ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/11 ಪು. 1
  • ಅತಿ ಆನಂದದಾಯಕ ಕೆಲಸ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅತಿ ಆನಂದದಾಯಕ ಕೆಲಸ
  • 2011 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ನಿಮ್ಮಿಂದ ಬೈಬಲ್‌ ಕಲಿಸೋಕೆ ಆಗುತ್ತೆ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಬೈಬಲ್‌ ವಿದ್ಯಾರ್ಥಿಗೆ ಪ್ರಗತಿ ಮಾಡೋಕೆ ಸಹಾಯ ಮಾಡಿ—ಭಾಗ 2
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಆನಂದವನ್ನು ಕಂಡುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು
    2004 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2011 ನಮ್ಮ ರಾಜ್ಯದ ಸೇವೆ
km 1/11 ಪು. 1

ಅತಿ ಆನಂದದಾಯಕ ಕೆಲಸ

1. ನಮ್ಮ ದಿನದಲ್ಲಿ ಆಧ್ಯಾತ್ಮಿಕ ವಾಸಿಯ ಯಾವ ಕೆಲಸ ನಡಿಯುತ್ತಾ ಇದೆ?

1 ಒಂದನೇ ಶತಮಾನದಲ್ಲಿ ಮಾಡಲಾಗುತ್ತಿದ್ದ ಶಾರೀರಿಕ ರೋಗವಾಸಿಗಳನ್ನು ಕಣ್ಣಾರೆಕಂಡ ಜನರ ಹೃದಯಗಳು ಅತ್ಯಾನಂದದಿಂದ ತುಂಬುತ್ತಿದ್ದವು. (ಲೂಕ 5:24-26) ನಮ್ಮ ದಿನದಲ್ಲಿ ನಡೆಯುತ್ತಿರುವ ಆಧ್ಯಾತ್ಮಿಕ ವಾಸಿಮಾಡುವ ಕೆಲಸದಲ್ಲೂ ನಾವು ಉಲ್ಲಾಸಿಸುತ್ತೇವೆ. (ಪ್ರಕ. 22:1, 2, 17) ಯೆಹೋವನ ವಾಕ್ಯ ಮತ್ತು ಪವಿತ್ರಾತ್ಮವು ಜನರ ಜೀವನಗಳನ್ನು ಬದಲಾಯಿಸಿರುವುದರ ಕುರಿತ ಅನುಭವಗಳನ್ನು ಓದುವುದು ಅದೆಷ್ಟು ರೋಮಾಂಚಕ! ಅದಕ್ಕಿಂತಲೂ ಹೆಚ್ಚು ಆನಂದಕರವಾದದ್ದು ಆ ಕೆಲಸದಲ್ಲಿ ಭಾಗವಹಿಸುವುದೇ ಆಗಿದೆ. ಇದನ್ನು ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡಿಸುವ ಮೂಲಕ ಮಾಡಬಹುದು.

2. ಇತರರಿಗೆ ಸತ್ಯವನ್ನು ಕಲಿಸಿದಂತೆ ನಾವು ಯಾವ ಆನಂದವನ್ನು ಅನುಭವಿಸುತ್ತೇವೆ?

2 ದೇವರ ಹೆಸರೇನು? ಆತನು ಕಷ್ಟಸಂಕಟಗಳನ್ನು ಅನುಮತಿಸುವುದೇಕೆ? ದೇವರ ರಾಜ್ಯ ಮಾನವಕುಲಕ್ಕಾಗಿ ಏನು ಮಾಡಲಿದೆ? ಇಂಥ ಪ್ರಶ್ನೆಗಳನ್ನು ನಾವು ಉತ್ತರಿಸುವಾಗ ಮಾತ್ರವಲ್ಲ ಆ ಸತ್ಯಗಳನ್ನು ವಿದ್ಯಾರ್ಥಿ ಕಲಿಯುವಾಗ ಅವನಿಗಾಗುವ ಸಂತೋಷವನ್ನು ನೋಡಿಯೂ ನಮಗೆ ಆನಂದವಾಗುತ್ತದೆ. (ಜ್ಞಾನೋ. 15:23; ಲೂಕ 24:32) ವಿದ್ಯಾರ್ಥಿ ಪ್ರಗತಿ ಮಾಡುತ್ತಾ ಹೋದಂತೆ ಯೆಹೋವನ ನಾಮವನ್ನು ಬಳಸ ತೊಡಗುವನು, ತನ್ನ ಉಡುಪು-ತೋರಿಕೆಯಲ್ಲಿ ಬದಲಾವಣೆ ಮಾಡುವನು, ಹಾನಿಕರ ಚಟಗಳನ್ನೂ ಪದ್ಧತಿಗಳನ್ನೂ ಬಿಟ್ಟುಬಿಡುವನು ಮತ್ತು ಇತರರಿಗೆ ಸಾಕ್ಷಿನೀಡಲು ಆರಂಭಿಸುವನು. ಕೊನೆಗೆ ಅವನು ಸಮರ್ಪಣೆಮಾಡಿ ದೀಕ್ಷಾಸ್ನಾನ ಪಡೆದು ನಮ್ಮ ಸಹೋದರನೂ ಜೊತೆಕೆಲಸಗಾರನೂ ಆಗುವನು. ಈ ಧನಾತ್ಮಕ ಹೆಜ್ಜೆಗಳಲ್ಲಿ ಪ್ರತಿಯೊಂದು ಹೆಜ್ಜೆ ಹರ್ಷಾನಂದಕ್ಕೆ ಕಾರಣ.—1 ಥೆಸ. 2:19, 20.

