ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಮಕ್ಕಳಿರುವ ಮನೆಯವರಿಗೆ ಬೈಬಲ್ ಕಥೆಗಳ ನನ್ನ ಪುಸ್ತಕ ನೀಡಿರಿ. ಜನವರಿ: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವನ ಬಳಿ ಈಗಾಗಲೇ ಇರುವುದಾದರೆ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಪ್ರಚಾರಕರು ಈ ಮುಂದಿನ ಪುಸ್ತಕಗಳಲ್ಲಿ ಯಾವುದಾದರೊಂದನ್ನು ಲಭ್ಯವಿರುವಲ್ಲಿ ನೀಡಬಹುದು: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್—ದೇವರ ವಾಕ್ಯವೊ? ಮನುಷ್ಯನದ್ದೊ? (ಇಂಗ್ಲಿಷ್) ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕವನ್ನು ಪ್ರಚಾರಕರು ಮನೆಯವರಿಗೆ ಕೊಟ್ಟಿರುವಲ್ಲಿ ಅಥವಾ ಮನೆಯವರ ಬಳಿ ಈಗಾಗಲೇ ಇರುವಲ್ಲಿ ಅವರೊಂದಿಗೆ ಬೈಬಲ್ ಅಧ್ಯಯನ ಪ್ರಾರಂಭಿಸಬೇಕು.
◼ ಇಸವಿ 2011ಕ್ಕಾಗಿರುವ ಜ್ಞಾಪಕಾಚರಣೆಯು, ಏಪ್ರಿಲ್ 17ರ ಭಾನುವಾರದಂದು ಸೂರ್ಯಾಸ್ತಮಾನದ ನಂತರ ನಡೆಯಲಿದೆ. ಅನೇಕ ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಉಪಯೋಗಿಸುತ್ತಿದ್ದು, ಬೇರೆ ಹಾಲ್‌ಗಳ ವ್ಯವಸ್ಥೆ ಮಾಡಬೇಕಾಗಿರುವಲ್ಲಿ ಸಹೋದರರು ಲಭ್ಯವಿರುವ ಹಾಲ್‌ಗಳನ್ನು ಮುಂಚಿತವಾಗಿಯೇ ಕಾಯ್ದಿರಿಸುವಂತೆ ಇಲ್ಲವೆ ಕಾಂಟ್ರ್ಯಾಕ್ಟ್ ಮಾಡುವಂತೆ ಈ ಮುಂಗಡ ಸೂಚನೆಯನ್ನು ಕೊಡಲಾಗಿದೆ.
◼ ಪ್ರತಿ ಸಭೆಯ ಪ್ರಮುಖ ಭಾಷೆಯಲ್ಲಿ ಇಸವಿ 2010ರ ಜ್ಞಾಪಕಾಚರಣೆಯ ಆಮಂತ್ರಣ ಪತ್ರಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ನಿಮ್ಮ ಟೆರಿಟೊರಿಯಲ್ಲಿ ಇತರ ಭಾಷೆಗಳನ್ನಾಡುವವರು ಇರುವಲ್ಲಿ ಮತ್ತು ನಿಮಗೆ ಆ ಭಾಷೆಗಳಲ್ಲಿ ಆಮಂತ್ರಣ ಪತ್ರಗಳು ಬೇಕಾಗಿರುವಲ್ಲಿ ಅವುಗಳಿಗಾಗಿ ಸಾಧ್ಯವಾದಷ್ಟು ಬೇಗನೆ ಲಿಟ್‌ರೇಚರ್ ರಿಕ್ವೆಸ್ಟ್ ಫಾರ್ಮ್ (S-14) ಮೂಲಕ ವಿನಂತಿಸಿಕೊಳ್ಳತಕ್ಕದ್ದು.