ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
2013 ಜೂನ್ 24ರ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರತಿಯೊಂದು ಪ್ರಶ್ನೆಯೊಂದಿಗೆ ಅದನ್ನು ಚರ್ಚಿಸಲಾಗುವ ವಾರವನ್ನು ಕೊಡಲಾಗಿದೆ. ಹೀಗೆ ಆಯಾ ವಾರದಂದು ಶಾಲೆಗಾಗಿ ತಯಾರಿ ಮಾಡುವಾಗ ಸಂಶೋಧನೆ ಮಾಡಲು ಸಾಧ್ಯವಾಗುವುದು.
1. ಯಾವ ದೇವಾಲಯವನ್ನು “ಕಟ್ಟಲು ನಲವತ್ತಾರು ವರ್ಷಗಳು ಹಿಡಿದವು”? (ಯೋಹಾನ 2:20) [ಮೇ 6, ಕಾವಲಿನಬುರುಜು 08 4/15 ಪು. 30 ಪ್ಯಾ. 6]
2. ಕ್ರಿಸ್ತನ ಹಿಂಬಾಲಕರು ಯಾವಾಗ ತಮ್ಮೊಳಗೆ ಜೀವವನ್ನು ಪಡೆದುಕೊಳ್ಳುವರು ಅಥವಾ ಜೀವದ ಪೂರ್ಣತೆಯನ್ನು ಪ್ರವೇಶಿಸುವರು? (ಯೋಹಾನ 6:53) [ಮೇ 13, ಕಾವಲಿನಬುರುಜು 03 9/15 ಪು. 31 ಪ್ಯಾ. 3]
3. ಯೇಸು ತನ್ನ ತಂದೆಯ ಬಗ್ಗೆ ಅಪರಿಪೂರ್ಣ ಮಾನವರಿಗೆ ತಿಳಿಸಿದ ರೀತಿಯನ್ನು ವಿವರಿಸಿ. (ಯೋಹಾನ 8:28) [ಮೇ 20, 2011 ಅಕ್ಟೋಬರ್-ಡಿಸೆಂಬರ್ ಕಾವಲಿನಬುರುಜು ಪು. 7 ಪ್ಯಾ. 3]
4. ತನ್ನ ಮಿತ್ರ ಲಾಜರ ತೀರಿಕೊಂಡಾಗ “ಯೇಸು ಕಣ್ಣೀರು ಸುರಿಸಿದನು.” ಇದರಿಂದ ನಮಗೇನು ತಿಳಿಯುತ್ತೆ? (ಯೋಹಾನ 11:35) [ಮೇ 20, ಕಾವಲಿನಬುರುಜು 08 7/1 ಪು. 26 ಪ್ಯಾ. 2-4]
5. ಶಿಷ್ಯರ ಪಾದ ತೊಳೆದು ಯೇಸು ಯಾವ ಪ್ರಾಮುಖ್ಯ ಪಾಠ ಕಲಿಸಿದನು? (ಯೋಹಾನ 13:4, 5) [ಮೇ 27, ಕಾವಲಿನಬುರುಜು 99 3/1 ಪು. 31 ಪ್ಯಾ. 1]
6. ದೇವರಾತ್ಮ ನಮ್ಮನ್ನು ಯಾವ ರೀತಿಯಲ್ಲಿ ಮಾರ್ಗದರ್ಶಿಸಬಲ್ಲದು? (ಯೋಹಾನ 14:26) [ಮೇ 27, ಕಾವಲಿನಬುರುಜು 11 12/15 ಪು. 14-15 ಪ್ಯಾ. 9]
7. ಯೋಹಾನ 21:15ರಲ್ಲಿರುವ “ಇವುಗಳಿಗಿಂತ” ಅನ್ನೋ ಪದ ಯಾವುದನ್ನು ಸೂಚಿಸುತ್ತದೆ? ನಮಗಿರುವ ಪಾಠವೇನು? [ಜೂನ್ 3, ಕಾವಲಿನಬುರುಜು 08 4/15 ಪು. 32 ಪ್ಯಾ. 11]
8. ಅಪೊಸ್ತಲರ ಕಾರ್ಯಗಳು 2:44-47 ಮತ್ತು 4:34, 35ರ ಅನ್ವಯದಡಿ ಯಾವ ಮನೋಧರ್ಮ ಕ್ರೈಸ್ತರಲ್ಲಿರಬೇಕು? [ಜೂನ್ 10, ಕಾವಲಿನಬುರುಜು 08 5/15 ಪು. 30 ಪ್ಯಾ. 5]
9. ಅಪೊಸ್ತಲರ ಕಾರ್ಯಗಳು 7:59ರಲ್ಲಿ ತಿಳಿಸುವ ವೃತ್ತಾಂತದಲ್ಲಿ ಸ್ತೆಫನನು ಯೇಸು ಕ್ರಿಸ್ತನಿಗೆ ಪ್ರಾರ್ಥಿಸುತ್ತಿದ್ದನಾ? [ಜೂನ್ 17, ಕಾವಲಿನಬುರುಜು 08 5/15 ಪು. 31 ಪ್ಯಾ. 2]
10. ಅಪೊಸ್ತಲರ ಕಾರ್ಯಗಳು 9:28-30ರಲ್ಲಿ ನಮಗೆ ಯಾವ ಪಾಠವಿದೆ? [ಜೂನ್ 24, ಕಾವಲಿನಬುರುಜು 08 5/15 ಪು. 31 ಪ್ಯಾ. 6]