ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwyp ಲೇಖನ 97
  • ನಾನ್ಯಾಕೆ ಸ್ವಾರಿ ಕೇಳ್ಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾನ್ಯಾಕೆ ಸ್ವಾರಿ ಕೇಳ್ಬೇಕು?
  • ಯುವಜನರ ಪ್ರಶ್ನೆಗಳು
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸ್ವಾರಿ ಯಾಕೆ ಕೇಳ್ಬೇಕು?
  • ಹೇಗೆ ಸ್ವಾರಿ ಕೇಳೋದು?
  • ನೀವು ತಪ್ಪೊಪ್ಪಿಕೊಳ್ಳುವುದು ನಿಜವಾಗಿ ಅವಶ್ಯವೊ?
    ಕಾವಲಿನಬುರುಜು—1996
  • ಕಷ್ಟವಾದರೂ ಕ್ಷಮೆ ಕೇಳಿ
    ಎಚ್ಚರ!—2015
  • ಕ್ಷಮೆಯಾಚಿಸುವುದು ಅಷ್ಟು ಕಷ್ಟಕರವೇಕೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಕ್ಷಮಾಯಾಚನೆ ಶಾಂತಿಯನ್ನು ಸ್ಥಾಪಿಸಲಿಕ್ಕಾಗಿರುವ ಒಂದು ಕೀಲಿ ಕೈ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
ಇನ್ನಷ್ಟು
ಯುವಜನರ ಪ್ರಶ್ನೆಗಳು
ijwyp ಲೇಖನ 97
ಕ್ಲಾಸ್‌ಲ್ಲಿ ಇರುವ ಒಬ್ಬ ಹುಡುಗನಿಗೆ ಟೀಚರ್‌ ಬೈತಿದ್ದಾರೆ.

ಯುವ ಜನರ ಪ್ರಶ್ನೆಗಳು

ನಾನ್ಯಾಕೆ ಸ್ವಾರಿ ಕೇಳ್ಬೇಕು?

ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ನೀವೇನು ಮಾಡ್ತಿರಾ?

  1. 1 ಗಲಾಟೆ ಮಾಡಿದ್ರಿ ಅಂತ ಟೀಚರ್‌ ನಿಮ್ಮನ್ನ ಬೈದ್ರು.

    ಟೀಚರ್‌ ಓವರಾಗಿ ಆಡ್ತಾರೆ ಅಂತ ಅನಿಸಿದ್ರೂ ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

  2. 2 ನಿಮ್ಮ ಫ್ರೆಂಡ್‌ ಬಗ್ಗೆ ತಪ್ಪಾಗಿ ಮಾತಾಡಿದ್ರಿ ಅಂತ ಅವಳಿಗೆ ಗೊತ್ತಾಯಿತು.

    ನೀವು ಹೇಳಿದ್ದು ನಿಜ ಅಂತ ನಿಮಗೆ ಗೊತ್ತಿದ್ರೂ ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

  3. 3 ನಿಮ್ಮ ಡ್ಯಾಡಿಯಿಂದ ನಿಮಗೇನೋ ಬೇಜಾರ್‌ ಆಯ್ತು, ಹಾಗಂತ ನೀವು ಅವ್ರಿಗೆ ಎದ್ರು ಮಾತಾಡ್ತೀರಾ?

    ಒಂದುವೇಳೆ ಡ್ಯಾಡಿದೇ ತಪ್ಪಿದ್ರು ನೀವು ಅವ್ರಿಗೆ ಸ್ವಾರಿ ಕೇಳ್ತಿರಾ?

ಈ ಮೂರು ಪ್ರಶ್ನೆಗೂ ಉತ್ರ ಒಂದೇ. ಅದು ಹೌದು. ಆದ್ರೆ ಹಾಗ್ಯಾಕೆ? ನನ್ನ ತಪ್ಪಿಲ್ಲ ಅಂದ್ರು ನಾನ್ಯಾಕೆ ಸ್ವಾರಿ ಕೇಳ್ಬೇಕು?

  • ಸ್ವಾರಿ ಯಾಕೆ ಕೇಳ್ಬೇಕು?

  • ಹೇಗೆ ಸ್ವಾರಿ ಕೇಳೋದು?

  • ನಿಮ್ಮ ವಯಸ್ಸಿನವರು ಏನಂತಾರೆ?

ಸ್ವಾರಿ ಯಾಕೆ ಕೇಳ್ಬೇಕು?

