ಜುಲೈ 14ರ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 14ರ ವಾರ
ಗೀತೆ 20 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವ ದೇವರ ಇಷ್ಟ ಪಾಠ 8-10 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 21-24 (10 ನಿ.)
ನಂ. 1: ಯಾಜಕಕಾಂಡ 23:1-14 (4 ನಿಮಿಷದೊಳಗೆ)
ನಂ. 2: ದೆವ್ವಗಳು ದಂಗೆಕೋರ ದೇವದೂತರಾಗಿದ್ದಾರೆ—ಬೈಬಲ್ ವಿಷಯಗಳು 16 ಸಿ (5 ನಿ.)
ನಂ. 3: ಯೋಸೇಫನ ಅಣ್ಣಂದಿರು ಅವನನ್ನು ದ್ವೇಷಿಸುತ್ತಾರೆ—ಬೈಬಲ್ ಕಥೆಗಳು, ಕಥೆ 21 (5 ನಿ.)
❑ ಸೇವಾ ಕೂಟ:
10 ನಿ: ಆಗಸ್ಟ್ನಲ್ಲಿ ನಡೆಯುವ ಅಭಿಯಾನಕ್ಕೆ ತಯಾರಾಗುತ್ತಿದ್ದೀರೋ? ಹಾಜರಿರುವವರಲ್ಲಿ ಯಾರಾದರೂ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು? ಎಂಬ ಹೊಸ ಕರಪತ್ರವನ್ನು ತರದಿದ್ದರೆ ಅವರಿಗೆ ಆ ಕರಪತ್ರವನ್ನು ಕೊಡಿ. ಪುಟ 4ರಲ್ಲಿರುವ ಮಾದರಿ ನಿರೂಪಣೆಯನ್ನು ಬಳಸಿ ಮೂರು ಪ್ರಾತ್ಯಕ್ಷಿಕೆಗಳಿರಲಿ. ಮೊದಲ ಪ್ರಾತ್ಯಕ್ಷಿಕೆಯಲ್ಲಿ ಕರಪತ್ರವನ್ನು ಹೆಚ್ಚಿನ ಮನೆಯವರಿಗೆ ಹೇಗೆ ಕೊಡಬಹುದೆಂದು ತೋರಿಸಿ. ಎರಡನೆಯದರಲ್ಲಿ, ಮನೆಯವನು ಆಸಕ್ತಿ ತೋರಿಸುವಲ್ಲಿ ಅಥವಾ ಮಾತಾಡಲು ಬಯಸುವಲ್ಲಿ ಚರ್ಚೆಯನ್ನು ಹೇಗೆ ಮುಂದುವರಿಸಬಹುದೆಂದು ತೋರಿಸಿ. ಮೂರನೆಯದರಲ್ಲಿ ಇಂಟರ್ನೆಟ್ ಬಳಸಲು ಗೊತ್ತಿಲ್ಲದ ಮನೆಯವನಿಗೆ ಸತ್ತವರು ಮತ್ತೆ ಬದುಕಿ ಬರುತ್ತಾರಾ? (T-35) ಕರಪತ್ರವನ್ನು ಅಥವಾ ಸೂಕ್ತವಾದ ಬೇರೊಂದು ಕರಪತ್ರವನ್ನು ಕೊಡಿ. ಅಭಿಯಾನದಲ್ಲಿ ಸಂಪೂರ್ಣವಾಗಿ ಭಾಗವಹಿಸುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.
5 ನಿ: ಪ್ರತಿದಿನ ಬೈಬಲ್ ವಚನಗಳನ್ನು ಪರಿಗಣಿಸಿ. ಚರ್ಚೆ. ದಿನವಚನ ಚರ್ಚಿಸಲಿಕ್ಕಾಗಿ ಯಾವ ಸಮಯ ನಿಗದಿಪಡಿಸಿದ್ದಾರೆ ಮತ್ತು ಯಾವೆಲ್ಲ ಪ್ರಯೋಜನ ಪಡೆದಿದ್ದಾರೆ ಎಂದು ಸಭಿಕರನ್ನು ಕೇಳಿ.
15 ನಿ: “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಅನೌಪಚಾರಿಕವಾಗಿ ಸಾಕ್ಷಿ ನೀಡಲು ಮೊದಲ ಹೆಜ್ಜೆ ತೆಗೆದುಕೊಳ್ಳಿ.” ಚರ್ಚೆ. ಒಂದು ಪ್ರಾತ್ಯಕ್ಷಿಕೆ ಇರಲಿ.
ಗೀತೆ 107 ಮತ್ತು ಪ್ರಾರ್ಥನೆ