ಜನವರಿ 23ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 23ರಿಂದ ಆರಂಭವಾಗುವ ವಾರ
ಗೀತೆ 21 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 14 ಪ್ಯಾ. 10-16 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಶಾಯ 38-42 (10 ನಿ.)
ನಂ. 1: ಯೆಶಾಯ 39:1-40:5 (4 ನಿಮಿಷದೊಳಗೆ)
ನಂ. 2: ದೀಕ್ಷಾಸ್ನಾನ ಪಡೆದ ಮೇಲೆ ನಮ್ಮ ಜವಾಬ್ದಾರಿ—ದೇವರನ್ನು ಆರಾಧಿಸಿರಿ ಪು. 118-119 ಪ್ಯಾ. 14-16 (5 ನಿ.)
ನಂ. 3: ಲೌಕಿಕ ಶಿಕ್ಷಣಕ್ಕಿಂತ ದೈವಿಕ ಶಿಕ್ಷಣ ಶ್ರೇಷ್ಠ—ಫಿಲಿ. 3:8 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಫೆಬ್ರವರಿ ತಿಂಗಳ ಸಾಹಿತ್ಯ ನೀಡುವಿಕೆ ಏನೆಂದು ತಿಳಿಸಿ. ಒಂದೆರಡು ನಿರೂಪಣೆಗಳ ಪ್ರಾತ್ಯಕ್ಷಿಕೆ ತೋರಿಸಿ. ಮುಂದಿನ ವಾರದ ಸೇವಾ ಕೂಟಕ್ಕಾಗಿ ನವೆಂಬರ್ 2006ರ ನಮ್ಮ ರಾಜ್ಯ ಸೇವೆಯ ಪುರವಣಿ ತರಲು ಪ್ರಚಾರಕರಿಗೆ ನೆನಪುಹುಟ್ಟಿಸಿ.
10 ನಿ: ನಾವೇನು ಕಲಿಯುತ್ತೇವೆ? ಚರ್ಚೆ. ಮಾರ್ಕ 10:17-30 ಓದಿಸಿ. ನಮ್ಮ ಸಾರುವ ಕೆಲಸವನ್ನು ಪೂರೈಸಲು ಈ ವಚನಗಳು ಹೇಗೆ ನೆರವಾಗುತ್ತವೆಂದು ಚರ್ಚಿಸಿ.
15 ನಿ: “‘ಎಲ್ಲ ರೀತಿಯ ಜನರಿಗೆ’ ಸಾರಿ.” ಪ್ರಶ್ನೋತ್ತರ. ಪುರವಣಿಯಲ್ಲಿರುವ ಪ್ರತಿಯೊಂದು ಬ್ರೋಷರಿನ ಉದ್ದೇಶ ಚರ್ಚಿಸಿ. ಆಮೇಲೆ ನಿಮ್ಮ ಸಭೆಯ ಸೇವಾ ಕ್ಷೇತ್ರಕ್ಕೆ ಸೂಕ್ತವಾದ ಎರಡು ಬ್ರೋಷರ್ಗಳನ್ನು ಆಯ್ಕೆಮಾಡಿ ಅವುಗಳ ವೈಶಿಷ್ಟ್ಯಗಳನ್ನು ಚರ್ಚಿಸಿ. ಪ್ರತಿಯೊಂದನ್ನೂ ನೀಡುವುದು ಹೇಗೆಂಬ ಪ್ರಾತ್ಯಕ್ಷಿಕೆ ತೋರಿಸಿ.
ಗೀತೆ 112 ಮತ್ತು ಪ್ರಾರ್ಥನೆ