ಲೋಕದ ಆಡಳಿತವು ಬದಲಾಗುತ್ತದೆ
ನಿಮಗೊಂದು ಅರಿಸುವಿಕೆಯಿದ್ದಲ್ಲಿ, ಯಾವ ವಿಧದ ಸರಕಾರದ ಕೆಳಗೆ ಜೀವಿಸಲು ನೀವು ಬಯಸುವಿರಿ? ಸಾಕಷ್ಟು ವೈಯಕ್ತಿಕ ಸ್ವಾತಂತ್ರ್ಯವನ್ನು ಕೊಡುವ ಒಂದು ಸ್ಥಿರವಾದ ಸರಕಾರವನ್ನು ನಮ್ಮಲ್ಲಿ ಹೆಚ್ಚಿನವರು ಆರಿಸುತ್ತಿರಬಹುದು. ದುಷ್ಕೃತ್ಯಗಳನ್ನು ಗಮನಿಸಿ ಶಾಂತಿಯನ್ನು ಹಬ್ಬಿಸುವ, ಸಾಮಾಜಿಕ ನ್ಯಾಯವನ್ನು ವರ್ಧಿಸುವ ಮತ್ತು ಐಹಿಕ ಅಭ್ಯುದಯವನ್ನು ಬೆಳೆಸುವ ಸರಕಾರವೂಂದನ್ನು ನಾವು ಬಯಸುವೆವು. ಖಂಡಿತವಾಗಿಯೂ, ದಬ್ಬಾಳಿಕೆ ಯಾ ಭ್ರಷ್ಟಾಚಾರವಿಲ್ಲದ ಸರಕಾರವೂಂದನ್ನು ನಾವು ಹೆಚ್ಚು ಇಷ್ಟಪಡುವೆವು.
ದು:ಖಕರವಾಗಿ ಹೆಚ್ಚಿನ ಸರಕಾರಗಳು ಈ ರೀತಿ ಇರುವದಿಲ್ಲ. 20ನೇ ಶತಮಾನದ ಅಂತ್ಯ ಭಾಗದಲ್ಲಿ ಲೋಕವನ್ನು ಈಗಿರುವಂತೆ ಗಮನಿಸುವಾಗ ನಾವೇನನ್ನು ನೋಡುತ್ತೇವೆ? ದಾರಿದ್ರ್ಯ, ಭಷ್ಟಾಚಾರ, ದಬ್ಬಾಳಿಕೆ, ಸಾಮಾಜಿಕ ಅನ್ಯಾಯ, ಪಾತಕ ಮತ್ತು ಅಂತರ್ರಾಷ್ಟ್ರೀಯ ಬಿಕ್ಕಟ್ಟು. ಮಾನವ ಸರಕಾರಗಳ ಸಾವಿರಾರು ವರ್ಷಗಳ ಕೊನೆಯ ಫಲಿತಾಂಶವೇ ಇದಾಗಿದೆ.
ಕೆಲವು : ಅಧಿಪತಿಗಳು ನ್ಯಾಯಮನಸ್ಕರೂ ಸಾಮರ್ಥ್ಯವುಳ್ಳವರೂ ಆಗಿದ್ದರೆಂಬದು ಸತ್ಯ. ಮತ್ತು ಕೆಲವು ಸರಕಾರೀ ವ್ಯವಸ್ದೆಗಳು ಕೊಂಚಮಟ್ಟಿಗೆ ಸಿರ್ದತೆಯುಳ್ಳವುಗಳೂ, ಕೆಲವು ಸಮಯದ ತನಕ ಪರಿಣಾಮಕಾರಿಯಾದವುಗಳೂ ಆಗಿದ್ದವು. ಆದರೆ ಸಮಗ್ರವಾಗಿ ಮಾನವ ಸರಕಾರದ ಅಪಯಶಸ್ವಿಯು ಅದು ಎನುತಾನೇ ಮಾನವ ಕುಲಕ್ಕೆ ಮಾಡಬೇಕೆಂದು ನಾವು ಸಹಜವಾಗಿ ಎಣಿಸುತ್ತೇವೂ, ಅದರಿಂದಾಗಿ ಬೈಬಲಿನ ಸತ್ಯತೆಯನ್ನು ರುಜುಪಡಿಸುತ್ತದೆ: “ಮಾನವ ಮಾರ್ಗವು ಅವನ ಸ್ವಾಧೀನದಲಿಲ್ಲವ್ಲೆಂದು ನನಗೆ ಗೊತ್ತು. ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಇನ್ನೊಂದು ಮಾತಿನಲ್ಲಿ, ಬಾಹ್ಯ ಸಹಾಯವಿಲ್ಲದೇ ಮನುಷ್ಯನು ತಾನಾಗಿಯೇ ತನ್ನನ್ನು ನಡಿಸಿಕೊಳ್ಳುವಂತೆ ಉಂಟುಮಾಡಲ್ಪಡಲಿಲ್ಲ.
