ಜೂನ್ 9ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 9ರ ವಾರ
ಗೀತೆ 70 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 25 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯಾಜಕಕಾಂಡ 1-5 (10 ನಿ.)
ನಂ. 1: ಯಾಜಕಕಾಂಡ 4:16-31 (4 ನಿಮಿಷದೊಳಗೆ)
ನಂ. 2: ಸತ್ತವರ ಸ್ಥಿತಿ—ಬೈಬಲ್ ವಿಷಯಗಳು 24 ಬಿ (5 ನಿ.)
ನಂ. 3: ಅಬ್ಷಾಲೋಮನ ವೃತ್ತಾಂತದಲ್ಲಿ ಸೌಂದರ್ಯ, ಹೆಮ್ಮೆ, ಮೋಸ ಇವು ದುರಂತಕ್ಕೆ ನಡೆಸಿದವು—2ಸಮು 13:1-38; 14:25-27 (5 ನಿ.)
ಸೇವಾ ಕೂಟ:
10 ನಿ: ಪ್ರಯೋಗಿಸಿ ನೋಡಿದ್ದೀರಾ? ಚರ್ಚೆ. ಕೆಳಗೆ ಕೊಡಲಾದ ನಮ್ಮ ರಾಜ್ಯ ಸೇವೆಯ ಲೇಖನಗಳನ್ನು ಭಾಷಣರೂಪದಲ್ಲಿ ಸಂಕ್ಷಿಪ್ತವಾಗಿ ಪುನರವಲೋಕನ ಮಾಡಿ: “ಬೈಬಲ್ ಬೋಧಿಸುತ್ತದೆ ಪುಸ್ತಕದಲ್ಲಿ ಅಧ್ಯಯನಕ್ಕೆ ಸಿದ್ಧರಿಲ್ಲದವರಿಗೆ ಸಹಾಯ” (km 12/13), ಮತ್ತು “ಪತ್ರಿಕಾ ಮಾರ್ಗ—ಬೈಬಲ್ ಅಧ್ಯಯನ ಆರಂಭಿಸಲು ಸಹಾಯಕ” (km 1/14). ಈ ಲೇಖನಗಳಲ್ಲಿ ಕೊಡಲಾದ ಸಲಹೆಗಳನ್ನು ಅಳವಡಿಸಿಕೊಂಡದ್ದರಿಂದ ಯಾವ ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ ಎಂದು ಸಭಿಕರನ್ನು ಕೇಳಿ.
20 ನಿ: “ಆಗಸ್ಟ್ನಲ್ಲಿ ನಡೆಯುವ ಅಭಿಯಾನ ಅವಿಸ್ಮರಣೀಯವಾಗಲಿ.” ಸೇವಾ ಮೇಲ್ವಿಚಾರಕನಿಂದ ಪ್ರಶ್ನೋತ್ತರ. ಹಾಜರಿರುವ ಎಲ್ಲರಿಗೆ “ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯಾರಿಂದ ಉತ್ತರ ಸಿಗಬಹುದು?” ಎಂಬ ಶೀರ್ಷಿಕೆಯಿರುವ ಹೊಸ ಕರಪತ್ರದ ಒಂದೊಂದು ಪ್ರತಿಯನ್ನು ಕೊಡಿ, ಅದರಲ್ಲಿರುವ ವಿಷಯಗಳನ್ನು ಚರ್ಚಿಸಿ. ಸಭೆಯ ಸೇವಾಕ್ಷೇತ್ರವನ್ನು ಆವರಿಸಲು ಯಾವ ಯೋಜನೆಯನ್ನು ಮಾಡಲಾಗಿದೆ ಎಂದು ಹೇಳಿ. ಪ್ರಚಾರಕನೊಬ್ಬನು ಈ ಕರಪತ್ರವನ್ನು ಉದ್ಯೋಗಸ್ಥನಿಗೆ ಅಥವಾ ಕಾಲೇಜು ವಿದ್ಯಾರ್ಥಿಗೆ ಕೊಡುವ ಪ್ರಾತ್ಯಕ್ಷಿಕೆ ಇರಲಿ.
ಗೀತೆ 107 ಮತ್ತು ಪ್ರಾರ್ಥನೆ