ಮಹಾ ಲೋಕ ಶಕ್ತಿಳಲ್ಲಿ ಕೊನೆಯದ್ದು
1900 ವರ್ಷಗಳಷ್ಟು ಹಿಂದೆ ಬೈಬಲ್ ಪುಸ್ತಕವಾದ ಪ್ರಕಟನೆಯು ಬರೆಯಲ್ಪಟ್ಟಾಗ, ಅದು ಹೇಳಿದ್ದೇನೆಂದರೆ 5 “ಅರಸುಗಳು” ಅಥವಾ ಲೋಕಶಕ್ತಿಗಳು ಈಗಾಗಲೇ ಬಂದು, ಹೋಗಿದ್ದವು. ಅವು ಐಗುಪ್ತ, ಅಸ್ಸಿರಿಯಾ, ಬಬಿಲೊನ್, ಮೇದಯ-ಪರ್ಸಿಯ ಮತ್ತು ಗ್ರೀಸ್ ಆಗಿದ್ದವು. ಆರನೆಯದ್ದು, ರೋಮ್ ಆಗ “ಇನ್ನೂ ಇತ್ತು”, ಆದರೆ ಏಳನೆಯದ್ದು ಇನ್ನೂ ಬಂದಿರಲಿಲ್ಲ. (ಪ್ರಕಟನೆ 17:10) ಏಳನೆಯ ಲೋಕ ಶಕ್ತಿ ಏನಾಗಿತ್ತು? ಅದು ಅಸ್ತಿತ್ವಕ್ಕೆ ಬಂದದ್ದು ಹೇಗೆ? ಮತ್ತು ಇದನ್ನು ಹಿಂಬಾಲಿಸಿ ಯಾವದು ಬರುತ್ತದೆ? ಈ ಎಲ್ಲಾ ಪ್ರಮುಖ ಪ್ರಶ್ನೆಗಳ ಉತ್ತರಗಳು ಈ ಲೇಖನದ ವಿಷಯವಾಗಿರುತ್ತದೆ?
ಗತ 2500 ವರ್ಷಗಳಷ್ಟು ಲೋಕ ಇತಿಹಾಸದ ಪ್ರಮುಖ ಹೊರಮೇರೆಯ ಲೋಕದಲ್ಲಿ ಅತಿ ಹೆಚ್ಚು ಪ್ರಖ್ಯಾತವಾಗಿರುವ ಹಾಗೂ ಅತಿ ವಿಸ್ತಾರವಾಗಿ ಪ್ರಚಲಿತಗೊಂಡಿರುವ ಪುಸ್ತಕದಲ್ಲಿ ಮೊದಲೇ ಕೊಡಲ್ಪಟ್ಟಿದೆ. ಆದರೂ, ಆ ಪುಸ್ತಕದ ಅಂದರೆ ಬೈಬಲಿನ ಪ್ರತಿಯಿರುವವರಲ್ಲಿ ಕೇವಲ ಕೆಲವೇ ಮಂದಿಗೆ ಇಷ್ಟೊಂದು ಬೆರಗುಗೊಳಿಸುವ ಸಮಾಚಾರವು ಅದರಲ್ಲಿದೆಂಬುದರ ಯಾವುದೇ ಕಲ್ಪನೆ ಸಹಿತ ಇಲ್ಲ.
ಉದಾಹರಣೆಗೆ, ಯೇಸುಕ್ರಿಸ್ತನ ಜನಿಸುವ 500 ವರ್ಷಕ್ಕಿಂತಲೂ ಮೊದಲು ಪ್ರವಾದಿಯಾದ ದಾನಿಯೇಲನು ದೇವಪ್ರೇರಿತ ದರ್ಶನವೊಂದರಲ್ಲಿ, ಅವನ ಸಮಯದಿಂದ ಹಿಡಿದು ಇರುವ ಮಹಾಲೋಕಶಕ್ತಿಗಳು ಬಲಾಢ್ಯವಾದ ಮೃಗಗಳಿಂದ ಪ್ರತಿನಿಧಿಸಲ್ಪಟ್ಟವು. ಪ್ರತಿಯೊಂದು ಮೃಗಕ್ಕೆ, ಅದು ಪ್ರತಿನಿಧಿಸುವ ಲೋಕಶಕ್ತಿಯ ವೈಶಿಷ್ಟತೆಗಳಿದ್ದವು. ಬಲಾಢ್ಯವಾದ ರೋಮ್ ಸಾಮ್ರಾಜ್ಯವನ್ನು “ಭಯಂಕರ, ಹೆದರಿಸುವಂಥ ಮತ್ತು ಅಧಿಕ ಬಲವುಳ್ಳ” ಒಂದು ದೊಡ್ಡ ಮೃಗವಾಗಿ ವಿವರಿಸಲಾಗಿತ್ತು. “ಅದು ಮುಂಚಿನ ಎಲ್ಲಾ ಮೃಗಗಳಿಂದ ವಿಲಕ್ಷಣವಾಗಿತ್ತು; ಅದಕ್ಕೆ ಹತ್ತು ಕೊಂಬುಗಳಿದ್ದವು” ಎಂದು ದಾನಿಯೇಲನಂದಿದ್ದಾನೆ.—ದಾನಿಯೇಲ 7:2-7.
