ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 7/08 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2008 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಜುಲೈ 14ರಿಂದ ಆರಂಭವಾಗುವ ವಾರ
  • ಜುಲೈ 21ರಿಂದ ಆರಂಭವಾಗುವ ವಾರ
  • ಜುಲೈ 28ರಿಂದ ಆರಂಭವಾಗುವ ವಾರ
  • ಆಗಸ್ಟ್‌ 4ರಿಂದ ಆರಂಭವಾಗುವ ವಾರ
2008 ನಮ್ಮ ರಾಜ್ಯದ ಸೇವೆ
km 7/08 ಪು. 2

ಸೇವಾ ಕೂಟದ ಶೆಡ್ಯೂಲ್‌

ಸೂಚನೆ: ಅಧಿವೇಶನದ ತಿಂಗಳುಗಳಲ್ಲಿ ಪ್ರತಿವಾರಕ್ಕಾಗಿ ನಮ್ಮ ರಾಜ್ಯದ ಸೇವೆಯಲ್ಲಿ ಒಂದು ಸೇವಾ ಕೂಟವು ಶೆಡ್ಯೂಲ್‌ ಆಗಿರುವುದು. “ಪವಿತ್ರಾತ್ಮದ ಮಾರ್ಗದರ್ಶನ” ಜಿಲ್ಲಾ ಅಧಿವೇಶನಕ್ಕೆ ಹಾಜರಾಗಲು ಸಾಧ್ಯವಾಗುವಂತೆ ಸಭೆಗಳು ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಿಕೊಳ್ಳಬಹುದು. ಸೂಕ್ತವಾಗಿರುವಲ್ಲಿ, ಅಧಿವೇಶನದ ಮುಂಚಿನ ವಾರದ ಸೇವಾ ಕೂಟದಲ್ಲಿ, ಈ ತಿಂಗಳ ಪುರವಣಿಯಲ್ಲಿರುವ ವಿಷಯಗಳಲ್ಲಿ ಸ್ಥಳಿಕವಾಗಿ ಅನ್ವಯವಾಗುವ ಸಲಹೆ ಮತ್ತು ಮರುಜ್ಞಾಪನಗಳನ್ನು ಪುನರಾವರ್ತಿಸಲು 15 ನಿಮಿಷಗಳನ್ನು ಉಪಯೋಗಿಸಿರಿ. ಅಧಿವೇಶನದ ಬಳಿಕ ಒಂದೆರಡು ತಿಂಗಳುಗಳಲ್ಲಿ ನಿಮ್ಮ ಸೇವಾ ಕೂಟದಲ್ಲಿ 15 ರಿಂದ 20 ನಿಮಿಷಗಳನ್ನು ಬದಿಗಿಟ್ಟು (ಪ್ರಾಯಶಃ ಸ್ಥಳಿಕ ಅಗತ್ಯಗಳ ಭಾಗವನ್ನು ಉಪಯೋಗಿಸಿ), ಅಧಿವೇಶನದಿಂದ ಪ್ರಚಾರಕರು ಶುಶ್ರೂಷೆಗೆ ಸಹಾಯಕರವಾಗಿ ಕಂಡುಕೊಂಡ ಅಂಶಗಳನ್ನು ಚರ್ಚಿಸಿರಿ. ಇದನ್ನು ಸೇವಾ ಮೇಲ್ವಿಚಾರಕನು ನಿರ್ವಹಿಸಬೇಕು. ಸಭಿಕರು ಆ ಮಾಹಿತಿಯನ್ನು ತಮ್ಮ ಶುಶ್ರೂಷೆಯಲ್ಲಿ ಹೇಗೆ ಅನ್ವಯಿಸುತ್ತಿದ್ದಾರೆ ಅಥವಾ ಅನ್ವಯಿಸಲಿದ್ದಾರೆ ಎಂದು ಕೇಳಿರಿ.

ಜುಲೈ 14ರಿಂದ ಆರಂಭವಾಗುವ ವಾರ

ಗೀತೆ 126

10 ನಿ:ಸ್ಥಳಿಕ ಪ್ರಕಟನೆಗಳು. ಪುಟ 8ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜುಲೈ-ಸೆಪ್ಟೆಂಬರ್‌ ಕಾವಲಿನಬುರುಜು ಮತ್ತು ಜುಲೈ-ಸೆಪ್ಟೆಂಬರ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ:ನಮ್ಮ ತುರ್ತು ಪ್ರಜ್ಞೆಯನ್ನು ಕಾಪಾಡಿಕೊಳ್ಳುವುದು. 2007 ಜನವರಿ 1ರ ಕಾವಲಿನಬುರುಜು ಪುಟ. 11-12, ಪ್ಯಾರ 17-21 ಆಧಾರಿತ ಉತ್ತೇಜಕ ಭಾಷಣ.

