ಬೈಬಲಿನಲ್ಲಿರುವ ರತ್ನಗಳು | ಅ. ಕಾರ್ಯಗಳು 4-5
ಅವರು ದೇವರ ವಾಕ್ಯವನ್ನು ಧೈರ್ಯದಿಂದ ಮಾತಾಡಿದರು
ಅಪೊಸ್ತಲರು ಬೋಧಕರಾಗಲು ಅರ್ಹತೆ ಪಡೆದದ್ದು ಹೇಗೆ? ಅವರು ನಿಶ್ಚಿತತೆಯಿಂದ ಮತ್ತು ಧೈರ್ಯದಿಂದ ಮಾತಾಡಲು ಯಾವುದು ಸಹಾಯ ಮಾಡಿತು? ಅವರು ಮಹಾಬೋಧಕನಾದ “ಯೇಸುವಿನೊಂದಿಗೆ ಇರುತ್ತಿದ್ದರು” ಮತ್ತು ಆತನಿಂದ ಕಲಿತಿದ್ದರು. (ಅಕಾ 4:13) ಒಳ್ಳೇ ಬೋಧಕರಾಗಲು ಸಹಾಯ ಮಾಡುವ ಯಾವ ಪಾಠಗಳನ್ನು ನಾವು ಯೇಸುವಿನಿಂದ ಕಲಿಯಬಲ್ಲೆವು?