ಸದಾ ಎಚ್ಚರವಾಗಿರಿ!
ಕಷ್ಟ ಇದ್ರೂ ಖುಷಿಯಾಗಿರಬಹುದಾ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಯಾವಾಗ ಏನು ಕಷ್ಟ ಬರುತ್ತೆ ಅಂತ ನಾವ್ಯಾರು ಹೇಳೋಕೆ ಆಗಲ್ಲ. ‘ಕಷ್ಟ ಬಂದ್ರೆ ಖುಷಿ ಕಣ್ಮರೆ ಆಗಿಬಿಡುತ್ತೆ’ ಅಂತ ಜನ ಸಾಮಾನ್ಯವಾಗಿ ಹೇಳ್ತಾರೆ. ಆದ್ರೆ ಅದು ನಿಜ ಅಲ್ಲ. ಯಾಕಂದ್ರೆ ನಮ್ಮ ಖುಷಿ ನಮ್ಮ ಪರಿಸ್ಥಿತಿ ಮೇಲೆ ಹೊಂದ್ಕೊಂಡಿಲ್ಲ. ಬದಲಿಗೆ ನಮ್ಮ ಪರಿಸ್ಥಿತಿನ ನಾವು ಹೇಗೆ ನೋಡ್ತೀವಿ ಅನ್ನೋದ್ರ ಮೇಲೆ ಹೊಂದ್ಕೊಂಡಿದೆ. ಅದಕ್ಕೆ ಬೈಬಲ್, ಕಷ್ಟದ ಮಧ್ಯೆನೂ “ಸಂತೋಷದ ಹೃದಯ ಇರುವವನಿಗೆ ದಿನಾಲೂ ಔತಣ” ಅಂತ ಹೇಳುತ್ತೆ. (ಜ್ಞಾನೋಕ್ತಿ 15:15) ಹಾಗಾದ್ರೆ ಯಾವಾಗ್ಲೂ ಖುಷಿಯಾಗಿರೋಕೆ ನಾವೇನು ಮಾಡಬೇಕು? ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡೋಣ.
ಚಿಂತೆ ಆದಾಗ . . .
ಬೈಬಲ್ ಹೀಗೆ ಹೇಳುತ್ತೆ: “ಚಿಂತೆ ಇದ್ರೆ ಹೃದಯ ಬಾಡುತ್ತೆ, ಒಳ್ಳೇ ಮಾತಿಗೆ ಮನಸ್ಸು ಅರಳುತ್ತೆ.”—ಜ್ಞಾನೋಕ್ತಿ 12:25.
ಅದು ಹೇಗೆ ಅಂತ ತಿಳ್ಕೊಳ್ಳೋಕೆ “ಬೈಬಲಿನ ದೃಷ್ಟಿಕೋನ | ಚಿಂತೆ” ಅನ್ನೋ ಲೇಖನ ಓದಿ.
ಒಂಟಿತನ ಕಾಡಿದಾಗ . . .
ಬೈಬಲ್ ಹೀಗೆ ಹೇಳುತ್ತೆ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ. ಕಷ್ಟಕಾಲದಲ್ಲಿ ಅವನು ನಿಮ್ಮ ಸಹೋದರನಾಗ್ತಾನೆ.”—ಜ್ಞಾನೋಕ್ತಿ 17:17.
ಅದ್ರ ಬಗ್ಗೆ ತಿಳ್ಕೊಳ್ಳೋಕೆ “ಸ್ನೇಹ ಒಂಟಿತನಕ್ಕೆ ಮದ್ದು—ಬೈಬಲ್ ಕೊಡೋ ಸಹಾಯ” ಅನ್ನೋ ಲೇಖನ ಓದಿ.
ಖುಷಿಯಾಗಿರೋಕೆ ದೇವ್ರನ್ನ ಮತ್ತು ಜನ್ರನ್ನ ಪ್ರೀತಿಸಿ
ಬೈಬಲ್ ಹೀಗೆ ಹೇಳುತ್ತೆ: “ನಿನ್ನ ದೇವರಾದ ಯೆಹೋವನನ್ನ ನಿನ್ನ ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ, ಪೂರ್ಣ ಮನಸ್ಸಿಂದ ಪ್ರೀತಿಸಬೇಕು . . . ನೀನು ನಿನ್ನನ್ನ ಪ್ರೀತಿಸೋ ತರ ಬೇರೆಯವ್ರನ್ನೂ ಪ್ರೀತಿಸಬೇಕು.”a—ಮತ್ತಾಯ 22:37-39.
ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳ್ತಾನಾ?” ಅನ್ನೋ ಲೇಖನ ಓದಿ.
ಇದನ್ನ ಹೇಗೆ ಮಾಡೋದು ಅಂತ ತಿಳ್ಕೊಳ್ಳೋಕೆ “ನಾವು ಬೇರೆಯವರ ಜೊತೆ ಹೇಗಿರಬೇಕು ಅಂತ ಬೈಬಲ್ ಹೇಳುತ್ತೆ?” ಅನ್ನೋ ಲೇಖನ ಓದಿ.
ಬೇರೆ ಬೇರೆ ಕಷ್ಟದ ಪರಿಸ್ಥಿತಿಯಲ್ಲೂ ನಾವು ಹೇಗೆ ಖುಷಿಯಾಗಿರಬಹುದು ಅಂತ ಬೈಬಲ್ ಹೇಳುತ್ತೆ. ಅದ್ರ ಬಗ್ಗೆ ತಿಳ್ಕೊಳ್ಳೋಕೆ ಉಚಿತ ಕೋರ್ಸ್ ಪಡ್ಕೊಳಿ.
a ಯೆಹೋವ ಅನ್ನೋದು ದೇವರ ವೈಯಕ್ತಿಕ ಹೆಸರು. ಕೀರ್ತನೆ 83:18