ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/09 ಪು. 7
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2009 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
  • ಯೆಹೋವನ ಸಾಕ್ಷಿಗಳ ಕೂಟಗಳಿಗೆ ನಿಮಗೆ ಸ್ವಾಗತ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಟೆಲಿಫೋನ್‌ ಸಾಕ್ಷಿಕಾರ್ಯ ಪರಿಣಾಮಕಾರಿ!
    2009 ನಮ್ಮ ರಾಜ್ಯದ ಸೇವೆ
  • ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
2009 ನಮ್ಮ ರಾಜ್ಯದ ಸೇವೆ
km 11/09 ಪು. 7

ಪ್ರಶ್ನಾ ಚೌಕ

◼ ಸಭಾ ಕೂಟಗಳನ್ನು ಫೋನ್‌ ಮೂಲಕ ಯಾರಿಗೆ ಪ್ರಸಾರ ಮಾಡಬೇಕೆಂಬ ವಿಷಯದಲ್ಲಿ ವಿವೇಚನೆ ಅಗತ್ಯವೇಕೆ?

ಕೆಲವೊಮ್ಮೆ ಅಸೌಖ್ಯ ಇಲ್ಲವೆ ಅನಿವಾರ್ಯ ಪರಿಸ್ಥಿತಿಯ ನಿಮಿತ್ತ ಕೆಲವರು ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಹಾಜರಾಗಲು ಅಶಕ್ತರಾಗಿರುತ್ತಾರೆ. ಅಂಥವರು ಮನೆಯಲ್ಲೇ ಕೂಟಗಳಿಗೆ ಕಿವಿಗೊಡಲು ಸಾಧ್ಯವಾಗುವಂತೆ ಅನೇಕ ಸಭೆಗಳು ಫೋನ್‌ ಮೂಲಕ ಕೂಟಗಳನ್ನು ಪ್ರಸಾರ ಮಾಡುವ (ಟೆಲಿಫೋನ್‌ ಹುಕಪ್‌) ಸೌಲಭ್ಯ ಹೊಂದಿವೆ. ನಿಜವಾಗಿಯೂ ಅಗತ್ಯದಲ್ಲಿರುವವರಿಗೆ ಮಾತ್ರ ಈ ಪ್ರೀತಿಪರ ಸೌಲಭ್ಯ ಸಿಗುವಂತೆ ನೋಡಿಕೊಳ್ಳಲು ವಿವೇಚನೆ ಮತ್ತು ಜಾಗರೂಕ ಸಂಯೋಜನೆ ಅಗತ್ಯ. ಆದುದರಿಂದ ಅಂಥ ಏರ್ಪಾಡಿನ ಮೇಲ್ವಿಚಾರಣೆ ನಡೆಸುವ ಹಿರಿಯರು ‘ಎಲ್ಲವು ಸಭ್ಯವಾಗಿಯೂ ಕ್ರಮವಾಗಿಯೂ ನಡೆಯುವಂತೆ’ ಸಂಘಟಿಸಬೇಕು ಮತ್ತು ನಿಗಾವಹಿಸಬೇಕು.—1 ಕೊರಿಂ. 14:40.

ದೀರ್ಘಕಾಲಿನ ರೋಗ, ದೇಹದೌರ್ಬಲ್ಯ ಅಥವಾ ಇನ್ನಿತರ ಕಾರಣಗಳಿಂದ ಮನೆಯಿಂದ ಹೊರಗೆ ಬರಲಾಗದ ಪ್ರಚಾರಕರಿಗೆ ಆದ್ಯತೆ ಕೊಡುವಂತೆ ಹಿರಿಯರು ನೋಡಿಕೊಳ್ಳುವರು. ಅಸ್ವಸ್ಥತೆಯಿಂದಲೋ ಇನ್ನಿತರ ಕಾರಣದಿಂದಲೋ ತತ್ಕಾಲಕ್ಕೆ ಮನೆಯಿಂದ ಹೊರಬರಲಾಗದ ಪ್ರಚಾರಕ ಅಥವಾ ಪ್ರಗತಿಪರ ಬೈಬಲ್‌ ವಿದ್ಯಾರ್ಥಿಗೂ ಈ ಸೌಲಭ್ಯವನ್ನು ಒದಗಿಸಬಹುದು ಮತ್ತು ಅವರ ಹಾಜರಿಯನ್ನು ಲೆಕ್ಕಿಸಬಹುದು. ನಿಜವಾಗಿ ಅಗತ್ಯವುಳ್ಳವರಿಗೆ ಈ ಸೌಲಭ್ಯವನ್ನು ಒದಗಿಸಲು ಸಾಕಷ್ಟು ಟೆಲಿಫೋನ್‌ ಲೈನ್ಸ್‌ ಇಲ್ಲದಿರುವಲ್ಲಿ ಕೂಟವನ್ನು ರೆಕಾರ್ಡ್‌ ಮಾಡಿಕೊಡುವಂಥ ಇತರ ಏರ್ಪಾಡುಗಳನ್ನು ಮಾಡಸಾಧ್ಯವಿದೆ.