20 ನಿ:“ಸಭಾ ಪುಸ್ತಕ ಅಧ್ಯಯನದಲ್ಲಿ ಬೈಬಲ್‌ ಕಥೆಗಳ ನನ್ನ ಪುಸ್ತಕದ ಉಪಯೋಗ.”a ಈ ಪುಸ್ತಕದ ವಿಶೇಷ ವೈಶಿಷ್ಟ್ಯಗಳನ್ನು ತಿಳಿಸಿ. ಪುಸ್ತಕ ಅಧ್ಯಯನಕ್ಕಾಗಿರುವ ಶೆಡ್ಯೂಲನ್ನು ಪುನರ್ವಿಮರ್ಶಿಸಿರಿ. ಕ್ರಮವಾಗಿ ಹಾಜರಾಗುವಂತೆ ಹಾಗೂ ಉತ್ತರ ಹೇಳುವುದರಲ್ಲಿ ಪೂರ್ಣವಾಗಿ ಭಾಗವಹಿಸುವಂತೆ ಎಲ್ಲರನ್ನೂ ಉತ್ತೇಜಿಸಿರಿ. ಯಾವಾಗಲೂ ಚೆನ್ನಾಗಿ ತಯಾರಿಸಿ ಬರುವ ಒಬ್ಬಿಬ್ಬರು ಪ್ರಚಾರಕರನ್ನು ಸಂಕ್ಷೇಪವಾಗಿ ಇಂಟರ್‌ವ್ಯೂ ಮಾಡಿ, ಅವರನ್ನು ಹಾಗೆ ಮಾಡಲು ಯಾವುದು ಪ್ರಚೋದಿಸುತ್ತದೆಂದು ಕೇಳಿರಿ.

ಗೀತೆ 147

ಜುಲೈ 21ರಿಂದ ಆರಂಭವಾಗುವ ವಾರ

ಗೀತೆ 95

10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು.

15 ನಿ:ಸ್ಥಳಿಕ ಅಗತ್ಯಗಳು.

20 ನಿ:“ತಯಾರಿ​—⁠ಪರಿಣಾಮಕಾರಿ ಪುನರ್ಭೇಟಿಗಳಿಗೆ ಕೀಲಿಕೈ.”b ಒಬ್ಬ ಪ್ರಚಾರಕನು ಪುನರ್ಭೇಟಿಗಳಿಗಾಗಿ ತಯಾರಿಸುವ ನಾಲ್ಕು ನಿಮಿಷದ ಒಂದು ಸ್ವಗತವನ್ನು ಸೇರಿಸಿ. ಅವನು ತನ್ನ ರೆಕಾರ್ಡ್‌ ಅನ್ನು ಪರಿಶೀಲಿಸಿ, ಈ ವಾರಾಂತ್ಯ ತಾನು ಇಬ್ಬರು ವ್ಯಕ್ತಿಗಳನ್ನು ಪುನರ್ಭೇಟಿ ಮಾಡಬೇಕೆಂದು ಹೇಳುತ್ತಾನೆ. ಆ ಇಬ್ಬರೊಂದಿಗೆ ಹಿಂದಿನ ಭೇಟಿಯಲ್ಲಿ ಮಾತಾಡಿದ ವಿಷಯವನ್ನು ಮತ್ತೊಮ್ಮೆ ಪರಿಗಣಿಸುತ್ತಾನೆ. ತಾನು ಯಾವ ಉದ್ದೇಶ ಸಾಧಿಸಬೇಕೆಂದು ನಿರ್ಣಯಿಸಿ ಅದನ್ನು ಪೂರೈಸಲಿಕ್ಕಾಗಿ ತಯಾರುಮಾಡುತ್ತಾನೆ. ಒಬ್ಬನೊಂದಿಗೆ ಒಂದು ಬೈಬಲ್‌ ಅಧ್ಯಯನ ಆರಂಭಿಸಲು ಮತ್ತು ಇನ್ನೊಬ್ಬನೊಂದಿಗೆ ಈ ಲೇಖನದ ಪ್ಯಾರ 5ರ ಸಲಹೆಗಳನ್ನು ಉಪಯೋಗಿಸುತ್ತಾ ಆಸಕ್ತಿಯನ್ನು ಬೆಳೆಸಲು ತಯಾರಿಸುತ್ತಾನೆ.

ಗೀತೆ 189

ಜುಲೈ 28ರಿಂದ ಆರಂಭವಾಗುವ ವಾರ

ಗೀತೆ 6

10 ನಿ:ಸ್ಥಳಿಕ ಪ್ರಕಟನೆಗಳು. ಜುಲೈ ತಿಂಗಳ ಕ್ಷೇತ್ರಸೇವಾ ವರದಿಯನ್ನು ನೀಡಲು ನೆನಪಿಸಿರಿ. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರ ಓದಿರಿ. ಆಗಸ್ಟ್‌ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ. ಒಂದು ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.

