ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mrt ಲೇಖನ 131
  • ಅಂಧರಿಗೆ ಸಹಾಯ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಂಧರಿಗೆ ಸಹಾಯ
  • ಇತರ ವಿಷಯಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಂಧರ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ?
  • ಯೆಹೋವನ ಸಾಕ್ಷಿಗಳು ಅಂಧರಿಗೆ ಹೇಗೆ ಸಹಾಯ ಮಾಡ್ತಿದ್ದಾರೆ?
  • ಬೈಬಲ್‌ ಬಗ್ಗೆ ಕಲಿಯೋಕೆ ಯಾವೆಲ್ಲಾ ಸಾಧನಗಳಿವೆ?
  • ಯೆಹೋವನ ಬಗ್ಗೆ ಕಲಿಯಲು ಅಂಧರಿಗೆ ಸಹಾಯ ಮಾಡಿ
    2015 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅಂಧರಿಗೆ ಸತ್ಯದ ಉಡುಗೊರೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಲೂಯೀ ಬ್ರೇಲ್‌ ಗಾಢಾಂಧಕಾರದಲ್ಲಿರುವವರಿಗೆ ಬೆಳಕು
    ಎಚ್ಚರ!—2000
  • ಆಡಿಯೋ ರೆಕಾರ್ಡಿಂಗ್‌ಗಳನ್ನು ಸದುಪಯೋಗಿಸಿಕೊಳ್ಳಿ
    2015 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಇತರ ವಿಷಯಗಳು
mrt ಲೇಖನ 131
ಕಣ್ಣು ಕಾಣದಿರೋ ವ್ಯಕ್ತಿ ಹೊರಗೆ ಒಂದು ಬೆಂಚಿನ ಮೇಲೆ ಕೂತ್ಕೊಂಡಿದ್ದಾನೆ ಮತ್ತು “JW ಲೈಬ್ರರಿ” ಆ್ಯಪಿಂದ ಆಡಿಯೋ ರೆಕಾರ್ಡಿಂಗ್‌ನ ಕೇಳಿಸ್ಕೊಳ್ತಿದ್ದಾನೆ.

ಅಂಧರಿಗೆ ಸಹಾಯ

ಪ್ರಪಂಚದಲ್ಲಿ, 4 ಕೋಟಿ 30 ಲಕ್ಷ ಅಂಧರಿದ್ದಾರೆ ಮತ್ತು 29 ಕೋಟಿ 50 ಲಕ್ಷದಷ್ಟು ಜನ್ರು ಕಮ್ಮಿ ದೃಷ್ಟಿa ಹೊಂದಿದ್ದಾರೆ ಅಂತ ಅಂದಾಜು ಮಾಡಲಾಗಿದೆ. ಬೇಜಾರಿನ ವಿಷ್ಯ ಏನಂದ್ರೆ, ಇಂಥವ್ರ ಜೊತೆ ಜನ ಒರಟಾಗಿ ನಡ್ಕೊಳ್ತಾರೆ ಮತ್ತು ಅವ್ರನ್ನ ಕೀಳಾಗಿ ನೋಡ್ತಾರೆ.

ಆದ್ರೆ ಅಂಧರ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ? ಅವ್ರ ಬಗ್ಗೆ ಬೈಬಲ್‌ ಏನು ಹೇಳುತ್ತೆ? ಮತ್ತು ಅವ್ರಿಗೆ ಯೆಹೋವನ ಸಾಕ್ಷಿಗಳು ಇವತ್ತು ಹೇಗೆ ಸಹಾಯ ಮಾಡ್ತಿದ್ದಾರೆ?

ಅಂಧರ ಬಗ್ಗೆ ದೇವರಿಗೆ ಹೇಗೆ ಅನಿಸುತ್ತೆ?

ಯೆಹೋವb ದೇವರು ಕಣ್ಣು ಕಾಣದೇ ಇರೋರ ಬಗ್ಗೆ ತುಂಬ ಕಾಳಜಿ ವಹಿಸ್ತಾನೆ ಅಂತ ಬೈಬಲ್‌ ಹೇಳುತ್ತೆ. ಜನ ಅಂಥವರ ಜೊತೆ ಪ್ರೀತಿ-ದಯೆಯಿಂದ ನಡ್ಕೋಬೇಕು, ಕಣ್ಣು ಕಾಣದೇ ಇರೋರು ತಾನು ಕೊಡೋ ಶಿಕ್ಷಣದಿಂದ ಪ್ರಯೋಜನ ಪಡಿಬೇಕು ಅನ್ನೋದು ದೇವರ ಆಸೆ. ಅಷ್ಟೇ ಅಲ್ಲ, ಅಂಥವರ ಭವಿಷ್ಯ ಮುಂದೆ ಚೆನ್ನಾಗಿರುತ್ತೆ ಅಂತಾನೂ ನಿರೀಕ್ಷೆ ಕೊಟ್ಟಿದ್ದಾನೆ.