“ಚಿಕ್ಕ ಕೊಂಬು”
ಸಮಯಾನಂತರ, ರೋಮನ್ ಸಾಮ್ರಾಜ್ಯವು ಬ್ರಿಟಿಷ್ ದ್ವೀಪಗಳಿಂದ ಹಿಡಿದು, ಯುರೋಪನ್ನು ಕೂಡಿಸಿ. ಮೆಡಿಟರೇನಿಯನ್ ಪ್ರದೇಶದಲ್ಲಿಲ್ಲಾ ಹಾಗೂ ಬೆಬಿಲೋನ್ ದಾಟಿ ಪರ್ಸಿಯನ್ ಕೊಲ್ಲಿಯ ತನಕದ ಪ್ರದೇಶಗಲ್ಲಿಲ್ಲಾ ಹರಡಿಕೊಂಡಿತ್ತು. ‘ಈ ಬಲಾಢ್ಯ’ವಾದ ಸಾಮ್ರಾಜ್ಯವು ಕಟ್ಟಕಡೆಗೆ ಹಲವಾರು ಜನಾಂಗಗಳಿಗಾಗಿ — ದಾನಿಯೇಲನು ನೋಡಿದ “ಹತ್ತು ಕೊಂಬುಗಳಾಗಿ” ಒಡೆಯಲ್ಪಟ್ಟಿತು.a ಅನಂತರ ದಾನಿಯೇಲನು “ಅವುಗಳ ನಡುವೆ ಇನ್ನೊಂದು ಚಿಕ್ಕ ಕೊಂಬು ಮೊಳೆಯುವುದನ್ನೂ ಅದರ ದೆಸೆಯಿಂದ ಮುಂಚಿನ ಕೊಂಬುಗಳಲ್ಲಿ ಮೂರು ಬೇರು ಸಹಿತ ಕೀಳಲ್ಪಟ್ಟದನ್ನೂ” ಕಂಡನು. (ದಾನಿಯೇಲ 7:8) ಇದರ ಅರ್ಥವೇನು?
ದಾನಿಯೇಲನಿಗಂದದ್ದು:“ಆ ಹತ್ತು ಕೊಂಬುಗಳ ವಿಷಯವೇನಂದರೆ ಆ (ರೋಮನ್) ರಾಜ್ಯದಲ್ಲಿ, ಹತ್ತು ಮಂದಿ ಅರಸರು ಉಂಟಾಗುವರು; ಅವರ ತರುವಾಯ ಮತ್ತೊಬ್ಬನು (‘ಚಿಕ್ಕ ಕೊಂಬು’) ತಲೆದೋರುವನು; ಅವನು ಮುಂಚಿನ ಅರಸರಿಗಿಂತ ವಿಲಕ್ಷಣವಾಗಿ ಮೂವರು ಅರಸರನ್ನು ಅದುಮಿಬಿಡುವನು.” (ದಾನಿಯೇಲ 7:24) ಈ ‘ಚಿಕ್ಕ ಕೊಂಬು’ ಯಾರು ಮತ್ತು ಅದಮದ ಮೂವರು ಅರಸರು ಯಾರು?
ರೋಮನ್ ಸಾಮ್ರಾಜ್ಯದ ವಾಯುವ್ಯದ ಮೂಲೆಯಲ್ಲಿದ್ದ ಒಂದು ದ್ವೀಪವು ಲೋಕ ವ್ಯವಹಾರದ ಅಂಚಿನಲ್ಲಿ ದೀರ್ಘಕಾಲದಿಂದ ಉಳಿದಿದೆ. ಒಬ್ಬ ಇತಿಹಾಸಗಾರನು ವಿವರಿಸಿದಂತೆ, “ಹದಿನಾರನೆಯ ಶತಮಾನದಲ್ಲಿ, ಇಂಗ್ಲೆಂಡು ದ್ವಿತೀಯ ದರ್ಜೆಯ ಶಕ್ತಿಯಾಗಿತ್ತು. ನೆದರ್ಲೇಂಡಿನೊಂದಿಗಿನ ಐಶ್ವರ್ಯದೊಂದಿಗೆ ಅದರದ್ದನ್ನು ಹೋಲಿಸಿದಾಗ, ಅದು ಕೊಂಚವಾಗಿ ತೋರುತ್ತಿತ್ತು. ಅದರ ಜನಸಂಖ್ಯೆಯು ಫ್ರಾನ್ಸಿನಿದ್ದಕ್ಕಿಂತ ಬಹಳಷ್ಟು ಕಡಿಮೆಯಾಗಿತ್ತು. ಅದರ ಸೇನಾಬಲವು (ನಾವಿಕದವಳನ್ನೂ ಸೇರಿಸಿ) ಸ್ಪೆಯ್ನ್‌ಗಿಂತ ಕೆಳಮಟ್ಟದಾಗಿತ್ತು.” ಅದಾಗ್ಯೂ, ಇಂಗ್ಲೆಂಡು ಸ್ವಲ್ಪ ಬಲಿಷ್ಟವಾದ ನೌಕಾದಂಡುಗಳನ್ನು ಅಭಿವೃದ್ಧಿಪಡಿಸಿತು, ಮತ್ತು ಅದರ ಸಮುದ್ರಗಳ್ಳರು ಮತ್ತು ಶಸ್ತ್ರಸಜ್ಜಿತ ಖಾಸಗಿ ಹಡಗುಗಳು ಸ್ಪೇಯ್ನಿನ ವಸಾಹತು ಪ್ರದೇಶಗಳಿಗೆ ಧಾಳಿ ಮಾಡಲು ಅವಳ ಅಧಿಕ ಸಂಪತ್ತು ಹೇರಿಸಿ ಬಂದಿರುವ ನಿಧಿಗಳಿರುವ ಹಡಗುಗಳನ್ನು ದೋಚಲು ಆರಂಭಿಸಿತು.
