ಸೇವಾ ಕೂಟದ ಶೆಡ್ಯೂಲ್
ಡಿಸೆಂಬರ್ 8ರಿಂದ ಆರಂಭವಾಗುವ ವಾರ
ಗೀತೆ 19
10 ನಿ:ಸ್ಥಳಿಕ ಪ್ರಕಟಣೆಗಳು. ಅಕ್ಟೋಬರ್-ಡಿಸೆಂಬರ್ ಕಾವಲಿನಬುರುಜು ಮತ್ತು ಅಕ್ಟೋಬರ್-ಡಿಸೆಂಬರ್ ಎಚ್ಚರ! ಪತ್ರಿಕೆಗಳ ಕುರಿತು ಪುಟ 4ರಲ್ಲಿರುವ ಮಾದರಿ ನಿರೂಪಣೆಗಳನ್ನು ಸಂಕ್ಷಿಪ್ತವಾಗಿ ಪರಿಗಣಿಸಿ. ಈ ಸಂಚಿಕೆಗಳನ್ನು ನೀಡಿ ಒಳ್ಳೇ ಫಲಿತಾಂಶ ಪಡೆದ ಸಭಿಕರನ್ನು ಆಮಂತ್ರಿಸಿ, ಅವರದನ್ನು ಪ್ರಸ್ತುತಪಡಿಸಿದ ವಿಧಾನವನ್ನು ತಿಳಿಸುವಂತೆ ಕೇಳಿಕೊಳ್ಳಿ. ಅವರು ಯಾವ ಲೇಖನ, ಪ್ರಶ್ನೆ ಮತ್ತು ವಚನವನ್ನು ಉಪಯೋಗಿಸಿದರು?
15 ನಿ:2009ರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲೆಯ ಮೇಲ್ವಿಚಾರಕನಿಂದ ಭಾಷಣ. ಅಕ್ಟೋಬರ್ 2008ರ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಸ್ಥಳಿಕ ಸಭೆಗೆ ಮರುಜ್ಞಾಪಿಸಬೇಕಾದ ಅಂಶಗಳನ್ನು ಚರ್ಚಿಸಿರಿ. ಸಹಾಯಕ ಸಲಹೆಗಾರನ ಪಾತ್ರವನ್ನು ಪರಿಗಣಿಸಿ. ಪ್ರತಿಯೊಬ್ಬರು ಶ್ರದ್ಧೆಯಿಂದ ತಮ್ಮ ತಮ್ಮ ನೇಮಕಗಳನ್ನು ಪೂರೈಸುವಂತೆ, ಬೈಬಲ್ ಮುಖ್ಯಾಂಶಗಳಲ್ಲಿ ಭಾಗವಹಿಸುವಂತೆ ಮತ್ತು ಶುಶ್ರೂಷಾ ಶಾಲೆ ಪುಸ್ತಕದಿಂದ ಪ್ರತಿ ವಾರ ನೀಡಲ್ಪಡುವ ಸಲಹೆಗಳನ್ನು ಅನ್ವಯಿಸಿಕೊಳ್ಳುವಂತೆ ಉತ್ತೇಜಿಸಿರಿ.
20 ನಿ:“‘ಬೈಬಲ್ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ’ ಹಾಗೂ ‘ಚರ್ಚೆಗಾಗಿ ಬೈಬಲ್ ವಿಷಯಗಳು’ ಪುಸ್ತಿಕೆಗಳನ್ನು ಉಪಯೋಗಿಸುತ್ತಿದ್ದೀರೋ?” a ಪ್ಯಾರ 4ನ್ನು ಪರಿಗಣಿಸುವಾಗ, ‘ಯೆಹೋವನ ಸಾಕ್ಷಿಗಳು ಕ್ರಿಸ್‌ಮಸ್ ಹಬ್ಬವನ್ನು ಏಕೆ ಆಚರಿಸುವುದಿಲ್ಲ’ ಎಂಬ ಪ್ರಶ್ನೆಯನ್ನು ಮನೆಮನೆಯ ಸೇವೆಯಲ್ಲಿ ಉತ್ತರಿಸಲಿಕ್ಕಾಗಿ ಚರ್ಚೆಗಾಗಿ ವಿಷಯಗಳು ಪುಸ್ತಿಕೆಯನ್ನು ಉಪಯೋಗಿಸುವುದು ಹೇಗೆಂದು ಪಯನೀಯರ್ ಅಥವಾ ಅರ್ಹ ಪ್ರಚಾರಕನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಲಿ.
