ಪರಿಚಯ
ಯುದ್ಧಗಳೇ ಇಲ್ಲದಿರೋ ಪ್ರಪಂಚದಲ್ಲಿ ಬದುಕೋಕೆ ನಿಮಗೆ ಇಷ್ಟ ಇದ್ಯಾ? ತುಂಬ ಜನ್ರಿಗೆ ಈ ತರ ಬದುಕಬೇಕು ಅನ್ನೋ ಕನಸಿದೆ. ಆದ್ರೆ ಇದು ಯಾವತ್ತೂ ನನಸಾಗಲ್ಲ ಅಂತ ಅಂದ್ಕೊಳ್ತಾರೆ. ಜನ ಯುದ್ಧಗಳನ್ನ ನಿಲ್ಲಿಸೋಕೆ ತುಂಬ ಪ್ರಯತ್ನ ಮಾಡಿದ್ದಾರೆ. ಆದ್ರೆ ಅವ್ರಿಂದ ಯಾಕೆ ನಿಲ್ಲಿಸೋಕೆ ಆಗ್ತಿಲ್ಲ ಅಂತ ಬೈಬಲ್ ಹೇಳುತ್ತೆ. ಇದಷ್ಟೇ ಅಲ್ಲ, ಇಡೀ ಪ್ರಪಂಚದಲ್ಲಿ ಆದಷ್ಟು ಬೇಗ ಯುದ್ಧಗಳು ನಿಂತುಹೋಗಿ ಎಲ್ಲಾ ಕಡೆ ಶಾಂತಿ ಇರುತ್ತೆ ಅಂತ ನಂಬೋಕೆ ಕಾರಣಗಳನ್ನೂ ಬೈಬಲ್ ಕೊಡುತ್ತೆ.
ಈ ಪತ್ರಿಕೆಯಲ್ಲಿ, “ಯುದ್ಧ” ಮತ್ತು “ಹೊಡೆದಾಟಗಳು” ಅಂತ ಹೇಳಿರೋದು ಎರಡು ದೇಶಗಳು ಅಥವಾ ಎರಡು ರಾಜಕೀಯ ಗುಂಪುಗಳು ಆಯುಧಗಳನ್ನ ಅಥವಾ ಅವ್ರ ಸೈನ್ಯನ ಬಳಸಿ ಹೊಡೆದಾಡೋದನ್ನ ಸೂಚಿಸುತ್ತೆ. ಈ ಪತ್ರಿಕೆಲಿ ಕೆಲವ್ರ ಹೆಸ್ರನ್ನ ಬದಲಾಯಿಸಲಾಗಿದೆ.