ದೇವರ ರಾಜ್ಯದ ಕೆಳಗೆ ಭೂಮಿಯ ಉಜ್ವಲ ಭವಿಷ್ಯ
ಬೈಬಲು “ನಂಬಿಕೆಯೋ ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದು” ಎಂದು ಹೇಳುತ್ತದೆ. (ಇಬ್ರಿಯ 11:1) ನಾವು ಹಿಂದಿನ ಲೇಖನದಲ್ಲ ನೋಡಿದಂತೆ, ಕ್ರಿಸ್ತನ ಜನನದ ಸುಮಾರು 500 ವರ್ಷಕ್ಕಿಂತಲೂ ಮೊದಲು ದಾನಿಯೇಲನ ದಿನಗಳಿಂದ ಹಿಡಿದು ನಮ್ಮೀ ದಿನಗಳ ತನಕ ಲೋಕ ಶಕ್ತಿಗಳ ಎಳಿಕೆ ಮತ್ತು ಬೀಳಿಕೆಗಳ ಪ್ರವಾದನಾ ಮುನ್ನೋಟವನ್ನು ದಾನಿಯೇಲನ ಪುಸ್ತಕದಲ್ಲಿ ಬರೆಯುವಂತೆ ದೇವರು ಕಾರಣನಾದನು. ಈ ಪ್ರವಾದನೆಗಳ ನಿಖರತೆಯು ದಾನಿಯೇಲನ ಪ್ರವಾದನೆಗಳಲ್ಲಿ ಉಳಿದವುಗಳು ಬೇಗನೇ ನೆರವೇರಲಿವೆ ಮತ್ತು ಯೇಸುಕ್ರಿಸ್ತನ ಅಧೀನದಲ್ಲಿರುವ ದೇವರರಾಜ್ಯವು ಬಲುಬೇಗನೇ ಮಾನವ ಸರಕಾರದ ಸ್ಥಾನದಲ್ಲಿ ಬರಲಿದೆ ಎಂದು ನಂಬಲು ನಮಗೆ ಬಲವಾದ ಕಾರಣವನ್ನೀಯುತ್ತದೆ, ಭರವಸೆಯನ್ನು ನಮಗೀಯುತ್ತದೆ.
ಮಾನವಕುಲಕ್ಕೆ ಅದು ಎಂತಹ ಬದಲಾವಣೆಯ ಅರ್ಥದಲ್ಲಿರುವದು! ಆ ಸಮಯಗಳನ್ನು ಮುನ್ನೋಡುತ್ತಾ ದೇವರು ತಾನೇ ಅಂದದ್ದು: “ಇಗೋ, ನಾನು ಎಲ್ಲವನ್ನೂ ಹೊಸದು ಮಾಡುತ್ತೇನೆ.” (ಪ್ರಕಟನೆ 21:5) ಹೇಗೆ “ಹೊಸ” ಸಂಗತಿಗಳು ಇರುವವು, ಇಂದು ಮಾನವ ಆಳಿಕೆಯ ಕೆಳಗೆ ಇಂದು ನಾವು ನೋಡುತ್ತಿರುವದಕ್ಕಿಂತಲೂ ಇದು ಹೇಗೆ ಪೂರ್ಣವಾಗಿ ಭಿನ್ನವಾಗಿರುವದು ಎಂದು ಕಾಣಲು ಆ ಪ್ರೇರಿತ ಗ್ರಂಥಗಳಲ್ಲಿ ಕೆಲವನ್ನು ನಾವು ಗಮನಿಸಿ, ಸಂತಸದ ಸಮಯದ ಚಿತ್ರಣವನ್ನು ಬಿಡಿಸುವದು ನಮಗೆ ಸಹಾಯವಾಗಬಹುದು. ನಮ್ಮ ಭೂಮಿಯ ಮತ್ತು ಅದರ ಮೇಲಿನ ಜೀವಿತದ ಭವಿಷ್ಯದ ಕುರಿತು ಬೈಬಲ್ ಹೇಳುವದು ನಮ್ಮನ್ನು ಬೆರಗು ಗೊಳಿಸದೇ ಬಿಡದು. ಗಮನಿಸಿರಿ:
ಪಾತಕ ಮತ್ತು ಹಿಂಸಾಚಾರ ಅಂತ್ಯಗೊಳ್ಳುವದು: “ಕೆಡುಕರು ತೆಗೆದು ಹಾಕಲ್ಪಡುವರು,. . .ದುಷ್ಟನು ಕಾಣಿಸದೆ ಹೋಗುವನು.” ಅಲ್ಲಿ ಜೀವಿಸುವವರು “ತನ್ನ ತನ್ನ ದ್ರಾಕ್ಷಾಲತೆ ಮತ್ತು ಅಂಜೂರಗಿಡ ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದದೆ.”—ಕೀರ್ತನೆ 37:9, 10; ಮೀಕ 4:4.