  • ಸ್ವಾರಿ ಕೇಳೋದು ಪ್ರೌಢತೆಯ ಲಕ್ಷಣ. ನೀವು ಹೇಳಿದ ಅಥವಾ ಮಾಡಿದ ವಿಷಯಗಳ ಜವಾಬ್ದಾರಿ ತಗೊಳ್ಳೋದು ಪ್ರೌಢತೆಯ ಲಕ್ಷಣವಾಗಿದೆ. ಹೀಗೆ ಮಾಡಿದ್ರೆ ದೊಡ್ಡವರಾದ ಮೇಲೆ ತೋರಿಸೋ ಗುಣಗಳನ್ನ ಈಗಲೇ ತೋರಿಸಿದಂತೆ ಆಗುತ್ತೆ.

    “ಸ್ವಾರಿ ಕೇಳೋಕೆ, ಬೇರೆಯವರು ಹೇಳೋದನ್ನ ಕೇಳಿಸಿಕೊಳ್ಳೋಕೆ ದೀನತೆ ಮತ್ತು ತಾಳ್ಮೆ ಸಹಾಯ ಮಾಡುತ್ತೆ.”—ರೇಚಲ್‌.

  • ಸ್ವಾರಿ ಕೇಳೋದ್ರಿಂದ ಶಾಂತಿಯಿಂದ ಇರೋಕೆ ಆಗುತ್ತೆ. ಸ್ವಾರಿ ಕೇಳೋರು ನಾನ್‌ ಸರಿ ಅವರು ತಪ್ಪು ಅಂತ ಪ್ರೂ ಮಾಡೋಕ್ಕೆ ಪ್ರಯತ್ನಿಸದೆ ಶಾಂತಿಯಿಂದ ಇರೋಕೆ ತುಂಬ ಪ್ರಯತ್ನಿಸ್ತಾರೆ.

    “ಕೆಲವೊಮ್ಮ ತಪ್ಪು ನಮ್ಮದಿಲ್ಲದೇ ಇರಬಹುದು, ಆದ್ರೂ ಶಾಂತಿಯಿಂದ ಇರೋದೆ ನಮ್ಮ ಗುರಿಯಾಗಿದೆ. ಕ್ಷಮೆ ಕೇಳೋದ್ರಿಂದ ಫ್ರೆಂಡ್‌ಶಿಪ್‌ ಬೆಳೆಯುತ್ತೆ ಹೊರತು ನಮ್ಮದೇನು ಗಂಟ್‌ ಹೋಗಲ್ಲ.”—ಮಿರಿಯಮ್‌.

  • ಕ್ಷಮೆ ಕೇಳಿದ್ರೆ ನಿಮಗೆ ಹಾಯಿ ಅನಿಸುತ್ತೆ. ನಿಮ್ಮ ಮಾತು ಅಥವಾ ನಡತೆಯಿಂದ ಇನ್ನೊಬ್ರಿಗೆ ನೋವು ಮಾಡಿದ್ರೆ ನಿಮ್ಮ ಮನಸ್ಸು ಕೊರೆಯುತ್ತಾ ಇರುತ್ತೆ. ಅದೇ ನೀವು ಕ್ಷಮೆ ಕೇಳಿದ್ರೆ ಹೆಗಲ ಮೇಲಿದ್ದ ದೊಡ್ಡ ಹೊರೆಯನ್ನ ಇಳಿಸಿದ ಹಾಗೆ ಅನಿಸುತ್ತೆ.a

    “ಕೆಲವೊಂದು ಸಲ ನನ್ನ ಮಮ್ಮಿ ಅಥವಾ ಡ್ಯಾಡಿ ಜೊತೆ ತುಂಬ ರೂಡ್‌ ಆಗಿ ಮಾತಾಡಿದ್ದೆ. ಹಾಗೆ ನಡಕೊಂಡದಕ್ಕೆ ನನಗೆ ತುಂಬ ಬೇಜಾರ್‌ ಆಗ್ತಿತ್ತು. ಆದ್ರೂ ಕ್ಷಮೆ ಕೇಳೋಕೆ ಕಷ್ಟ ಆಗ್ತಿತ್ತು. ನಾನು ಯಾವಾಗ ಕ್ಷಮೆ ಕೇಳಿದ್ನೊ ಆಗ ಹಾಯಿ ಅನಿಸುತ್ತಿತ್ತು. ಯಾಕೆಂದ್ರೆ ಅದ್ರಿಂದ ಪುನಃ ಕುಟುಂಬದಲ್ಲಿ ಶಾಂತಿ ತುಂಬಿಕೊಳ್ತಿತ್ತು.”—ನಿಯಾ.

