ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w26 ಏಪ್ರಿಲ್‌ ಪು. 32
  • ಬೈಬಲಲ್ಲಿರೋ ಪದ ಚಿತ್ರಗಳನ್ನ ಅರ್ಥಮಾಡ್ಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬೈಬಲಲ್ಲಿರೋ ಪದ ಚಿತ್ರಗಳನ್ನ ಅರ್ಥಮಾಡ್ಕೊಳ್ಳಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2026
w26 ಏಪ್ರಿಲ್‌ ಪು. 32

ಇದನ್ನ ಮಾಡಿ ನೋಡಿ!

ಬೈಬಲಲ್ಲಿರೋ ಪದ ಚಿತ್ರಗಳನ್ನ ಅರ್ಥಮಾಡ್ಕೊಳ್ಳಿ

ಬೈಬಲಲ್ಲಿ ನೂರಾರು ಪದ ಚಿತ್ರಗಳಿದೆ. ಆದ್ರೆ ತುಂಬ ಜನ ಅದನ್ನ ಅರ್ಥಮಾಡ್ಕೊಳ್ಳೋಕೆ ಕಷ್ಟಪಡ್ತಾರೆ. (ಮತ್ತಾ. 13:13) ಬೈಬಲಲ್ಲಿರೋ ಪದ ಚಿತ್ರಗಳ ನಿಜವಾದ ಅರ್ಥ ಏನು ಅಂತ ಅರ್ಥಮಾಡ್ಕೊಳ್ಳೋಕೆ ನಿಮಗೆ ಯಾವುದು ಸಹಾಯ ಮಾಡುತ್ತೆ? ಈ ಮುಂದಿನ ವಿಷ್ಯಗಳನ್ನ ಮಾಡಿ ನೋಡಿ:

  • ವಿಷ್ಯ ಮತ್ತು ಚಿತ್ರ ಯಾವುದು ಅಂತ ಗುರುತಿಸಿ. ಪದ ಚಿತ್ರಗಳು ಒಂದು ವಿಷ್ಯನ ಒಂದು ಚಿತ್ರಕ್ಕೆ ಹೋಲಿಸುತ್ತೆ. ಉದಾಹರಣೆಗೆ, ಪ್ರಕಟನೆ 3:3ರಲ್ಲಿ ಯೇಸು ಬರೋದನ್ನ (ವಿಷ್ಯ) ಕಳ್ಳ ಬರೋದಕ್ಕೆ (ಚಿತ್ರ) ಹೋಲಿಸಿದೆ.

  • ವಿಷ್ಯಕ್ಕೂ ಚಿತ್ರಕ್ಕೂ ಯಾವ ಹೋಲಿಕೆ ಇದೆ ಅಂತ ಯೋಚಿಸಿ. ಈ ವಿಷ್ಯನ ಈ ಚಿತ್ರಕ್ಕೆ ಯಾಕೆ ಹೋಲಿಸಿದ್ದಾರೆ, ಇವೆರಡರಲ್ಲಿ ಯಾವ ಹೋಲಿಕೆಗಳಿವೆ ಅಂತ ಯೋಚಿಸಿ.

  • ಪದ ಚಿತ್ರಗಳನ್ನ ಸರಿಯಾಗಿ ಅರ್ಥಮಾಡ್ಕೊಳ್ಳಿ. ವಿಷ್ಯ ಮತ್ತು ಚಿತ್ರಗಳಲ್ಲಿರೋ ಕೆಲವೊಂದು ಹೋಲಿಕೆಗಳನ್ನ ನೋಡಿ ಪದ ಚಿತ್ರಗಳನ್ನ ತಪ್ಪಾಗಿ ಅರ್ಥಮಾಡ್ಕೊಂಡು ಬಿಡಬಹುದು. ಮೇಲೆ ಹೇಳಿದ ಉದಾಹರಣೆಯಲ್ಲಿ, ಯೇಸು ಕದಿಯೋಕೆ ಬರ್ತಿಲ್ಲ. ಅದ್ರ ಬದ್ಲು ಆತನು ಕಳ್ಳನ ತರ ಬರ್ತಾನೆ ಅಂದ್ರೆ ದಿಢೀರ್‌ ಅಂತ, ಯಾರಿಗೂ ಹೇಳದೇ ಬರ್ತಾನೆ ಅಂತ ಆ ವಚನದ ಹಿನ್ನೆಲೆ ತೋರಿಸುತ್ತೆ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