ಗೀತೆ 6
ಡಿಸೆಂಬರ್15ರಿಂದ ಆರಂಭವಾಗುವ ವಾರ
ಗೀತೆ 178
10 ನಿ:ಸ್ಥಳಿಕ ಪ್ರಕಟಣೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.
10 ನಿ:ಒತ್ತಿಹೇಳಲಿಕ್ಕಾಗಿ ಪುನರಾವರ್ತಿಸುವುದು. ಶುಶ್ರೂಷಾ ಶಾಲೆ ಪುಸ್ತಕದ ಪುಟ 207 ರ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಅದರಲ್ಲಿರುವ ಒಂದೆರಡು ಸಲಹೆಗಳನ್ನು ಸಂಕ್ಷಿಪ್ತವಾಗಿ ಪ್ರತ್ಯಕ್ಷಾಭಿನಯಿಸಿ.
25 ನಿ:ಯುವಜನರೇ, ದೇವರಿಗೆ ಗೌರವತರುವಂಥ ಗುರಿಗಳನ್ನು ಬೆನ್ನಟ್ಟಿರಿ. ಮೇ 1, 2007ರ ಕಾವಲಿನಬುರುಜು ಪುಟ 29-31, ಪ್ಯಾರ 9-19ರ ಮೇಲೆ ಆಧಾರಿತವಾಗಿ ಹಿರಿಯನೊಬ್ಬನಿಂದ ಭಾಷಣ. ಯುವ ಪ್ರಾಯದಿಂದ ಪೂರ್ಣ ಸಮಯದ ಸೇವೆಯನ್ನು ಬೆನ್ನಟ್ಟಿರುವ ಒಬ್ಬಿಬ್ಬರನ್ನು ಇಂಟರ್‌ವ್ಯೂ ಮಾಡಿರಿ. ಪೂರ್ಣ ಸಮಯದ ಸೇವೆಯನ್ನು ಅವರು ಏಕೆ ಆರಿಸಿಕೊಂಡರು? ಯಾವ ಆಶೀರ್ವಾದಗಳನ್ನು ಪಡೆದುಕೊಂಡರು?
ಗೀತೆ 221
ಡಿಸೆಂಬರ್22ರಿಂದ ಆರಂಭವಾಗುವ ವಾರ
ಗೀತೆ 75
10 ನಿ:ಸ್ಥಳಿಕ ಪ್ರಕಟಣೆಗಳು. ಅಕೌಂಟ್ಸ್ ವರದಿ ಮತ್ತು ದಾನದ ಅಂಗೀಕಾರ ಪತ್ರಗಳನ್ನು ಓದಿರಿ. ಜನವರಿ ತಿಂಗಳ ಸಾಹಿತ್ಯ ನೀಡುವಿಕೆಯ ಕುರಿತು ತಿಳಿಸಿ ಮತ್ತು ಅದನ್ನು ಕ್ಷೇತ್ರದಲ್ಲಿ ಹೇಗೆ ನೀಡಬಹುದೆಂಬುದನ್ನು ಹಿರಿಯನೊಬ್ಬನು ಪ್ರತ್ಯಕ್ಷಾಭಿನಯಿಸಲಿ.
15 ನಿ:ಜನವರಿ-ಮಾರ್ಚ್ ಕಾವಲಿನಬುರುಜು, ಜನವರಿ-ಮಾರ್ಚ್ ಎಚ್ಚರ! ನೀಡಲು ತಯಾರಿ. ಸಭಿಕರೊಂದಿಗಿನ ಚರ್ಚೆ. ಪತ್ರಿಕೆಗಳಲ್ಲಿರುವ ಲೇಖನಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಿದ ಬಳಿಕ ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಹೆಚ್ಚು ಆಸಕ್ತಿಕರವಾಗಿರಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿ. ಈ ಕೆಲವು ಲೇಖನಗಳನ್ನು ಉಪಯೋಗಿಸಿ, ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಅವರು ಕೇಳುತ್ತಾರೆ ಮತ್ತು ಪತ್ರಿಕೆಗಳನ್ನು ನೀಡುವ ಮುಂಚೆ ಲೇಖನದಲ್ಲಿರುವ ಯಾವ ಒಂದು ವಚನವನ್ನು ಓದುತ್ತಾರೆ ಎಂದು ತಿಳಿಸುವಂತೆಯೂ ಕೇಳಿ. ಪುಟ 4ರಲ್ಲಿರುವ ಮಾದರಿ ನಿರೂಪಣೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸಿ ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸುತ್ತಾ ಕೊನೆಗೊಳಿಸಿರಿ.