    ಒಬ್ಬ ಹುಡುಗ ದೊಡ್ಡ ಬಂಡೆ ಕಲ್ಲನ್ನ ತನ್ನ ಬೆನ್ನ ಮೇಲೆ ಹಿಡಕೊಂಡಿದ್ದಾನೆ.

    ತಪ್ಪು ಮಾಡಿದೆ ಅನ್ನೋ ಕೊರಗು ದೊಡ್ಡ ಬಂಡೆ ಹಿಡಕೊಂಡ ಹಾಗೆ. ಒಂದು ಸಲ ಕ್ಷಮೆ ಕೇಳಿದ್ರೆ ಆ ಭಾರನ ಮುಂದೆ ಯಾವತ್ತು ಹಿಡ್ಕೊಂಡು ಇರಬೇಕಾಗಿಲ್ಲ

ಕ್ಷಮೆ ಕೇಳೋದು ಅಷ್ಟು ಸುಲಭನಾ? ಇಲ್ಲ. ಡೆನಾ ಅನ್ನೋ ಹುಡುಗಿ ಮಮ್ಮಿ ಒಟ್ಟಿಗೆ ತುಂಬ ರೂಢಾಗಿ ನಡಕೊಂಡಿದ್ರಿಂದ ತುಂಬ ಸಲ ಸ್ವಾರಿ ಕೇಳಬೇಕಾಗಿ ಬಂತು. ಅವಳು ಹೇಳೋದು “ಸ್ವಾರಿ ಹೇಳೋದು ಅಷ್ಟು ಸುಲಭ ಅಲ್ಲ. ಒಂಥರಾ ಗಂಟಲಲ್ಲಿ ಏನೋ ಸಿಕ್ಕಿ ಹಾಕೊಂಡ ಹಾಗೆ ಅನಿಸುತ್ತಿತ್ತು, ಮಾತೇ ಬರ್ತಿರಿಲಿಲ್ಲ.”

ಹೇಗೆ ಸ್ವಾರಿ ಕೇಳೋದು?

  • ನೇರವಾಗಿ ಕ್ಷಮೆ ಕೇಳಿ. ಒಬ್ರ ಹತ್ರ ನೇರವಾಗಿ ಕ್ಷಮೆ ಕೇಳಿದ್ರೆ ನಮ್ಮ ತಪ್ಪು ನಮಗೆ ಅರಿವಾಗಿ ಮನಸಾರೆ ಕ್ಷಮೆ ಕೇಳ್ತಿದ್ದೀವಿ ಅಂತ ಅವರಿಗೆ ಗೊತ್ತಾಗುತ್ತೆ. ಒಂದುವೇಳೆ ನೀವು ಮೆಸೆಜ್‌ನಲ್ಲಿ ಸ್ವಾರಿ ಕೇಳಿದ್ರೆ ಆ ವ್ಯಕ್ತಿ ನಿಮ್ಮನ್ನ ನಂಬಲ್ಲ. ಅಷ್ಟೇ ಅಲ್ಲ ಅಳು ತೋರಿಸೋ ಎಮೋಜಿಯನ್ನ (ಸ್ಮೈಲಿ) ಕಳಿಸಿದ್ರೂ ಅವ್ರಿಗೆ ನಾವು ಮನಸ್ಸಿಂದ ಕ್ಷಮೆ ಕೇಳ್ತಿಲ್ಲ ಅಂತ ಅನಿಸುತ್ತೆ.

    ಕಿವಿಮಾತು: ಒಂದುವೇಳೆ ಕ್ಷಮೆ ಕೇಳೋಕೆ ಆ ವ್ಯಕ್ತಿ ಹತ್ತಿರ ಹೋಗೋಕೆ ಆಗಿಲ್ಲ ಅಂದ್ರೆ ಫೋನ್‌ ಮಾಡಿ ಅಥವಾ ಒಂದು ಕಾರ್ಡ್‌ನಲ್ಲಿ ಬರೆದು ಕಳಿಸಿ. ಏನೇ ಮಾಡಿದ್ರು ನಿಮ್ಮ ಪದಗಳನ್ನ ಯೋಚಿಸಿ ಹೇಳಿ.

