ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ/ ಪ್ರಾರ್ಥನೆ / ದೇವರು ಕೆಲವು ಪ್ರಾರ್ಥನೆಗಳನ್ನ ಯಾಕೆ ಕೇಳೋದಿಲ್ಲ?
ಬೈಬಲ್ ಕೊಡೋ ಉತ್ತರ
ದೇವರು ಉತ್ತರಿಸದ ಕೆಲವು ಪ್ರಾರ್ಥನೆಗಳಿವೆ. ಒಬ್ಬ ವ್ಯಕ್ತಿಯ ಪ್ರಾರ್ಥನೆಯನ್ನ ದೇವರು ಕೇಳದಿರಲು ಇರೋ ಎರಡು ಕಾರಣಗಳನ್ನ ನೋಡಿ.
1. ದೇವರ ಇಷ್ಟಕ್ಕೆ ವಿರುದ್ಧವಾಗಿರೋ ಪ್ರಾರ್ಥನೆ
ದೇವರ ಇಷ್ಟ ಏನು ಮತ್ತು ಆತನ ಮಟ್ಟಗಳೇನು ಅಂತ ಬೈಬಲ್ ನಮಗೆ ಹೇಳುತ್ತೆ. ಅದರ ವಿರುದ್ಧವಾಗಿ ಮಾಡೋ ಪ್ರಾರ್ಥನೆಗಳಿಗೆ ದೇವರು ಉತ್ತರ ಕೊಡಲ್ಲ. (1 ಯೋಹಾನ 5:14) ಉದಾಹರಣೆಗೆ, ಬೈಬಲ್ ನಮಗೆ ಅತಿಯಾಸೆ ಇರಬಾರದು ಅಂತ ಹೇಳುತ್ತೆ ಆದರೆ ಜೂಜಾಡೋದು ಅತಿಯಾಸೆಗೆ ನಡೆಸುತ್ತೆ. (1 ಕೊರಿಂಥ 6:9, 10) ಹಾಗಾಗಿ, ನೀವು ಲಾಟರಿ ಗೆಲ್ಲಬೇಕು ಅಂತ ಪ್ರಾರ್ಥಿಸಿದರೆ, ದೇವರು ನಿಮ್ಮ ಪ್ರಾರ್ಥನೆಗೆ ಉತ್ತರ ಕೊಡಲ್ಲ. ನಾವು ಕರೆದಾಗೆಲ್ಲ ಕೇಳಿದ್ದನ್ನೆಲ್ಲ ಮಾಡಲು ದೇವರು ಒಂದು ಜೀನಿಯಲ್ಲ. ದೇವರು ಹೀಗೆ ಮಾಡಲ್ಲ ಅನ್ನೋದಕ್ಕೆ ನಾವು ಖುಷಿಪಡಬೇಕು ಯಾಕಂದ್ರೆ ಹಾಗೇನಾದರೂ ಆತನು ಮಾಡಿದರೆ, ಜನ ನಿಮ್ಮ ಬಗ್ಗೆ ದೇವರ ಹತ್ತಿರ ಏನೆಲ್ಲಾ ಕೇಳಬಹುದು ಅನ್ನೋದರ ಬಗ್ಗೆ ನೀವು ಭಯಪಡಬೇಕಾಗುತ್ತಿತ್ತು.—ಯಾಕೋಬ 4:3.
2. ಪ್ರಾರ್ಥನೆ ಮಾಡೋ ವ್ಯಕ್ತಿ ವಿಧೇಯತೆ ತೋರಿಸದಿದ್ದಾಗ
ದೇವರ ಕೋಪವನ್ನ ಕೆರಳಿಸುವ ಕೆಲಸಗಳನ್ನ ಮಾಡುವವರ ಪ್ರಾರ್ಥನೆಯನ್ನ ದೇವರು ಕೇಳೋದಿಲ್ಲ. ಉದಾಹರಣೆಗೆ, ತನ್ನನ್ನ ಆರಾಧಿಸ್ತೀವಿ ಅಂತ ಹೇಳಿಕೊಂಡು ಆತನಿಗೆ ಅವಿಧೇಯರಾದ ಕೆಲವರಿಗೆ ದೇವರು ಹೀಗೆ ಹೇಳಿದನು: “ನೀವು ಎಷ್ಟು ಸಲ ಪ್ರಾರ್ಥಿಸಿದ್ರೂ ನಾನು ಕೇಳಲ್ಲ. ಯಾಕಂದ್ರೆ ನಿಮ್ಮ ಕೈ ರಕ್ತದಿಂದ ತುಂಬಿದೆ.” (ಯೆಶಾಯ 1:15) ಆದರೆ ಅವರು ತಮ್ಮ ನಡತೆಯನ್ನ ಬದಲಾಯಿಸಿಕೊಂಡು ದೇವರೊಂದಿಗೆ “ವಿಷ್ಯಗಳನ್ನ ಇತ್ಯರ್ಥ” ಮಾಡಿಕೊಂಡರೆ, ದೇವರು ಅವರ ಪ್ರಾರ್ಥನೆಯನ್ನ ಕೇಳಿ ಉತ್ತರಿಸುತ್ತಿದ್ದನು.—ಯೆಶಾಯ 1:18.