ಜಾತೀಯ ಮತ್ತು ರಾಷ್ಟ್ರೀಯ ವಿಭಾಗಗಳು ಮತ್ತು ಅವು ಪ್ರಚೋದಿಸುವ ಯುದ್ದಗಳು ಇಲ್ಲವಾಗುವವು. “ಜನಾಂಗವು ಜನಾಂಗಕ್ಕೆ ವಿರೋಧವಾಗಿ ಕತ್ತಿಯನ್ನೆತ್ತದು. ಇನ್ನು ಯುದ್ಧಾಭ್ಯಾಸ ನಡಿಯವದೇ ಇಲ್ಲ.”—ಯೆಶಾಯ 2:4.
ಮನೆಗಳ ಕೊರತೆ, ಮನೆಯಿಲ್ಲದಿರುವಿಕೆ ಮತ್ತು ನಿರುದ್ಯೋಗ ಗತಕಾಲದ ವಿಷಯವಾಗಿರುವವು. ಯೆಶಾಯನು ಮುನ್ನುಡಿದದ್ದು: “ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. . .ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”—ಯೆಶಾಯ 65:21, 22.
ಆಫ್ರಿಕಾದ ಭಾಗಗಳಲ್ಲಿ ಕೆಲೆವೆಡೆ ಇತ್ತೀಚೆಗೆ ಬಾಧಿಸಿದಂತಹ ದುರಂತದ ಕ್ಷಾಮಗಳ ಬದಲಿಗೆ ಎಲ್ಲರಿಗೂ ಹೇರಳವಾದ ಆಹಾರವು ದೊರಕುವದು. “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ದಿಯಾಗಲಿ.” “ಭೂಮಿಯು ಒಳ್ಳೆ ಬೆಳೆಯನ್ನು ಕೊಟ್ಟಿರುತ್ತದೆ. ದೇವರು, ನಮ್ಮ ದೇವರೇ ನಮ್ಮನ್ನು ಆಶೀರ್ವದಿಸುವನು.”—ಕೀರ್ತನೆ 72:16; 67:6,7.
ಇದಕ್ಕೆ ಕೂಡಿಸಿ, ಈ ಆಶೀರ್ವಾದಗಳಲ್ಲಿ ಆನಂದಿಸಲಾಗುವಂತೆ ಆರೋಗ್ಯ ಮತ್ತು ಜೀವಿತವು ಅಲ್ಲಿರುವದು. ಯೇಸುವಿನ ಐಹಿಕ ಶುಶ್ರೂಷೆಯ ಸಮಯದಲ್ಲಿ, ಇದನ್ನು ಸತ್ಯವಾಗಿ ಹೇಳಲಾಗಿದೆ. “ಕುರುಡರಿಗೆ ಕಣ್ಣು ಬರುತ್ತವೆ. ಕುಂಟರಿಗೆ ಕಾಲು ಬರುತ್ತವೆ, ಕುಷ್ಟರೋಗಿಗಳು ಶುದ್ಧರಾಗುತ್ತಾರೆ, ಕಿವುಡರಿಗೆ ಕಿವಿಬರುತ್ತವೆ.” ಆದರೂ ಅದಕ್ಕಿಂತಲೂ ಮಹತ್ತಾದ ವಾಗ್ದಾನವು ಅನ್ವಯಿಸಲ್ಪಡುತ್ತದೆ: “ಅವನು (ದೇವರು) ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದು:ಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಲೂಕ 7:22; ಪ್ರಕಟನೆ 21:4.
ಎಂತಹ ಅದ್ಬುತ ಬದಲಾವಣೆ! ಸಂಕಟದಲ್ಲಿರುವ ಮಾನವಕುಲಕ್ಕೆ ಎಂತಹ ಒಂದು ಬದಲಾವಣೆಯನ್ನು ಇದು ತರಲಿದೆ! ದೇವರ ರಾಜ್ಯಕ್ಕೆ ನೀವು ಈಗಾಗಲೇ ಅಧೀನಪಡಿಸಿಕೊಳ್ಳಿರಿ. ಎಂದು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಆ ಮೂಲಕ ಲೋಕಾಡಳಿತದಲ್ಲಿ ಆಗುವ ಒಂದು ಮಹತ್ತಾದ ಬದಲಾವಣೆಯ ಪ್ರಯೋಜನಗಳನ್ನು ನೀವು ಕೂಡಾ ಕೊಯ್ಯಬಲ್ಲಿರಿ. (w88 6/15)
[ಪುಟ 11 ರಲ್ಲಿರುವ ಚಿತ್ರ]
ಯುದ್ಧ, ಪಾತಕ, ಬಡತನ, ಅನಾರೋಗ್ಯ ಮತ್ತು ಮರಣವು ಸಹ ಅಂತ್ಯಗೊಳ್ಳುವ—ಆ ಆಶ್ಚರ್ಯಕರ ಆಶೀರ್ವಾದಗಳಿಗಾಗಿ ಈಗ ಜೀವಿಸುವ ಜನರು ಮುನ್ನೋಡಬಹುದು. ಅಂತಹ ಒಂದು ಭವಿಷ್ಯವನ್ನು ನೀವು ಆನಂದಿಸುವಿರೋ?