Top left: Marek M. Berezowski/Anadolu Agency via Getty Images; bottom left: Halfpoint Images/Moment via Getty Images; center: Zhai Yujia/China News Service/VCG via Getty Images; top right: Ismail Sen/Anadolu Agency via Getty Images; bottom right: E+/taseffski/via Getty Images
ಸದಾ ಎಚ್ಚರವಾಗಿರಿ!
2023: ಆತಂಕ ತಂದ ವರ್ಷ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
2023ನೇ ವರ್ಷದಲ್ಲಿ ಭೂಮಿಯಲ್ಲಿ ನಡೆದ ಘಟನೆಗಳು ಬೈಬಲ್ ಹೇಳೋ ತರ ನಾವು “ಕೊನೇ ದಿನಗಳಲ್ಲಿ” ಜೀವನ ಮಾಡ್ತಿದ್ದೀವಿ ಅನ್ನೋದನ್ನ ತೋರಿಸುತ್ತೆ. (2 ತಿಮೊತಿ 3:1) ನಮ್ಮ ದಿನಗಳಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತೆ ಅಂತ ಬೈಬಲ್ ಮುಂಚೆನೇ ಹೇಳಿತ್ತು. ಆ ಘಟನೆಗಳನ್ನ ಗಮನಿಸಿ.
ಬೈಬಲ್ ಭವಿಷ್ಯವಾಣಿಗಳು ಮತ್ತು ಲೋಕದಲ್ಲಿ ನಡೆಯುತ್ತಿರೋ ಘಟನೆಗಳು
‘ಯುದ್ಧಗಳು ಮತ್ತು ಯುದ್ಧ ಆಗ್ತಾ ಇದೆ ಅನ್ನೋ ಸುದ್ದಿ.’—ಮತ್ತಾಯ 24:6.
“ಲೋಕದ ಅನೇಕ ಜಾಗಗಳಲ್ಲಿ ಹಿಂಸೆಯಿಂದ ಕೂಡಿದ ಜಗಳಗಳು ಜಾಸ್ತಿ ಆಗ್ತಿದೆ.”a
“ನಾಗರೀಕರನ್ನ ಯಾರು ರಕ್ಷಿಸ್ತಾರೆ?—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ??” ಮತ್ತು“ ವಿಶ್ವದ ಮಿಲಿಟರಿ ಖರ್ಚು ಗಗನಕ್ಕೇರಿದೆ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನಗಳನ್ನ ನೋಡಿ.
“ಒಂದರ ನಂತ್ರ ಇನ್ನೊಂದು ಸ್ಥಳದಲ್ಲಿ ಭೂಕಂಪ.”—ಮಾರ್ಕ 13:8.
“2023ನೇ ವರ್ಷದ ಆರಂಭದಿಂದ ಇಲ್ಲಿ ತನಕ ರಿಕ್ಟರ್ ಮಾಪಕದಲ್ಲಿ 7ಕ್ಕಿಂತ ಹೆಚ್ಚಿನ ತೀವ್ರತೆಯ 13 ಭೂಕಂಪಗಳು ವಿಶ್ವದಾದ್ಯಂತ ಸಂಭವಿಸಿವೆ. ಇದು ಇಲ್ಲಿವರೆಗೂ ಇದ್ದ ದಾಖಲೆಗಳಿಗಿಂತ ಹೆಚ್ಚಾಗಿದೆ.”b
“ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಭಾರಿ ಭೂಕಂಪಗಳು—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
“ಭಯಾನಕ ದೃಶ್ಯಗಳು.”—ಲೂಕ 21:11.
“ಜಾಗತಿಕ ತಾಪಮಾನ ಏರಿಕೆಯ ಯುಗ ಕೊನೆಗೊಂಡಿದೆ; ಈಗ ಜಾಗತಿಕ ಕುದಿಯುವ ಯುಗ ಬಂದಿದೆ.—ಆಂಟೋನಿಯೊ ಗುಟೆರೆಸ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ.c
“2023ರ ಬೇಸಿಗೆಯ ಬಿಸಿಗಾಳಿ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
“ಆಹಾರದ ಕೊರತೆ.”—ಮತ್ತಾಯ 24:7.
“ತಮ್ಮ ಕುಟುಂಬಗಳನ್ನ ಪೋಷಿಸೋಕೆ ಹೆಣಗಾಡುತ್ತಿರುವವರಿಗೆ 2023 ಮತ್ತೊಂದು ಸಂಕಷ್ಟದ ವರ್ಷವಾಗಿತ್ತು.”d
“ಆಹಾರದ ಕೊರತೆ, ಯುದ್ಧ ಮತ್ತು ಹವಾಮಾನದ ಏರುಪೇರು—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
“ಪರಿಸ್ಥಿತಿ ತುಂಬ ಹದಗೆಡುತ್ತೆ, ತುಂಬ ಕಷ್ಟ ಪಡಬೇಕಾಗುತ್ತೆ.”—2 ತಿಮೊತಿ 3:1.