ಕೂಟಗಳಲ್ಲಿ ಖುದ್ದಾಗಿ ಹಾಜರಿರುವುದರ ಪ್ರಯೋಜನಗಳು ಹೋಲಿಸಲಸಾಧ್ಯ ಎಂಬುದಂತೂ ಖಂಡಿತ. ಈ ರೀತಿಯಲ್ಲಿ ಸಹೋದರರೊಂದಿಗಿನ ನೇರವಾದ ಸಹವಾಸದಿಂದ ‘ಪರಸ್ಪರ ಉತ್ತೇಜನದ ವಿನಿಮಯ’ ಆಗುತ್ತದೆ ಮತ್ತು ಕೂಟಗಳಿಗೆ ಹಾಜರಾಗುವುದು ಎಷ್ಟು ಮಹತ್ವ ಎಂಬುದನ್ನು ಗ್ರಹಿಸಲು ಹೊಸಬರಿಗೆ ನೆರವಾಗುತ್ತದೆ. ಅಲ್ಲದೆ, ಪ್ರತ್ಯಕ್ಷಾಭಿನಯಗಳಿಂದ ಹೆಚ್ಚನ್ನು ಕಲಿಯಬಲ್ಲೆವು, ಹಿರಿಯರು ವೈಯಕ್ತಿಕ ನೆರವನ್ನು ನೀಡಶಕ್ತರಾಗುವರು ಮತ್ತು ಸಹೋದರ ಬಳಗದ ಹೃತ್ಪೂರ್ವಕ ಪ್ರೀತಿಯನ್ನು ಪ್ರತ್ಯಕ್ಷವಾಗಿ ಅನುಭವಿಸುವೆವು. ಒಬ್ಬಾಕೆ ವೃದ್ಧ ಸಹೋದರಿ ಸಭಾಗೃಹದಿಂದ ಹೊರಹೋಗುತ್ತಿದ್ದಂತೆ ಒಬ್ಬರು ಬಂದು ಪ್ರೀತಿಯಿಂದ ಆಲಂಗಿಸಿದರು. ಆಗ ಅವರಂದದ್ದು: “ಫೋನ್‌ನಲ್ಲಿ ಇದು ಖಂಡಿತ ಸಿಗುವುದಿಲ್ಲ!” ಅವರ ಮಾತು ನಿಜವಾಗಿಯೂ ಸತ್ಯ ಅಲ್ಲವೆ?—ರೋಮ. 1:11, 12.

ದೇವಾಲಯಕ್ಕೆ ಹಾಜರಾಗುವುದನ್ನು ಒಂದು ದಿನವೂ ತಪ್ಪಿಸದಿದ್ದ ಅನ್ನಳಂತೆ ಇಂದು ನಮ್ಮಲ್ಲಿ ಅನೇಕ ಮಂದಿ ವೃದ್ಧರು ತಮ್ಮ ಆರೋಗ್ಯ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಿರುತ್ತಾರೆ. (ಲೂಕ 2:36, 37) ಕೇವಲ ಅಗತ್ಯವಿದ್ದಾಗ ಮಾತ್ರ ಟೆಲಿಫೋನ್‌ ಹುಕಪ್‌ ಅನ್ನು ಬಳಸುತ್ತಾರೆಯೇ ಹೊರತು ಚಿಕ್ಕಪುಟ್ಟ ಕಾರಣಕ್ಕೆಲ್ಲಾ ಅವರು ರಾಜ್ಯ ಸಭಾಗೃಹಕ್ಕೆ ಹೋಗುವುದನ್ನು ತಪ್ಪಿಸುವುದಿಲ್ಲ. ಅವರ ಉತ್ತಮ ಮಾದರಿಯನ್ನು ಅನುಕರಿಸುತ್ತಾ ನಾವು ನಮ್ಮ ಮಹೋನ್ನತ ದೇವರಾದ ಯೆಹೋವನನ್ನು ಆರಾಧಿಸಲಿಕ್ಕಾಗಿ ಕೂಟಗಳಿಗೆ ಖುದ್ದಾಗಿ ಹಾಜರಿರಲು ಸಂತೋಷದಿಂದ ಪ್ರಯತ್ನಿಸೋಣ.—ಕೀರ್ತ. 95:1-3, 6; 122:1.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