ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರವಲೋಕನ
ಇಸವಿ 2010, ಅಕ್ಟೋಬರ್ 25ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2010ರ ಸೆಪ್ಟೆಂಬರ್ 6ರಿಂದ ಅಕ್ಟೋಬರ್ 25ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧರಿತ. 20 ನಿಮಿಷಗಳ ಈ ಪುನರವಲೋಕನವನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ರಾಜ ಅಜರ್ಯನ (ಉಜ್ಜೀಯನ) ಜೀವನ ವೃತ್ತಾಂತದಿಂದ ನಾವು ಯಾವ ಪಾಠ ಕಲಿಯಬಲ್ಲೆವು? (2 ಅರ. 15:1-6) [w05 10/15 ಪು. 25 ಪ್ಯಾರ. 19]
2. ಎರಡನೇ ಅರಸುಗಳು 13:20, 21ರಲ್ಲಿ ತಿಳಿಸಲಾಗಿರುವ ಅದ್ಭುತವು ಒಬ್ಬ ಧಾರ್ಮಿಕ ವ್ಯಕ್ತಿಯ ಅವಶೇಷಗಳ ಆರಾಧನೆಯನ್ನು ಬೆಂಬಲಿಸುತ್ತದೋ? [w05 8/1 ಪು. 11 ಪ್ಯಾರ. 3]
3. ಹಿಜ್ಕೀಯನು ಐಗುಪ್ತದೊಂದಿಗೆ ಮೈತ್ರಿಸಂಬಂಧವನ್ನು ಮಾಡಿದ್ದನೋ? (2 ಅರ. 18:19-21, 25) [w05 8/1 ಪು. 11 ಪ್ಯಾರ. 5]
4. ಯೆಹೋವನು ತನ್ನ ಉದ್ದೇಶವನ್ನು ‘ನಿರ್ಣಯಿಸುತ್ತಾನೆ’ ಅಥವಾ ‘ರೂಪಿಸುತ್ತಾನೆ’ (NW) ಎಂದು ಹೇಳಲಾಗಿರುವುದೇಕೆ? (2 ಅರ. 19:25) [w99 8/15 ಪು. 14 ಪ್ಯಾರ. 3]
5. ಯೆಹೋವನು ಯೆಹೂದ್ಯರನ್ನು ‘ಕ್ಷಮಿಸದೆ ಹೋದದ್ದು’ ಏಕೆ? (2 ಅರ. 24:3, 4) [w05 8/1 ಪು. 12 ಪ್ಯಾರ. 1]
6. ಒಂದನೇ ಸಮುವೇಲ 16:10, 11 ದಾವೀದನನ್ನು ಇಷಯನ ಎಂಟನೆಯ ಮಗನೆಂದು ಸೂಚಿಸುವಾಗ ಎಜ್ರನು ಅವನನ್ನು ಏಳನೆಯ ಮಗನೆಂದು ಸೂಚಿಸುವುದೇಕೆ? (1 ಪೂರ್ವ. 2:15) [w05 10/1 ಪು. 9 ಪ್ಯಾರ. 1]
7. ಪುರಾತನ ಗಿಲ್ಯಾದ್ಯರ ಮಾದರಿಯನ್ನು ನಾವು ಹೇಗೆ ಅನುಕರಿಸಬಲ್ಲೆವು? (1 ಪೂರ್ವ. 5:10, 18-22) [w05 10/1 ಪು. 9 ಪ್ಯಾರ. 7]
8. ಲೇವಿಯರಾದ ದ್ವಾರಪಾಲಕರಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ? (1 ಪೂರ್ವ. 9:26, 27) [w05 10/1 ಪು. 9 ಪ್ಯಾರ. 8]
9. ಹತರಾದವರ ಸಂಖ್ಯೆಯನ್ನು 2 ಸಮುವೇಲ 23:8ರಲ್ಲಿ 800 ಎಂದು ಕೊಡಲ್ಪಟ್ಟಿರುವಾಗ, 1 ಪೂರ್ವಕಾಲವೃತ್ತಾಂತ 11:11ರಲ್ಲಿ 300 ಎಂದು ಕೊಡಲ್ಪಟ್ಟಿರುವುದೇಕೆ? [w05 10/1 ಪು. 10 ಪ್ಯಾರ. 3]
10. ಒಂದನೇ ಪೂರ್ವಕಾಲವೃತ್ತಾಂತ 13:11ರಲ್ಲಿ ತಿಳಿಸಲಾದ ದಾವೀದನ ಪ್ರತಿಕ್ರಿಯೆ ಯಾಕೆ ತಪ್ಪಾಗಿತ್ತು? [w05 10/1 ಪು. 11]