ಆದ್ದರಿಂದಲೇ ಲೋಕದ ಆಡಳಿತೆ ಬದಲಾಗುತ್ತದೆ ಎಂದು ತಿಳಿಯುವದು ಒಳ್ಳೆಯದು. ಈ ಹೇಳಿಕೆಯಿಂದ ನಮ್ಮ ಅರ್ಥವೇನು? ಪೂರ್ಣವಾಗಿ ಯಶಸ್ವಿಯಾಗುವ, ಸಮಗ್ರವಾಗಿ ಹೊಸರೂಪದ ಸರಕಾರದ ಹಸ್ತಗಳಲ್ಲಿ ಮಾನವಕುಲದ ಜೀವಿತಗಳ ದೈನಿಕ ಅಡಳಿತವು ಬಲು ಬೇಗನೇ ಬರಲಿದೆ ಎಂದು ನಮ್ಮ ಅರ್ಥ. ಇಂತಹ ಸರಕಾರದ ತೀರ್ವತೆಯು ಬದಲಾವಣೆಯ ದೇವರಿಂದ ಮುಂತಿಳಿಸಲ್ಪಟ್ಟಿತ್ತು. ವಾಸ್ತವವಾಗಿ ಬೈಬಲಿನ ಮುಖ್ಯವಿಷಯವೇ ಅದಾಗಿದೆ.
ಸರಕಾರದ ಕುರಿತು ದೇವರ ಆಸಕ್ತಿ
ಮಾನವಕುಲದ ಆಡಳಿತೆಯ ಕುರಿತು ದೇವರು ಯಾವಾಗಲೂ ಆಸಕ್ತಿಯುಳ್ಳವನಾಗಿದ್ದನು. ಮಾನವ ಸರಕಾರಗಳು ತಮ್ಮ ಜವಾಬ್ದಾರಿಕೆಯನ್ನು ಎಷ್ಟರಮಟ್ಟಿಗೆ ಪೂರೈಸುತ್ತಿವೆ ಎಂದು ನಿಕಟವಾಗಿ ಅವನು ಗಮನಿಸುತ್ತಾನೆ ಮತ್ತು ಕೆಲವೂಮ್ಮೆ ಲೆಕ್ಕಒಪ್ಪಿಸುವಂತೆ ಅವನು ಕೇಳುತ್ತಾನೆ. ಕಳೆದ ಸುಮಾರು 2500 ವರ್ಷಗಳ ಇತಿಹಾಸದಲ್ಲಿನ ಕೆಲವು ಎದ್ದುಕಾಣುವ ಸರಕಾರೀ ವ್ಯವಸ್ದೆಗಳು ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿದ್ದವು. ಕ್ರಿಸ್ತನ ಜನನದ ಸುಮಾರು 500 ವರ್ಷಕ್ಕೆ ಮೊದಲು, ದಾನಿಯೇಲನ ಪುಸ್ತಕದಲ್ಲಿ ಪ್ರಾಚೀನ ಬಾಬೆಲಿನ ಪತನ, ಮೇದ್ಯಫಾರಸಿ, ಗ್ರೀಸ್ ಮತ್ತು ರೋಮಿನ ಎಳಿಕೆ ಮತ್ತು ಬೀಳಿಕೆಯನ್ನು ಮುಂತಿಳಿಸಿದ್ದ ಪ್ರವಾದನೆಗಳು ದಾಖಲಿಸಲಟ್ಟಿವೆ. ನಮ್ಮೀ ದಿನಗಳ ಆಂಗ್ಲೋ-ಅಮೇರಿಕನ್ ಲೋಕಶಕ್ತಿಯ ಬೆಳವಣಿಗೆಯ ಕುರಿತು ಸಹಾ ಪ್ರವಾದನೆಗಳು ಮುಂತಿಳಿಸಿವೆ. ಲೋಕದ ಆಡಳಿತೆ ಬದಲಾಗುತ್ತದೆ ಎಂಬ ಹೇಳಿಕೆಯಿಂದ ನಾವೇನು ಅರ್ಥೈಸಿದ್ದೇವೆಂದು ತಿಳಿಯಲು ಈ ಪ್ರವಾದನೆಗಳಲ್ಲಿ ಕೆಲವನ್ನು ಸಂಕ್ಷಿಪ್ತವಾಗಿ ಗಮನಿಸುವದರಿಂದ ನಮಗೆ ಸಹಾಯಕಾರಿಯು.