20 ನಿ:“ಬೈಬಲಧ್ಯಯನ ಸಾದರಪಡಿಸಲಿಕ್ಕಾಗಿ ಒಂದು ವಿಶೇಷದಿನ.” b ಜನವರಿ ತಿಂಗಳ ಯಾವ ವಾರಾಂತ್ಯದಲ್ಲಿ ಸಭೆಯು ಬೈಬಲಧ್ಯಯನ ಸಾದರಪಡಿಸುವಿಕೆಯ ಮೇಲೆ ಗಮನವನ್ನು ಕೇಂದ್ರೀಕರಿಸುವುದೆಂದು ಪ್ರಕಟಿಸಿರಿ. ಪ್ಯಾರ 3ರಲ್ಲಿರುವ ಸಲಹೆಗಳನ್ನು ಪರಿಶೀಲಿಸಿ ಮತ್ತು ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಒಂದೆರಡು ವಿಧಾನಗಳನ್ನು ಪ್ರತ್ಯಕ್ಷಾಭಿನಯಿಸಿ. ವಿವೇಚನೆ ತೋರಿಸುವ ಮತ್ತು ಜಾಗರೂಕರಾಗಿರುವ ಅಗತ್ಯವನ್ನು ಒತ್ತಿಹೇಳಿ.
ಗೀತೆ 133
ಡಿಸೆಂಬರ್29ರಿಂದ ಆರಂಭವಾಗುವ ವಾರ
ಗೀತೆ 60
❑ಸಭಾ ಬೈಬಲ್ ಅಧ್ಯಯನ
❑ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಪ್ರಕಟನೆ 15-22
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
❑ಸೇವಾ ಕೂಟ:
ಗೀತೆ 153
5 ನಿ:ಸ್ಥಳಿಕ ಪ್ರಕಟಣೆಗಳು.
10 ನಿ:ಸ್ಥಳಿಕ ಅಗತ್ಯಗಳು.
20 ನಿ:ರಕ್ತವನ್ನು ವರ್ಜಿಸಬೇಕೆಂಬ ದೇವರ ಆಜ್ಞೆಗೆ ವಿಧೇಯರಾಗುವುದು. ಹಿರಿಯನಿಂದ ಭಾಷಣ. ಡೀಪೀಏ ಕಾರ್ಡಿಗೆ ಬದಲಾಗಿ ನಾವೀಗ ಹೊಸ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್ ಅನ್ನು ಏಕೆ ಉಪಯೋಗಿಸುತ್ತೇವೆಂದು ಆರಂಭದಲ್ಲಿಯೇ ತಿಳಿಸಿರಿ. ಈ ಡೈರೆಕ್ಟಿವ್ ಅನ್ನು ಈ ರಾತ್ರಿಯೇ ತುಂಬಿಸಬಾರದು. ಭಾಷಣವಾಗುವಾಗ ಪ್ರಚಾರಕರೆಲ್ಲರು ಗಮನಿಸಲಿಕ್ಕಾಗುವಂತೆ, ಎಲ್ಲ ಸ್ನಾತ ಪ್ರಚಾರಕರಿಗೆ ಈ ಅಡ್ವಾನ್ಸ್ ಹೆಲ್ತ್ ಕೇರ್ ಡೈರೆಕ್ಟಿವ್‌ನ ಪ್ರತಿಗಳನ್ನು ಕೊಡಿ. 2006 ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುರವಣಿಯನ್ನು ಚರ್ಚಿಸಿರಿ. ರೋಮಾಪುರ 14:12 ಮತ್ತು ಗಲಾತ್ಯ 6:5ನ್ನು ಓದಿ. ಪ್ರತಿಯೊಬ್ಬನು ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿ ತಿಳಿಸುವ ಮೇರೆಗೆ ತನ್ನ ಕ್ರಿಯೆಗಳಿಗಾಗಿ ಯೆಹೋವನಿಗೆ ಲೆಕ್ಕಕೊಡಬೇಕೆಂಬುದನ್ನು ಒತ್ತಿಹೇಳಿ. ಈ ಡೈರೆಕ್ಟಿವ್ ಅನ್ನು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿ ಮನೆಯಲ್ಲಿ ಜಾಗರೂಕತೆಯಿಂದ ತುಂಬಿಸಬೇಕು. ಸರಿಯಾದ ತಾರೀಖು ಮತ್ತು ಸಹಿಯನ್ನು ಹಾಕುವ ಮಹತ್ತ್ವನ್ನು ಎತ್ತಿಹೇಳಿ. ಪ್ರತಿ ವರ್ಷ ಅದನ್ನು ನವೀಕರಿಸಬೇಕು. ತಮ್ಮ ಹೊಸ ಕಾರ್ಡನ್ನು ಭರ್ತಿಮಾಡದವರಿಗೆ ಸಹಾಯಬೇಕೋ ಎಂದು ನೋಡಲು ಗುಂಪು ಮೇಲ್ವಿಚಾರಕರು ಆಗಿಂದಾಗ್ಗೆ ಪರಿಶೀಲಿಸಬೇಕು. ಸಾಕ್ಷಿಗಳ ಅಸ್ನಾತ ಮಕ್ಕಳಿಗಾಗಿ ಸಾಕಷ್ಟು ಐಡೆಂಟಿಟಿ ಕಾರ್ಡ್ಸ್ ಲಭ್ಯವಿದೆಯೋ ಎಂಬುದನ್ನು ಸೆಕ್ರಿಟರಿಯು ಖಚಿತಪಡಿಸಿಕೊಳ್ಳಬೇಕು. ಯಾರಿಗೆ ಇಂಗ್ಲಿಷ್ ಭಾಷೆಯು ತಿಳಿದಿಲ್ಲವೋ ಅವರು ಸರಿಹೊಂದಿಸಿದ ಡೈರೆಕ್ಟಿವ್ ಅನ್ನು ತುಂಬಿಸುವಂತೆ ನೋಡಿಕೊಳ್ಳಿ. (dpa-E In 11/04-1)
ಗೀತೆ 214
ಜನವರಿ 5ರಿಂದ ಆರಂಭವಾಗುವ ವಾರ
ಗೀತೆ 35
❑ಸಭಾ ಬೈಬಲ್ ಅಧ್ಯಯನ
❑ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 1-5
ನಂ. 1: ಆದಿಕಾಂಡ 3:1-15
ನಂ. 2: ಒತ್ತಡದ ಕೆಳಗಿರುವ ಕುಟುಂಬ (fy-KA ಪು. 5-9 ¶ 1-14)
ನಂ. 3: ಯಾವುದು ನಿಷ್ಫಲವಾಗುವುದಿಲ್ಲ? (1 ಕೊರಿಂ. 15:58)
❑ಸೇವಾ ಕೂಟ:
ಗೀತೆ 98
5 ನಿ:ಸ್ಥಳಿಕ ಪ್ರಕಟಣೆಗಳು.
10 ನಿ:ಶುಶ್ರೂಷೆಯ ಕಡೆಗೆ ಯೇಸುವಿಗಿದ್ದ ಮನೋಭಾವವನ್ನು ಅನುಕರಿಸಿ. ಫೆಬ್ರವರಿ 15, 2008ರ ಕಾವಲಿನಬುರುಜು ಪುಟ 15-16, ಪ್ಯಾರ 17-20ರ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ.
20 ನಿ:“ಸಾರಲು ತಾಳ್ಮೆ ಅತ್ಯಾವಶ್ಯಕ.” c ಸಮಯವಿರುವಲ್ಲಿ ಕೊಡಲ್ಪಟ್ಟಿರುವ ವಚನಗಳ ಮೇಲೆ ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 155
[ಪಾದಟಿಪ್ಪಣಿಗಳು]
a ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.
b ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.
c ಪೀಠಿಕೆಯನ್ನು ಒಂದು ನಿಮಿಷದೊಳಗೆ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.