ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಸೆಪ್ಟೆಂಬರ್ ಮತ್ತು ಅಕ್ಟೋಬರ್: ಕೆಳಕಂಡ ಕರಪತ್ರಗಳನ್ನು ಕೊಡಿ: ಜಹನ್ನುಮ್ ದೈವಿಕ ನ್ಯಾಯದ ಒಂದು ಭಾಗವೊ?, ಪರದೈಸಿಗೆ ಹೋಗುವ ಹಾದಿಯನ್ನು ಕಂಡುಕೊಳ್ಳುವ ವಿಧ, ನಿಮ್ಮ ಜೀವನ ವಿಧಿವಶವೋ?, ಯೆಹೋವನು ಯಾರು?, ಯೇಸು ಕ್ರಿಸ್ತ—ಅವನು ಯಾರು?, ಕಷ್ಟಾನುಭವವು ಎಂದಾದರೂ ಕೊನೆಗೊಳ್ಳುವುದೊ?, ಸರ್ವಶ್ರೇಷ್ಠ ಹೆಸರು, ಯೆಹೋವನ ಸಾಕ್ಷಿಗಳು ಯಾರು?, ಈ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುತ್ತೀರೋ? ಮನೆಯವರಿಗೆ ಆಸಕ್ತಿಯಿರುವಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕದಿಂದ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದರಿಂದ ಬೈಬಲ್ ಅಧ್ಯಯನ ಮಾಡುವುದು ಹೇಗೆಂದು ತೋರಿಸಿಕೊಡಿ. ನವೆಂಬರ್: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಪುನರ್ಭೇಟಿಗಳನ್ನು ಮಾಡುವಾಗ ಬೈಬಲ್ ಬೋಧಿಸುತ್ತದೆ ಪುಸ್ತಕ ಪರಿಚಯಿಸಿ ಅಥವಾ ದೇವರ ಮಾತನ್ನು ಆಲಿಸಿ/ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ ಕಿರುಹೊತ್ತಗೆಗಳಲ್ಲಿ ಒಂದನ್ನು ಆ ವ್ಯಕ್ತಿಗೆ ಕೊಟ್ಟರೆ ಹೆಚ್ಚು ಒಳಿತೆಂದು ಅನಿಸಿದರೆ ಅದನ್ನೇ ಕೊಡಿ. ಬೈಬಲ್ ಅಧ್ಯಯನ ಆರಂಭಿಸಲು ಪ್ರಯತ್ನಿಸಿ.
◼ 2014ರ ಯೇಸುವಿನ ಮರಣದ ಸ್ಮರಣೆಯ ಸಮಯಾವಧಿಯಲ್ಲಿ ನೀಡಲಾಗುವ ವಿಶೇಷ ಭಾಷಣವನ್ನು ಏಪ್ರಿಲ್ 21ನೇ ವಾರದಲ್ಲಿ ಸಾದರಪಡಿಸಲಾಗುವುದು. ಅದರ ಶೀರ್ಷಿಕೆಯನ್ನು ನಂತರ ಪ್ರಕಟಿಸಲಾಗುವುದು. ಯಾವುದಾದರೂ ಸಭೆಗೆ ಅದೇ ವಾರದಲ್ಲಿ ಸರ್ಕಿಟ್ ಮೇಲ್ವಿಚಾರಕರ ಭೇಟಿ ಅಥವಾ ಸಮ್ಮೇಳನ ಇರುವುದಾದರೆ ವಿಶೇಷ ಭಾಷಣವನ್ನು ಅದರ ಮುಂದಿನ ವಾರದಲ್ಲಿ ನೀಡಬೇಕು. ಯಾವ ಸಭೆಯಾಗಲಿ ಏಪ್ರಿಲ್ 21ಕ್ಕಿಂತ ಮುಂಚೆ ವಿಶೇಷ ಭಾಷಣವನ್ನು ನೀಡಬಾರದು.
◼ ವೆಬ್‌ಸೈಟ್ ಮೂಲಕ ನೀವು ದೇಣಿಗೆ ಕಳುಹಿಸುವಲ್ಲಿ www.jwindiagift.org ವಿಳಾಸಕ್ಕೆ ಕಳುಹಿಸಬೇಕು. ಕಳುಹಿಸುವ ಮುಂಚೆ ವೆಬ್ ಸೈಟಿನಲ್ಲಿರುವ ದೇಣಿಗೆಯ ಪುಟವನ್ನು ದಯವಿಟ್ಟು ಮತ್ತೊಮ್ಮೆ ಪರಿಶೀಲಿಸಿ.