ಜೂನ್ 10ರ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 10ರ ವಾರ
ಗೀತೆ 22 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 22 ಪ್ಯಾ. 1-8 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಅ. ಕಾರ್ಯಗಳು 1-4 (10 ನಿ.)
ನಂ. 1: ಅ. ಕಾರ್ಯಗಳು 1:15–2:4 (4 ನಿಮಿಷದೊಳಗೆ)
ನಂ. 2: ಯೇಸು ಮಾಡಿದ ಅದ್ಭುತಗಳು—ಬೈಬಲ್ ಅದರಲ್ಲಿ ಏನಿದೆ? ಪು. 21 (5 ನಿ.)
ನಂ. 3: ಹೆಚ್ಚಿನ ಜನರ ಯೋಚನಾರೀತಿ ವಿಷಕರ ವಾಯುವಿನಂತಿದೆ ಎಂದೇಕೆ ಹೇಳಲಾಗಿದೆ?—ಎಫೆ. 2:1, 2 (5 ನಿ.)
❑ ಸೇವಾ ಕೂಟ:
10 ನಿ: ದೃಷ್ಟಿ ಸಂಪರ್ಕದ ಪ್ರಾಮುಖ್ಯತೆ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 124 ಪ್ಯಾರ 1ರಿಂದ ಪುಟ 125 ಪ್ಯಾರ 4ರ ಆಧರಿತ. ಎರಡು ಸಂಕ್ಷಿಪ್ತ ಪ್ರಾತ್ಯಕ್ಷಿಕೆ ಇರಲಿ. ಒಂದರಲ್ಲಿ ಪ್ರಚಾರಕ ಸರಿಯಾದ ದೃಷ್ಟಿ ಸಂಪರ್ಕ ಇಟ್ಟುಕೊಳ್ಳದೆ ಸುವಾರ್ತೆ ಸಾರುತ್ತಾರೆ. ಮತ್ತೊಂದು ಅದೇ ಸನ್ನಿವೇಶ ಆದರೆ ಈ ಸಲ ಪ್ರಚಾರಕ ಒಳ್ಳೇ ದೃಷ್ಟಿ ಸಂಪರ್ಕವನ್ನು ಇಟ್ಟುಕೊಂಡಿರುತ್ತಾರೆ.
10 ನಿ: ನಾವೇನು ಸಾಧಿಸಿದ್ದೇವೆ? ಸಭಾ ಸೆಕ್ರಿಟರಿಯಿಂದ ಚರ್ಚೆ. ಕ್ರಿಸ್ತನ ಸ್ಮರಣೆಯ ಸಮಯಾವಧಿಯಲ್ಲಿ ಏನೆಲ್ಲ ಸಾಧಿಸಲಾಗಿದೆ ಎಂದು ತಿಳಿಸಿ ಅದಕ್ಕಾಗಿ ಸಭಿಕರನ್ನು ಶ್ಲಾಘಿಸಿ. ಆಮಂತ್ರಣ ಪತ್ರ ಕೊಡುವಾಗ ಮತ್ತು ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡುವಾಗ ದೊರೆತ ಒಳ್ಳೇ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿ.
10 ನಿ: “ಕಾಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳಲು ಸಿದ್ಧರಿದ್ದೀರಾ?” ಪ್ರಶ್ನೋತ್ತರ.
ಗೀತೆ 74 ಮತ್ತು ಪ್ರಾರ್ಥನೆ