ಮೂರು ಕೊಂಬುಗಳು
1588 ರಲ್ಲಿ ಸ್ಪೇಯ್ನಿನ ಪಿಲಿಪ್ಪ್ ಆರನೆಯವನು ತನ್ನ ಇಂಗ್ಲೀಷ್ ಪೀಡಕರ ವಿರುದ್ಧ ಸ್ಪಾನೀಷ್ ಆರ್ಯೇಡಾ (‘ಅಜೇಯ’ ನೌಕ್ ವ್ಯೂಹ)ದ ಕಾರ್ಯಾಚರಣೆಗೈದನು. 136 ಹಡಗುಗಳ ಈ ನೌಕಾವ್ಯೂಹವು 24,000 ಕ್ಕಿಂತಲೂ ಹೆಚ್ಚಿನ ಪುರುಷರನ್ನು ಹೊತ್ತುಕೊಂಡು ಮೆಲ್ಲನೆ ಇಂಗ್ಲಿಷ್ ಕಾಲುವೆಯೆಡೆಗೆ ಪಯಣ ಆರಂಭಿಸಿದರು, ಆದರೆ ಪ್ರತಿವಿರುದ್ಧವಾದ ಬಿರುಗಾಳಿಗೆ ಹಾಗೂ ಭೀಕರ ಅಟ್ಲಾಂಟಿಕ್ ಸಾಗರದ ತುಫಾನುಗಳಿಗೆ ಆಹುತಿಯಾದರು. ಮೊಡರ್ನ್ ಯುರೋಪ್ ಟು 1870 ಪುಸ್ತಕದಲ್ಲಿ ಇತಿಹಾಸಗಾರ ಕಾರ್ಲ್ಟನ್ ಹೇಯಿಸ್ ಬರೆಯುವುದು, ಈ ಒಂದು ಘಟನೆಯಿಂದ “ನೌಕಾಬಲದ ಶ್ರೇಷ್ಟತೆಯು ಸ್ಪೇಯ್ನಿನಿಂದ ಇಂಗ್ಲೆಂಡಿಗೆ ದಾಟಿಸುವುದರಲ್ಲಿ ಒಂದು ನಿರ್ಧಾರಾತ್ಮಕ ಗುರುತಾಗಿ ಪರ್ಗಾವಣೆಗೊಂಡಿತು.
17ನೆಯ ಶತಮಾನದಲ್ಲಿ, ಡಚ್ಚರು, ಭೂಮಿಯಲ್ಲೀ ಅತೀ ದೊಡ್ಡ ವ್ಯಾಪಾರದ ಹಡಗುಗಳನ್ನು ಪಡೆದುಕೊಂಡರು. ಅವರ ಹಡಗುಗಳು ಸಮುದ್ರಗಳಲ್ಲಿ ಪ್ರಭುತ್ವ ನಡಿಸಿದವು, ಮತ್ತು ಅವರು ತಮ್ಮ ಆದಾಯಗಳನ್ನು ವಿಸ್ತಾರವಾದ ರೀತಿಗಳಲ್ಲಿ ಸರಕಾರಗಳಿಗೆ ಕೊಡಲಾರಂಭಿಸಿದರು. ಆದರೆ, ಅವಳ ಪರದೇಶಗಳ ವಸಾಹತಿಗಳು ಬೆಳೆದಷ್ಟಕ್ಕೆ ಇಂಗ್ಲೆಂಡ್ ಇಲ್ಲಿಯೂ ಮೇಲುಗೈ ಸಾಧಿಸಿತು.