ಬೆರಗುಗೊಳಿಸುವ ಪ್ರವಾದನೆಗಳಲ್ಲಿ ಮೊದಲನೇದು, ದಾನಿಯೇಲನ ದಿನಗಳಿಂದ ನಮ್ಮೀ ದಿನಗಳ ತನಕ ಲೋಕಶಕ್ತಿಯನ್ನು ಪ್ರತಿನಿಧಿಸುವ ಒಂದು ದೊಡ್ಡ ಗಾತ್ರದ ದೇವಪ್ರೇರಿತ ಕನಸು ಆಗಿದೆ. ಅನಂತರ ಕೈಯಿಲ್ಲದೆ, ಒಂದು ಗುಂಡು ಬಂಡೆಯು ಬಡೆದು ಈ ಪ್ರತಿಮೆಯನ್ನು ಚೂರುಚೂರುಮಾಡಿತು. ಈ ಗುಂಡು ಬಡೆದು ಈ ಲೋಕ ಶಕ್ತಿಗಳನ್ನು ನೆಲದ ಧೂಳಿಯಾಗಿ ಮಾಡಿತು. ಅವು “ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು. ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು.”—ದಾನಿಯೇಲ 2:44, 45.
ದಾನಿಯೇಲನ ಅದೇ ಅಧ್ಯಾಯವು ಅದರ ಅರ್ಥವೇನೆಂದು ವಿವರಿಸುತ್ತದೆ. ವಿಫಲ ಮಾನವ ಸರಕಾರಗಳ ಸ್ಥಾನದಲ್ಲಿ ಶಾಶ್ವತವಾಗಿ ಶೇಷ್ಟವಾದ ಒಂದು ಬದಲಿಯು ಬರಲಿದೆಂದು ಅದು ಅದು ಸೂಚಿಸಿತು. ಅದು ನಮಗನ್ನುವದು: “ಆ ರಾಜರ ಕಾಲದಲ್ಲಿ ಪರಲೋಕದ ದೇವರು ಒಂದು ರಾಜ್ಯವನ್ನು ಸ್ದಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಗಳಿಗೆ ಕದಲಿಹೋಗದು. ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು. . .ಕನಸು ನಿಜ, ಅದರ ಅರ್ಥ ನಂಬತಕ್ಕದ್ದು.”—ದಾನಿಯೇಲ 2:44,45.
ಆದರೆ ವಿಷಯದ ಅಂತ್ಯವು ಅದಲ್ಲ. ಎರಡನೆಯ ದರ್ಶನದಲ್ಲಿ, ಪ್ರತಿನಿಧಿತ ಲೋಕಶಕ್ತಿಯ ಗುಣಲಕ್ಷಣವುಳ್ಳ ವಿಲಕ್ಷಣ ಮೃಗಗಳಿಂದ ಸೂಚಿತವಾದ ಒಂದರಹಿಂದೊಂದು ಬರುವ ಲೋಕಶಕ್ತಿಗಳು ಅಲ್ಲಿದ್ದವು. “ಮಹಾವೃದ್ಧನ” ಭಯಬರಿಸುವ ಸ್ವರ್ಗೀಯ ನ್ಯಾಯಾಸನದ ತನಕ ಅವನ್ನು ನೋಡುವಂತೆ ದಾನಿಯೇಲನಿಗೆ ಅನುಮತಿಸಲಾಯಿತು. ಅವನ ದಿನಗಳಲ್ಲಲ್ಲ, ಬದಲಾಗಿ ನಮ್ಮ ದಿನಗಳಲ್ಲಿ ಆಂಗ್ಲೋ-ಅಮೇರಿಕನ್ ಲೋಕಶಕ್ತಿಯ ಆಳಿಕೆಯ ಕಾಲದಲ್ಲಿ ನಡಿಯಲಿದ್ದ ಒಂದು ಸಂಗತಿಯನ್ನು ಅವನಿಗೆ ತೋರಿಸಲಾಯಿತು. ಈ ಲೋಕಶಕ್ತಿಗಳ ತೀರ್ಪುಗೈಯಲು ಯೆಹೋವನ ವೈಭವವುಳ್ಳ ಪರಲೋಕದ ನ್ಯಾಯಾಸನಗಳು ಹಾಕಲ್ಪಟ್ಟದ್ದನ್ನು ಅವನು ಕಂಡನು. (ದಾನಿಯೇಲ 7:2-12) ಕೆಳಗಿನ ವಚನಗಳು ತೋರಿಸುವಂತೆ ಆಡಳಿತದಲ್ಲಿ ಒಂದು ಬದಲಾವಣೆ ಯಾಗುವಂತೆ ದೈವಿಕ ತೀರ್ಪು ನೀಡಲ್ಪಟ್ಟಿತು. ಈ ಅಡಳಿತವು ಯಾರಿಗೆ ಕೊಡಲ್ಪಟ್ಟಿತು?
ಮನುಷ್ಯ ಕುಮಾರನಂತಿರುವವನು
ದಾನಿಯೇಲನು ಪುಳಕಿತಗೊಳಿಸುವ ಉತ್ತರವನ್ನು ನೀಡುತ್ತಾನೆ:
“ನಾನು ಕಂಡ ರಾತ್ರಿಯ ಕನಸಿನಲ್ಲಿ ಇಗೋ, ಮನುಷ್ಯ ಕುಮಾರನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾ ವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ಜನಾಂಗ ಕುಲ ಭಾಷೆಗಳವರು ಅವನನ್ನು ಸೇವಿಸಲೆಂದು ಆತನಿಗೆ ದೊರೆತನವೂ ಘನತೆಯಾ ರಾಜ್ಯವೂ ಕೊಡೋಣವಾದವು. ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.”—ದಾನಿಯೇಲ 7:13, 14.
