನಿಸುವುದು ಎಂದೂ ಅವನಿಗೆ ತಿಳಿದದೆ. ಅವನಿಗೆ ನಮ್ಮ ನಿರ್ಬಲತೆಗಳೂ, ಸಮಸ್ಯೆಗಳೂ ತಿಳಿದವೆ, ಮತ್ತು ಅವನು ಅವುಗಳ ಮೂಲಕ ನಮ್ಮನ್ನು ಆಡಿಸುತ್ತಾನೆ.
16. ಧೈರ್ಯಗೆಡಿಸು ವಿಕೆಯನ್ನು ಒಂದು ಆಯುಧವಾಗಿ ಸೈತಾನನು ಯಾಕೆ ಬಳಸುತ್ತಾನೆ?
16 ಧೈರ್ಯಕುಂದಿಸುವಿಕೆಯನ್ನು ಒಂದು ಆಯುಧವಾಗಿ ಪಿಶಾಚನು ಬಳಸುವುದು ಯಾಕೆ? ಯಾಕಂದರೆ ಅದು ಹಲವು ಸಂದರ್ಭಗಳಲ್ಲಿ ಕಾರ್ಯಸಾಧಿಸುತ್ತದೆ. ನೇರವಾದ ವಿರೋಧ ಮತ್ತು ಹಿಂಸೆಯನ್ನು ತಾಳಿಕೊಂಡಿರುವ ವ್ಯಕ್ತಿಯು ಕೂಡಾ ಧೈರ್ಯಕುಂದಿಸುವಿಕೆಗೆ ಬಲಿಯಾಗ ಬಹುದು. ಯೆಹೋವ ದೇವರನ್ನು ಹೀಯಾಳಿಸಲು ಮತ್ತು ಅವನನ್ನು ಸೇವಿಸುವುದರಿಂದ ಜನರನ್ನು ತಿರುಗಿಸಲು ತನಗೆ ಸಾಧ್ಯವಿದೆ ಎಂದು ರುಜುಪಡಿಸುವುದನ್ನು ಪ್ರಯತ್ನಿಸಲು ಸೈತಾನನು ಬಯಸುತ್ತಾನೆ. (ಜ್ಞಾನೋಕ್ತಿ 27:11; ಹೋಲಿಸಿರಿ ಯೋಬ 2: 4, 5; ಪ್ರಕಟನೆ 12:10) ಅವನು ನಿಮ್ನನ್ನು ನಿರುತ್ಸಾಹಗೊಳಿಸಲು ಶಕ್ತನಾದರೆ, ದೇವರಿಗೆ ನೀವು ಮಾಡುವ ಸೇವೆಯಲ್ಲಿ ನೀವು ನಿಧಾನಿಸಲು ಅವನು ಕಾರಣನಾಗ ಬಹುದು; ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ನಿಷ್ಕ್ರಿಯರಾಗಿ, ನಿಮ್ಮನ್ನು ನಿಲ್ಲಿಸಲು ಅವನು ಕಾರಣನಾಗಲೂ ಬಹುದು.—2 ಕೊರಿಂಥದವರಿಗೆ 2: 10, 11; ಎಫೆಸದವರಿಗೆ 6:11; 1 ಪೇತ್ರನು 5: 8.
17. ಮೋಶೆಯ ದಿನಗಳಲ್ಲಿ ಧೈರ್ಯಕುಂದಿಸು ವಿಕೆಯ ನಕಾರಾತ್ಮಕ ಪರಿಣಾಮಗಳು ಹೇಗೆ ತೋರಿ ಬಂದವು?
