ನಮ್ಮ ಕ್ರೈಸ್ತ ಜೀವನ
ಕ್ರಿಸ್ತನನ್ನು ಹಿಂಬಾಲಿಸಲು ನಿಮ್ಮ ಮಕ್ಕಳಿಗೆ ಸಹಾಯ ಮಾಡಿ
ಮಕ್ಕಳು ‘ತಮ್ಮನ್ನೇ ನಿರಾಕರಿಸಿ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ಯೇಸುವನ್ನು ಹಿಂಬಾಲಿಸುವುದನ್ನು’ ನೋಡುವಾಗ ಹೆತ್ತವರಿಗೆ ಅಪಾರ ಸಂತೋಷ ಸಿಗುತ್ತದೆ. (ಮಾರ್ಕ 8:34; 3ಯೋಹಾ 4) ಯೇಸುವನ್ನು ಹಿಂಬಾಲಿಸಲು, ತಮ್ಮ ಜೀವನವನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಲು ಹೆತ್ತವರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು? ಮಕ್ಕಳು ದೀಕ್ಷಾಸ್ನಾನ ತೆಗೆದುಕೊಳ್ಳಲು ಸಿದ್ಧರಾಗಿದ್ದಾರೆ ಎಂದು ಯಾವ ಕೆಲವು ವಿಷಯಗಳು ತೋರಿಸುತ್ತವೆ?
ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು ಪುಸ್ತಕದ ಪುಟ 165-166ರಲ್ಲಿರುವ “ಹೆತ್ತವರಿಗೆ ಕಿವಿಮಾತು” ಎಂಬ ಭಾಗವನ್ನು ಮೊದಲೇ ಓದಿ ಬನ್ನಿ. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:
ಯಾರು ಯೇಸುವಿನ ಶಿಷ್ಯರಾಗಬಹುದು?
ಹೆತ್ತವರು ಮಕ್ಕಳಿಗೆ ಏನು ಕಲಿಸಬೇಕು?
ಮಕ್ಕಳು ದೀಕ್ಷಾಸ್ನಾನಕ್ಕೆ ಅರ್ಹರಾಗಲು ಈ ಕೆಳಗಿನ ವಚನಗಳನ್ನು ಅವರ ವಯಸ್ಸಿಗನುಸಾರ ಹೇಗೆ ಅನ್ವಯಿಸಿಕೊಳ್ಳಬಹುದು?