ನಮ್ಮ ಕ್ರೈಸ್ತ ಜೀವನ
ಯೆಹೋವನ ಚಿತ್ತ ಏನು?
ಒಂದು ನಿರ್ಣಯ ಮಾಡೋ ಮುಂಚೆ, ಅದು ಚಿಕ್ಕದಿರಲಿ ದೊಡ್ಡದಿರಲಿ, ‘ಇದರ ಬಗ್ಗೆ ಯೆಹೋವನ ಚಿತ್ತ ಏನು’ ಅಂತ ಪ್ರಶ್ನಿಸಿಕೊಳ್ಳುತ್ತೇವಾ? ಯೆಹೋವನ ಮನಸ್ಸಲ್ಲಿ ಇರುವುದನ್ನೆಲ್ಲ ತಿಳುಕೊಳ್ಳುವುದಕ್ಕೆ ಆಗಲ್ಲ. ಆದರೆ ‘ಸಕಲ ಸತ್ಕಾರ್ಯಕ್ಕೆ’ ಸನ್ನದ್ಧರಾಗಲು ಬೇಕಾಗಿರುವಷ್ಟು ಮಾಹಿತಿ ಬೈಬಲಲ್ಲಿದೆ. (2ತಿಮೊ 3:16, 17; ರೋಮ 11:33, 34) ಯೆಹೋವನ ಚಿತ್ತ ಏನೆಂದು ಯೇಸುಗೆ ಚೆನ್ನಾಗಿ ಗೊತ್ತಿತ್ತು. ಆತನು ಯಾವಾಗಲೂ ಅದಕ್ಕನುಸಾರ ನಡೆದನು. (ಯೋಹಾ 4:34) ಯೇಸುವಿನಂತೆ ನಾವು ಸಹ ಯೆಹೋವನಿಗೆ ಇಷ್ಟವಾಗುವ ನಿರ್ಣಯಗಳನ್ನು ಮಾಡಲು ಸರ್ವಪ್ರಯತ್ನ ಮಾಡೋಣ್ವಾ?—ಯೋಹಾ 8:28, 29; ಎಫೆ 5:15-17.
ಯೆಹೋವನ ಚಿತ್ತವನ್ನು ಗ್ರಹಿಸುತ್ತಾ ಇರಿ (ಯಾಜ 19:18) ಎಂಬ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
ನಾವು ಬೈಬಲ್ ತತ್ವಗಳನ್ನು ಯಾಕೆ ಯಾವಾಗಲೂ ಅನ್ವಯಿಸಿಕೊಳ್ಳಬೇಕು?
ಸಂಗೀತ ಆರಿಸಿಕೊಳ್ಳುವಾಗ ಯಾವ ತತ್ವಗಳನ್ನು ಅನ್ವಯಿಸಬೇಕು?
ಬಟ್ಟೆ ಮತ್ತು ಅಲಂಕಾರದ ವಿಷಯದಲ್ಲಿ ಯಾವ ತತ್ವಗಳನ್ನು ಅನ್ವಯಿಸಬೇಕು?
ಇನ್ನೂ ಯಾವ ಕ್ಷೇತ್ರಗಳಲ್ಲಿ ನಾವು ಬೈಬಲ್ ತತ್ವಗಳನ್ನು ಅನ್ವಯಿಸಬೇಕು?
ಯೆಹೋವನ ಚಿತ್ತವನ್ನು ಗ್ರಹಿಸುವ ಸಾಮರ್ಥ್ಯವನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು?
ನಾನು ಮಾಡುವ ನಿರ್ಣಯಗಳು ಯೆಹೋವನೊಟ್ಟಿಗಿರುವ ನನ್ನ ಸಂಬಂಧದ ಬಗ್ಗೆ ಏನು ತೋರಿಸಿಕೊಡುತ್ತವೆ?