ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2008ರ ಅಕ್ಟೋಬರ್ 27ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. ಸೆಪ್ಟೆಂಬರ್ 1ರಿಂದ ಅಕ್ಟೋಬರ್ 27ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧಾರಿತವಾದ 30-ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ಜನರೇನನ್ನು ನಂಬುತ್ತಾರೋ ಅದಕ್ಕಿರುವ ಕಾರಣವನ್ನು ನಾವು ಹೇಗೆ ಕಂಡುಹಿಡಿಯಸಾಧ್ಯವಿದೆ? [be-KA ಪು. 259 ಪ್ಯಾರ. 1, 2]
2. ಒಬ್ಬ ವ್ಯಕ್ತಿಯು ತನ್ನ ಹೃದಯದಿಂದ ದ್ವೇಷ ಮತ್ತು ಪೂರ್ವಗ್ರಹವನ್ನು ತೆಗೆದುಹಾಕುವಂತೆ ನಾವು ಅವನಿಗೆ ಹೇಗೆ ಸಹಾಯಮಾಡಬಲ್ಲೆವು? [be-KA ಪು. 260 ಪ್ಯಾರ. 2]
3. ಹೆಚ್ಚಿನ ಆಧ್ಯಾತ್ಮಿಕ ಅಭಿವೃದ್ಧಿ ಮಾಡುವ ಉದ್ದೇಶದೊಂದಿಗೆ ತಮ್ಮ ಸ್ವಂತ ಹೃದಯವನ್ನು ಪರೀಕ್ಷಿಸಿಕೊಳ್ಳಲು ನಾವು ನಮ್ಮ ವಿದ್ಯಾರ್ಥಿಗಳಿಗೆ ಹೇಗೆ ಸಹಾಯಮಾಡಬಲ್ಲೆವು? [be-KA ಪು. 261 ಪ್ಯಾರ. 3]
4. ನಮ್ಮ ಕೇಳುಗರ ಹೃದಯವನ್ನು ತಲಪಲು ಪ್ರಯತ್ನಿಸುತ್ತಿರುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು? [be-KA ಪು. 262 ಪ್ಯಾರ. 5]
5. ಸಭಾ ಕೂಟಗಳಲ್ಲಿ ಸಮಯಕ್ಕೆ ನಾವು ಏಕೆ ಗಮನ ಕೊಡಬೇಕು? [be-KA ಪು. 263 ಪ್ಯಾರ. 1, 3, ಚೌಕ]
ನೇಮಕ ನಂ. 1
6. ಕೊರಿಂಥದವರಿಗೆ ತನ್ನ ಮೊದಲ ಪತ್ರವನ್ನು ಬರೆಯಲು ಪೌಲನನ್ನು ಯಾವುದು ಪ್ರೇರಿಸಿತು? [bsi08-1-KA ಪು. 22 ಪ್ಯಾರ. 3]
7. ಪೌಲನು ಕೊರಿಂಥದವರಿಗೆ ಎರಡನೇ ಪತ್ರವನ್ನು ಬರೆಯಲು ಕೆಲವು ಕಾರಣಗಳು ಏನಾಗಿದ್ದವು? [bsi08-1-KA ಪು. 24 ಪ್ಯಾರ. 1-2]
8. ಶುಶ್ರೂಷೆಯ ಕಡೆಗೆ ಕ್ರೈಸ್ತರ ಮನೋಭಾವ ಏನಾಗಿರಬೇಕು? [bsi08-1-KA ಪು. 24 ಪ್ಯಾರ. 18]
