ನಮ್ಮ ಕ್ರೈಸ್ತ ಜೀವನ
“ಯಾವತ್ತೂ ಚಿಂತೆಮಾಡಬೇಡಿ”
ಯೆಹೋವ ದೇವ್ರು ಇಸ್ರಾಯೇಲ್ಯರ ಕಾಲದಲ್ಲಿದ್ದ ಬಡವರಿಗೆ ಸಹಾಯ ಮಾಡಿದ್ರು. ಈಗ್ಲೂ ಬಡವರಿಗೆ ಹೇಗೆ ಸಹಾಯ ಮಾಡ್ತಾರೆ?
ದುಡ್ಡಿನ ಹಿಂದೆ ಓಡಬೇಡಿ ಅಂತ ಹೇಳ್ಕೊಟ್ಟಿದ್ದಾರೆ.—ಲೂಕ 12:15; 1ತಿಮೊ 6:6-8.
ಅವರ ಸ್ವಾಭಿಮಾನಕ್ಕೆ ಧಕ್ಕೆ ಬರದೆ ಇರೋ ತರ ಸಹಾಯ ಮಾಡಿದ್ದಾರೆ.—ಯೋಬ 34:19.
ಕಷ್ಟಪಟ್ಟು ದುಡಿಬೇಕು, ಕೆಟ್ಟ ಚಟಗಳನ್ನ ಬೆಳೆಸ್ಕೊಬಾರದು ಅಂತ ಕಲಿಸಿದ್ದಾರೆ.—ಜ್ಞಾನೋ 14:23; 20:1; 2ಕೊರಿಂ 7:1.
ಅವರನ್ನ ಪ್ರೀತಿಯ ಸಹೋದರ ಕುಟುಂಬಕ್ಕೆ ಸೇರಿಸಿದ್ದಾರೆ.—ಯೋಹಾ 13:35; 1ಯೋಹಾ 3:17, 18.
ಅವರಿಗೆ ನಿರೀಕ್ಷೆಯ ಬೆಳಕನ್ನ ಕೊಟ್ಟಿದ್ದಾರೆ.—ಕೀರ್ತ 9:18; ಯೆಶಾ 65:21-23.
ನಮ್ಗೆ ಎಂಥ ಕಷ್ಟ ಬಂದ್ರೂ ಪರ್ವಾಗಿಲ್ಲ, ನಾವು ಚಿಂತೆ ಮಾಡಲ್ಲ. (ಯೆಶಾ 30:15) ಯಾಕಂದ್ರೆ ಎಲ್ಲಿ ತನಕ ದೇವರ ಆಳ್ವಿಕೆಗೆ ಮೊದಲ ಸ್ಥಾನ ಕೊಡ್ತೀವೋ ಅಲ್ಲಿ ತನಕ ನಮ್ಗೆ ಬೇಕಾಗಿರೋ ವಿಷ್ಯಗಳನ್ನ ಕೊಟ್ಟು ದೇವರೇ ನೋಡ್ಕೊತಾರೆ.—ಮತ್ತಾ 6:31-33.
ನೀವು ಪ್ರೀತಿ ತೋರಿಸಿ . . . ಬಡತನವಿದ್ದರೂ - ಕಾಂಗೋ ಅನ್ನೋ ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ಅಧಿವೇಶನ ನಡೀತಿದ್ದ ಜಾಗದಲ್ಲಿರೋ ನಮ್ಮ ಸಹೋದರರು ದೂರದಿಂದ ಬಂದಿದ್ದ ಸಹೋದರರನ್ನ ಹೇಗೆ ಪ್ರೀತಿಯಿಂದ ನೋಡ್ಕೊಂಡ್ರು?
ಈ ವಿಡಿಯೋದಲ್ಲಿ ಬಡವರ ಮೇಲೆ ದೇವರಿಟ್ಟಿರೋ ಪ್ರೀತಿ ಬಗ್ಗೆ ಏನು ಕಲಿತ್ರಿ?
ನಮ್ಮತ್ರ ಸ್ವಲ್ವನೇ ಇದ್ರೂ ಬೇರೆಯವರಿಗೆ ಕೊಡೋ ವಿಷ್ಯದಲ್ಲಿ ಯೆಹೋವ ದೇವ್ರನ್ನ ಹೇಗೆ ಅನುಕರಿಸಬಹುದು?