17 ಧೈರ್ಯಗೆಡಿಸುವಿಕೆಯ ನಕಾರತ್ಮಕ ಪರಿಣಾಮಗಳನ್ನು ನಾವು ಪುರಾತನ ಐಗುಪ್ತದಲ್ಲಿದ್ದ ಇಸ್ರಾಯೇಲ್ಯರ ವಿಷಯದಿಂದ ಗಮನಿಸ ಬಹುದು. ಫರೋಹನೊಂದಿಗೆ ಮೋಶೆಯು ಮಾತಾಡಿದ ನಂತರ, ಈ ನಿರುಂಕುಶಧಿಕಾರಿಯು ಅವರ ಮೇಲಿನ ಹೊರೆಯನ್ನು ಮತ್ತು ಅವರನ್ನು ಅವನು ಬಾಧಿಸುವುದನ್ನು ಇನ್ನಷ್ಟು ಹೆಚ್ಚಿಸಿದನು. ಇಸ್ರಾಯೇಲ್ಯರನ್ನು ತಾನು ವಿಮೋಚಿಸುವನೆಂದೂ, ಅವರನ್ನು ತನ್ನ ಜನರನ್ನಾಗಿ ಮಾಡುವನೆಂದೂ, ಅವರನ್ನು ಪಾರುಗೊಳಿಸುವನೆಂದೂ ಮತ್ತು ಅವರನ್ನು ವಾಗ್ದಾನಿಸಿದ ದೇಶದೊಳಗೆ ಅವರನ್ನು ಖಂಡಿತವಾಗಿಯೂ ತರುವನೆಂದೂ ಇಸ್ರಾಯೇಲ್ಯರಿಗೆ ಆಶ್ವಾಸನೆಯನ್ನೀಯುವಂತೆ ದೇವರು ಮೋಶೆಗೆ ಹೇಳಿದನು. ತದ್ರೀತಿಯಲ್ಲಿ ಇಸ್ರಾಯೇಲ್ಯರಿಗೆ ಮೋಶೆಯು ತಿಳಿಸಿದನು. ಆದರೆ ವಿಮೋಚನಕಾಂಡ 6:9 ವರದಿ ಮಾಡುವುದು: “ಆದರೂ ಅವರ ಮನಸ್ಸು ಕುಗ್ಗಿ ಹೋದದರಿಂದಲೂ ಕಠಿಣವಾಗಿ ಸೇವೆ ಮಾಡಬೇಕಾದದರಿಂದಲೂ ಅವರು ಅವನ ಮಾತಿಗೆ ಕಿವಿಗೊಡಲೇ ಇಲ್ಲ.” ಮೋಶೆಗೆ ಮನವರಿಕೆಮಾಡಿ, ಅವನನ್ನು ಪ್ರೋತ್ಸಾಹಿಸುವ ತನಕ, ಈ ಪ್ರತಿವರ್ತನೆಯು ಅವನಿಗೆ ಆಜ್ಞಾಪಿಸಿದ ಪ್ರಕಾರ ಫರೋಹನೊಡನೆ ಮಾತಾಡಲು ಬಯಸದಷ್ಟು ಮೋಶೆಗೆ ಧೈರ್ಯಗೆಡಿಸಿತು.—ವಿಮೋಚನಕಾಂಡ 6: 10-13.
18. ಪಿಶಾಚನು ಕಾರಣವಾಗಿರುವ ಧೈರ್ಯಗೆಡಿಸು ವಿಕೆಯನ್ನು ಪ್ರತಿರೋಧಿಸಲು ದೇವರ ಜನರಿಗೆ ಅಧಿಕ ಜರೂರಿಯಿದೆ ಯಾಕೆ?
18 ದೇವರ ಸೇವಕನ ಮೇಲೆ ಧೈರ್ಯಗೆಡಿಸುವಿಕೆಯು ಯಾವ ನಕಾರಾತ್ಮಕ ಪರಿಣಾಮವನ್ನು ಬೀರ ಬಹುದೆಂದು ಪಿಶಾಚನಾದ ಸೈತಾನನಿಗೆ ಚೆನ್ನಾಗಿ ಗೊತ್ತುಂಟು. ಜ್ಞಾನೋಕ್ತಿ 24:10 ಹೇಳುವುದು: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿ ಹೋದರೆ ನಿನ್ನ ಬಲವೂ ಇಕ್ಕಟ್ಟೇ.” ನಾವು ಅಂತ್ಯದ ದಿವಸಗಳ ಕೊನೆಯಲ್ಲಿ ಜೀವಿಸುವುದರಿಂದ, ಆತ್ಮೀಕವಾಗಿ ನಾವು ಬಲಾಢ್ಯರೂ, ದೃಢತೆಯುಳ್ಳವರೂ ಆಗಿರುವ ಜರೂರಿಯಿದೆ. ನಮ್ಮನ್ನು ಹಿಮ್ಮೆಟ್ಟಿಸಬಹುದಾದ ಅಪರಿಪೂರ್ಣತೆಗಳ, ನಿರ್ಬಲತೆಗಳ, ಮತ್ತು ತಪ್ಪುಗಳ ವಿರುದ್ಧ ನಾವು ಹೆಣಗಾಡುವುದೇ ನಮಗೆ ಸಾಕಾಗುವಷ್ಟು ಕೆಟ್ಟದ್ದಾಗಿರುತ್ತದೆ; ಆದರೆ ಸೈತಾನನು ಈ ತಪ್ಪುಗಳಿಂದ ತನ್ನ ಕಾರ್ಯಸಾಧಿಸಲು ಪ್ರಯತ್ನಿಸುವಾಗ, ನಮಗೆ ಸಹಾಯ ಬೇಕಾಗಿದೆ.
