ಡಿಸೆಂಬರ್ 8ರ ವಾರಕ್ಕಾಗಿರುವ ಶೆಡ್ಯೂಲ್
ಡಿಸೆಂಬರ್ 8ರ ವಾರ
ಗೀತೆ 43 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಬೈಬಲ್ ಕಥೆಗಳು, ಕಥೆ 21, 22 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 1-5 (10 ನಿ.)
ನಂ. 1: ಯೆಹೋಶುವ 1:1-18 (4 ನಿಮಿಷದೊಳಗೆ)
ನಂ. 2: ದೇವರ ಅಸ್ತಿತ್ವ—ಬೈಬಲ್ ವಿಷಯಗಳು 27 ಬಿ (5 ನಿ.)
ನಂ. 3: ಹೊಸ ವಿಧದ ಆಹಾರ—ಬೈಬಲ್ ಕಥೆಗಳು, ಕಥೆ 34 (5 ನಿ.)
❑ ಸೇವಾ ಕೂಟ:
ಈ ತಿಂಗಳ ಮುಖ್ಯ ವಿಷಯ: ನಮಗೆ ಕೊಡಲಾಗಿರುವ ಒಳ್ಳೆಯ ಬೊಕ್ಕಸದಿಂದ “ಒಳ್ಳೆಯ ವಿಷಯಗಳನ್ನು” ಹೊರತರೋಣ.—ಮತ್ತಾ. 12:35ಎ.
10 ನಿ: ಈ ತಿಂಗಳಲ್ಲಿ ನಮಗೆ ಸಿಗಲಿರುವ “ಒಳ್ಳೆಯ ವಿಷಯಗಳು.” ಭಾಷಣ. ಈ ತಿಂಗಳ ಮುಖ್ಯ ವಿಷಯವನ್ನು ಒತ್ತಿ ಹೇಳಿ. (ಮತ್ತಾ. 12:35ಎ) ನಮಗೆ ಸತ್ಯವನ್ನು ಕಲಿಸಿದವರಿಂದ ನಾವು ಆಧ್ಯಾತ್ಮಿಕ ಸಂಪತ್ತನ್ನು ಪಡೆದೆವು. (ಕಾವಲಿನಬುರುಜು, ಏಪ್ರಿಲ್ 1, 2002 ಪು. 16, ಪ್ಯಾರ 5-7ನ್ನು ನೋಡಿ.) ಅದೇ ರೀತಿ, ನಾವು ಸಹ ನಮ್ಮಲ್ಲಿರುವ “ಒಳ್ಳೆಯ ವಿಷಯಗಳನ್ನು” ಇತರರೊಂದಿಗೆ ಹಂಚಿಕೊಳ್ಳಬೇಕು. (ಗಲಾ. 6:6) ಈ ತಿಂಗಳ ಸೇವಾ ಕೂಟಗಳಲ್ಲಿ ಸಿಗಲಿರುವ ‘ಒಳ್ಳೆಯ ವಿಷಯಗಳ’ ಬಗ್ಗೆ ಆಸಕ್ತಿ ಮೂಡಿಸಿ. ಬೈಬಲ್ ಸತ್ಯವನ್ನು ಕಲಿಸುವುದರಲ್ಲಿ ನಿಪುಣರಾಗಲು ಈ ಕೂಟಗಳಿಂದ ನಮಗೆ ಸಹಾಯ ಸಿಗುತ್ತದೆ.
20 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಸಿಹಿಸುದ್ದಿ ಕಿರುಹೊತ್ತಗೆಯಿಂದ ಅಧ್ಯಯನ ಮಾಡುವುದು ಹೇಗೆಂದು ತೋರಿಸಿ.” ಚರ್ಚೆ. ಒಬ್ಬ ನುರಿತ ಪ್ರಚಾರಕ ಅಥವಾ ಪಯನೀಯರ್ ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಸಿಹಿಸುದ್ದಿ ಕಿರುಹೊತ್ತಗೆಯಿಂದ ಬೈಬಲ್ ಅಧ್ಯಯನ ಮಾಡುವ ಪ್ರಾತ್ಯಕ್ಷಿಕೆಯಿರಲಿ.
ಗೀತೆ 96 ಮತ್ತು ಪ್ರಾರ್ಥನೆ