ಏಪ್ರಿಲ್ 18ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 18ರಿಂದ ಆರಂಭವಾಗುವ ವಾರ
ಗೀತೆ 119 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 1 ಪ್ಯಾರ. 1-7 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೋಬ 28-32 (10 ನಿ.)
ನಂ. 1: ಯೋಬ 30:1–23 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಬೈಬಲನ್ನು ಓದುವ ನಮ್ಮ ಗುರಿ ಯೆಹೋವನ ಕುರಿತು ತಿಳಿದುಕೊಳ್ಳುವುದಾಗಿದೆ—wt ಪು. 27-28 ಪ್ಯಾರ. 11-12 [1] (5 ನಿ.)
ನಂ. 3: ನಾವು ಮಾತಾಡುವುದಕ್ಕೆ ಮುಂಚೆ ಆಲೋಚಿಸಬೇಕು ಏಕೆ?—ಜ್ಞಾನೋ. 16:23 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ವಿರಳವಾಗಿ ಸೇವೆಯಾಗಿರುವ ಟೆರಿಟೊರಿಗಳಲ್ಲಿ ಸಾರಲು ಏರ್ಪಾಡುಗಳನ್ನು ಮಾಡಲಾಗಿರುವಲ್ಲಿ ವಿವರಿಸಿ. ಪುಟ 4ರ ಪ್ರಕಟಣೆಯನ್ನು ದಯವಿಟ್ಟು ನೋಡಿ.
10 ನಿ: ಇತರರು ವಿವರಣೆ ಕೇಳುವಾಗ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 177ರ ಪ್ಯಾರ 3ರಿಂದ ಪುಟ 178ರ ಕೊನೆ ತನಕ. ಈ ಚುಟುಕಾದ ಪ್ರತ್ಯಕ್ಷಾಭಿನಯವಿರಲಿ: ಅವಿಶ್ವಾಸಿ ಸಹೋದ್ಯೋಗಿಯು ಪ್ರಚಾರಕನಿಗೆ ನಮ್ಮ ನಂಬಿಕೆಗಳ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾನೆ. ಪ್ರಚಾರಕನು ತುಸು ಪಕ್ಕಕ್ಕೆ ಸರಿದು ಉತ್ತರಿಸುವ ವಿಧವನ್ನು ಮೊದಲು ಮನಸ್ಸಲ್ಲೇ ಆಲೋಚಿಸುವ ಸ್ವಗತ ಮಾಡುತ್ತಾನೆ. ಆಮೇಲೆ ಸಹೋದ್ಯೋಗಿಗೆ ಉತ್ತರಕೊಡುತ್ತಾನೆ.
10 ನಿ: ಪ್ರಶ್ನಾ ಚೌಕ. ಹಿರಿಯನಿಂದ ಚರ್ಚೆ.
10 ನಿ: ಸುವಾರ್ತೆಯನ್ನು ಸಾರುವ ವಿಧಾನಗಳು—ಮನೆಯಿಂದ ಮನೆಗೆ. ಚರ್ಚೆ. ಸಂಘಟಿತರು ಪುಸ್ತಕದ ಪುಟ 92ರ ಪ್ಯಾರ 3ರಿಂದ ಪುಟ 95ರ ಪ್ಯಾರ 1ರ ಮೇಲೆ ಆಧಾರಿತ. ಶಾರೀರಿಕ ದೌರ್ಬಲ್ಯಗಳು ಇಲ್ಲವೆ ನಾಚಿಕೆಸ್ವಭಾವದಂಥ ಅಡೆತಡೆಗಳ ಮಧ್ಯೆಯೂ ಮನೆಮನೆ ಸೇವೆಮಾಡುವ ಒಬ್ಬಿಬ್ಬರು ಪ್ರಚಾರಕರ ಇಂಟರ್ವ್ಯೂ ಮಾಡಿ. ಅವರ ಪ್ರಯತ್ನಗಳಿಗೆ ಹೇಗೆ ಪ್ರತಿಫಲ ಸಿಕ್ಕಿದೆ? ಎಂದು ಕೇಳಿ.
ಗೀತೆ 26 ಮತ್ತು ಪ್ರಾರ್ಥನೆ