ವಚನ: “ಕುರುಡನನ್ನ ದಾರಿ ತಪ್ಪಿಸುವವನಿಗೆ ಶಾಪ ತಟ್ಲಿ.”—ಧರ್ಮೋಪದೇಶಕಾಂಡ 27:18.

ಅರ್ಥ: ಹಿಂದಿನ ಕಾಲದಲ್ಲಿ ದೇವರು, ಕಣ್ಣು ಕಾಣದೇ ಇರೋರಿಗೆ ತೊಂದ್ರೆ ಕೊಡಬಾರದು ಅಂತ ನಿಯಮ ಕೊಟ್ಟಿದ್ದನು. ಹೀಗೆ ಅವ್ರನ್ನ ಕಾಪಾಡಿದನು.

ವಚನ: “ದೇವರು ಭೇದಭಾವ ಮಾಡಲ್ಲ.”—ಅಪೊಸ್ತಲರ ಕಾರ್ಯ 10:34.

ಅರ್ಥ: ದೇವರು ಕಣ್ಣು ಕಾಣಿಸೋರನ್ನ ಎಷ್ಟು ಅಮೂಲ್ಯವಾಗಿ ನೋಡ್ತಾನೋ ಕಣ್ಣು ಕಾಣದೇ ಇರೋರನ್ನೂ ಅಷ್ಟೇ ಅಮೂಲ್ಯವಾಗಿ ನೋಡ್ತಾನೆ.

ವಚನ: ಯೇಸು “ತುಂಬ ಕುರುಡರಿಗೆ ಕಣ್ಣು ಕಾಣಿಸೋ ತರ ಮಾಡಿದನು.”—ಲೂಕ 7:21.

ಅರ್ಥ: ಯೇಸು ಭೂಮಿಯಲ್ಲಿದ್ದಾಗ ಕುರುಡರಿಗೆ ಕಣ್ಣು ಕಾಣಿಸೋ ತರ ಮಾಡಿದನು. ಹೀಗೆ ದೇವರ ಆಳ್ವಿಕೆ ಬಂದಾಗ ಅದು ಏನೆಲ್ಲ ಮಾಡುತ್ತೆ ಅಂತ ತೋರಿಸಿದನು.

ವಚನ: “ಆ ಸಮಯದಲ್ಲಿ ಕುರುಡನಿಗೆ ಕಣ್ಣು ಕಾಣಿಸುತ್ತೆ.”—ಯೆಶಾಯ 35:5.

ಅರ್ಥ: ಇನ್ನು ಸ್ವಲ್ಪ ಸಮಯದಲ್ಲೇ ದೇವರ ಸರ್ಕಾರ ಭೂಮಿನ ಆಳುತ್ತೆ. ಆಗ ಕುರುಡರೆಲ್ರಿಗೂ ಕಣ್ಣು ಕಾಣಿಸುತ್ತೆ ಅಂತ ಯೆಹೋವ ಮಾತು ಕೊಟ್ಟಿದ್ದಾನೆ.

ಯೆಹೋವನ ಸಾಕ್ಷಿಗಳು ಅಂಧರಿಗೆ ಹೇಗೆ ಸಹಾಯ ಮಾಡ್ತಿದ್ದಾರೆ?

ಯೆಹೋವನ ಸಾಕ್ಷಿಗಳಾದ ನಾವು ಲೋಕದ ಎಲ್ಲಾ ಕಡೆ ಇರೋ ಜನ್ರಿಗೆ ಅದ್ರಲ್ಲೂ ಕಣ್ಣು ಕಾಣದೇ ಇರೋರಿಗೂ ಸಿಹಿಸುದ್ದಿ ಸಾರ್ತಿದ್ದೀವಿ. ಅವ್ರಿಗೆ ಸಿಹಿಸುದ್ದಿ ಸಾರೋಕೆ ನಾವು ಏನೆಲ್ಲಾ ಮಾಡ್ತಿದ್ದೀವಿ?

