ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಮಾರ್ಚ್ 2009
ಮಾರ್ಚ್ನಲ್ಲಿ ನಾವು ಮಾಡಿದ ಹೆಚ್ಚು ಸೇವೆಯನ್ನು ಯೆಹೋವನು ಹೇರಳವಾಗಿ ಆಶೀರ್ವದಿಸಿದ್ದಾನೆ. ವಿಶೇಷ ಆಮಂತ್ರಣ ಪತ್ರಗಳ ವಿತರಣೆಯಿಂದಾಗಿ 78,170 ಮಂದಿ ಜ್ಞಾಪಕಾಚರಣೆಗೆ ಹಾಜರಾದರು. ಈ ಕೆಳಗಿನವುಗಳಲ್ಲಿ ಅತ್ಯುತ್ತಮ ಉಚ್ಚಾಂಕಗಳು ದೊರೆತಿವೆ. ಪ್ರಚಾರಕರು: 30,410; ರೆಗ್ಯುಲರ್ ಪಯನೀಯರರು: 2,759. ಈ ತಿಂಗಳ ಸೇವೆಯಲ್ಲಿ 5,67,953 ತಾಸುಗಳನ್ನು ಕಳೆದೆವು, 1,90,491 ಪುನರ್ಭೇಟಿಗಳನ್ನು ಮತ್ತು 33,882 ಬೈಬಲ್ ಅಧ್ಯಯನಗಳನ್ನು ಮಾಡಿದೆವು. ಇವು ಸಹ ಈ ತನಕದ ವರದಿಯಲ್ಲಿ ಉಚ್ಚಾಂಕಗಳಾಗಿವೆ.