ಜನವರಿ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜನವರಿ 11ರಿಂದ ಆರಂಭವಾಗುವ ವಾರ
ಗೀತೆ 201
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 1 ಪ್ಯಾರ. 10-18, ಪು. 15ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಯೆಹೋಶುವ 21-24
ನಂ. 1: ಯೆಹೋಶುವ 24:1-13
ನಂ. 2: ದೇವರು ಕಾಳಜಿ ಇಲ್ಲದವನೂ ಕಲ್ಲೆದೆಯವನೂ ಆಗಿದ್ದಾನೊ?
ನಂ. 3: ಏಕಾಂತತೆಯ ವಿರುದ್ಧ ಹೋರಾಟವನ್ನು ಜಯಿಸುವುದು (fy ಪು. 110-113 ಪ್ಯಾರ. 18-22)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಅಧ್ಯಯನ ಮಾಡುವ ವಿಧವನ್ನು ನಿಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಕಲಿಸಿರಿ. ಸಭಿಕರೊಂದಿಗೆ ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 28-31ರಲ್ಲಿರುವ “ಅಧ್ಯಯನ ಮಾಡುವ ವಿಧ” ಉಪಶೀರ್ಷಿಕೆಯ ಮಾಹಿತಿ ಮೇಲೆ ಆಧಾರಿತ. ಈ ಭಾಗವನ್ನು ಒಂದು ಪ್ರತ್ಯಕ್ಷಾಭಿನಯದೊಂದಿಗೆ ಆರಂಭಿಸಿರಿ. ಅದರಲ್ಲಿ ಒಬ್ಬ ಅನುಭವಿ ಪ್ರಚಾರಕನು ಬೈಬಲ್ ಬೋಧಿಸುತ್ತದೆ ಪುಸ್ತಕದ ಪುಟ 7ರ ಮಾಹಿತಿಯನ್ನು ಬಳಸಿ ಹೊಸ ಬೈಬಲ್ ವಿದ್ಯಾರ್ಥಿಗೆ ತನ್ನ ಅಧ್ಯಯನಕ್ಕಾಗಿ ಹೇಗೆ ತಯಾರಿಸಬೇಕೆಂದು ತೋರಿಸಲಿ.
15 ನಿ: “ಸುವಾರ್ತೆ ಹಂಚಿಕೊಳ್ಳಲು ನನ್ನಲ್ಲೇನು ಅರ್ಹತೆಯಿದೆ?” ಪ್ರಶ್ನೋತ್ತರ ಚರ್ಚೆ. ಪ್ಯಾರ 4ನ್ನು ಪರಿಗಣಿಸಿದ ನಂತರ ಪ್ರಚಾರಕರೊಬ್ಬರನ್ನು ಇಂಟರ್ವ್ಯೂ ಮಾಡಿ. ಈ ಪ್ರಶ್ನೆಗಳನ್ನು ಕೇಳಿ: ಪರಿಣಾಮಕಾರಿಯಾಗಿ ಸಾರಲು ನೀವು ಯಾವ ಸವಾಲುಗಳನ್ನು ಎದುರಿಸಬೇಕಾಯಿತು? ಸಕ್ರಿಯ ಮತ್ತು ಫಲಕಾರಿ ಶುಶ್ರೂಷಕರಾಗಲು ನಿಮಗೆ ಯಾವೆಲ್ಲಾ ಸಹಾಯ ಸಿಕ್ಕಿತು?