ಕ್ರಿಸ್ತನ ಯಜ್ಞದ ಮೇಲೆ ಸ್ಥಿರವಾಗಿ ಆತುಕೊಂಡಿರ್ರಿ
19. ಧೈರ್ಯಗೆಡಿಸುವಿಕೆಯನ್ನು ಪ್ರತಿರೋಧಿಸಲು ನಮಗೆ ಯಾವುದು ಸಹಾಯಮಾಡುತ್ತದೆ?
19 ಈ ವಿಷಯದಲ್ಲಿ ಒಂದು ದೊಡ್ಡ ಸಹಾಯವು ಯೇಸು ಕ್ರಿಸ್ತನ ಮೂಲಕ ಯೆಹೋವನು ಮಾಡಿದ ವಿಮೋಚನಾ ಈಡಿನ ಒದಗಿಸುವಿಕೆಯೇ. ವಿಮೋಚನಾ ಈಡಿನ ಮೇಲೆ ಸ್ಥಿರರಾಗಿ ಆತುಕೊಳ್ಳುವುದರ ಮೂಲಕ ನಾವು ವಿಜೇತರಾಗಬಹುದು. ಈ ಒದಗಿಸುವಿಕೆಯನ್ನು ನಗಣ್ಯಮಾಡುವುದು ಅಪಾಯಕಾರೀಯಾಗಿರುತ್ತದೆ. ಹೌದು, ನಾವು ಅಪರಿಪೂರ್ಣರಾಗಿರುವ ತನಕ ತಪ್ಪುಗಳನ್ನು ಇನ್ನೂ ಮಾಡುತ್ತಾ ಇರುತ್ತೇವೆ. ಆದರೆ ಯಾವುದೇ ನಿರೀಕ್ಷೆ ಇನ್ನಿಲ್ಲ ಎಂದು ಭಾವಿಸಿ, ನಾವು ನಿರುತ್ಸಾಹಗೊಂಡು ತ್ಯಜಿಸಬೇಕೆಂದಿಲ್ಲ. ಹೀಗೆ ಸೈತಾನನ ಪಾಶದೊಳಗೆ ಬೀಳುವ ಅಗತ್ಯವಿಲ್ಲ. ನಮ್ಮ ಪಾಪಗಳಿಗಾಗಿ ಸಂಪೂರ್ಣ ಯಜ್ಞವು ನಮಗಿದೆ ಎಂದು ನಾವು ಬಲ್ಲೆವು. ವಿಮೋಚನಾ ಈಡು ಪಾಪಗಳನ್ನು ನಿವಾರಿಸಲು ಶಕ್ತವಾಗಿದೆ. ನಾವು “ಮಹಾ ಸಮೂಹ”ದವರಾಗಿರುವುದಾದರೆ, ಯಜ್ಞದ ಕುರಿಯಾದಾತನ ರಕ್ತದಲ್ಲಿ ನಮ್ಮ ನಿಲುವಂಗಿಗಳನ್ನು ತೊಳೆದು ಕೊಂಡು, ಶುಭ್ರಗೊಳಿಸಬಹುದು ಎಂಬ ಪೂರ್ಣವಿಶ್ವಾಸ ಮತ್ತು ಭರವಸೆ ನಮಗಿರತಕ್ಕದ್ದು.—ಪ್ರಕಟನೆ 7: 9, 14.
20. ಮಹಾ ಧೈರ್ಯಗೆಡಿಸುವವನನ್ನು ಜಯಿಸುವುದು ಹೇಗೆ ಎಂದು ಪ್ರಕಟನೆ 12:11 ಸೂಚಿಸುತ್ತದೆ?