  • ನಾವು ಅಂಧರಿಗಾಗಿ ಮತ್ತು ಕಮ್ಮಿ ದೃಷ್ಟಿ ಹೊಂದಿರೋರಿಗಾಗಿ ಬೈಬಲನ್ನ, ಬೈಬಲ್‌ ಅಧ್ಯಯನದ ಪ್ರಕಾಶನಗಳನ್ನ ಮತ್ತು ವಿಡಿಯೋಗಳನ್ನ ಅವ್ರಿಗೆ ಸಹಾಯ ಆಗೋ ಬೇರೆ ಬೇರೆ ಫಾರ್ಮ್ಯಾಟ್‌ಗಳಲ್ಲಿ ತಯಾರಿಸಿದ್ದೀವಿ. ಅದ್ರಲ್ಲಿ ಬ್ರೇಲ್‌, ದಪ್ಪಕ್ಷರದ ಮುದ್ರಣ ಮತ್ತು ಆಡಿಯೋ ರೆಕಾರ್ಡಿಂಗ್‌ಗಳು ಕೂಡ ಸೇರಿದೆ.

  • ನಾವು ಪ್ರತಿವಾರ ಕ್ರೈಸ್ತ ಕೂಟಗಳನ್ನ ನಡೆಸ್ತೀವಿ. ಈ ಕೂಟಕ್ಕೆ ಕಣ್ಣು ಕಾಣಿಸೋರು ಮತ್ತು ಕಾಣಿಸದೇ ಇರೋರು ಹೀಗೆ ಯಾರು ಬೇಕಿದ್ರೂ ಬರಬಹುದು.

  • ಬೈಬಲ್‌ ಬಗ್ಗೆ ಕಲಿಯೋ ಆಸಕ್ತಿ ಇರೋರಿಗೆ ಬೈಬಲ್‌ ಕಲಿಸೋಕೆ ಒಬ್ರನ್ನ ನೇಮಿಸೋ ಏರ್ಪಾಡು ಮಾಡ್ತೀವಿ.c

ಇದ್ಯಾವುದಕ್ಕೂ ನಾವು ಹಣ ಕೇಳಲ್ಲ. ಯಾಕೆ? ಯಾಕಂದ್ರೆ “ನಿಮಗೆ ಉಚಿತವಾಗಿ ಸಿಕ್ಕಿದೆ, ಉಚಿತವಾಗಿ ಕೊಡಿ” ಅಂತ ಯೇಸು ಆಜ್ಞೆ ಕೊಟ್ಟಿದ್ದಾನೆ.—ಮತ್ತಾಯ 10:8.

ಯೆಹೋವನ ಸಾಕ್ಷಿಗಳಾದ ನಾವು ಕಣ್ಣು ಕಾಣದೇ ಇರೋರನ್ನ ತುಂಬ ಪ್ರೀತಿಸ್ತೀವಿ, ಅವ್ರ ಬಗ್ಗೆ ಕಾಳಜಿ ವಹಿಸ್ತೀವಿ. ನಮ್ಮ ಜೊತೆ ಸೇರಿ ಅವರೂ ದೇವರನ್ನ ಆರಾಧಿಸೋಕೆ ಬೇಕಾಗಿರೋ ಸಹಾಯ ಮಾಡ್ತೀವಿ. ಕಣ್ಣು ಕಾಣದೇ ಇರೋ ಕೆಲವು ಯೆಹೋವನ ಸಾಕ್ಷಿಗಳ ಕಥೆನ ನೀವೇ ನೋಡಿ.

ಸ್ವೀಡನ್‌ನಲ್ಲಿರೋ ತಲಿಟಾ ಅಲ್ನಾಜ಼ಿಗೆ ಹುಟ್ಟಿದಾಗಿಂದಾನೇ ಕಮ್ಮಿ ದೃಷ್ಟಿ ಇದೆ. ಅವಳ ತಂದೆ-ತಾಯಿ ಅವಳಿಗೆ ಬೈಬಲ್‌ ಬಗ್ಗೆ ಹೇಗೆ ಕಲಿಸಿದ್ರು ಮತ್ತು ಅವಳಿಗೆ, ಅವಳ ಕುಟುಂಬಕ್ಕೆ ಅವ್ರ ಸ್ನೇಹಿತರಿಂದ ಹೇಗೆ ಪ್ರೀತಿ-ಬೆಂಬಲ ಸಿಕ್ತು ಅಂತ ತಿಳ್ಕೊಳ್ಳಿ.