ಈ ರೀತಿಯಲ್ಲಿ “ಮಹಾವೃದ್ಧನಾದ” ಯೆಹೋವ ದೇವರು ಸ್ವತಹಾ ದಬ್ಬಾಳಿಕೆಯ ಮಾನವ ಸರಕಾರಗಳ ದುರಾಡಳಿತವನ್ನು ನಿರ್ಮೂಲಗೊಳಿಸುವನೆಂದು ಮುಂತಿಳಿಸಲು ದಾನಿಯೇಲನನ್ನು ಬಳಸಲಾಯಿತು. ಮಾನವಕುಲವು ಊಹಿಸಶಕ್ತವಾದ ಅತ್ಯುತ್ತಮ ಸರಕಾರವೂಂದರಿಂದ ಅವನಿದನ್ನು ಸ್ಥಾನಪಲ್ಲಟಗೊಳಿಸುವದು ಪರಲೋಕದಿಂದ ಶಕ್ತಿ ಮತ್ತು ಅಧಿಕಾರವನ್ನು ಚಲಾಯಿಸುವ ಒಂದು ಅದೃಶ್ಯ ರಾಜ್ಯದಿಂದ. ಆದರೆ ಈ ರಾಜ್ಯವನ್ನು ಚಲಾಯಿಸುವ “ಮನುಷ್ಯ ಕುಮಾರನಂತಿರುವವನು” ಯಾರು?
ನಮ್ಮನ್ನು ಸಂದೇಹದಲ್ಲಿ ಇರುವಂತೆ ಬಿಡಲಿಲ್ಲ. ಸ್ವತಹ ಯೇಸುವೇ ತಾನು “ಮನುಷ್ಯಕುಮಾರ” ನೆಂದು ಗುರುತಿಸಿದ್ದಾನೆ. ತನ್ನ ಸಾನಿಧ್ಯತೆಯ ಕುರಿತು ವಿವರಿಸುವಾಗ, ಆ ಸಮಯದಲ್ಲಿ “ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿ ಬರುವನು.“ (ಮತ್ತಾಯ 25:31) ಅವನು “ದೇವಕುಮಾರನಾದ ಕ್ರಿಸ್ತನು” ಹೌದೋ ಅಲ್ಲವೋ ಎಂದು ನ್ಯಾಯಾಲಯಕ್ಕೆ ಹೇಳಲು ಯೆಹೂದ್ಯರ ಮಹಾಯಾಜಕನು ಯೇಸುವಿಗೆ ಹೇಳಲು, ಯೇಸು ಉತ್ತರಿಸಿದ್ದು: “ನೀನೇ ಹೇಳಿದ್ದೀ. ಇದಲ್ಲದೆ ಇನ್ನು ಮೇಲೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳಲ್ಲಿ ಕುಳಿತು ಬರುವದನ್ನೂ ಕಾಣುವಿರಿ ಎಂದು ನಿಮಗೆ ಹೇಳುತ್ತೇನೆ.”—ಮತ್ತಾಯ 26:63, 64.a
ಕೊನೆಯ ಮಾನವ ಲೋಕಶಕ್ತಿ
ದಾನಿಯೇಲನ ಸಮಯದ ಸುಮಾರು 600 ವರ್ಷಗಳ ಅನಂತರ ಅಪೋಸ್ತಲ ಯೋಹಾನನು ದೇವಪ್ರೇರಣೆಯಿಂದ ಪ್ರಕಟನೆಯೆಂಬ ಬೈಬಲ್ ಪುಸ್ತಕವನ್ನು ಬರೆದನು. ಆ ಪುಸ್ತಕವು ಲೋಕಶಕ್ತಿಗಳನ್ನು ಬಲಾಢ್ಯವಾದ “ರಾಜರುಗಳು” ಎಂದು ಸೂಚಿಸುತ್ತಾ ಅಂದದ್ದು: “ಅವು ಎಳು ಮಂದಿ ಅರಸರನ್ನು ಸೂಚಿಸುತ್ತವೆ. ಅವರಲ್ಲಿ ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ. ಬಂದ ಮೇಲೆ ಅವನು ಸ್ವಲ್ಪಕಾಲ ಇರಬೇಕು.”—ಪ್ರಕಟನೆ 17:10.
