ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಅಕ್ಟೋ.-ಡಿಸೆಂ.
“ಪರಿಸರದಲ್ಲಿ ಆಗುತ್ತಿರುವ ಅಪಾಯಕರ ವಿಷಯಗಳು, ಮುಂದೆ ಭೂಮಿಗೆ ಏನಾಗುತ್ತದೋ ಎಂದು ಅನೇಕರು ಭಯಪಡುವಂತೆ ಮಾಡಿವೆ. ಇದರ ಬಗ್ಗೆ ನಿಮಗೇನನಿಸುತ್ತದೆ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಒಂದು ಶಾಸ್ತ್ರವಚನವನ್ನು ಓದಬಹುದೋ ಎಂದು ಕೇಳಿ. ಒಪ್ಪುವುದಾದರೆ ಕೀರ್ತನೆ 37:11 ಓದಿ.] ಭೂಮಿಯ ಪರಿಸ್ಥಿತಿಗಳು ಉತ್ತಮಗೊಳ್ಳುತ್ತವೆ ಎಂದು ನಾವು ನಂಬಲು ಈ ಪತ್ರಿಕೆ ಕೆಲವು ಕಾರಣಗಳನ್ನು ಕೊಡುತ್ತದೆ.”
ಎಚ್ಚರ! ಅಕ್ಟೋ.-ಡಿಸೆಂ.
“ಭೂಮಿಯ ಬಿಸಿಯೇರುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಮಾನವ ಸರಕಾರಗಳಿಗೆ ಸಾಧ್ಯವಿದೆಯೆಂದು ನಿಮಗನಿಸುತ್ತದೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಒಂದು ಶಾಸ್ತ್ರವಚನವನ್ನು ಓದಲು ಮನೆಯವರ ಅನುಮತಿ ಕೇಳಿ. ಒಪ್ಪುವುದಾದರೆ ಯೆರೆಮೀಯ 10:23 ಓದಿ. ] ನೀವು ಖಂಡಿತವಾಗಿಯೂ ಈ ಲೇಖನವನ್ನು ಇಷ್ಟಪಡುವಿರಿ. ಭೂಮಿಯನ್ನು ಅಪಾಯಕ್ಕೊಡ್ಡುತ್ತಿರುವ ಸಮಸ್ಯೆಗಳಿಗೆ ದೇವರು ತರುವ ಪರಿಹಾರದ ಕುರಿತು ಈ ಲೇಖನವು ಮಾತಾಡುತ್ತದೆ.” ಪುಟ 8ರಲ್ಲಿರುವ ಲೇಖನವನ್ನು ತೋರಿಸಿ.