ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಜೂನ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಅಥವಾ ಕೆಳಕಂಡ ಕರಪತ್ರಗಳನ್ನು ಕೊಡಿ: ಪರದೈಸಿಗೆ ಹೋಗುವ ದಾರಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಮನೆಯವರಿಗೆ ಆಸಕ್ತಿಯಿರುವಲ್ಲಿ, ಬೈಬಲ್ ಬೋಧಿಸುತ್ತದೆ? ಪುಸ್ತಕದಿಂದ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಿಗೆಗಳಲ್ಲಿ ಒಂದರಿಂದ ಬೈಬಲ್ ಅಧ್ಯಯನ ಮಾಡುವುದು ಹೇಗೆಂದು ತೋರಿಸಿಕೊಡಿ. ಜುಲೈ: ದೇವರಿಂದ ನಿಮಗೊಂದು ಸಿಹಿಸುದ್ದಿ! ಅಥವಾ ಕೆಳಕಂಡ 32 ಪುಟಗಳ ಕಿರುಹೊತ್ತಿಗೆಗಳು: ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ, ಬೈಬಲ್ ಅದರಲ್ಲಿ ಏನಿದೆ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ. ಆಗಸ್ಟ್: “ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?” ಎಂಬ ಕರಪತ್ರದ ವಿಶೇಷ ಅಭಿಯಾನ. ಮನೆಯವನಿಗೆ ಇಂಟರ್‌ನೆಟ್ ಅನ್ನು ಬಳಸಲು ಗೊತ್ತಿಲ್ಲದಿದ್ದಲ್ಲಿ, ಈ ಕೆಳಕಂಡ ಟ್ರ್ಯಾಕ್ಟ್‌ಗಳನ್ನು ನೀಡಿ: ಸತ್ತವರು ಮತ್ತೆ ಬದುಕಿ ಬರುತ್ತಾರಾ?, ಪರದೈಸಿಗೆ ಹೋಗುವ ದಾರಿಯನ್ನು ಕಂಡುಕೊಳ್ಳುವ ವಿಧ, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು? ಮತ್ತು ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ?
◼ 2014ನೇ ಸೇವಾ ವರ್ಷದ ಕೊನೆಯಲ್ಲಿ ನಡೆಸಲಾಗುವ ಪಯನೀಯರ್ ಸೇವಾ ಶಾಲೆ ಒಟ್ಟು ಆರು ದಿನ ಇರುತ್ತದೆ. ಇದು ಸೋಮವಾರದಂದು ಆರಂಭವಾಗಿ ಶನಿವಾರದಂದು ಕೊನೆಗೊಳ್ಳುವುದು.