ಯೋಹಾನನು ಬರೆಯುವಾಗ ಬಿದ್ದುಹೋಗಿದ್ದ ಐದು ಯಾವವೆಂದರೆ ಐಗುಪ್ತ, ಅಶ್ಯೂರ್ಯ, ಬಬಿಲೋನ್, ಮೇದ್ಯಫಾರಸಿ, ಮತ್ತು ಗ್ರೀಸ್. ರೋಮನ್ ಸಾಮ್ರಾಜ್ಯ ಇನ್ನೂ “ಇತ್ತು.” ಎಳನೆಯ, ನಮ್ಮ ದಿನಗಳ ಆಂಗ್ಲೋ ಅಮೇರಿಕನ್ ಲೋಕಶಕ್ತಿಯು ಇನ್ನೂ ಬಂದಿಲ್ಲವೆಂಬದು ಸ್ಪುಟ. ಪ್ರಕಟನೆಗನುಸಾರ ಇಂದು ಅಸ್ತಿತ್ವದಲ್ಲಿರುವದನ್ನೊಂದು ಬಿಟ್ಟು ಬೇರೆ ಯಾವುದೇ ಲೋಕಶಕ್ತಿಯು ಉಳಿಯುವದಿಲ್ಲ. ಇದು ಕೊನೆಯದ್ದು. ಅನಂತರ ಬೇರೊಂದು ಇಲ್ಲ.
ಆದಾಗ್ಯೂ, ಇದು ಭಯಹುಟ್ಟಿಸುವ ಯೋಚನೆಯಾಗಿರಕೂಡದು. ಅದು ರೋಮಾಂಚಕಾರಿಯು! ಅನ್ಯಾಯದ, ಯುದ್ಧಗ್ರಸ್ತ ಮಾನವ ಆಡಳಿತದ ಅಂತ್ಯವು ಹತ್ತರಿಸಿದೆ ಎಂಬದೇ ಅದರ ಅರ್ಥವು. ಭೂಮಿಯಾಳಲ್ಪಟ್ಟ ವಿಧದಲ್ಲಿ ಒಂದು ಬಹು ಮುಖ್ಯ ಬದಲಾವಣೆಯನ್ನು ತಿಳಿಸುವದರಲ್ಲಿ ಎಲ್ಲಾ ಪ್ರವಾದನೆಗಳು ಎಕೀಕೃತವಾಗಿವೆ. ಸ್ವಾರ್ಥ ಮಾನವ ಸರಕಾರದಿಂದ ನೀತಿಯ ಪರಲೋಕದ, ದೇವರ ರಾಜ್ಯಕ್ಕೆ ಬದಲಾಯಿಸಲ್ಪಡುವದು.
ರಾಜ್ಯ ಸರಕಾರ
ಆದರೆ ಆ ರಾಜ್ಯ ಎನಾಗಿದೆ? ಮನುಷ್ಯರ ಹೃದಯ ಮತ್ತು ಜೀವಿತಗಳಲ್ಲಿ ಒಳ್ಳಿತನ್ನು ಮಾಡುವ ಪ್ರಭಾವಕ್ಕಿಂತಲೂ ಅದು ಎಷ್ಟೋ ಹೆಚ್ಚಿನದ್ದಾಗಿದೆ. ಕ್ರೈಸ್ತ ಚರ್ಚು ಎಂದು ಕರೆಯಲ್ಪಡುವದರ ಜೀವಾವಧಿಗಿಂತಲೂ ಅದು ಅಧಿಕವಾದದ್ದು. ದೇವರ ರಾಜ್ಯವು ಒಂದು ನಿಜ ಸರಕಾರವಾಗಿದೆ. ಅದಕ್ಕೊಬ್ಬ ರಾಜನಿದ್ದಾನೆ, ಸಹರಾಜರುಗಳಿದ್ದಾರೆ, ಕಾರ್ಯಕ್ಷೇತ್ರವಿದೆ ಮತ್ತು ಪ್ರಜೆಗಳಿದ್ದಾರೆ. ಈ ಹಿಂದೆ ಹೇಳಿದ ಅದ್ಬುತ ಆತೀರ್ವಾದಗಳನ್ನು ಅದು ಉತ್ಪಾದಿಸುತ್ತದೆ.
ಯೇಸುವು ಆ ರಾಜ್ಯದ ರಾಜನಾಗಿ ಗುರುತಿಸಲ್ಪಟ್ಟಿದ್ದಾನೆ. ಅವನು ತನ್ನನ್ನು “ರಾಜ್ಯಾಧಿಕಾರವನ್ನು ಪಡೆದುಕೊಂಡು ಹಿಂತಿರುಗಿ ಬರುವ” ಒಬ್ಬ ಶ್ರೀಮಂತ ಪುರುಷನಿಗೆ ಹೋಲಿಸಿಕೊಂಡಿದ್ದಾನೆ. ಆ ಭವಿಷ್ಯದ ಸಮಯದ ಕುರಿತು ಅವನಂದದ್ದು: “ಮನುಷ್ಯ ಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿ ಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು.”—ಲೂಕ 19:12. ಮತ್ತಾಯ 25:311.