20 ಪ್ರಕಟನೆ 12:10 ರಲ್ಲಿ ಸೈತಾನನನ್ನು “ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರು ಹೇಳಿದ ದೂರುಗಾರನೆಂದು” ವಿವರಿಸಲಾಗಿದೆ. ಅಂತಹ ದುಷ್ಟ ದೂರುಗಾರನ ಮತ್ತು ಬೀಭತ್ಸ ಧೈರ್ಯ ಕೆಡಿಸುವವನ ವಿರುದ್ಧ ನಾವು ಹೇಗೆ ವಿಜಯಿಗಳಾಗ ಬಲ್ಲೆವು? ಅದೇ ಅಧ್ಯಾಯದ 11 ನೆಯ (NW) ವಚನವು ನಮಗೆ ಉತ್ತರವನ್ನೀಯುತ್ತದೆ: “ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ಸಾಕ್ಷಿಯ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” ಆದುದರಿಂದ ಯೆಹೋವನ ಜನರು ವಿಮೋಚನಾ ಈಡಿನ ಮೇಲೆ, ಯಜ್ಞದ ಕುರಿಯಾದಾತನ ರಕ್ತದ ಮೇಲೆ ಪೂರ್ಣ ಭರವಸವನ್ನು ಇಡಬೇಕಾಗಿದೆ. ನಿಮಗೆ ಸಾಧ್ಯವಿರುವವರೆಲ್ಲರೊಂದಿಗೆ ದೇವರ ರಾಜ್ಯದ ಸುವಾರ್ತೆಯಲ್ಲಿ ಕ್ರಮವಾಗಿ ಪಾಲಿಗರಾಗುವುದರಮೂಲಕ, ಸಾಕ್ಷಿ ಕೊಡುವ ಮೂಲಕ ಬರುವ ಪ್ರೋತ್ಸಾಹದಿಂದ ಬಲಾಢ್ಯರಾಗಿಟ್ಟುಕೊಳ್ಳಿರಿ.
21. ನಮ್ಮ ಸಹೋದರರನ್ನು ಧೈರ್ಯಗುಂದಿಸುವ ಪಿಶಾಚನ ಕೆಲಸದಲ್ಲಿ ನಾವು ತಿಳಿಯದೇ ಹೇಗೆ ಭಾಗಿಗಳಾಗಬಹುದು?
21 ಕೆಲವೊಮ್ಮೆ, ತಿಳಿಯದೇ ಕೂಡಾ ನಮ್ಮ ಸಹೋದರರನ್ನು ಎದೆಗುಂದಿಸುವ ಪಿಶಾಚನ ಕೆಲಸದಲ್ಲಿ ನಾವು ಪಾಲಿಗರಾಗಬಹುದು. ಹೇಗೆ? ಕಠಿಣವಾಗಿ ಠೀಕಿಸುವವರೂ, ಅಧಿಕ ತಗಾದೆಮಾಡುವವರೂ, ಇಲ್ಲವೇ ಹೆಚ್ಚು ನ್ಯಾಯಪರತೆಯುಳ್ಳವರೂ ಆಗಿರುವುದರ ಮೂಲಕವೇ. (ಪ್ರಸಂಗಿ 7:16) ನಮ್ಮೆಲ್ಲರಲ್ಲಿ ಲೋಪದೋಷಗಳೂ, ನಿರ್ಬಲತೆಗಳೂ ಇವೆ. ಪಿಶಾಚನು ಆಡುವಂತಹ ರೀತಿಯಲ್ಲಿ ನಾವು ಅವುಗಳ ಮೂಲಕ ಆಡದಿರೋಣ. ಬದಲಿಗೆ, ನಮ್ಮ ಸಹೋದರರ ಮತ್ತು ಸಂಸ್ಥಾಪಿಸಲ್ಪಟ್ಟ ಒಂದು ಗುಂಪಿನೋಪಾದಿ ಯೆಹೋವನ ಜನರ ಕುರಿತು, ಪ್ರೋತ್ಸಾಹಕವಾಗುವ ರೀತಿಯಲ್ಲಿ ನಾವು ಮಾತಾಡೋಣ. ನಾವು ಒಬ್ಬರು ಇನ್ನೊಬ್ಬರಿಗೆ ಧೈರ್ಯತುಂಬಿಸುವವರಾಗಿರಲು ಬಯಸೋಣ, ಒಬ್ಬರು ಇನ್ನೊಬ್ಬರಿಗೆ ಧೈರ್ಯಗೆಡಿಸುವುದರಿಂದ ದೂರವಿಟ್ಟು ಕೊಳ್ಳೋಣ.