ಅನಂತರ, 18ನೆಯ ಶತಮಾನದಲ್ಲಿ ಬ್ರಿಟಿಷರು ಮತ್ತು ಫ್ರೆಂಚರು ಉತ್ತರ ಅಮೇರಿಕ ಇಂಡಿಯಾದಂತಹ ಬಹಳಷ್ಟು ಅಂತರದಲ್ಲಿರುವ ಸ್ಥಳಗಳಲ್ಲೂ ಕಾದಾಡಿದರು. ಇದು 1763ರ ಪ್ಯಾರಿಸಿನ ಒಪ್ಪಂದಕ್ಕೆ ನಡಿಸಿತು. ಅದರ ಕುರಿತು. ಸ್ಟಾರ್ ಆಫ್ ಎಂಪಾಯರ್ - ಎ ಸ್ಟಡಿ ಆಫ್ ಬ್ರಿಟನ್ ಎಸ್ ಎ ವರ್ಲ್ಡ್ ಪವರ್ ಎಂಬು ತನ್ನ ಪುಸ್ತಕದಲ್ಲಿ ವಿಲ್ಯಂ ಬಿ ವಿಲ್‌ಕೊಕ್ಷ್ ಬರೆದದ್ದು, ಒಂದು ರಾಜಿಯೋಪಾದಿ ಈ ಒಪ್ಪಂದವು ತೋರಿದರೂ, “ಯುರೋಪಿನ ಹೊರಗಡೆ ಲೋಕದಲ್ಲಿ ಒಂದು ಬಲಾಢ್ಯ ಐರೋಪ್ಯ ಶಕ್ತಿಯಾಗಿ ಬ್ರಿಟನಿನ ಹೊಸ ಸ್ಥಾನವನ್ನು ಅದು ವಾಸ್ತವದಲ್ಲಿ ಅಂಗೀಕರಿಸಿದ್ದಾಗಿದೆ.”
ಬೇರೆ ಇತಿಹಾಸಗಾರರು ಇದನ್ನು ಒಪ್ಪುತ್ತಾ, ಅಂದದ್ದು: “ಸ್ಪೇಯ್ನಿನವರೊಂದಿಗೆ, ಡಚ್ಚರೊಂದಿಗೆ ಮತ್ತು ಫ್ರೆಂಚರೊಂದಿಗೆ ಎರಡು ಶತಕಗಳಷ್ಟು ಯುದ್ಧನಡಿಸಿ, 1763 ರಲ್ಲಿ ಗ್ರೇಟ್ ಬ್ರಿಟನ್ ಲೋಕದಲ್ಲಿ ಒಂದು ಮುಂಚೂಣಿಯ ವಾಣಿಜ್ಯ ಹಾಗೂ ವಸಾಹತುಶಾಲೀ ಶಕ್ತಿಯಾಗಿ ಮೇಲಕ್ಕೇರಿತು.” (ಮೊಡರ್ನ್ ಯುರೋಪ್ ಟು 1870) “1763 ರಲ್ಲಿ ಬ್ರಿಟಿಷ್ ಸಾಮ್ರಾಜ್ಯವು, ಪುನರುಜ್ಜೀವನಗೊಂಡ ಹಾಗೂ ವಿಸ್ತಾರಗೊಂಡ ರೋಮಿನೋಪಾದಿ ಲೋಕದಲ್ಲಿ ಮೇಲೇರಿ ಬಂತು.” “ಅವಳು ಮಧ್ಯಶತಕದ ಯುದ್ಧಗಳಿಂದ ಮೇಲೇರಿ ಲೋಕದಲ್ಲೀ ಅತೀ ಮಹತ್ತಾದ ಮತ್ತು ಬಲಾಢ್ಯವಾದ - ಮತ್ತು ಅತ್ಯಧಿಕ ರೀತಿಯಲ್ಲಿ ಸಮಗ್ರವಾಗಿ ದ್ವೇಷಿಸಲ್ಪಟ್ಟ - ಮಹಾ ಸಾಮ್ರಾಜ್ಯವಾಗಿ ಉದಯಿಸಿತು.” (ನೆವೀ ಆ್ಯಂಡ್ ಎಂಪಾಯರ್, ಬೈ ಜೇಮ್ಸ್ ಏಲ್ ಸ್ಟಾಕ್ಸ್‌ಬರಿ ). ಹೌದು, ಈ ‘ಚಿಕ್ಕ ಕೊಂಬು’ ಬೈಬಲ್ ಇತಿಹಾಸದ ಏಳನೆಯ ಲೋಕಶಕ್ತಿಯಾಗಿರಲು ಬೆಳೆಯಿತು.