“ಮನುಷ್ಯಕುಮಾರನು” ಯಾವಾಗ ಬರುವನು? ಉತ್ತರಕ್ಕಾಗಿ ನಾವು ಊಹಿಸುವ ಅಗತ್ಯವಿಲ್ಲ. ಉತ್ತರವಾಗಿ ಯೇಸು ಹೇಳಿದ ಮಾತುಗಳು ಹೀಗಿವೆ: “ಅದು ಯಾವಾಗ ಆಗುವದು? ನಿನ್ನ ಸಾನಿಧ್ಯತೆಗೂ ವಿಷಯಗಳ ವ್ಯವಸ್ದೆಯ ಅಂತ್ಯಕ್ಕೂ ಸೂಚನೆಯೇನು?.” (ಮತ್ತಾಯ 24:3, 30, NW) ಈ ಪತ್ರಿಕೆಯ ಅಂಕಣಗಳಲ್ಲಿ ಅನೇಕಸಾರಿ ತೋರಿಸಿದಂತೆ, 1914 ರಲ್ಲಿ “ಜನಾಂಗಗಳಿಗೆ ನೇಮಕವಾದ ಸಮಯವು” ಅಂತ್ಯಗೊಂಡಾಗ, ಪರಲೋಕದಲ್ಲಿ ಅದೃಶ್ಯವಾಗಿ ಅವನ “ಸಾನಿಧ್ಯತೆ” ಅರಂಭವಾಯಿತು.b—ಲೂಕ 21:24.
ಪ್ರಕಟನೆ 12ನೇ ಅಧ್ಯಾಯದಲ್ಲಿ ಸಂಭವಿಸುತ್ತದೆಂದು ಹೇಳಿದ ಮೇರೆಗೆ ಯೇಸುವು ಆಗ ತನ್ನ ಅಧಿಕಾರವನ್ನು ವಹಿಸಿಕೊಂಡನು ಮತ್ತು ಸೈತಾನನನ್ನು ಪರಲೋಕದಿಂದ ಭೂಕ್ಷೇತ್ರಕ್ಕೆ ದೊಬ್ಬಿದನು. ಪರಲೋಕದಲ್ಲಿ ಅಗ ಒಂದು ದ್ವನಿ ಕೇಳಿ ಬಂತು: “ಈಗ ಜಯವೂ ಶಕ್ತಿಯೂ ರಾಜ್ಯವೂ ನಮ್ಮ ದೇವರಿಗೆ ಉಂಟಾಯಿತು; ಆತನು ಅಭಿಶೇಕಿಸಿದವನಿಗೆ ಅಧಿಕಾರವು ಈಗ ಸ್ದಾಪಿತವಾಯಿತು. ಹಗಲಿರುಳು ನಮ್ಮ ಸಹೋದರರ ಮೇಲೆ ನಮ್ಮ ದೇವರ ಮುಂದೆ ದೂರುಹೇಳಿದ ದೂರುಗಾರನು ದೊಬ್ಬಲ್ಪಟ್ಟಿದ್ದಾನೆ.” ಅಂದಿನಿಂದ ಲೋಕ ಪರಿಸ್ಥಿತಿಗಳು ಕೆಡುತ್ತಾ ಬರುವ ಕಾರಣವೇನೆಂದು ನಮಗೆ ವಿವರಿಸುತ್ತದೆ. ಈ ರೀತಿಯಲ್ಲಿ ಪರಲೋಕದಲ್ಲಿ ದ್ವನಿಯು ಮುಂದುವರಿಯಿತು: “ಭೂಮಿಯೇ, ಸಮುದ್ರವೇ ನಿಮ್ಮ ದುರ್ಗತಿಯನ್ನು ಎನುಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಬಳಿಗೆ ಇಳಿದು ಬಂದಿದ್ದಾನೆ.”—ಪ್ರಕಟನೆ 12:9-12.
ಆ ಕೊಂಚಕಾಲ ಬೇಗನೇ ಮಗಿಯಲಿದೆ. ಕೆಲವೇಅಧ್ಯಾಯಗಳ ನಂತರ ಮಹಿಮಾಭರಿತ ಯೇಸುವು ಬಿಳೀ ಕುದುರೆಯನ್ನು ಹತ್ತಿರುವದನ್ನು ನೋಡಬಹುದು. ಅವನನ್ನು “ದೇವರ ವಾಕ್ಯ” ಎಂದು ಕರೆಯಲಾಗಿದೆ ಮತ್ತು “ಜನಾಂಗಗಳನ್ನು ಹೊಡೆಯಲಿಕ್ಕಾಗಿ” ಅವನು ಹೊರಡುತ್ತಾನೆ ಮತ್ತು “ಕಬ್ಬಿಣದ ಕೋಲಿನಿಂದ ಅವರನ್ನು ಆಳುವನು.” ದೇವರ ಗುಂಡು ಬಂಡೆಯಂತಹ ರಾಜ್ಯವು ಜನಾಂಗಗಳನ್ನು ಪುಡಿಪುಡಿಮಾಡಿ, ಇಡೀ ಭೂಮಿಯನ್ನಾವವರಿಸಿದ್ದು ದಾನಿಯೇಲನಿಗೆ ತೋರಿಸಿದಂತೆ ಇದು ಇರುತ್ತದೆ.—ಪ್ರಕಟನೆ 19:11-16; ದಾನಿಯೇಲ 2:34, 35, 44 45.
