ಡಿಸೆಂಬರ್ 29ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 29ರ ವಾರ
ಗೀತೆ 130 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 26 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 12-15 (10 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ (20 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನಮಗೆ ಕೊಡಲಾಗಿರುವ ಒಳ್ಳೆಯ ಬೊಕ್ಕಸದಿಂದ “ಒಳ್ಳೆಯ ವಿಷಯಗಳನ್ನು” ಹೊರತರೋಣ.—ಮತ್ತಾ. 12:35ಎ.
20 ನಿ: ಬೈಬಲ್ ವಿದ್ಯಾರ್ಥಿಗಳಿಗೆ ಮತ್ತು ಸತ್ಯವನ್ನು ಕಲಿಯುತ್ತಿರುವ ನಿಮ್ಮ ಮಕ್ಕಳಿಗೆ ಹಂತ ಹಂತವಾಗಿ “ಒಳ್ಳೆಯ ವಿಷಯಗಳನ್ನು” ಕಲಿಸಿರಿ. (ಮತ್ತಾ. 12:35ಎ) ಚರ್ಚೆ. 1 ಕೊರಿಂಥ 13:11; 1 ಪೇತ್ರ 2:2, 3ನ್ನು ಉಪಯೋಗಿಸುತ್ತಾ ನಾವು ಬೈಬಲ್ ವಿದ್ಯಾರ್ಥಿ ಮತ್ತು ಸತ್ಯವನ್ನು ಕಲಿಯುತ್ತಿರುವ ನಮ್ಮ ಮಕ್ಕಳಿಂದ ಏನನ್ನು ನಿರೀಕ್ಷಿಸಬಹುದೆಂದು ತಿಳಿಸಿ. ‘ವಾಕ್ಯಕ್ಕೆ ಸಂಬಂಧಿಸಿದ ಹಾಲನ್ನು ಸವಿದು ನೋಡುವುದು’ ಎಂದರೇನು, ಇದನ್ನು ಸವಿದು ನೋಡಲು ನಮ್ಮ ಮಕ್ಕಳಿಗೆ ಮತ್ತು ಬೈಬಲ್ ವಿದ್ಯಾರ್ಥಿಗಳಿಗೆ ಹೇಗೆ ಸಹಾಯ ಮಾಡಬಹುದು ಎಂದು ವಿವರಿಸಿ. ಮಾರ್ಕ 4:28ರಲ್ಲಿರುವ ತತ್ವವನ್ನು ವಿವರಿಸಿ. (ಕಾವಲಿನಬುರುಜು, ಡಿಸೆಂಬರ್ 15, 2014, ಪುಟ 12, ಪ್ಯಾರ 6-8ನ್ನು ನೋಡಿ.) ಒಬ್ಬ ಅನುಭವಿ ಪ್ರಚಾರಕನ ಅಥವಾ ಹೆತ್ತವರ ಸಂದರ್ಶನ ಮಾಡಿ, ತಮ್ಮ ಬೈಬಲ್ ವಿದ್ಯಾರ್ಥಿ ಅಥವಾ ಮಗು ಆಧ್ಯಾತ್ಮಿಕ ಪ್ರಗತಿಯನ್ನು ಮಾಡಲು ಹೇಗೆ ಸಹಾಯ ಮಾಡಿದರೆಂದು ಅವರನ್ನು ಕೇಳಿ.—ಎಫೆಸ 4:13-15; 2014, ಮೇ ತಿಂಗಳ ನಮ್ಮ ರಾಜ್ಯ ಸೇವೆಯಲ್ಲಿರುವ ಪ್ರಶ್ನಾ ಚೌಕವನ್ನು ನೋಡಿ.
10 ನಿ: “ನಮ್ಮಲ್ಲಿರುವ “ಒಳ್ಳೆಯ ವಿಷಯಗಳನ್ನು” ಹಂಚಿಕೊಳ್ಳೋಣ. (ಮತ್ತಾ. 12:35ಎ).” ಚರ್ಚೆ. ಅತಿಥಿಸತ್ಕಾರ ತೋರಿಸಿದ್ದರಿಂದ ಕೆಲವರಿಗೆ ಯಾವ ಅನುಭವ ಅಥವಾ ಪ್ರಯೋಜನಗಳಾಗಿವೆ? ಇತರರಿಗೆ ಅದರಲ್ಲೂ ಮುಖ್ಯವಾಗಿ ಪೂರ್ಣ ಸಮಯ ಸೇವೆಯಲ್ಲಿರುವವರಿಗೆ ಹೇಗೆ ಅತಿಥಿಸತ್ಕಾರ ತೋರಿಸಬಹುದು ಎಂದು ಸಭಿಕರನ್ನು ಕೇಳಿ. ಪ್ರತಿಯೊಬ್ಬ ಅತಿಥಿ ಭಾಷಣಕಾರನಿಗೆ ಊಟವನ್ನು ಕೊಡಲು ಸ್ಥಳೀಯವಾಗಿ ಮಾಡಲಾಗಿರುವ ಏರ್ಪಾಡಿನ ಕುರಿತು ತಿಳಿಸಿ.
ಗೀತೆ 124 ಮತ್ತು ಪ್ರಾರ್ಥನೆ