ಅಮೆರಿಕದಲ್ಲಿರೋ ಜೇಮ್ಸ್‌ ರೈಯನ್‌ನಿಗೆ ಹುಟ್ಟಿದಾಗ ಕಿವಿ ಕೇಳಿಸ್ತಿರಲಿಲ್ಲ, ಆಮೇಲೆ ಕಣ್ಣೂ ಕಾಣಿಸದ ಹಾಗಾಯ್ತು. ಈಗ ಅವನು ಖುಷಿ-ಖುಷಿಯಾಗಿ ಜೀವನ ಮಾಡ್ತಿದ್ದಾನೆ. ಇದಕ್ಕೆ ಕಾರಣ ಏನು ಅಂತ ನೋಡಿ.

ಸಿಂತಿಯ ಪಾಬ್ಲೊ.

ಫಿಲಿಪ್ಪೀನ್ಸ್‌ನಲ್ಲಿರೋ ಸಿಂತಿಯ ಪಾಬ್ಲೊ ಅನ್ನೋರಿಗೆ ಕಿವಿನೂ ಕೇಳಿಸಲ್ಲ, ಕಣ್ಣೂ ಕಾಣಿಸಲ್ಲ. ಕೋವಿಡ್‌ ಸಮಯದಲ್ಲಿ, ಯೆಹೋವನ ಸಾಕ್ಷಿಗಳಾದ ಅವ್ರ ಸ್ನೇಹಿತರು ಅವ್ರಿಗೆ ಹೇಗೆ ಸಹಾಯ ಮಾಡಿದ್ರು? ಇವ್ರ ಬಗ್ಗೆ ತಿಳ್ಕೊಳ್ಳೋಕೆ “ಕಿವಿ ಕೇಳಿಸದ ಮತ್ತು ಕಣ್ಣು ಕಾಣಿಸದ ಒಬ್ಬ ಸಹೋದರಿಗೆ ಸಭೆಯವರು ಕೋವಿಡ್‌ ಸಮಯದಲ್ಲಿ ಹೇಗೆ ಸಹಾಯ ಮಾಡಿದ್ರು” (ಇಂಗ್ಲಿಷ್‌) ಅನ್ನೋ ಲೇಖನ ನೋಡಿ.

ಬೈಬಲ್‌ ಬಗ್ಗೆ ಕಲಿಯೋಕೆ ಯಾವೆಲ್ಲಾ ಸಾಧನಗಳಿವೆ?

ಕಣ್ಣು ಕಾಣದಿರೋ ವ್ಯಕ್ತಿ ಬ್ರೇಲ್‌ ನೋಟ್‌ಟೇಕರ್‌ ಅನ್ನ ಉಪಯೋಗಿಸ್ತಿದ್ದಾನೆ.

ಬ್ರೇಲ್‌ ಪ್ರಕಾಶನಗಳು. ನಾವು ತುಂಬ ಭಾಷೆಗಳಲ್ಲಿ ಬ್ರೇಲ್‌ ಬೈಬಲನ್ನ ಬಿಡುಗಡೆ ಮಾಡಿದ್ದೀವಿ. ಕೆಲವು ಭಾಷೆಗಳಲ್ಲಿ ಬೈಬಲಿನ ಪೂರ್ತಿ ಭಾಗ ಇದೆ, ಇನ್ನೂ ಕೆಲವು ಭಾಷೆಗಳಲ್ಲಿ ಬೈಬಲಿನ ಕೆಲವು ಭಾಗಗಳಿವೆ. (ಯಾವೆಲ್ಲ ಭಾಷೆಯಲ್ಲಿದೆ ಅಂತ ತಿಳ್ಕೊಳ್ಳೋಕೆ “ಬ್ರೇಲ್‌ನಲ್ಲಿರೋ ಹೊಸ ಲೋಕ ಭಾಷಾಂತರ ಬೈಬಲ್‌” ಅನ್ನೋ ಚೌಕ ನೋಡಿ.) ನಾವು ಬೈಬಲ್‌ ಆಧಾರಿತ ಅನೇಕ ಪ್ರಕಾಶನಗಳನ್ನೂ ಬ್ರೇಲ್‌ನಲ್ಲಿ ಬಿಡುಗಡೆ ಮಾಡಿದ್ದೀವಿ. ಬ್ರೇಲ್‌ ಕಲಿಯೋಕೆ ಇಷ್ಟ ಇರೋರಿಗೆ, ಬ್ರೇಲ್‌ ಓದೋಕೆ ಕಲೀರಿ ಅನ್ನೋ ವರ್ಕ್‌ಬುಕ್‌ನ ಬಿಡುಗಡೆ ಮಾಡಿದ್ದೀವಿ. ಈ ವರ್ಕ್‌ಬುಕ್‌ನ ಕಣ್ಣು ಕಾಣಿಸೋ ವ್ಯಕ್ತಿ, ಕಣ್ಣು ಕಾಣದಿರೋ ವ್ಯಕ್ತಿಗೆ ಬ್ರೇಲ್‌ ಓದೋಕೆ ಕಲಿಸೋ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.