ಇನ್ನೆಂದೂ ಮೃಗ ಸದೃಶ ಮಾನವ ರಾಜಕೀಯ ಶಕ್ತಿಗಳು ಮಾನವಕುಲವನ್ನು ದಬ್ಬಾಳಿಕೆಯಿಂದ ಪೀಡಿಸವು.
ಸಹ ರಾಜರುಗಳು
ಆದರೆ ಅಲ್ಲಿ ಇನ್ನೂ ಹೆಚ್ಚಿನ ವಿಷಯವಿದೆ. “ಮನುಷ್ಯಕುಮಾರನಂತಿರುವವನಿಗೆ” ಮಾತ್ರ ರಾಜ್ಯವು ಕೊಡೋಣವಾಗುವದು ಎಂದು ಮಾತ್ರ ಹೇಳಲು ದಾನಿಯೇಲನಿಗೆ ಪ್ರೇರೇಪಣೆಯಾದದ್ದಲ್ಲ, ಬದಲಾಗಿ “ಪರಾತ್ಪರನ ಭಕ್ತ ಜನರಿಗೂ ಕೊಡೋಣವಾಗುವದು.”—ದಾನಿಯೇಲ 7:27.
ಅವರು ಯಾರು? ಪ್ರಕಟಣೆ ಕುರಿಮರಿಯಾದ ಕ್ರಿಸ್ತಯೇಸುವಿನ ಕುರಿತು ಅನ್ನುವದು: “ಸಕಲ ಕುಲ ಭಾಷೆ ಜನಾಂಗಗಳವರಿಂದ ಮನುಷ್ಯರನ್ನು ದೇವರಿಗಾಗಿ ನೀನು ಕೊಂಡುಕೊಂಡಿ. ಅವರನ್ನು ನಮ್ಮ ದೇವರಿಗೋಸ್ಕರ ರಾಜರನ್ನಾಗಿಯೂ ಯಾಜಕರನ್ನಾಗಿಯೂ ಮಾಡಿದಿ. ಅವರು ಭೂಮಿಯ ಮೇಲೆ ಆಳುವರು.” ಅದಿನ್ನೂ ಹೇಳುವದು: “ಅವರು ದೇವರಿಗೂ ಕ್ರಿಸ್ತನಿಗೂ ಯಾಜಕರಾಗಿ ಕ್ರಿಸ್ತನೊಂದಿಗೆ ಆ ಸಾವಿರ ವರ್ಷ ಆಳುವರು.” ತಿಳಿಸಲ್ಪಟ್ಟ ಅವರ ಸಂಖ್ಯೆಯು 144000 ಆಗಿದೆ.—ಪ್ರಕಟಣೆ 5:9, 10; 14:!; 20:6.
ತನ್ನ ಮಗನಾದ ಯೇಸುಕ್ರಿಸ್ತನೊಂದಿಗೆ ಲೋಕ ಸರಕಾರದಲ್ಲಿ ಪಾಲಿಗರಾಗಲು ಪರಾತ್ಪರ ದೇವರು ಆರಿಸುವವರೇ ಇವರಾಗಿರುವರು. ದೇವರು ಆರಿಸುವವರ ಹಸ್ತಗಳಿಗಿಂತಲೂ ಬೇರೆ ಯಾರ ಹಸ್ತದಲ್ಲೂ ನಮ್ಮ ಭವಿಷ್ಯ ಅಧಿಕ ಸುರಕ್ಷತೆಯಲ್ಲಿ ಇರಬಲ್ಲದೋ? ಇಲ್ಲ. ಈ ರಾಜ್ಯವು ಶಕ್ತವಾದ ಅತ್ಯುತ್ತಮ ಸರಕಾರ. ಮನುಷ್ಯನು ಪರಿಚಿತನಾದ ಯಾವುದಕ್ಕಿಂತಲೂ ಅತಿಶ್ರೇಷ್ಟವು. ಅದರ ಆಡಳಿತದ ಕೆಳಗೆ ಇಡೀ ಭೂಮಿಯು ದೇವರು ಮೂಲದಲ್ಲಿ ಉದ್ದೇಶಿದ ಪ್ರಕಾರ ಪರದೈಸವಾಗಿ ಮಾರ್ಪಡಲಿರುವದು.
