ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2009, ಆಗಸ್ಟ್ 31ರ ವಾರದ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2009ರ ಜುಲೈ 6ರಿಂದ ಆಗಸ್ಟ್ 31ರ ತನಕದ ವಾರಗಳ ನೇಮಕಗಳಲ್ಲಿ ಆವರಿಸಲಾದ ವಿಷಯಗಳ ಮೇಲೆ ಇವು ಆಧಾರಿತ. 20-ನಿಮಿಷಗಳ ಈ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
1. ತಂದೆತಾಯಿಗಳನ್ನು “ದೂಷಿಸುವವನಿಗೆ” ಮರಣಶಿಕ್ಷೆಯನ್ನು ಏಕೆ ವಿಧಿಸಲಾಗುತ್ತಿತ್ತು? (ಯಾಜ. 20:9) [w04-KA 5/15 ಪು. 24 ಪ್ಯಾರ 6]
2. ಆಧ್ಯಾತ್ಮಿಕ ಬೆನ್ನಟ್ಟುವಿಕೆಗಳಿಗೆ ಆದ್ಯತೆ ನೀಡುವುದರ ಪ್ರಮುಖತೆಯನ್ನು ದೇವರು ಇಸ್ರಾಯೇಲ್ಯರಿಗೆ ಹೇಗೆ ಒತ್ತಿಹೇಳಿದನು? (ಯಾಜ. 23:4-44) [w05-KA 5/15 ಪು. 23, ಪ್ಯಾರ 14]
3. ಜೂಬಿಲಿ ಸಂವತ್ಸರವು ಏನನ್ನು ಮುನ್ಚಿತ್ರಿಸುತ್ತದೆ? (ಯಾಜ. 25:10, 11) [w04-KA 7/15 ಪು. 26-27]
4. ಅರಣ್ಯಕಾಂಡ 2:2ರಲ್ಲಿ ಹೇಳಲಾಗಿರುವ “ಗೋತ್ರಧ್ವಜ”ಗಳಿಗೆ ಯಾವುದಾದರೂ ಧಾರ್ಮಿಕ ವಿಶೇಷಾರ್ಥವಿತ್ತೋ? [w02-KA 9/15 ಪು. 21, ಪ್ಯಾರ 4]
5. ಪುರಾತನ ಇಸ್ರಾಯೇಲಿನ ನಾಜೀರರು ತೋರಿಸಿದ ಯಾವ ಮನೋಭಾವವನ್ನು ಇಂದಿನ ಪೂರ್ಣ ಸಮಯದ ರಾಜ್ಯ ಘೋಷಕರು ತೋರಿಸುತ್ತಾರೆ? (ಅರ. 6:3, 5, 6) [w04-KA 8/1 ಪು. 24-25]
6. ಲೇವಿಯರ ನಿವೃತ್ತಿಯ ಕುರಿತಾದ ನಿಯಮದ ಹಿಂದಿರುವ ಯಾವ ಮೂಲತತ್ತ್ವವು ಇಂದಿರುವ ಯೆಹೋವನ ಜನರಿಗೆ ಅನ್ವಯಿಸುತ್ತದೆ? (ಅರ. 8:25, 26) [w04-KA 8/1 ಪು. 25 ಪ್ಯಾರ 1]
7. ಇಸ್ರಾಯೇಲ್ಯರು ‘ಸ್ವಾರ್ಥಪರ ಆಸೆ’ಯನ್ನು ಹೇಗೆ ವ್ಯಕ್ತಪಡಿಸಿದರು, ಮತ್ತು ಇದರಿಂದ ಕ್ರೈಸ್ತರಿಗೆ ಕಲಿಯಲು ಯಾವ ಪಾಠವಿದೆ? (ಅರ. 11:4) [w01-KA 6/15 ಪು. 14-15; w95-KA 3/1 ಪು. 16 ಪ್ಯಾರ 10]
8. ಮಿರ್ಯಾಮಳಿಗೆ ಮಾತ್ರ ತೊನ್ನುಹತ್ತಿತೇಕೆ, ಮತ್ತು ಅದರಿಂದ ಯಾವ ಪ್ರಮುಖ ಪಾಠವನ್ನು ಕಲಿಯಸಾಧ್ಯವಿದೆ? (ಅರ. 12:9-11) [w04-KA 8/1 ಪು. 26 ಪ್ಯಾರ 2]
9. ಕಾನಾನ್ಯರನ್ನು “ನುಂಗಿ ಪುಷ್ಟಿಯಾಗುವೆವು” ಎಂದು ಹೇಳುವ ಮೂಲಕ ಯೆಹೋಶುವ ಮತ್ತು ಕಾಲೇಬರು ಏನನ್ನು ಸೂಚಿಸಿದರು? (ಅರ. 14:9) [w06-KA 10/1 ಪು. 18 ಪ್ಯಾರ 5]
10. ಯಾವ ಎಚ್ಚರಿಕೆಯ ಉದಾಹರಣೆಯನ್ನು ಅರಣ್ಯಕಾಂಡ 21:5 ನೀಡುತ್ತದೆ? [w99-KA 8/15 ಪು. 26-27]