  • ಬ್ರೇಲ್‌ನಲ್ಲಿರೋ ಪ್ರಕಾಶನಗಳ ಪ್ರತಿಯನ್ನ ಪಡ್ಕೊಳ್ಳೋಕೆ ಯೆಹೋವನ ಸಾಕ್ಷಿಗಳಲ್ಲಿ ಒಬ್ರ ಹತ್ರ ಮಾತಾಡಿ ಅಥವಾ ಅವರು ನಿಮ್ಮನ್ನ ಭೇಟಿ ಮಾಡೋಕೆ ವಿನಂತಿಸಿ.

  • ನೋಟ್‌ಟೇಕರ್‌ ಸಾಧನಗಳಿಗೆd ಬೇಕಾದ ಫೈಲ್‌ಗಳನ್ನ jw.orgನಿಂದ ಡೌನ್‌ಲೋಡ್‌ ಮಾಡ್ಕೊಳ್ಳಿ.

ದೊಡ್ಡ ಅಕ್ಷರದ ಪ್ರಕಾಶನಗಳು ಮತ್ತು ಸ್ಕ್ರೀನ್‌ನಲ್ಲಿರೋ ಮಾಹಿತಿಯನ್ನ ದೊಡ್ಡದಾಗಿ ಮಾಡೋ ವೈಶಿಷ್ಟ್ಯಗಳು. ಕಮ್ಮಿ ದೃಷ್ಟಿ ಹೊಂದಿರೋರಿಗೆ ನಮ್ಮ ಅನೇಕ ಪ್ರಕಾಶನಗಳು ದೊಡ್ಡ ಅಕ್ಷರದ ಮುದ್ರಣದಲ್ಲಿ ಸಿಗುತ್ತೆ. ಕಮ್ಮಿ ದೃಷ್ಟಿ ಹೊಂದಿರೋ ವ್ಯಕ್ತಿ ಸ್ಕ್ರೀನ್‌ನ ಜ಼ೂಮ್‌ ಮಾಡಿದಾಗ ಮಾಹಿತಿ ಸ್ಪಷ್ಟವಾಗಿ ಕಾಣೋ ತರ ನಮ್ಮ jw.org ವೆಬ್‌ಸೈಟನ್ನ ವಿನ್ಯಾಸ ಮಾಡಲಾಗಿದೆ. ನಮ್ಮ JW ಲೈಬ್ರರಿ ಆ್ಯಪ್‌ನಲ್ಲಿ ಕೂಡ ಅಕ್ಷರದ ಗಾತ್ರನ ದೊಡ್ಡದು ಚಿಕ್ಕದು ಮಾಡೋ ವೈಶಿಷ್ಟ್ಯ ಇದೆ.

  • ದೊಡ್ಡ ಅಕ್ಷರದ ಪ್ರಕಾಶನಗಳನ್ನ ಪಡ್ಕೊಳ್ಳೋಕೆ ಒಬ್ಬ ಯೆಹೋವನ ಸಾಕ್ಷಿ ಹತ್ರ ಮಾತಾಡಿ ಅಥವಾ ಅವರು ನಿಮ್ಮನ್ನ ಭೇಟಿ ಮಾಡೋಕೆ ವಿನಂತಿಸಿ.

  • ದೊಡ್ಡ ಅಕ್ಷರದ ಮುದ್ರಣ ಪ್ರತಿ ಹೇಗಿರುತ್ತೋ ಅದೇ ತರದ ದೊಡ್ಡ ಅಕ್ಷರದ ಡಿಜಿಟಲ್‌ ಪ್ರತಿಯನ್ನ jw.org ವೆಬ್‌ಸೈಟ್‌ನಿಂದ ಡೌನ್‌ಲೋಡ್‌ ಮಾಡ್ಕೊಳ್ಳಿ.

ಆಡಿಯೋ ಪ್ರಕಾಶನಗಳು. ನಾವು ಸುಮಾರು 200 ಭಾಷೆಗಳಲ್ಲಿ ಹೊಸ ಲೋಕ ಭಾಷಾಂತರ ಬೈಬಲಿನ ಆಡಿಯೋ ರೆಕಾರ್ಡಿಂಗ್‌ಗಳನ್ನ ತಯಾರಿಸಿದ್ದೀವಿ. ಅದ್ರ ಜೊತೆಗೆ, ನಮ್ಮ ಬೈಬಲ್‌ ಆಧಾರಿತ ಎಷ್ಟೋ ಪ್ರಕಾಶನಗಳಿಗೂ ಆಡಿಯೋ ರೆಕಾರ್ಡಿಂಗ್‌ಗಳನ್ನ ಮಾಡಿದ್ದೀವಿ. ಈ ರೆಕಾರ್ಡಿಂಗ್‌ಗಳಲ್ಲಿ ಚಿತ್ರದ ವಿವರಣೆ ಕೂಡ ಇರುತ್ತೆ.