9. ಫಿಲಿಪ್ಪಿಯದ ಸಹೋದರರಂತೆ ನಾವು ಸಹ ಇಂದು ದೇವರ ಒಪ್ಪಿಗೆಯನ್ನು ಪಡೆಯಲು ಮತ್ತು ಸಹೋದರರಿಗೆ ಸಂತೋಷವಾಗಿ ಪರಿಣಮಿಸಲು ಹೇಗೆ ಸಾಧ್ಯವಿದೆ? [bsi08-1-KA ಪು. 30 ಪ್ಯಾರ. 12]
10. ಪೌಲ ಮತ್ತು ಅವನ ಸಂಗಡಿಗರು ಥೆಸಲೊನೀಕ ಸಭೆಯವರ ಮೇಲೆ ಯಾವ ಒಳ್ಳೇ ಪರಿಣಾಮವನ್ನು ಬೀರಿದರು? [bsi08-2-KA ಪು. 4 ಪ್ಯಾರ. 13]
ವಾರದ ಬೈಬಲ್ ವಾಚನ
11. ‘ಆತ್ಮವು ರಕ್ಷಣೆ ಹೊಂದುವಂತೆ ಮತ್ತು ಅವನ ಶರೀರಭಾವವು ನಾಶವಾಗುವಂತೆ ದುಷ್ಟ ಮನುಷ್ಯನನ್ನು ಸೈತಾನನಿಗೆ ಒಪ್ಪಿಸಿಕೊಡಬೇಕು’ ಎಂಬುದರ ಅರ್ಥವೇನು? (1 ಕೊರಿಂ. 5:5) [w06-KA 12/1 ಪು. 17 ಪ್ಯಾರ. 4]
12. ಯೇಸುವಿನ ಮರಣದ ಜ್ಞಾಪಕಾಚರಣೆಯನ್ನು ಎಷ್ಟು “ಸಾರಿ” ಮಾಡಬೇಕು, ಮತ್ತು ಎಂದಿನ “ತನಕ”? (1 ಕೊರಿಂ. 11:26) [w08-KA 7/15 “ಯೆಹೋವನ ವಾಕ್ಯವು ಸಜೀವವಾದದ್ದು—ಕೊರಿಂಥದವರಿಗೆ ಬರೆದ ಪತ್ರಗಳ ಮುಖ್ಯಾಂಶಗಳು”]
13. ಎರಡನೆಯ ಕೊರಿಂಥ 12:2-4 ಯಾವ ದರ್ಶನದ ಕುರಿತು ತಿಳಿಸುತ್ತದೆ, ಮತ್ತು ಈ ದರ್ಶನವು ಯಾರಿಗೆ ಕೊಡಲ್ಪಟ್ಟಿರುವುದು ಸಂಭವನೀಯ? [w04-KA 10/15 ಪು. 8 ಪ್ಯಾರ. 4; ಪು. 9 ಪ್ಯಾರ. 9]
14. ಮೋಶೆಯ ಧರ್ಮಶಾಸ್ತ್ರವನ್ನು ಪೌಲನು ‘ಕ್ರಿಸ್ತನಲ್ಲಿಗೆ ಸೇರಿಸುವ ತನಕ ಕಾಯುವ ಆಳಿಗೆ’ ಯಾಕೆ ಹೋಲಿಸಿದನು? (ಗಲಾ. 3:24) [w03-KA 3/15 ಪು. 21 ಪ್ಯಾರ. 4]
15. “ನಿಮ್ಮ ಆತ್ಮಪ್ರಾಣಶರೀರಗಳು ದೋಷವಿಲ್ಲದೆ . . . ಕಾಪಾಡಲ್ಪಡಲಿ” ಎಂದು ಪೌಲನು ಪ್ರಾರ್ಥಿಸಿದ್ದು ಯಾವ ಅರ್ಥದಲ್ಲಿ? (1 ಥೆಸ. 5:23) [w08-KA 9/15 “ಯೆಹೋವನ ವಾಕ್ಯವು ಸಜೀವವಾದದ್ದು—ಥೆಸಲೊನೀಕದವರಿಗೆ ಮತ್ತು ತಿಮೊಥೆಯನಿಗೆ ಬರೆದ ಪತ್ರಗಳ ಮುಖ್ಯಾಂಶಗಳು”]