ಮುಂದಿನ ಲೇಖನವನ್ನು ಓದಿರಿ ಮತ್ತು ಆ ರೀತಿಯ ಸರಕಾರದ ಕೆಳಗೆ ನೀವು ಜೀವಿಲು ಆರಿಸುವಿರೋ ಎಂದು ನೋಡಿರಿ. (w88 6/15)
[ಅಧ್ಯಯನ ಪ್ರಶ್ನೆಗಳು]
a ದಾನಿಯೇಲನ ದರ್ಶನದ ಕುರಿತು, ನ್ಯೂ ಕ್ಯಾಥ್‌ಲಿಕ್ ಎನ್‌ಸೈಕ್ಲೊಪೀಡಿಯಾ ಹೇಳುವದು: “ಯುಗಾಂತ್ಯದ ಸಮಯದಲ್ಲಿ ಶಾಶ್ವತ ಮಹತ್ವದ ಘಟನೆಯೊಂದರ ಕುರಿತು ದಾನಿಯೇಲನು ಇಲ್ಲಿ ಮಾತಾಡುತ್ತಾನೆ ಎನ್ನುವದರಲ್ಲಿ ಸಂದೇಹವಿಲ್ಲ.” ಅದು ಕೂಡಿಸುವದು: “ಸನೆದ್ರಿನ್ ಮುಂದೆ ಯೇಸುವಿನ ಹೇಳಿಕೆಯು ಮನುಷ್ಯ ಕುಮಾರನು ಅವನೆಂದು ಅವನ ಗುರುತಿಸುವಿಕೆಯೂ, ಅವನು ರಾಜ್ಯಾಧಿಕಾರಕ್ಕೆ ಬರುವ ಸ್ಪಷ್ಟ ಉಲ್ಲೀಖವೂ ಇರುವದು ನಮಗೆ ನಿರ್ವಿವಾದದ ರುಜುವಾತಾಗಿದೆ.”
b ಮೇ 1, 1982 ಮತ್ತು ಎಪ್ರಿಲ್ 1, 1984ರ ದಿ ವಾಚ್‌ಟವರ್ ಸಂಚಿಕೆಗಳನ್ನು ನೋಡಿರಿ.
[ಪುಟ 8 ರಲ್ಲಿರುವ ಚೌಕ]
“ಯೇಸುವಿನ ಭೋದನೆಯ ಕೇಂದ್ರ ವಿಷಯ”
“ಯೇಸುವಿನ ಸಾರುವಿಕೆಯಲ್ಲಿ ದೇವರ ರಾಜ್ಯದ ವಿಷಯವು ಒಂದು ಕೇಂದ್ರ ಸ್ಥಾನವನ್ನು ತೆಗೆದುಕೊಳ್ಳುತ್ತದೆ.”—ನ್ಯೂ ಕ್ಯಾಥ್‌ಲಿಕ್ ಎನ್‌ಸೈಕ್ಲೊಪೀಡಿಯಾ.
“(ದೇವರ ರಾಜ್ಯವು) ಯೇಸುವಿನ ಭೋದನೆಯ ಕೇಂದ್ರ ವಿಷಯವಾಗಿತ್ತು.”—ಎನ್‌ಸೈಕ್ಲೊಪೀಡಿಯಾ ಬ್ರಿಟಾನಿಕ.
ಆದರೆ ಚರ್ಚಿನಲ್ಲಿ “ಯೇಸುವಿನ ಭೋದನೆಯ ಕೇಂದ್ರ ವಿಷಯ”ವನ್ನು ನೀವು ಕೊನೆಯ ಸಾರಿ ಕೇಳಿದ್ದು ಯಾವಾಗ?
[ಪುಟ 9 ರಲ್ಲಿರುವ ಚೌಕ]
ದೇವರ ರಾಜ್ಯದ ಕುರಿತಾಗಿ ಗಲಿಬಿಲಿ
ಕೆಲವು ಜನರು “ಭೂಮಿಯ ಮೇಲಿನ ಚರ್ಚ್” ದೇವರ ರಾಜ್ಯವೆಂದು ಯೋಚಿಸುವಾಗ ಇನ್ನಿತರರು ನಂಬುವದೇನಂದರೆ, ಸದ್ಯದ ಲೋಕವು “ಕ್ರಿಸ್ತನ ಪ್ರಭಾವದ ಕೆಳಗೆ ಅದು ರಾಜ್ಯವಾಗುವ ತನಕ ಬೆಳೆಯುತ್ತಾ ಇರುತ್ತದೆ. ಇನ್ನೂ ಅನೇಕರು ಹೇಳುವದೇನಂದರೆ ದೇವರ ರಾಜ್ಯವು “ವ್ಯಕ್ತಿಯೊಬ್ಬನ ಹೃದಯದಲ್ಲಿ ಮತ್ತು ಜೀವಿತದಲ್ಲಿ ದೇವರ ಆಳಿಕ್ವೆ” ಯಾಗಿರುತ್ತದೆ.
ಆದ್ರೆ ದೇವರ ರಾಜ್ಯಕ್ಕೆ ಇರುವದು ಇದಿಷೆಯ್ಟೋ—ಒಂದು ಧಾರ್ಮಿಕ ವ್ಯವಸ್ದೆ, ಕ್ರಮೇಣ ಧಾರ್ಮಿಕ ಬದಲಾವಣೆ ಯಾ ಜನರ ಹೃದಯಗಳಲ್ಲಿ ಏನೋ ಆತ್ಮಿಕ ಸ್ಥಿತಿ?