  • jw.org ಮತ್ತು JW ಲೈಬ್ರರಿ ಆ್ಯಪ್‌ನಿಂದ ಇಂಥ ಯಾವುದಾದ್ರೂ ಆಡಿಯೋ ಕೇಳಿಸ್ಕೊಳ್ಳಿ ಅಥವಾ ಡೌನ್‌ಲೋಡ್‌ ಮಾಡ್ಕೊಳ್ಳಿ.

  • ಸ್ಕ್ರೀನ್‌ ರೀಡರ್‌ ಮತ್ತು ಡಿಜಿಟಲ್‌ ಟಾಕಿಂಗ್‌ ಬುಕ್‌ ಪ್ಲೇಯರ್‌ಗೆe ಬೇಕಾಗಿರೋ ಫೈಲ್‌ನ jw.orgನಿಂದ ಡೌನ್‌ಲೋಡ್‌ ಮಾಡ್ಕೊಳ್ಳಿ.

ಗಟ್ಟಿಯಾಗಿ ಮಾತಾಡ್ತಿರೋ ವ್ಯಕ್ತಿಯ ಚಿಕ್ಕ ಚಿತ್ರ.

ವಿಡಿಯೋಗಳಲ್ಲಿ ಏನು ನಡಿತಿದೆ ಅಂತ ಹೇಳೋ ಆಡಿಯೋ ವಿವರಣೆಗಳು.f ಯೆಹೋವನ ಸಾಕ್ಷಿಗಳು 100ಕ್ಕಿಂತ ಜಾಸ್ತಿ ಭಾಷೆಗಳಲ್ಲಿ ಆಡಿಯೋ ವಿವರಣೆಗಳಿರೋ ಬೈಬಲ್‌ ಆಧಾರಿತ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋಗಳು ಬೈಬಲಲ್ಲಿರೋ ಬುದ್ಧಿಮಾತನ್ನ ಅರ್ಥ ಮಾಡ್ಕೊಂಡು ಅನ್ವಯಿಸೋಕೆ ಜನ್ರಿಗೆ ಸಹಾಯ ಮಾಡುತ್ತೆ.

ಇಂಥ ಆಡಿಯೋ ವಿವರಣೆಗಳಿರೋ ವಿಡಿಯೋಗಳನ್ನ ಕೆಳಗೆ ಕೊಡಲಾಗಿರೋ ವಿಭಾಗಗಳಲ್ಲಿ ಹುಡುಕಿ:

  • ಕುಟುಂಬ ಸಂತೋಷಕ್ಕೆ ಸಲಹೆಗಳು

  • ಬದುಕು ಬದಲಾದ ವಿಧ

  • ಚಲಿಸುವ ಚಿತ್ರಗಳು

ಕೂಟಗಳು ಮತ್ತು ಕಾರ್ಯಕ್ರಮಗಳು. ಲೋಕದ ಎಲ್ಲಾ ಕಡೆ ನಮ್ಮ ಸಭೆಗಳಿವೆ. ನಾವು ಪ್ರತಿವಾರ ಬೈಬಲ್‌ ಬಗ್ಗೆ ಕಲಿಯೋಕೆ, ದೇವರನ್ನ ಆರಾಧಿಸೋಕೆ ಅಲ್ಲಿ ಸೇರಿ ಬರ್ತೀವಿ. ಬೈಬಲ್‌ ಬಗ್ಗೆ ಕಲಿಯೋಕೆ ಪ್ರತಿವರ್ಷ ದೊಡ್ಡ-ದೊಡ್ಡ ಕಾರ್ಯಕ್ರಮಗಳನ್ನ ಕೂಡ ನಡೆಸ್ತೀವಿ. ಈ ಕಾರ್ಯಕ್ರಮಗಳಲ್ಲಿರೋ ವಿಡಿಯೋಗಳಿಗೆ ಆಡಿಯೋ ವಿವರಣೆಗಳನ್ನ ಕೊಡೋಕೆ ನಾವು ಪ್ರಯತ್ನ ಮಾಡ್ತೀವಿ. ಕೆಲವು ಸಲ, ಕಣ್ಣೂ ಕಾಣಿಸದೇ ಕಿವಿನೂ ಕೇಳಿಸದೇ ಇರೋರಿಗೆ ಈ ಕಾರ್ಯಕ್ರಮದಲ್ಲಿ ಏನು ನಡೀತಿದೆ ಅಂತ ಅವ್ರ ಕೈಯನ್ನ ಹಿಡಿದು ಸನ್ನೆ ಮಾಡಿ ತೋರಿಸಲಾಗುತ್ತೆ. ನಾವು ಯಾರಿಗೂ ಭೇದಭಾವ ಮಾಡದೇ ಎಲ್ರನ್ನ ಇಂಥ ಕಾರ್ಯಕ್ರಮಗಳಿಗೆ ಕರಿತೀವಿ.