ಬ್ರಿಟಿಷರು ನೈಲ್ ನದಿಯ ತನಕ ಮುಂದುವರಿದು, ನೈಲ್ ಜಾಂಬೆಜಿ ನದಿಯನ್ನು ದಾಟಿದರು. ಅವರು ಮೇಲಿನ ಬರ್ಮಾ, ಉತ್ತರ ಬೊರ್ನೀಯೊ ಮತ್ತು ಫೆಸಿಫಿಕ್‌ನ ದ್ವೀಪಗಳೆಡೆಗೆ ಮುಂದೊತ್ತಿದರು. ಇನ್ನೂ ಮುಂದುವರಿಸಿ, ಕೆನಡಾ, ಆಸ್ಟ್ರೇಲಿಯಾ, ನ್ಯೂಝಿಲೆಂಡ್ ಮತ್ತು ಉತ್ತರ ಅಮೇರಿಕದ ಪೂರ್ವ ವಸಾಹತುಗಳನ್ನಾಗಿ ಮಾಡಿಕೊಂಡರು. “ರೋಮನ್ ಸಾಮ್ರಾಜ್ಯವು ತನ್ನಲ್ಲೀ ಸಂತೃಪ್ತವಾಗಿತ್ತು” ಎಂದು ಜೇಮ್ಸ್ ಮೋರಿಸ್ ಇನ್ ಪಾಕ್ಷ್ ಬ್ರಿಟಾನಿಕದಲ್ಲಿ ಬರೆಯುತ್ತಾನೆ. “ಬ್ರಿಟಿಷ್ ಸಾಮ್ರಾಜ್ಯವು ಭೂಮಿಯಲ್ಲಿಲ್ಲಾ ಬಿತ್ತರಿಸಿಕೊಂಡಿತು.” ಮಾನವಕುಲದ ಇತಿಹಾಸದಲ್ಲಿ ಅದು ದೊಡ್ಡ ಸಾಮ್ರಾಜ್ಯವಾಗಿದ್ದು ಭೂಮಿಯ ಮೇಲ್ಮೈಯ ಕಾಲು ಭಾಗದಷ್ಟು ಪ್ರದೇಶ ಒಳಗೂಡಿದ್ದು, ಅದರ ಜನಸಂಖ್ಯೆಯ ಕಾಲು ಭಾಗಕ್ಕಿಂತಲೂ ಹೆಚ್ಚು ಇದರಲ್ಲಿತ್ತು. ಅದರ ಆಧಿಪತ್ಯದಡಿಯಲ್ಲಿ ಸೂರ್ಯನು ಎಂದಿಗೂ ಅಸ್ತಮಿಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ಒಂದು ಉಭಯ ಶಕ್ತಿ
ಪ್ರಕಟನೆ ಪುಸ್ತಕದಲ್ಲಿ, ಈ ಏಳನೆಯ ಲೋಕಶಕ್ತಿಯನ್ನು “ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು” ಎಂದು ಹೇಳಿದೆ. (ಪ್ರಕಟನೆ 13:11) ಎರಡು ಕೊಂಬುಗಳು ಯಾಕೆ? ಯಾಕೆಂದರೆ ಬ್ರಿಟಿಷ್ ಸಾಮ್ರಾಜ್ಯ ಮತ್ತು ಹೊಸ ಅಮೇರಿಕನ್ ರಾಷ್ಟ್ರ, ಸಾಮಾನ್ಯ ಭಾಷೆ, ಸೂತ್ರಗಳ ಮತ್ತು ಧೋರಣೆಗಳ ಕಾರಣ ಬಲುಬೇಗನೆ ಒಂದಾಗಿ ಕೆಲಸ ನಿರ್ವಹಿಸಲು ಆರಂಭಿಸಿದವು. ಅನೇಕ ವಿಷಯಗಳಲ್ಲಿ ಅವರು ಉಭಯ ಇಂಗ್ಲಿಷ್ ಮಾತಾಡುವ ಲೋಕಶಕ್ತಿಯಾಗಿ ಪರಿವರ್ತನೆಗೊಂಡಿತು.
ಸ್ಟಾರ್ ಆಫ್ ಎಂಪಾಯರ್ ನಲ್ಲಿ ವಿಲ್ಯಂ ಬಿ. ವಿಲ್‌ಕೊಕ್ಸ್ ತೋರಿಸುವದೇನೆಂದರೆ 19 ನೆಯ ಶತಮಾನದಲ್ಲಿ ಅಮೇರಿಕವು “ಯುರೋಪಿನಿಂದ ರಕ್ಷಿಸಲ್ಪಡಲು ಬ್ರಿಟಿಷ್ ನೌಕಾದಳವು ಕವಚದಂತೆ ವರ್ತಿಸಿತು.” ಅವನು ಕೂಡಿಸಿದ್ದು: “ಸುಮಾರು ಒಂದು ಶತಮಾನದಷ್ಟು ಸಮಯ ಅಮೇರಿಕವು ಒಂದು ಬಲಾಢ್ಯ ಶಕ್ತಿಯಾಗಿ ಬೆಳೆಯಲು, ತನ್ನ ಆಂತರಿಕ ಯುದ್ಧಗಳನ್ನು ಬಿಟ್ಟರೆ, ಯಾವುದೇ ಮಹಾಶಕ್ತಿಯು ಒಂದು ಸೇನೆ ಯಾ ನೌಕಾದಳವಿಲ್ಲದೆ, ಬೆಳೆಯಲು ಸ್ವತಂತ್ರವಾಗಿತ್ತು.” ಅಮೇರಿಕವು “ಪ್ರತ್ಯೇಕವಾಗಿ ನಿಲ್ಲಲು ಶಕ್ತವಾಗಿತ್ತು. ಯಾಕೆಂದರೆ, ರೊಯಲ್‌ನೇವಿಯು ಐರೋಪ್ಯಶಕ್ತಿಗಳ ವಿರುದ್ಧ ತಡೆಯಾಗಿ ಇತ್ತು.” ಕ್ರಮೇಣ, ಅಮೇರಿಕವು ಒಂದು ಮಹಾ ಸೇನಾ ಶಕ್ತಿಯಾಗಿ ಬೆಳೆಯಿತು. ಬ್ರಿಟನ್ ಮತ್ತು ಅಮೇರಿಕದ ಸಹಯೋಗದ ಕೆಲಸದ ಒಂದು ಎದ್ದುಕಾಣುವ ಉದಾಹರಣೆಯು ಜೂನ್ 6, 1944ರಲ್ಲಿ ಸಂಭವಿಸಿತು, ಆಗ ಎರಡನೆಯ ಲೋಕ ಯುದ್ಧದ ಅಲೆಯು ಉತ್ತರ ಯುರೋಪಿನೆಡೆಗೆ ತಿರುಗಿತು. ಆ ದಿನ, 1,56,000 ಬ್ರಿಟಿಷ್ ಅಮೆರಿಕನ್ ಮತ್ತು ಇತರ ಸಂಯುಕ್ತ ಸೇನೆಗಳು ಯುರೋಪ್ ಖಂಡದ ಮೇಲೆ ಧಾಳಿಯಿಟ್ಟವು. ಈ ಸಂಯುಕ್ತ ಸೇನೆಯು ಅಮೇರಿಕದ ಜನರಲ್‌ನ ವರಿಷ್ಟ ಅಧಿಕಾರದ ಕೆಳಗೆ ಮತ್ತು ಬ್ರಿಟಿಷ್ ಫೀಲ್ಡ್ ಮಾರ್ಶಲ್‌ನ ಕಾರ್ಯಾಚರಣೆಯ ಅಧಿಕಾರದ ಕೆಳಗೆ - ಐಸೆನ್ ಹೊವರ್ ಮತ್ತು ಮೊಂಟ್‌ಗ್ಯೂಮರಿ - ಕ್ರಮವಾಗಿ ಇತ್ತು. ಇನ್ನೂ ಹೆಚ್ಚಾಗಿ, ಜಪಾನಿನೊಂದಿಗಿನ ಯುದ್ಧವನ್ನು ನಿಲ್ಲಿಸಿದ ಅಣು ಬಾಂಬುಗಳು ಬ್ರಿಟಿಷ್ ಮತ್ತು ಅಮೆರಿಕನ್ ವಿಜ್ಞಾನಿಗಳಿಂದ ಒಟ್ಟಿಗೆ ಮಾಡಿದ ಪ್ರಯತ್ನಗಳ ಫಲಿತಾಂಶವಾಗಿತ್ತು.
ಮೇ 5, 1986 ರ ಲೋಸ್ ಆಂಜಲೀಸ್ ತೋರಿಸಿದಂತೆ, ಶಾಂತಿ ಸಮಯದಲ್ಲಿ ಕೂಡ, ಬ್ರಿಟನ್ ಮತ್ತು ಅಮೇರಿಕವು “ಗೂಢಚಾರ ಮತ್ತು ಅಣು ತಾಂತ್ರಿಕತೆಯಂತಹ ಸೂಕ್ಷ್ಮ ವಿಷಯಗಳಲ್ಲಿ” ಸಹಯೋಗದಲ್ಲಿ ವರ್ತಿಸಿದೆ. ಅನಂತರ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೇಂಡ್ ಸೇರಿಕೊಂಡು, ಅವರು “ಗೂಢಚರ್ಯೆಯನ್ನು ಸಂಗ್ರಹಿಸುವ ಮತ್ತು ಅತೀ ಗುಪ್ತ ವಿಚಾರಗಳಲ್ಲಿ ಸಹಭಾಗಿಗಳಾಗಲು ಒಪ್ಪಿಕೊಂಡು ಜವಾಬ್ದಾರಿಕೆಯ ಪ್ರದೇಶಗಳನ್ನಾಗಿ ಭೂಗೋಲವನ್ನು ವಿಭಾಗಿಸಿಕೊಂಡಿವೆ.” ಈ ವಾರ್ತಾಪತ್ರಿಕೆಯು ಹೇಳಿದ್ದೇನೆಂದರೆ ಈ ಸಂಬಂಧವು “ಯಾವಾಗಲೂ ಅಷ್ಟೊಂದು ನುಣುಪಾಗಿರದಿದ್ದರೂ” ಅದು “ಅವುಗಳ ಕಿರುಕುಳಕ್ಕಿಂತ, ಅವುಗಳ ಸಾಮೀಪ್ಯತೆಗಾಗಿ ಗಣನೀಯವಾಗಿ ಕಾಣುತ್ತದೆ:”
ಬ್ರಿಟನಿನ ಅಧಿಕಾಂಶ ವಸಾಹತುಗಳು ಸ್ವಾತಂತ್ರವನ್ನು ಪಡೆದುಕೊಂಡಿವೆ ಮತ್ತು ಕಾಮನ್ ವೆಲ್ತ್ ಆಫ್ ನೇಶನ್ಸ್‌ಗೆ ಸೇರಿವೆ. ಸಾಮ್ರಾಜ್ಯವು ಹೋಗಿರಬಹುದಾದರೂ, ಆಂಗ್ಲೋ-ಅಮೆರಿಕನ್ ಲೋಕಶಕ್ತಿಯು ಇನ್ನೂ ಉಳಿದಿದೆ.
