ಆಗಸ್ಟ್ 11ರ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 11ರ ವಾರ
ಗೀತೆ 116 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 20-22 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅರಣ್ಯಕಾಂಡ 7-9 (10 ನಿ.)
ನಂ. 1: ಅರಣ್ಯಕಾಂಡ 9:9-23 (4 ನಿಮಿಷದೊಳಗೆ)
ನಂ. 2: ಆಧ್ಯಾತ್ಮಿಕ ವಾಸಿಮಾಡುವಿಕೆಯಲ್ಲಿ ಶಾಶ್ವತ ಪ್ರಯೋಜನಗಳಿವೆ—ಬೈಬಲ್ ವಿಷಯಗಳು 34 ಎ (5 ನಿ.)
ನಂ. 3: ದೇವರಿಂದ ಕಳ್ಳತನ ಮಾಡಿದರೆ ಪರಿಣಾಮ ಭೀಕರವಾಗಿರುತ್ತೆ ಅಂತ ಆಕಾನನಿಂದ ಕಲಿಯಬಹುದು—ಯೆಹೋ 7:4-26 (5 ನಿ.)
❑ ಸೇವಾ ಕೂಟ:
5 ನಿ: “1914-2014: ದೇವರ ರಾಜ್ಯದ ಆಳ್ವಿಕೆಯ ಶತಮಾನೋತ್ಸವ!” ಚರ್ಚೆ. ಈ ಪುಟದ ಮೇಲ್ಭಾಗದಲ್ಲಿರುವ ಪ್ಯಾರ ಓದಿಸಿ. ಈ ತಿಂಗಳ ಸೇವಾ ಕೂಟದ ಭಾಗಗಳಲ್ಲಿ ದೇವರ ರಾಜ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕ್ಷೇತ್ರ ಸೇವೆಗಾಗಿ ಮಾಡಲಾಗಿರುವ ಸ್ಥಳೀಯ ಏರ್ಪಾಡುಗಳ ಕುರಿತು ತಿಳಿಸಿ.
10 ನಿ: “ವೆಬ್ಸೈಟ್ ಕರಪತ್ರವನ್ನು ಉಪಯೋಗಿಸಿ.” ಕರಪತ್ರದಲ್ಲಿರುವ ವಿಷಯವನ್ನು ಚರ್ಚಿಸಿ. ಪ್ರಚಾರಕನೊಬ್ಬನು ಈ ಕರಪತ್ರವನ್ನು ಕೊಡುವ ಮತ್ತು ತನ್ನ ಎಲೆಕ್ಟ್ರಾನಿಕ್ ಸಾಧನವನ್ನು ಬಳಸಿ jw.org ವೆಬ್ಸೈಟನ್ನು ಪರಿಚಯಿಸುವ ಪ್ರಾತ್ಯಕ್ಷಿಕೆ ಇರಲಿ.
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ದೇವರ ರಾಜ್ಯದ ಕುರಿತು ದೃಢವಿಶ್ವಾಸದಿಂದ ಮಾತಾಡಿ.” ಚರ್ಚೆ. ಈ ಮುಂದಿನ ಸನ್ನಿವೇಶದ ಪ್ರಾತ್ಯಕ್ಷಿಕೆಯಲ್ಲಿ ಇಬ್ಬರು ಪ್ರಚಾರಕರಿರಲಿ. ಅಂಗಡಿಯೊಂದರಲ್ಲಿ ಪ್ರಚಾರಕನೊಬ್ಬ ಕ್ಯೂನಲ್ಲಿ ನಿಂತಿದ್ದಾನೆ. ಅವನ ಹಿಂದೆ ನಿಂತ ವ್ಯಕ್ತಿ ವಾರ್ತಾಪತ್ರಿಕೆಯನ್ನು ನೋಡುತ್ತಾ ಹೀಗೆ ಹೇಳುತ್ತಾನೆ: “ಎಷ್ಟು ವಿಚಿತ್ರ! ಎಲ್ಲರೂ ತಮ್ಮ ಕಷ್ಟಗಳಿಗೆ ಪರಿಹಾರ ಇದೆ ಅಂತ ಅನ್ಕೋತಾರೆ. ಆದರೆ ಪರಿಸ್ಥಿತಿ ಇನ್ನೂ ಹದಗೆಟ್ಟು ಹೋಗ್ತಿದೆಯೇ ಹೊರತು ಸುಧಾರಣೆ ಅನ್ನೋದೇ ಕಾಣ್ತಾ ಇಲ್ಲ.” ಪ್ರಚಾರಕನು ತನ್ನಷ್ಟಕ್ಕೆ ತಾನೇ, ‘ನಾನು ಅವರ ಹತ್ರ ಮಾತಾಡ್ಲಾ? ನಾನು ದೇವರ ರಾಜ್ಯದ ಬಗ್ಗೆ ಅವರ ಹತ್ರ ಮಾತಾಡ್ಲೇಬೇಕು’ ಅಂತ ಹೇಳಿಕೊಳ್ಳುತ್ತಾ ಆ ವ್ಯಕ್ತಿಗೆ “ಹೌದು, ಎಲ್ಲ ಕಡೆ ಕೆಟ್ಟ ವಿಷಯಗಳೇ ನಡೀತಾ ಇವೆ. ಆದರೆ ಇದರ ಪರಿಹಾರವನ್ನು ತಿಳಿಸುವ ಒಂದು ಕರಪತ್ರವನ್ನು ನಿಮಗೆ ಕೊಡಬಹುದಾ? ಈ ಕರಪತ್ರದಲ್ಲಿ ತಿಳಿಸಲಾಗಿರುವ ವೆಬ್ಸೈಟ್ನ ಮೂಲಕ ನಾನು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳ್ಕೊಂಡೆ” ಎಂದು ಹೇಳುತ್ತಾನೆ. ಕರಪತ್ರದಿಂದ ಒಂದು ಅಂಶವನ್ನು ಪ್ರಚಾರಕನು ಒತ್ತಿ ಹೇಳುತ್ತಾನೆ, ಆ ವ್ಯಕ್ತಿಯು ಹೆಚ್ಚಿನ ವಿಷಯ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾನೆ.
ಗೀತೆ 92 ಮತ್ತು ಪ್ರಾರ್ಥನೆ