  • ಕೂಟ ನಡೆಯೋ ಜಾಗನ ಹುಡುಕಿ.

  • ನಮ್ಮ ವಾರ್ಷಿಕ ಅಧಿವೇಶನದ ಬಗ್ಗೆ ತಿಳ್ಕೊಳ್ಳಿ.

  • ನಾವು ಪ್ರತಿ ವರ್ಷ ಪ್ರಾಮುಖ್ಯವಾಗಿ ಆಚರಿಸೋ ಯೇಸು ಕ್ರಿಸ್ತನ ಮರಣದ ಸ್ಮರಣೆಗೆ ಹಾಜರಾಗಿ.

ಮೆಕ್ಸಿಕೋದ ಹೋಸಾ ಲೂಯಿಸ್‌ ಅಯಲ ಹುಟ್ಟಿದಾಗ ಕಿವುಡನಾಗಿದ್ದ, 29 ವರ್ಷ ಆಗೋಷ್ಟರಲ್ಲಿ ಕುರುಡನೂ ಆದ. ನಮ್ಮ ಕೂಟಗಳು ಅವನಿಗೆ ಎಷ್ಟು ಮುಖ್ಯ, ಬೇರೆಯವ್ರಿಗೆ ಬೈಬಲನ್ನ ಚೆನ್ನಾಗಿ ಕಲಿಸೋಕೆ ಕೂಟಗಳು ಅವನಿಗೆ ಹೇಗೆ ಸಹಾಯ ಮಾಡ್ತು ಅಂತ ತಿಳ್ಕೊಳ್ಳಿ.

ಬ್ರೇಲ್‌ನಲ್ಲಿ ಲಭ್ಯವಿರೋ ಹೊಸ ಲೋಕ ಭಾಷಾಂತರ ಬೈಬಲ್‌

ಮೇ 1, 2025ರಷ್ಟಕ್ಕೆ ಸುಲಭವಾಗಿ ಓದಬಹುದಾದ ಬ್ರೇಲ್‌ ಬೈಬಲ್‌ಗಳು ಈ ಕೆಳಗಿನ ಭಾಷೆಗಳಲ್ಲಿ ಇತ್ತು.

ಚಿಚೇವ

ಡಚ್‌

ಇಂಗ್ಲಿಷ್‌

ಫ್ರೆಂಚ್‌

ಜಾರ್ಜಿಯನ್‌

ಜರ್ಮನ್‌

ಗ್ರೀಕ್‌

ಹಂಗೇರಿಯನ್‌

ಇಟಾಲಿಯನ್‌

ಜಪಾನಿಸ್‌

ಕೊರಿಯನ್‌

ಪೋರ್ಚುಗೀಸ್‌ (ಬ್ರೆಜಿಲ್‌)

ರಷ್ಯನ್‌

ಸ್ಪ್ಯಾನಿಷ್‌

ಯುಕ್ರೇನಿಯನ್‌

a ಯಾರಿಗೆ “ಕಮ್ಮಿ ದೃಷ್ಟಿ” ಇರುತ್ತೋ ಅವ್ರ ದೃಷ್ಟಿನ ಯಾವತ್ತೂ ಸರಿಮಾಡೋಕೆ ಆಗಲ್ಲ ಮತ್ತು ಅಂಥವರು ಪ್ರತಿದಿನ ತಮ್ಮ ಕೆಲಸಗಳನ್ನ ಮಾಡ್ಕೊಳ್ಳೋಕೆ ಕಷ್ಟಪಡ್ತಿರ್ತಾರೆ. ಈ ಲೇಖನದಲ್ಲಿ “ಅಂಧರು, ಕಣ್ಣು ಕಾಣದೇ ಇರೋರು” ಅಂತ ಹೇಳುವಾಗ ಸಂಪೂರ್ಣವಾಗಿ ಕಣ್ಣು ಕಾಣಿಸದೇ ಇರೋರು ಮತ್ತು ಕಮ್ಮಿ ದೃಷ್ಟಿ ಹೊಂದಿರೋರು ಈ ಇಬ್ರನ್ನೂ ಸೂಚಿಸುತ್ತೆ.