ಆದರೆ ಅದರ ಮುಂಚಿನ ರೋಮನ್ ಶಕ್ತಿಯು ಅನೇಕ ಶತಮಾನಗಳ ತನಕ ಅಧಿಕಾರದಲ್ಲಿರುವುದನ್ನು ಹೋಲಿಸುವಾಗ ಅದು “ಕೊಂಚಕಾಲ” ಮಾತ್ರ ಅಸ್ತಿತ್ವದಲ್ಲಿರುತ್ತದೆ.
ಹೊಸ ಲೋಕವ್ಯಾಪಕ ಪ್ರಭುತ್ವ
ಲೋಕ ಸರಕಾರಗಳ 2500 ವರ್ಷಗಳ - ಸಾ.ಶ.ಪೂ. 500ರಿಂದ ನಮ್ಮ ದಿನಗಳ ಏಳನೆಯ ಶಕ್ತಿಗಳ ಕುರಿತಾದ ದಾನಿಯೇಲನ ಪ್ರವಾದನೆಯು ಸತ್ಯವೆಂದು ಸಾಬೀತಾಗಿದೆ. ಆದಕಾರಣ, ಆ ಪ್ರವಾದನೆಯ ಉಳಿದ ಭಾಗಗಳ ಮೇಲೂ ನಾವು ಭರವಸೆಯಿಂದಿರಬಲ್ಲಿವು. ಅತಿ ಆಶ್ಚರ್ಯದ ವಾಸ್ತವಾಂಶವೆಂದರೆ ಅದು ಇನ್ನೂ ಹೆಚ್ಚಿನ ಮಾನವ ಲೋಕ ಶಕ್ತಿಗಳ ಕುರಿತು ವಿವರಿಸುವುದಿಲ್ಲ. ಪ್ರಕಟನೆಯು ಕೂಡ ಕೇವಲ ಏಳು ಇರುವವೆಂದು ತೋರಿಸುತ್ತದೆ.b ಹಾಗಾದರೆ, ಅನಂತರ ಏನು ಸಂಭವಿಸುತ್ತದೆ?
ದಾನಿಯೇಲ ಏಳನೆಯ ಅಧ್ಯಾಯದಲ್ಲಿ ಈ ಲೋಕಶಕ್ತಿಗಳ ಕುರಿತು ಮಾತಾಡುತ್ತದೆ, ಹಾಗೂ ಭೂಮಿಯ ಆಳಲ್ಪಡುವ ರೀತಿಯಲ್ಲಿ ಒಂದು ಮಹತ್ತರ ಬದಲಾವಣೆಯುಂಟಾಗಲಿದೆ- ಒಂದು ಬೆರಗುಗೊಳಿಸುವ ವಿಷಯವನ್ನು ವಿವರಿಸುತ್ತಾ ಹೋಗುತ್ತದೆ! ಪರಾಜಯಗೊಳ್ಳುವ ಮಾನವ ಆಡಳಿತೆಗಳು ಅಂತ್ಯಗೊಳ್ಳಲಿವೆ ಮತ್ತು ಅದರ ಸ್ಥಾನದಲ್ಲಿ ನೀತಿಯ ಒಂದು ಸ್ವರ್ಗೀಯ ಪ್ರಭುತ್ವವು ಬರಲಿದೆ.
“ಮಹಾ ವೃದ್ಧನೊಬ್ಬನ” ಯೆಹೋವ ದೇವರ ಸ್ವರ್ಗೀಯ ಸಿಂಹಾಸನವನ್ನು ನೋಡಲು ದಾನಿಯೇಲನ ದರ್ಶನವು ಅನುಮತಿಯಿತ್ತಿತು. ಇವನ ಮುಂದೆ “ಮನುಷ್ಯ ಕುಮಾರನಂತಿದ್ದವನೊಬ್ಬನು”- ಪುನರುತ್ಥಿತ ಯೇಸುಕ್ರಿಸ್ತನು ಅವನ ಮುಂದೆ ತರಲ್ಪಟ್ಟನು.c ದಾನಿಯೇಲನು ವರ್ಣಿಸುವದು: “ಸಕಲಜನಾಂಗ ಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು (ಪರಾಜಯಗೊಳ್ಳುವ ಮಾನವ ರಾಜ್ಯಗಳಂತಿರದೆ) ಎಂದಿಗೂ ಅಳಿಯದು.”—ದಾನಿಯೇಲ 7:9,13,14.