ದಿನವು ಸಮೀಪಿಸುತ್ತಿರುವಂತೆ ಪ್ರೋತ್ಸಾಹಿಸುತ್ತಾ ಇರೋಣ
22, 23. (ಎ) ಪ್ರೋತ್ಸಾಹದ ಉಗಮಗಳು ಕೇವಲ ಹಿರಿಯರಾಗಿರುವುದಕ್ಕೆ ನಾವು ಯಾಕೆ ಬಿಡಬಾರದು? (ಬಿ) ಕ್ರೈಸ್ತ ಸಭೆಯಲ್ಲಿರುವ ಮೇಲ್ವಿಚಾರಕರಿಗೆ ಹೇಗೆ ಪ್ರೋತ್ಸಾಹ ನೀಡಬಹುದು?
22 ದಿನವು ಸಮೀಪಿಸುತ್ತಿರುವಂತೆ ಒಬ್ಬರು ಇನ್ನೊಬ್ಬರಿಗೆ ಯಾವಾಗಲೂ ಪ್ರೋತ್ಸಾಹಿಸುವುದನ್ನು ನಮ್ಮ ದೃಢ ನಿರ್ಧಾರವನ್ನಾಗಿ ನಾವು ಮಾಡತಕ್ಕದ್ದು. ನಿಮ್ಮ ನಂಬಿಗಸ್ತ ಮಾದರಿಯ ಮತ್ತು ಸಂತೈಸುವ ಮಾತುಗಳ ಮೂಲಕ ಇತರರನ್ನು ಪ್ರೋತ್ಸಾಹಿಸಿರಿ. ಈ ವಿಷಯದಲ್ಲಿ ಯೆಹೋವನನ್ನು ಮತ್ತು ಕರ್ತನಾದ ಯೇಸು ಕ್ರಿಸ್ತನನ್ನು ಅನುಕರಿಸಿರಿ. ಪ್ರೋತ್ಸಾಹನೆಯ ಉಗಮವಾಗಿರುವುದನ್ನು ಕೇವಲ ಸಭೆಯ ಹಿರಿಯರಿಗೆ ಬಿಟ್ಟು ಬಿಡದಿರ್ರಿ. ಯಾಕೆ, ಹಿರಿಯರಿಗೆ ಸ್ವತಃ ಪ್ರೋತ್ಸಾಹನೆಯು ಬೇಕಾಗಿದೆ. ಅವರಿಗೂ ಮಂದೆಯಲ್ಲಿರುವ ಇನ್ನಿತರರಿಗೆ ಇರುವಂತೆ ನಿರ್ಬಲತೆಗಳಿವೆ ಮತ್ತು ಕೊರತೆಗಳಿವೆ ಮತ್ತು ನಶಿಸುತ್ತಿರುವ ಲೋಕದಲ್ಲಿ ಅವರು ಕುಟುಂಬಗಳಿಗೆ ಒದಗಿಸುವುದರಲ್ಲಿ ಅದೇ ರೀತಿಯ ಸಮಸ್ಯೆಗಳನ್ನು ಅವರು ನಿಭಾಯಿಸಲಿಕ್ಕಿದೆ. ಅದರ ಜತೆಯಲ್ಲಿ, ಪೌಲನು ಹೇಳಿದಂತೆ ಅವರಿಗೆ ಸಭೆಯ ಚಿಂತೆಯಿರುತ್ತದೆ. (2 ಕೊರಿಂಥದವರಿಗೆ 11: 25-26) ಅವರ ಕೆಲಸವು ಕಷ್ಟಕರ ಕೆಲಸ—ಅವರಿಗೆ ಉತ್ತೇಜನೆ ಬೇಕಾಗಿದೆ.
23 ಕ್ರೈಸ್ತ ಸಭೆಗಳಲ್ಲಿ ಮೇಲ್ವಿಚಾರಣೆಯ ಸ್ಥಾನದಲ್ಲಿರುವವರೊಂದಿಗೆ ಸಹಕರಿಸುವುದರಿಂದ ನೀವು ಬಹಳವಾಗಿ ಅವರನ್ನು ಪ್ರೋತ್ಸಾಹಿಸಬೇಕು. ಆಗ ನೀವು ಇಬ್ರಿಯ 13:17 ರ ಸಲಹೆಯನ್ನು ಪರಿಪಾಲಿಸುವವರಾಗಿರುವಿರಿ: “ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಅವರಿಗೆ ಅಧೀನರಾಗಿರಿ, ಅವರುಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಆತ್ಮಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನಪಡದೆ ಸಂತೋಷದಿಂದ ಇದನ್ನು ಮಾಡುವಂತೆ ನೋಡಿರಿ; ಅವರು ವ್ಯಸನದಿಂದಿರುವುದು ನಿಮಗೆ ಪ್ರಯೋಜನಕರವಾದದ್ದಲ್ಲ.”
