ಮೇ 4ರ ವಾರಕ್ಕಾಗಿರುವ ಶೆಡ್ಯೂಲ್
ಮೇ 4ರ ವಾರ
ಗೀತೆ 34 ಮತ್ತು ಪ್ರಾರ್ಥನೆ
ಬೈಬಲ್ ಕಥೆಗಳು, ಕಥೆ 47 (30 ನಿ.)
ಬೈಬಲ್ ವಾಚನ: 2 ಸಮುವೇಲ 1-3 (8 ನಿ.)
ನಂ. 1: 2 ಸಮುವೇಲ 2:24-32 (3 ನಿಮಿಷದೊಳಗೆ)
ನಂ. 2: ಬತ್ಷೆಬೆ—ವಿಷಯ: ತಪ್ಪು ಮಾಡಿದವರು ಪಶ್ಚಾತ್ತಾಪಪಟ್ಟರೆ ದೇವರು ಕ್ಷಮಿಸುತ್ತಾನೆ—2ಸಮು 11:1–12:25; 1ಅರ 1:5-37; 2:13-25 (5 ನಿ.)
ನಂ. 3: ದೇವರು ಕೊಟ್ಟ ಮಾತು ಬೇಗ ನಿಜವಾಗುತ್ತದೆ—ಕಿರುಪರಿಚಯ ಪುಟ 16 ಪ್ಯಾರ 4-ಪುಟ 17 ಪ್ಯಾರ 1 (5 ನಿ.)
ಈ ತಿಂಗಳ ಮುಖ್ಯ ವಿಷಯ: ‘ನಿಮ್ಮ ಸಮಯವನ್ನು ಸದುಪಯೋಗಿಸಿಕೊಳ್ಳುವ’ ಮೂಲಕ ವಿವೇಕಿಗಳಂತೆ ನಡೆದುಕೊಳ್ಳಿರಿ.—ಎಫೆ. 5:15, 16.
10 ನಿ: ಸ್ಥಳೀಯ ಅಗತ್ಯಗಳು. ಮಾದರಿ ನಿರೂಪಣೆಯ ಪ್ರಾತ್ಯಕ್ಷಿಕೆಯನ್ನು ಒಳಗೂಡಿಸಬಹುದು.
5 ನಿ: ಮೇ ಮತ್ತು ಜೂನ್ ತಿಂಗಳ ಸಾಹಿತ್ಯ ನೀಡುವಿಕೆ. ಚರ್ಚೆ. ಆ ತಿಂಗಳಲ್ಲಿ ನೀಡಲಾಗುವ ಸಾಹಿತ್ಯದ ವೈಶಿಷ್ಟ್ಯಗಳನ್ನು ಪರಿಗಣಿಸಿ. ಒಂದು ಪ್ರಾತ್ಯಕ್ಷಿಕೆ ಇರಲಿ.
15 ನಿ: ಅಪರೂಪಕ್ಕೊಮ್ಮೆ ಸೇವೆ ಮಾಡಿರುವ ಕ್ಷೇತ್ರಗಳಲ್ಲಿ ಸಾರಿ, ಸಮಯವನ್ನು ಸದುಪಯೋಗಿಸಿ! ಹಿರಿಯನಿಂದ ಚರ್ಚೆ. ಕಳೆದ ಸೇವಾ ವರ್ಷ ವಿಶೇಷ ಅಭಿಯಾನದ ಸಮಯದಲ್ಲಿ, ಅಪರೂಪಕ್ಕೊಮ್ಮೆ ಸೇವೆ ಮಾಡಿರುವ ಕ್ಷೇತ್ರಗಳಲ್ಲಿ ಸುವಾರ್ತೆ ಸಾರಿದ ಹಿರಿಯನು ಇದನ್ನು ನಡೆಸಿದರೆ ಇನ್ನೂ ಉತ್ತಮವಾಗಿರುತ್ತದೆ. ದೂರದ ಕ್ಷೇತ್ರದಲ್ಲಿ ಸಾರುತ್ತಿರುವುದು—ಆಸ್ಟ್ರೇಲಿಯ ಎಂಬ ವಿಡಿಯೋವನ್ನು ತೋರಿಸಿ. (jw.org/kn ವೆಬ್ಸೈಟಿನಲ್ಲಿ ನಮ್ಮ ಬಗ್ಗೆ > ಚಟುವಟಿಕೆಗಳು ನೋಡಿ.) ಕಳೆದ ಸೇವಾ ವರ್ಷ ವಿಶೇಷ ಅಭಿಯಾನದ ಸಮಯದಲ್ಲಿ ಅಂಥ ಕ್ಷೇತ್ರಗಳಲ್ಲಿ ಸುವಾರ್ತೆ ಸಾರಿದ ಒಬ್ಬ ಪ್ರಚಾರಕನನ್ನು ಸಂದರ್ಶಿಸಿ. ಈ ರೀತಿ ಸೇವೆ ಮಾಡಿದ್ದರಿಂದ ಅವರ ಕುಟುಂಬದ ಮೇಲೆ, ಅವರ ಸೇವೆಯ ಮೇಲೆ ಮತ್ತು ಅವರ ಆಧ್ಯಾತ್ಮಿಕತೆಯ ಮೇಲೆ ಯಾವ ಒಳ್ಳೆಯ ಪ್ರಭಾವ ಬೀರಿತು? ಅಂಥ ಸೇವಾಕ್ಷೇತ್ರದಲ್ಲಿ ಸಾರಲು ಯಾವೆಲ್ಲ ಯೋಜನೆಗಳನ್ನು ಮಾಡಿದರು ಎಂದು ಕೇಳಿ. ಇಂಥ ಕ್ಷೇತ್ರದಲ್ಲಿ ಯಾರಾದರೂ ಸುವಾರ್ತೆ ಸಾರಲು ಬಯಸಿದಲ್ಲಿ ಹಿರಿಯರು ಸಹಾಯ ಮಾಡಲು ಸಿದ್ಧರಿದ್ದಾರೆ ಎಂದು ತಿಳಿಸಿ. ನಮಗಿರುವ ಸಮಯವನ್ನು ಸದುಪಯೋಗಿಸುವ ಅತ್ಯುತ್ತಮ ವಿಧ ಅಪರೂಪಕ್ಕೊಮ್ಮೆ ಸೇವೆ ಮಾಡಿರುವ ಕ್ಷೇತ್ರಗಳಲ್ಲಿ ಸಾರುವುದಾಗಿದೆ ಎಂದು ಒತ್ತಿ ಹೇಳಿ.
ಗೀತೆ 29 ಮತ್ತು ಪ್ರಾರ್ಥನೆ