    ಬೈಬಲ್‌ ತತ್ವ: “ಶಿಷ್ಟನ ಹೃದಯ ವಿವೇಚಿಸಿ ಉತ್ತರಕೊಡುತ್ತದೆ; ದುಷ್ಟನ ಬಾಯಿ ಕೆಟ್ಟದ್ದನ್ನು ಕಕ್ಕುತ್ತದೆ.”—ಜ್ಞಾನೋಕ್ತಿ 15:28.

  • ಬೇಗನೇ ಕ್ಷಮೆ ಕೇಳಿ. ಕ್ಷಮೆ ಕೇಳಲು ಎಷ್ಟು ಹೆಚ್ಚು ಸಮಯ ತಗೊಳ್ತಿರೋ ಸಮಸ್ಯೆ ಸಹ ಅಷ್ಟೆ ದೊಡ್ಡದಾಗಿ ಬಿಡುತ್ತೆ. ಯಾರಿಗೆ ನೀವು ನೋವು ಮಾಡಿದ್ದೀರೋ ಅವರೊಟ್ಟಿಗಿನ ನಿಮ್ಮ ಸಂಬಂಧನೂ ಇನ್ನಷ್ಟು ಹಾಳಾಗುತ್ತೆ.

    ಕಿವಿಮಾತು: ಒಂದು ಗುರಿ ಇಡಿ. ಉದಾಹರಣೆಗೆ, ‘ಇವತ್ತೇ ಸ್ವಾರಿ ಕೇಳ್ತಿನಿ.’ ಯಾವಾಗ ನೀವು ಕ್ಷಮೆ ಕೇಳ್ತಿರಾ ಅಂತ ನೀವು ನಿರ್ಣಯ ಮಾಡಿ. ನಿಮ್ಮ ನಿರ್ಣಯದಂತೆ ಕ್ಷಮೆ ಕೇಳಿ.

    ಬೈಬಲ್‌ ತತ್ವ: ‘ಬೇಗನೆ ವಿಷಯಗಳನ್ನು ಇತ್ಯರ್ಥಮಾಡಿಕೊಳ್ಳಿ.’—ಮತ್ತಾಯ 5:25.

  • ಮನಸಾರೆ ಕ್ಷಮೆ ಕೇಳಿ. “ನಿಮಗೆ ಹಾಗೆ ಅನಿಸಿದ್ರೆ ಸ್ವಾರಿ” ಅಂತ ಹೇಳೋದು ಕ್ಷಮೆ ಕೇಳೋ ಸರಿಯಾದ ರೀತಿ ಅಲ್ಲ! ಜೆನಲ್‌ ಅನ್ನೊ ಹುಡುಗಿ ಹೇಳಿದ್ದು “ನೀವು ಮಾಡಿದ ವಿಷಯಕ್ಕೆ ಪೂರ್ತಿ ಜವಾಬ್ದಾರಿಯನ್ನ ನೀವೇ ತಗೊಂಡರೆ ತಪ್ಪು ಮಾಡಿದ ವ್ಯಕ್ತಿಗೆ ನಿಮ್ಮೇಲೆ ಗೌರವ ಹೆಚ್ಚಾಗುತ್ತೆ.”

    ಕಿವಿಮಾತು: ಕಂಡಿಷನ್‌ ಹಾಕಿ ಸ್ವಾರಿ ಕೇಳಬೇಡಿ. “ನೀನು ನಿನ್ನ ತಪ್ಪನ್ನ ಒಪ್ಪಿಕೊಂಡ್ರೆ ನಾನ್‌ ನನ್ನ ತಪ್ಪನ್ನ ಒಪ್ಪಿಕೊಳ್ತೇನೆ” ಅಂತ ಹೇಳ್ಬೇಡಿ.

    ಬೈಬಲ್‌ ತತ್ವ: ‘ಶಾಂತಿಯನ್ನು ಉಂಟುಮಾಡುವ . . . ವಿಷಯಗಳನ್ನು ಬೆನ್ನಟ್ಟೋಣ.’—ರೋಮನ್ನರಿಗೆ 14:19.

ನಿಮ್ಮ ವಯಸ್ಸಿನವರು ಏನಂತಾರೆ?

ವ್ಯಾಲೆರಿ.

