ಜೂನ್ 28ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 28ರಿಂದ ಆರಂಭವಾಗುವ ವಾರ
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 8 ಪ್ಯಾರ. 19-26, ಪುಟ 106, 109ರ ಚೌಕಗಳು
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: 1 ಅರಸುಗಳು 3-6
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಜುಲೈ ತಿಂಗಳಲ್ಲಿ ಪತ್ರಿಕೆಗಳನ್ನು ನೀಡಲು ತಯಾರಿ. ಸಭಿಕರೊಂದಿಗೆ ಚರ್ಚೆ. ಪತ್ರಿಕೆಗಳಲ್ಲಿರುವ ವಿಷಯಗಳನ್ನು ಒಂದೆರಡು ನಿಮಿಷಗಳಲ್ಲಿ ತಿಳಿಸಿರಿ. ಅನಂತರ ಎರಡು ಅಥವಾ ಮೂರು ಲೇಖನಗಳನ್ನು ಆಯ್ಕೆಮಾಡಿರಿ. ಆ ಲೇಖನಗಳನ್ನು ಮನೆಯವರಿಗೆ ಪರಿಚಯಿಸಲು ಯಾವ ಪ್ರಶ್ನೆಗಳನ್ನೂ ವಚನಗಳನ್ನೂ ಬಳಸಬಹುದೆಂದು ಸಭಿಕರನ್ನು ಕೇಳಿ. ಪ್ರತಿಯೊಂದು ಸಂಚಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ. ಕೊನೆಗೆ ಇನ್ನೊಂದು ಪ್ರತ್ಯಕ್ಷಾಭಿನಯದಲ್ಲಿ, ಬೈಬಲ್ ಅಧ್ಯಯನವನ್ನು ಪುನರ್ಭೇಟಿಯಲ್ಲಿ ಹೇಗೆ ಆರಂಭಿಸಬಹುದೆಂದು ತೋರಿಸಿ. —km 8/07 ಪು. 3.
15 ನಿ: ಶೈಶವದಿಂದಲೇ ತರಬೇತಿ. ಸಭಿಕರೊಂದಿಗೆ ಚರ್ಚೆ. ಹುರುಪಿನ, ಕೌಶಲಭರಿತ ಸೌವಾರ್ತಿಕನು ಎಂಬ ಖ್ಯಾತಿ ತಿಮೊಥೆಯನಿಗಿತ್ತು. (ಫಿಲಿ. 2:20-22) ಇದಕ್ಕೆ ಒಂದು ಕಾರಣ, ಅವನ ತಾಯಿ ಹಾಗೂ ಅಜ್ಜಿ ಅವನು ಶಿಶುವಾಗಿದ್ದಾಗಲೇ ಅವನಲ್ಲಿ ಹಾಕಿದ ಆಧ್ಯಾತ್ಮಿಕ ತಳಪಾಯವೇ. (2 ತಿಮೊ. 1:5; 3:15) ಉತ್ತಮ ಸೌವಾರ್ತಿಕರಾಗಲು ಮಕ್ಕಳಿಗೆ ತರಬೇತಿ ಕೊಡುವಂತೆ ಈ ಮುಂದಿನ ಶಾಸ್ತ್ರಾಧಾರಿತ ಸಲಹೆಗಳು ಹೆತ್ತವರಿಗೆ ನೆರವಾಗುವವು: (1) ನಿಮ್ಮ ಮಗುವನ್ನು ಆದಷ್ಟು ಚಿಕ್ಕ ಪ್ರಾಯದಲ್ಲೇ ಶುಶ್ರೂಷೆಗೆ ಕರಕೊಂಡು ಹೋಗಿರಿ. ಅವನ ವಯಸ್ಸು ಮತ್ತು ಸಾಮರ್ಥ್ಯಕ್ಕನುಸಾರ ಅದರಲ್ಲಿ ಪಾಲ್ಗೊಳ್ಳಲು ತರಬೇತು ಕೊಡಿ. (ಜ್ಞಾನೋ. 22:6) (2) ಶುಶ್ರೂಷೆಗೆ ಆದ್ಯತೆ ಕೊಡುವುದರಲ್ಲಿ ಒಳ್ಳೇ ಮಾದರಿಯನ್ನಿಡಿ. (ಫಿಲಿ. 1:9, 10) (3) ಸಾರುವ ಕೆಲಸಕ್ಕಾಗಿ ಪ್ರೀತಿ ಹಾಗೂ ಕೃತಜ್ಞತಾ ಭಾವವನ್ನು ಅವನಲ್ಲಿ ತುಂಬಿಸಲು ಕುಟುಂಬ ಆರಾಧನೆ ಮತ್ತು ಇತರ ಸಂದರ್ಭಗಳನ್ನು ಬಳಸಿರಿ. (ಧರ್ಮೋ. 6:6, 7) (4) ಶುಶ್ರೂಷೆಯ ಕಡೆಗಿನ ನಿಮ್ಮ ಮನೋಭಾವ ಮತ್ತು ಅದರ ಕುರಿತ ನಿಮ್ಮ ಮಾತು ಸಕಾರಾತ್ಮಕವಾಗಿರಲಿ. (ಫಿಲಿ. 3:8; 4:8; 1 ತಿಮೊ. 1:12) (5) ಶುಶ್ರೂಷೆಯಲ್ಲಿ ಕುಟುಂಬ ಸಮೇತ ಕ್ರಮವಾಗಿ ಪಾಲ್ಗೊಳ್ಳುವ ಮೂಲಕ ಅದನ್ನು ರೂಢಿಯಾಗಿಸಿ. (ಅ. ಕಾ. 5:41, 42) (6) ಹುರುಪಿನ ಶುಶ್ರೂಷಕರ ಸಹವಾಸಮಾಡಿ. (ಜ್ಞಾನೋ. 13:20) ಶುಶ್ರೂಷೆಯನ್ನು ಸಂತೋಷದಿಂದಲೂ ಪರಿಣಾಮಕಾರಿಯಾಗಿಯೂ ಮಾಡುವಂತೆ ತಮ್ಮ ಹೆತ್ತವರು ಮಾಡಿದ ನಿರ್ದಿಷ್ಟ ವಿಷಯಗಳನ್ನು ತಿಳಿಸಲು ಸಭಿಕರನ್ನು ಆಹ್ವಾನಿಸಿ.