ಫೆಬ್ರವರಿ 17ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 17ರ ವಾರ
ಗೀತೆ 81 ಮತ್ತು ಪ್ರಾರ್ಥನೆ
ಸಭಾ ಬೈಬಲ್ ಅಧ್ಯಯನ:
ಬೈಬಲ್—ಅದರಲ್ಲಿ ಏನಿದೆ? ಪಾಠ 9 (30 ನಿ.)
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 29-31 (10 ನಿ.)
ನಂ. 1: ಆದಿಕಾಂಡ 29:21-35 (4 ನಿಮಿಷದೊಳಗೆ)
ನಂ. 2: ದೇವರ ವಾಕ್ಯ ದೇವಪ್ರೇರಿತವಾಗಿದೆ—ಬೈಬಲ್ ವಿಷಯಗಳು 22 ಎ (5 ನಿ.)
ನಂ. 3: ವರ್ಷಗಳ ನಿಷ್ಠೆಯ ಸೇವೆ ಒಂದೇ ಒಂದು ದ್ರೋಹದ ಕೃತ್ಯದಿಂದ ಹಾಳಾಗುತ್ತದೆಂದು ನಾವು ಎಬ್ಯಾತಾರನಿಂದ ಕಲಿಯಬಹುದು—1 ಸಮು 22:11-23; 23:6; 2 ಸಮು 15:24-36; 1 ಅರ 1:7, 8, 25, 26, 32-40; 2:26; 4:4 (5 ನಿ.)
ಸೇವಾ ಕೂಟ:
10 ನಿ: ಹಾರ್ದಿಕತೆಯಿಂದ ಸುವಾರ್ತೆ ಸಾರಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 118 ಪ್ಯಾರ 1ರಿಂದ ಪುಟ 119 ಪ್ಯಾರ 5ರ ಮೇಲೆ ಆಧರಿತ.
5 ನಿ: ನಿಮ್ಮ ಶುಶ್ರೂಷೆಯಲ್ಲಿ jw.orgಯನ್ನು ಉಪಯೋಗಿಸುತ್ತಿದ್ದೀರೋ? ಚರ್ಚೆ. ಶುಶ್ರೂಷೆಯಲ್ಲಿ jw.org ಉಪಯೋಗಿಸಿದಾಗ ದೊರೆತ ಒಳ್ಳೇ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ. ತಮಗೆ ಸಿಗುವ ಸೂಕ್ತವಾದ ಪ್ರತಿಯೊಂದು ಅವಕಾಶದಲ್ಲೂ jw.org ಬಗ್ಗೆ ತಿಳಿಸುವಂತೆ ಸಭಿಕರನ್ನು ಪ್ರೋತ್ಸಾಹಿಸಿ.
15 ನಿ: “ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿ ಸಂತೋಷಕರವಾಗಿರಲಿ!” ಪ್ರಶ್ನೋತ್ತರ. ಆರೋಗ್ಯ ಸಮಸ್ಯೆ ಅಥವಾ ಪೂರ್ಣ ಸಮಯದ ಐಹಿಕ ಕೆಲಸವಿದ್ದರೂ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಯೋಜಿಸಿರುವವರನ್ನು ಸಂದರ್ಶಿಸಿ. ಹೆಚ್ಚು ಸೇವೆ ಮಾಡಲಿಕ್ಕಾಗಿ ಅವರು ಯಾವೆಲ್ಲಾ ಹೊಂದಾಣಿಕೆಗಳನ್ನು ಮಾಡಲಿದ್ದಾರೆಂದು ಕೇಳಿ. ಪ್ಯಾರ 3ನ್ನು ಪರಿಗಣಿಸುವಾಗ ಸೇವಾ ಮೇಲ್ವಿಚಾರಕನನ್ನು ಸಂದರ್ಶಿಸಿ. ಮಾರ್ಚ್, ಏಪ್ರಿಲ್, ಮೇ ತಿಂಗಳ ಕ್ಷೇತ್ರ ಸೇವಾ ಕೂಟಕ್ಕಾಗಿ ಮಾಡಲಾದ ಸ್ಥಳಿಕ ಏರ್ಪಾಡುಗಳ ಬಗ್ಗೆ ತಿಳಿಸುವಂತೆ ಕೇಳಿ.
ಗೀತೆ 8 ಮತ್ತು ಪ್ರಾರ್ಥನೆ