b ಯೆಹೋವ ಅನ್ನೋದು ದೇವರ ಹೆಸ್ರು. (ಕೀರ್ತನೆ 83:18) “ಯೆಹೋವ ಯಾರು?” ಅನ್ನೋ ಲೇಖನ ನೋಡಿ.

c ಉಚಿತ ಬೈಬಲ್‌ ಅಧ್ಯಯನ ಹೇಗೆ ನಡಿಯುತ್ತೆ ಅಂತ ತಿಳ್ಕೊಳ್ಳೋಕೆ ನೀವು ಅದಕ್ಕಾಗಿ ವಿನಂತಿಸಬಹುದು.

d ನೋಟ್‌ಟೇಕರ್‌ಗಳು ನಮಗೆ ಬೇಕಾದ ಕಡೆ ತಗೊಂಡು ಹೋಗಬಹುದಾದ ಎಲೆಕ್ಟ್ರಾನಿಕ್‌ ಸಾಧನಗಳಾಗಿದೆ. ಇವುಗಳಲ್ಲಿ ರಿಫ್ರೆಶ್‌ ಮಾಡಬಹುದಾದ ಬ್ರೇಲ್‌ ಡಿಸ್‌ಪ್ಲೇ ಇರುತ್ತೆ ಅಥವಾ ಕಂಪ್ಯೂಟರ್‌-ನಿರ್ಮಿತ ಧ್ವನಿ ಇರುತ್ತೆ. ಕೆಲವು ಸಾಧನಗಳಲ್ಲಿ ಈ ಎರಡೂ ವೈಶಿಷ್ಟ್ಯಗಳಿರುತ್ತೆ. ರಿಫ್ರೆಶ್‌ ಮಾಡಬಹುದಾದ ಡಿಸ್‌ಪ್ಲೇಗಳು ಬ್ರೇಲ್‌ ಅಕ್ಷರಗಳನ್ನ ರಚಿಸೋಕೆ ಪಿನ್‌ಗಳನ್ನ ಮೇಲಕ್ಕೆತ್ತುತ್ತೆ ಮತ್ತು ಕೆಳಗಿಳಿಸುತ್ತೆ. ಈ ನೋಟ್‌ಟೇಕರ್‌ಗಳಲ್ಲಿ ರಿಫ್ರೆಶ್‌ ಮಾಡೋ ಅವಕಾಶ ಇರೋದ್ರಿಂದ ಈ ಸಾಧನ ಇರೋ ವ್ಯಕ್ತಿಗೆ ಬ್ರೇಲ್‌ ಮುದ್ರಣ ಇರೋ ಹೆಚ್ಚಿನ ಪ್ರತಿಗಳ ಅಗತ್ಯ ಇರಲ್ಲ.

e ಸ್ಕ್ರೀನ್‌ ರೀಡರ್‌ಗಳು ಮತ್ತು ಡಿಜಿಟಲ್‌ ಟಾಕಿಂಗ್‌ ಬುಕ್‌ ಪ್ಲೇಯರ್‌ಗಳು ಮಾಹಿತಿನ ಕಂಪ್ಯೂಟರ್‌ ಧ್ವನಿಯಲ್ಲಿ ಗಟ್ಟಿಯಾಗಿ ಓದುತ್ತೆ ಅಥವಾ ಈಗಾಗ್ಲೇ ರೆಕಾರ್ಡ್‌ ಆಗಿರೋ ಆಡಿಯೋನ ಪ್ಲೇ ಮಾಡುತ್ತೆ. ಈ ತಂತ್ರಜ್ಞಾನವನ್ನ ಉಪಯೋಗಿಸ್ತಿರೋ ವ್ಯಕ್ತಿ ಪ್ರಕಾಶನದ ನಿರ್ದಿಷ್ಟ ಭಾಗಕ್ಕೆ ಹೋಗೋಕೆ ಇದು ಸಹಾಯ ಮಾಡುತ್ತೆ.

f ಆಡಿಯೋ ವಿವರಣೆಗಳು ಅಂದ್ರೆ ವಿಡಿಯೋದಲ್ಲಿ ಏನಾಗ್ತಿದೆ ಅಂತ ತಿಳಿಸೋ ವಿವರಣೆಗಳು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