ಫೆಬ್ರವರಿ 18ರ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 18ರ ವಾರ
ಗೀತೆ 10 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ಯೆಹೋವನ ಸಮೀಪಕ್ಕೆ ಬನ್ನಿರಿ ಅಧ್ಯಾ. 16 ಪ್ಯಾ. 10-15 (30 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಮಾರ್ಕ 1-4 (10 ನಿ.)
ನಂ. 1: ಮಾರ್ಕ 2:18–3:6 (4 ನಿಮಿಷದೊಳಗೆ)
ನಂ. 2: ಯೋಬನ ಸಮಗ್ರತೆ—ಬೈಬಲ್ ಅದರಲ್ಲಿ ಏನಿದೆ? ಪು. 9 (5 ನಿ.)
ನಂ. 3: 1 ಕೊರಿಂಥ 7:29-31ರಲ್ಲಿರುವ ಪೌಲನ ಬುದ್ಧಿಮಾತನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? (5 ನಿ.)
❑ ಸೇವಾ ಕೂಟ:
15 ನಿ: ಸುವಾರ್ತೆ ಸಾರಲು ಯೆಹೋವ ದೇವರು ನನಗೆ ಬಲ ಕೊಡುತ್ತಾನೆ. (ಫಿಲಿ. 4:13) ಆರೋಗ್ಯ ಸಮಸ್ಯೆ ಇದ್ದರೂ ಸುವಾರ್ತೆ ಸಾರುವ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸುತ್ತಿರುವ ಇಬ್ಬರು ಅಥವಾ ಮೂವರು ಪ್ರಚಾರಕರನ್ನು ಸಂದರ್ಶನ ಮಾಡಿ. ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ? ನಿರುತ್ತೇಜನದಿಂದ ಕುಗ್ಗಿಹೋಗದಿರಲು ಯಾವುದು ಸಹಾಯಮಾಡುತ್ತೆ? ಸಭೆಯವರಿಂದ ಯಾವೆಲ್ಲ ನೆರವು ಸಿಗುತ್ತಿದೆ? ಸಾರುವ ಕೆಲಸದಲ್ಲಿ ತಪ್ಪದೇ ಪಾಲ್ಗೊಳ್ಳುವುದರಿಂದ ಹೇಗೆಲ್ಲ ಪ್ರಯೋಜನ ಪಡೆದಿದ್ದಾರೆ?
15 ನಿ: “ಕ್ರಿಸ್ತನ ಮರಣದ ಸ್ಮರಣೆಯ ಪ್ರಯುಕ್ತ ಅಭಿಯಾನ—ಮಾರ್ಚ್ 1ರಿಂದ.” ಪ್ರಶ್ನೋತ್ತರ. ಪ್ರತಿಯೊಬ್ಬರಿಗೂ ಒಂದೊಂದು ಕರಪತ್ರ ಕೊಡಿ. ಅದರಲ್ಲಿರುವ ವಿಷಯಗಳನ್ನು ಚರ್ಚಿಸಿ. ಪ್ಯಾರ 2ನ್ನು ಚರ್ಚಿಸುವಾಗ, ಸೇವಾಕ್ಷೇತ್ರದಲ್ಲಿರುವ ಎಲ್ಲಾ ಜನರಿಗೆ ಕರಪತ್ರ ಕೊಡಲು ಯಾವೆಲ್ಲ ಏರ್ಪಾಡು ಮಾಡಲಾಗಿದೆ ಎಂದು ತಿಳಿಸುವಂತೆ ಸೇವಾ ಮೇಲ್ವಿಚಾರಕರನ್ನು ಕೇಳಿ. ಪ್ಯಾರ 3ನ್ನು ಚರ್ಚಿಸುವಾಗ ಪುಟ 6ರಲ್ಲಿರುವ ನಿರೂಪಣೆಯ ಒಂದು ಪ್ರಾತ್ಯಕ್ಷಿಕೆ ಇರಲಿ.
ಗೀತೆ 8 ಮತ್ತು ಪ್ರಾರ್ಥನೆ