ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಜುಲೈ: ದೇವರಿಂದ ನಿಮಗೊಂದು ಸಿಹಿಸುದ್ದಿ! ಅಥವಾ ಕೆಳಕಂಡ 32 ಪುಟಗಳ ಕಿರುಹೊತ್ತಿಗೆಗಳು: ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ, ಬೈಬಲ್ ಅದರಲ್ಲಿ ಏನಿದೆ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಆಗಸ್ಟ್: ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಎಂಬ ಕರಪತ್ರದ ವಿಶೇಷ ಅಭಿಯಾನ. ಮನೆಯವನಿಗೆ ಇಂಟರ್‌ನೆಟ್ ಬಳಸಲು ಗೊತ್ತಿಲ್ಲದಿದ್ದಲ್ಲಿ, ಈ ಕೆಳಕಂಡ ಕರಪತ್ರಗಳನ್ನು ನೀಡಿ: ಸತ್ತವರು ಮತ್ತೆ ಬದುಕಿ ಬರುತ್ತಾರಾ?, ಪರದೈಸಿಗೆ ಹೋಗುವ ದಾರಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಸೆಪ್ಟೆಂಬರ್ ಮತ್ತು ಅಕ್ಟೋಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು.
◼ ನಮ್ಮ ರಾಜ್ಯ ಸೇವೆಯ ಈ ಪುರವಣಿಯಲ್ಲಿರುವ ಸಲಹೆ ಮತ್ತು ಮರುಜ್ಞಾಪನಗಳನ್ನು ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೆ ಹಾಜರಾಗುವಾಗ ತೆಗೆದುಕೊಳ್ಳಬೇಕಾದ ಸುರಕ್ಷಾಕ್ರಮಗಳ ಬಗ್ಗೆ ಮಾಹಿತಿ ಇರುವ ಆಗಸ್ಟ್ 3, 2013ರ ಪತ್ರವನ್ನು ಜಿಲ್ಲಾ ಅಧಿವೇಶನಗಳು ನಡೆಯುವ ಮುಂಚಿನ ವಾರದಲ್ಲಿ ಪುನರವಲೋಕಿಸಬೇಕು. ಹಾಗಾಗಿ ಆ ವಾರದ ಕೂಟದ ಶೆಡ್ಯೂಲ್‌ನಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಿ. ಅಧಿವೇಶನ ಮುಗಿದ ಒಂದೆರಡು ತಿಂಗಳ ಬಳಿಕ ಸ್ಥಳೀಯ ಅಗತ್ಯಗಳು ಭಾಗದಲ್ಲಿ, ಅಧಿವೇಶನದಲ್ಲಿ ಕಲಿತ ಅಂಶಗಳು ಪ್ರಚಾರಕರಿಗೆ ಶುಶ್ರೂಷೆಯಲ್ಲಿ ಹೇಗೆ ಸಹಾಯಮಾಡಿದವು ಎಂದು ಪುನರವಲೋಕಿಸಬಹುದು.