ಅದೇ ಲೋಕಶಕ್ತಿಗಳ ಕುರಿತು ದಾನಿಯೇಲನಿಗೆ ಕೊಡಲ್ಪಟ್ಟ ಹಿಂದಿನ ಪ್ರವಾದನೆಯೊಂದರಲ್ಲಿ ಹೇಳಿದ್ದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು. . . . ಕನಸು ನಿಜ, ಅದರ ಅರ್ಥವು ನಂಬತಕ್ಕದ್ದು.”—ದಾನಿಯೇಲ 2:44,45.
ಯೇಸುವು ನಮಗೆ ಪ್ರಾರ್ಥಿಸಲು ಕಲಿಸಿದ್ದು ಕೂಡಾ ಅದೇ ದೇವರಿಂದಾಗುವ ರಾಜ್ಯ ಸರಕಾರವಾಗಿರುತ್ತದೆ. ಅವನಂದದ್ದು: “ಆದದರಿಂದ ನೀವು ಹೀಗೆ ಪ್ರಾರ್ಥನೆ ಮಾಡತಕ್ಕದ್ದು— ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿ ನೆರವೇರಲಿ.”—ಮತ್ತಾಯ 6:9,10
ಆ ಸರಕಾರದ ಕೆಳಗೆ ಭೂಮಿಯ ನಿವಾಸಿಗಳು ಎಷ್ಟೊಂದು ಆನಂದದಲ್ಲಿರುವರು. ಮಾನವ ಅಪರಿಪೂರ್ಣ ವಿಧಗಳಿಂದ ವಿಷಯಗಳನ್ನು ಮಾಡುವದರ ಬದಲು ದೇವರ ಅತ್ಯುತ್ಕೃಷ್ಟ ಮಟ್ಟಗಳಿಗಾಗಿ ಬದಲಾವಣೆ ಹೊಂದುವದಾಗಿದೆ. ಈ ಸರಣಿಯಲ್ಲಿನ ಮುಂದಿನ ಲೇಖನದ ವಿಷಯವು ರಾಜ್ಯದ ಕಾರ್ಯನಿರ್ವಾಹಣೆಯ ಕುರಿತು ಬೈಬಲು ಏನನ್ನುತ್ತದೆ ಎಂದಾಗಿರುತ್ತದೆ.
[ಅಧ್ಯಯನ ಪ್ರಶ್ನೆಗಳು]
a ಕೊಂಬು, ಒಂದು ಭೀತಿದಾಯಕ ಶಸ್ತ್ರಸ ಬೈಬಲಿನಲ್ಲಿ ಆಗಾಗ್ಗೆ ರಾಜರುಗಳನ್ನು ಮತ್ತು ಆಳುವ ಆಧಿಪತ್ಯಗಳನ್ನು ಪ್ರತಿನಿಧಿಸಲು ಬಳಸಲ್ಪಟ್ಟಿದೆ.—ಧರ್ಮೋಪದೇಶಕಾಂಡ 33:17; ಜೆಕರ್ಯ 1:18-21; ಪ್ರಕಟನೆ 17:3,12.
b ಪ್ರಕಟನೆ 17:11 “ಕಾಡು ಮೃಗ” ಒಂದರ ಕುರಿತು ಉಲ್ಲೀಖಿಸಿ “ಅದು ಎಂಟನೆಯ ಅರಸು; ಅವನು ಏಲು ಮಂದಿ ಅರಸುಗಳಿಗೆ ಸೇರಿದವನು” ಎಂದನ್ನುತ್ತದೆ. ಏಳನೆಯ ಜೀವಮಾನದ ಕಾಲದಲ್ಲಿ ಅಸ್ಥಿತ್ವದಲ್ಲಿರುವ ಎಂಟನೆಯ ಶಕ್ತಿಯ ಕುರಿತು ಮುಂದಿನ ಲೇಖನವೊಂದರಲ್ಲಿ ಚರ್ಚಿಸಲಾಗುವದು.
c “ಮನುಷ್ಯಕುಮಾರ” ಎಂಬ ಪದವು ಸುವಾರ್ತೆಯ ದಾಖಲೆಗಳಲ್ಲಿ ಸುಮಾರು ಎಂಬತ್ತು ಬಾರಿ ಬಂದಿದ್ದು, ಪ್ರತಿಯೊಂದು ಸಂದರ್ಭದಲ್ಲಿ ಅದು ಯೇಸುಕ್ರಿಸ್ತನನ್ನು ಸೂಚಿಸುತ್ತದೆ.—ಮತ್ತಾಯ 26:63,64ನ್ನು ನೋಡಿರಿ.
[ಪುಟ 32 ರಲ್ಲಿರುವ ಚಿತ್ರ]
ಅಂಗ್ಲೋ-ಅಮೆರಿಕನ್ ಸಹಕಾರದ ಎದ್ದು ಕಾಣುವ ಉದಾಹರಣೆಯು ಜೂನ್ 6, 1944ರಲ್ಲಿ ಯುರೋಪಿನ ಮೇಲೆ ಸಂಯುಕ್ತವಾಗಿ ಆಕ್ರಮಣ ಮಾಡಿದಾಗ ತೋರಿತು.
[ಕೃಪೆ]
U.S. Coast Guard photo