24. ಧೈರ್ಯಗೆಡಿಸುವ ಈ ದಿನದಲ್ಲಿ, ನಾವು ಏನು ಮಾಡುತ್ತಿರಬೇಕು, ಮತ್ತು ಯಾಕೆ?
24 ನಾವು ಧೈರ್ಯಗೆಡುವ ದಿನವೊಂದರಲ್ಲಿ ಜೀವಿಸುತ್ತಾ ಇದ್ದೇವೆ. ಯೇಸುವು ಮುನ್ನುಡಿದಂತೆ ನಿವಾಸಿತ ಭೂಮಿಗೆ ಏನು ಸಂಭವಿಸುವುದೋ ಎಂಬ ನಿರೀಕ್ಷೆಯಿಂದ ಜನರ ಹೃದಯಗಳು ಭಯದಿಂದ ಮೂರ್ಛೆಹೋಗುವವು. (ಲೂಕ 21: 25, 26) ನಿರಾಶೆಗೊಳಿಸುವ ಮತ್ತು ಧೈರ್ಯಗೆಡಿಸುವ ಪ್ರವೃತ್ತಿಯ ಬಹಳಷ್ಟು ಸಮಸ್ಯೆಗಳಿರುವಾಗ, ““ಒಬ್ಬರು ಇನ್ನೊಬ್ಬರಿಗೆ ಎಚ್ಚರಿಸುವವರಾಗಿ ಇರ್ರಿ , ಮತ್ತು ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನೀವು ನೋಡುವುದರಿಂದ ಇದನ್ನು ಮತ್ತಷ್ಟು ಮಾಡಿರಿ.” 1 ಥೆಸಲೋನಿಕದವರಿಗೆ 5:11 ರ ಉತ್ತಮ ಹಿತೋಪದೇಶವನ್ನು ಅನುಸರಿಸಿರಿ: “ಆದುದರಿಂದ ನೀವು ಈಗ ಮಾಡುತ್ತಿರುವ ಪ್ರಕಾರವೇ ಒಬ್ಬರನ್ನೊಬ್ಬರು ಸಂತೈಸಿಕೊಳ್ಳುತ್ತಾ ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಪಡಿಸುತ್ತಾ ಇರ್ರಿ.”—(w90 12/15)
ನೀವು ಹೇಗೆ ಉತ್ತರಿಸುವಿರಿ?
◻ ಹಿಂದಿಗಿಂತಲೂ ಹೆಚ್ಚಾಗಿ ಕ್ರೈಸ್ತರು ಒಬ್ಬರು ಇನ್ನೊಬ್ಬರನ್ನು ಯಾಕೆ ಪ್ರೋತ್ಸಾಹಿಸುತಿರ್ತಬೇಕು?
◻ ದೈವಿಕ ನಾಮದ ಜ್ಞಾನವು ಯೆಹೋವನ ಜನರಿಗೆ ಹೇಗೆ ಪ್ರೋತ್ಸಾಹದಾಯಕವಾಗಿದೆ?
◻ ಒಬ್ಬರು ಇನ್ನೊಬ್ಬರನ್ನು ಯಾವ ವಿಧದಲ್ಲಿ ಪ್ರೋತ್ಸಾಹಿಸಬಹುದು?
◻ ನಮ್ಮ ಸಹೋದರರನ್ನು ಧೈರ್ಯಗೆಡಿಸುವ ಪಿಶಾಚನ ಕೆಲಸದಲ್ಲಿ ನಾವು ಪಾಲಿಗರಾಗುವುದನ್ನು ನಾವು ಯಾಕೆ ಹೋಗಲಾಡಿಸಬೇಕು?
[ಪುಟ 17 ರಲ್ಲಿರುವ ಚಿತ್ರ]
ತಮ್ಮ ಸಭೆಗಳಲ್ಲಿರುವ ಮಂದೆಯನ್ನು ಪ್ರೋತ್ಸಾಹಿಸುವುದರಲ್ಲಿ ಹಿರಿಯರು ಮುಂದಾಳುತನವನ್ನು ವಹಿಸುವರು