ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಡಿಸೆಂಬರ್ 30ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರದ ತಾರೀಕನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಐಹಿಕ ಅಧಿಕಾರಿಗಳೊಂದಿಗೆ ವ್ಯವಹರಿಸುವಾಗ ಸೌಮ್ಯಭಾವವನ್ನು ತೋರಿಸಲು ನಮಗೆ ಯಾವುದು ಸಹಾಯಮಾಡುವುದು? (ತೀತ 3:2) [ನವೆಂ. 4, ಕಾವಲಿನಬುರುಜು 03 4/1 ಪು. 25 ಪ್ಯಾ. 18-19]
2. ಫಿಲೆಮೋನನಿಗೆ ಬರೆದ ಪತ್ರದ 4, 5, ಮತ್ತು 7ನೇ ವಚನಗಳಲ್ಲಿ ದಾಖಲಾಗಿರುವಂತೆ ಪೌಲನು ಅವನಿಗೆ ಹೇಳಿದ ಮಾತುಗಳಿಂದ ನಾವೇನು ಕಲಿಯಬಲ್ಲೆವು? [ನವೆಂ. 4, ಕಾವಲಿನಬುರುಜು 08 10/15 ಪು. 31 ಪ್ಯಾ. 2, 3; ಕಾವಲಿನಬುರುಜು 92 7/15 ಪು. 25 ಪ್ಯಾ. 2]
3. ನಾವು ದೇವರ ವಿಶ್ರಾಂತಿಯಲ್ಲಿ ಸೇರುವುದು ಹೇಗೆ? (ಇಬ್ರಿ. 4:9-11) [ನವೆಂ. 11, ಕಾವಲಿನಬುರುಜು 11 7/15 ಪು. 28 ಪ್ಯಾ. 16, 17]
4. “ನೀತಿಯನ್ನು ಸ್ಥಾಪಿಸಿದ” ಸಮುವೇಲ, ನಂಬಿಗಸ್ತ ನ್ಯಾಯಸ್ಥಾಪಕರು ಮತ್ತು ಪ್ರವಾದಿಗಳಿಂದ ನಾವೇನು ಕಲಿಯಬಹುದು? (ಇಬ್ರಿ. 11:32, 33) [ನವೆಂ. 18, ಕಾವಲಿನಬುರುಜು 11 7/1 ಪು. 17 ಪ್ಯಾ. 5, 6]
5. “ಮೇಲಣಿಂದ ಬರುವ ವಿವೇಕವು ಮೊದಲು ಶುದ್ಧವಾದದ್ದು, ತರುವಾಯ ಶಾಂತಿಶೀಲವಾದದ್ದು” ಎಂದು ಯಾಕೋಬನು ಬರೆದದ್ದೇಕೆ? (ಯಾಕೋ. 3:17) [ನವೆಂ. 25, ಕಾವಲಿನಬುರುಜು 11 8/15 ಪು. 30-31 ಪ್ಯಾ. 15]
6. ಯಾರಿಗೆ ‘ಸುವಾರ್ತೆ ಪ್ರಕಟಿಸಲ್ಪಟ್ಟಿತೊ’ ಆ “ಸತ್ತವರು” ಯಾರು? (1 ಪೇತ್ರ 4:6) [ಡಿಸೆಂ. 2, ಕಾವಲಿನಬುರುಜು 08 11/15 ಪು. 21 ಪ್ಯಾ. 7]
7. ಒಂದನೇ ಯೋಹಾನ 2:7, 8ಕ್ಕನುಸಾರ ಯೋಹಾನನು ಯಾವುದನ್ನು “ಹಳೆಯ” ಮತ್ತು “ಹೊಸ” ಆಜ್ಞೆಯೆಂದು ಕರೆಯುತ್ತಾನೆ? [ಡಿಸೆಂ. 9, ಕಾವಲಿನಬುರುಜು 08 12/15 ಪು. 27 ಪ್ಯಾ. 5]
8. “ಆಲ್ಫವೂ ಒಮೇಗವೂ” ಹಾಗೂ “ಮೊದಲನೆಯವನೂ ಕೊನೆಯವನೂ” ಎಂಬ ಬಿರುದುಗಳು ಯಾರನ್ನು ಸೂಚಿಸುತ್ತವೆ? (ಪ್ರಕ. 1:8, 17) [ಡಿಸೆಂ. 16, ಕಾವಲಿನಬುರುಜು 09 1/15 ಪು. 30 ಪ್ಯಾ. 6]
9. ಪ್ರಕಟನೆ 12:15, 16ರಲ್ಲಿರುವ ಮಾತು ನಮಗೆ ಹೇಗೆ ಆಶ್ವಾಸನೆ ಕೊಡುತ್ತದೆ? [ಡಿಸೆಂ. 23, ಕಾವಲಿನಬುರುಜು 09 1/15 ಪು. 32 ಪ್ಯಾ. 6]
10. “ಜೀವಜಲದ ನದಿ” ಎಂದರೇನು? (ಪ್ರಕ. 22:1) [ಡಿಸೆಂ. 30, ಕಾವಲಿನಬುರುಜು 09 2/15 ಪು. 5 ಪ್ಯಾ. 7]