ಡಿಸೆಂಬರ್ 14ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 14ರ ವಾರ
ಗೀತೆ 5 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 85 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 2 ಪೂರ್ವಕಾಲವೃತ್ತಾಂತ 15–19 (8 ನಿ.)
ನಂ. 1: 2 ಪೂರ್ವಕಾಲವೃತ್ತಾಂತ 16:1-9 (3 ನಿಮಿಷದೊಳಗೆ)
ನಂ. 2: ಭೂಜೀವಿತವು ಅಪಾರ ಸಂಖ್ಯೆಯಲ್ಲಿರುವ “ಬೇರೆ ಕುರಿ”ಗಳಿಗೆ ವಾಗ್ದಾನಿಸಲ್ಪಟ್ಟಿದೆ—ಬೈಬಲ್ ವಿಷಯಗಳು 7 ಸಿ (5 ನಿ.)
ನಂ. 3: ಏಸಾವ—ವಿಷಯ: ನಾವು ಮಾಡುವ ತೀರ್ಮಾನಗಳು ಪವಿತ್ರ ವಿಷಯಗಳನ್ನು ಗೌರವಿಸುತ್ತೇವಾ ಎಂದು ತೋರಿಸುತ್ತದೆ—ಆದಿ 25:25-34; ಇಬ್ರಿ 12:16. (5 ನಿ.)
ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: “ನಾವು ಅನೇಕ ಸಂಕಟಗಳನ್ನು ತಾಳಿ ದೇವರ ರಾಜ್ಯವನ್ನು ಪ್ರವೇಶಿಸಬೇಕು.”—ಅಪೊಸ್ತಲರ ಕಾರ್ಯಗಳು 14:22.
30 ನಿ: “ನಿಮ್ಮ ಮಕ್ಕಳು ಸಿದ್ಧರಾಗಿದ್ದಾರಾ?” ಪ್ರಶ್ನೋತ್ತರ. ಶಾಲೆಯಲ್ಲಿ ಕ್ರೈಸ್ತರು ಎದುರಿಸುವ ಕೆಲವು ಸವಾಲುಗಳನ್ನು ತಿಳಿಸುವಂತೆ ಪೋಷಕರಿಗೆ ಮತ್ತು ಮಕ್ಕಳಿಗೆ ಹೇಳಿ. ಮೂರನೇ ಪ್ಯಾರವನ್ನು ಚರ್ಚಿಸಿದ ನಂತರ, ಒಂದು ಪ್ರ್ಯಾಕ್ಟೀಸ್ ಸೆಷನಿನ ಅಭಿನಯವಿರಲಿ. ಅದರಲ್ಲಿ, ತಂದೆ ಶಿಕ್ಷಕನಂತೆ ನಟಿಸಲಿ. ಮಗ/ಮಗಳು ಬೈಬಲ್ ವಿರುದ್ಧವಾದ ಒಂದು ಶಾಲಾ ಚಟುವಟಿಕೆ ಅಥವಾ ಕೆಲಸದಲ್ಲಿ ತಾನೇಕೆ ಭಾಗವಹಿಸುವುದಿಲ್ಲ ಎಂದು ವಿವರಿಸಲಿ.
ಗೀತೆ 51 ಮತ್ತು ಪ್ರಾರ್ಥನೆ