“ನಾನೇನು ತಪ್ಪು ಮಾಡಿಲ್ಲ ಅಂದ್ರು ಕ್ಷಮೆ ಕೇಳೋಕ್ಕೆ ದೀನತೆ ಬೇಕು. ಕ್ಷಮೆ ಕೇಳುವಾಗ ಸಕರಾತ್ಮಕವಾಗಿ ಪ್ರೋತ್ಸಾಹ ಕೊಡೋ ರೀತಿ ನನ್ನ ಮಾತು ಇರಬೇಕು. ನನ್ನ ಗುರಿ ಬೆಂಕಿಯನ್ನ ಆರಿಸೋದೆ ವಿನಃ ಅದಕ್ಕೆ ತುಪ್ಪ ಹಾಕೋದಲ್ಲ.”—ವ್ಯಾಲೆರಿ.

ಫಿಲಿಪ್‌.

“ನೀವು ಕ್ಷಮೆ ಕೇಳಲು ಸಿದ್ಧರಿದ್ರೆ ನಿಮಗಿಂತ ಹೆಚ್ಚಾಗಿ ಬೇರೆಯವರ ಬಗ್ಗೆ ಯೋಚಿಸುತ್ತೀರಿ ಅಂತ ನೀವು ತೋರಿಸುತ್ತೀರ. ಕ್ಷಮೆ ಕೇಳಲಿಕ್ಕೆ ನಿಮಗೆ ಮುಜುಗರ ಆಗಬಹುದು. ಆದ್ರೆ ಕ್ಷಮೆ ಕೇಳೋದ್ರಿಂದ ನೀವೊಬ್ಬ ಒಳ್ಳೇ ಫ್ರೆಂಡ್‌ ಆಗ್ತಿರ ಮತ್ತು ನಿಮ್ಮ ಫ್ರೆಂಡ್‌ಶೀಪ್‌ ಕೂಡ ಗಟ್ಟಿಯಾಗುತ್ತೆ.”—ಫಿಲಿಪ್‌.

ಕೆಂಡಲ್‌.

“ಕೆಲವೊಮ್ಮೆ ನೋವು ಮಾಡಿದ ವ್ಯಕ್ತಿ ಒವರಾಗಿ ವರ್ತಿಸಬಹುದು. ಹಾಗಂತ ಅದರ ಅರ್ಥ ನಾನು ಸರಿ ಆ ವ್ಯಕ್ತಿ ತಪ್ಪು ಅಂತಲ್ಲ. ಅವನು ಅಥವಾ ಅವಳು ಯಾಕೆ ಹಾಗೆ ವರ್ತಿಸಿದ್ರು ಅಂತ ನಾವು ತಿಳ್ಕೋಬೇಕು. ನನ್ನ ಮಾತಿಂದ ಅಥವಾ ನಡತೆಯಿಂದ ಇನ್ನೊಬ್ಬರಿಗೆ ನೋವಾಗಿದ್ರೆ ನಾನು ಕ್ಷಮೆ ಕೇಳಲೇಬೇಕು.”—ಕೆಂಡಲ್‌.

ಏನ್‌ ಕಲಿತ್ರಿ? ನಾನ್ಯಾಕೆ ಸ್ವಾರಿ ಕೇಳ್ಬೇಕು?

  • ಸ್ವಾರಿ ಕೇಳೋದು ಪ್ರೌಢತೆಯ ಲಕ್ಷಣ.

  • ಸ್ವಾರಿ ಕೇಳೋದ್ರಿಂದ ಶಾಂತಿಯಿಂದ ಇರೋಕೆ ಆಗುತ್ತೆ.

  • ಕ್ಷಮೆ ಕೇಳಿದ್ರೆ ನಿಮಗೆ ಹಾಯಿ ಅನಿಸುತ್ತೆ.

ಹೇಗೆ ಸ್ವಾರಿ ಕೇಳೋದು?

  • ನೇರವಾಗಿ ಕ್ಷಮೆ ಕೇಳಿ.

  • ಬೇಗನೇ ಕ್ಷಮೆ ಕೇಳಿ.

  • ಮನಸಾರೆ ಕ್ಷಮೆ ಕೇಳಿ.

a ಬೇರೆಯವರಿಗೆ ಸೇರಿದ ವಸ್ತುವನ್ನ ಅಥವಾ ಬೇರೆ ಯಾವುದನ್ನ ನೀವು ಹಾಳು ಮಾಡಿದ್ರೆ ನೀವು ಸ್ವಾರಿ ಹೇಳೋದು ಮಾತ್ರವಲ್ಲ ಅದರ ನಷ್ಟ ಅಥವಾ ಖರ್ಚನ್ನೂ ಕೊಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