3. ಬೈಬಲ್‌ ಅಧ್ಯಯನ ಆರಂಭಿಸಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತಕ್ಕೊಳ್ಳಬಲ್ಲೆವು?

3 ನೀವು ಭಾಗವಹಿಸಬಲ್ಲಿರೊ? ಈ ಅತಿ ಆನಂದದಾಯಕ ಕೆಲಸದಲ್ಲಿ ನೀವು ಭಾಗವಹಿಸಲು ಬಯಸುವಲ್ಲಿ, ಒಂದು ಬೈಬಲ್‌ ಅಧ್ಯಯನ ನಡಿಸುವ ಸುಯೋಗಕ್ಕಾಗಿ ಯೆಹೋವನನ್ನು ಪ್ರಾರ್ಥಿಸಿರಿ. ಆಮೇಲೆ ನಿಮ್ಮ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಕೆಲಸಮಾಡಿ. (1 ಯೋಹಾ. 5:14) ಜನರು ಸಿಗುವಂಥ ಸ್ಥಳಗಳಲ್ಲಿ ಮತ್ತು ಸಮಯದಲ್ಲಿ ಸಾರಿರಿ. ತಕ್ಕದಾದ ಪ್ರತಿಯೊಂದು ಸಂದರ್ಭದಲ್ಲಿ ಬೈಬಲ್‌ ಅಧ್ಯಯನದ ಏರ್ಪಾಡಿನ ಬಗ್ಗೆ ತಿಳಿಸಿರಿ. (ಪ್ರಸಂ. 11:6) ಆಸಕ್ತಿಯನ್ನು ಕಂಡುಕೊಂಡು ಸತ್ಯದ ಬೀಜವನ್ನು ಹಾಕಿದಾಗ ಅದಕ್ಕೆ ನೀರುಹೊಯ್ಯಲು ಪುನರ್ಭೇಟಿ ಮಾಡಿರಿ.—1 ಕೊರಿಂ. 3:6-9.

4. ನಾವು ತುರ್ತುಪ್ರಜ್ಞೆಯಿಂದ ಬೈಬಲ್‌ ಅಧ್ಯಯನಗಳ ಏರ್ಪಾಡಿನ ಬಗ್ಗೆ ತಿಳಿಸಬೇಕು ಏಕೆ?

4 ನೀತಿಗಾಗಿ ಹಸಿದು ಬಾಯಾರುತ್ತಿರುವ ಅಸಂಖ್ಯಾತ ಜನರು ಇನ್ನೂ ಇದ್ದಾರೆ. ಅವರೊಂದಿಗೆ ಬೈಬಲ್‌ ಅಧ್ಯಯನ ನಡೆಸುವ ಮೂಲಕ ಅವರ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲು ಯಾರು ಸಹಾಯಮಾಡುವರು? (ಮತ್ತಾ. 5:3, 6) ಕೊಯ್ಲಿನ ಕಾಲ ಅಂತ್ಯಗೊಳ್ಳುವ ಮುಂಚೆ ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸವನ್ನು ಪೂರ್ತಿಗೊಳಿಸಲು ಅದರಲ್ಲಿ ಸಿದ್ಧಮನಸ್ಸಿನಿಂದ ಭಾಗವಹಿಸೋಣ.—ಯೆಶಾ. 6:8.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