“ಜಗತ್ತಿನಲ್ಲಿ ಎಂಟು ಜನರಲ್ಲಿ ಒಬ್ಬರು ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.”e
“ಹದಿವಯಸ್ಸಿನವರ ಮಾನಸಿಕ ಆರೋಗ್ಯದಲ್ಲಿ ಆಗಿರೋ ಭಯಂಕರ ಬದಲಾವಣೆ—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?” ಅನ್ನೋ ಲೇಖನ ನೋಡಿ.
2024ರಲ್ಲಿ ಏನೆಲ್ಲಾ ಆಗುತ್ತೆ?
2024ನೇ ವರ್ಷದಲ್ಲಿ ಏನೆಲ್ಲಾ ಆಗುತ್ತೆ ಅಂತ ಯಾರೂ ಹೇಳೋಕೆ ಆಗಲ್ಲ. ಆದ್ರೆ ನಮ್ಮ ಸುತ್ತ ಮುತ್ತ ನಡೀತಿರೋ ಘಟನೆಗಳಿಂದ ಏನು ಗೊತ್ತಾಗುತ್ತೆ ಅಂದ್ರೆ ತುಂಬ ಬೇಗ ದೇವರ ಸರ್ಕಾರ ಮಾನವ ಸರ್ಕಾರಗಳನ್ನ ತೆಗೆದು ಹಾಕಿ ಈ ಭೂಮಿಯನ್ನ ಆಳೋಕೆ ಶುರು ಮಾಡುತ್ತೆ. ಜನರಿಗೆ ಆಗುತ್ತಿರೋ ಕಷ್ಟಗಳಿಗೆ ಮತ್ತು ಚಿಂತೆಗಳಿಗೆ ನಡೆಸೋ ಎಲ್ಲಾ ವಿಷಯಗಳನ್ನ ತೆಗೆದು ಹಾಕುತ್ತೆ.—ದಾನಿಯೇಲ 2:44; ಪ್ರಕಟನೆ 21:4.
ಆ ಸರ್ಕಾರ ಆಳ್ವಿಕೆ ಮಾಡೋವರೆಗೂ ನಮಗೆ ಚಿಂತೆ ಕಾಡುತ್ತೆ ನಿಜ, ಆದ್ರೆ ಆ ಚಿಂತೆಯನ್ನ ಎದುರಿಸೋಕೆ ದೇವರು ನಮಗೆ ಖಂಡಿತ ಸಹಾಯ ಮಾಡ್ತಾನೆ. ಅದಕ್ಕೆ ಬೈಬಲ್ ಹೀಗೆ ಹೇಳುತ್ತೆ:
“ನನಗೆ ಭಯ ಆದಾಗ ನಾನು ನಿನ್ನ ಮೇಲೆ ಭರವಸೆ ಇಡ್ತೀನಿ.”—ಕೀರ್ತನೆ 56:3.
ಹಾಗಾದ್ರೆ ನಾವು ದೇವರ ಮೇಲೆ ಹೇಗೆ ಭರವಸೆ ಇಡಬಹುದು? ಕಷ್ಟನೇ ಇಲ್ಲದ ಒಂದು ಸುಂದರ ಭವಿಷ್ಯದ ಬಗ್ಗೆ ಬೈಬಲ್ ಏನು ಹೇಳುತ್ತೆ ಅನ್ನೋದನ್ನ ತಿಳ್ಕೊಳ್ಳಿ. ಬೈಬಲ್ನಲ್ಲಿ ಹೇಳಿರೋ ಭವಿಷ್ಯವಾಣಿಗಳಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಹೇಗೆಲ್ಲಾ ಪ್ರಯೋಜ್ನ ಇದೆ ಅಂತ ತಿಳಿಯಲು ಉಚಿತ ಬೈಬಲ್ ಕೋರ್ಸನ್ನು ವಿನಂತಿಸಿ.
a Foreign Affairs, “A World at War: What Is Behind the Global Explosion of Violent Conflict?” by Emma Beals and Peter Salisbury, October 30, 2023.
b Earthquake News, “Year 2023: Number of Major Earthquakes on Course for Record,” May, 2023.
c United Nations, “Secretary-General’s Opening Remarks at Press Conference on Climate,” July 27, 2023.
d World Food Programme, “A Global Food Crisis.”
e World Health Organization, “World Mental Health Day 2023,” October 10, 2023.