10 ನಿ:ನೀವು ಹಿಂಜರಿಕೆಯಿಲ್ಲದೆ ಧೈರ್ಯದಿಂದ ಮಾತಾಡಬಲ್ಲಿರೋ? 2006, ಮೇ 15ರ ಕಾವಲಿನಬುರುಜು ಪುಟ. 13-16ರ ಮೇಲೆ ಆಧಾರಿತ ಭಾಷಣ. ಧೈರ್ಯದಿಂದ ಸಾರುವುದರ ಮಹತ್ವವನ್ನು ಒತ್ತಿಹೇಳಿ.

25 ನಿ:“ಆಧ್ಯಾತ್ಮಿಕ ಆಹಾರವನ್ನು ಉಂಡು ಉಲ್ಲಾಸಿಸುವ ಒಂದು ಸುಸಂದರ್ಭ.”c ಸಭಾ ಕಾರ್ಯದರ್ಶಿ ನಿರ್ವಹಿಸತಕ್ಕದ್ದು. ನಿಮ್ಮ ಸಭೆ ಯಾವ ಅಧಿವೇಶನಕ್ಕೆ ನೇಮಿಸಲ್ಪಟ್ಟಿದೆಯೆಂದು ತಿಳಿಸಿ. “ಜಿಲ್ಲಾ ಅಧಿವೇಶನ ಮರುಜ್ಞಾಪನಗಳು” ಚೌಕವನ್ನು ಪುನರ್ವಿಮರ್ಶಿಸಿರಿ.

ಗೀತೆ 197

ಆಗಸ್ಟ್‌ 4ರಿಂದ ಆರಂಭವಾಗುವ ವಾರ

ಗೀತೆ 222

10 ನಿ:ಸ್ಥಳಿಕ ಪ್ರಕಟನೆಗಳು.

15 ನಿ:ನಿಮ್ಮ ಮಕ್ಕಳು ತಮ್ಮ ವಿಶೇಷ ಟೆರಿಟೊರಿಗೆ ತಯಾರಿದ್ದಾರೋ? ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಶಾಲೆಯಲ್ಲಿ ಕ್ರೈಸ್ತ ಯುವಕರು ಎದುರಿಸುವ ಕೆಲವು ಸವಾಲುಗಳನ್ನು ತಿಳಿಸಿರಿ. ಸಹಾಯಕರ ಮಾಹಿತಿಗಾಗಿ ವಾಚ್‌ ಟವರ್‌ ಪಬ್ಲಿಕೇಷನ್‌ ಇಂಡೆಕ್ಸ್‌ ಅನ್ನು ಹೆತ್ತವರು ಮತ್ತು ಮಕ್ಕಳು ಹೇಗೆ ಉಪಯೋಗಿಸಬಹುದೆಂದು ವಿವರಿಸಿರಿ. ಕೆಲವು ಉದಾಹರಣೆಗಳನ್ನು ಕೊಡಿರಿ. (“Schools” ಎಂಬ ಮುಖ್ಯಶೀರ್ಷಿಕೆಯನ್ನು, “experiences” ಎಂಬ ಉಪಶೀರ್ಷಿಕೆಯನ್ನು ನೋಡಿರಿ.) ಕ್ರೈಸ್ತ ಕುಟುಂಬಗಳಲ್ಲಿ ಬೆಳೆಸಲ್ಪಟ್ಟ ಕೆಲವು ಸಭಿಕರನ್ನು ಆಮಂತ್ರಿಸಿ, ಶಾಲೆಗಳಲ್ಲಿ ಸವಾಲುಗಳನ್ನು ಎದುರಿಸಲು ಮತ್ತು ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಲು ಹೆತ್ತವರು ಅವರಿಗೆ ಹೇಗೆ ಕಲಿಸಿದರು ಎಂಬುದನ್ನು ತಿಳಿಸುವಂತೆ ಕೇಳಿಕೊಳ್ಳಿ. ಎಚ್ಚರ! ಪತ್ರಿಕೆಯಲ್ಲಿ ಕಂಡುಬಂದ ಕೆಲವು ವಿಷಯಗಳನ್ನು ಆಧರಿಸಿ ಅವರು ಹೇಗೆ ಸ್ಕೂಲ್‌ ರಿಪೋರ್ಟ್ಸ್‌ ಬರೆದರೆಂಬುದನ್ನೂ ತಿಳಿಸಬಹುದು. ತಮ್ಮ ವಿಶೇಷ ಟೆರಿಟೊರಿಯಲ್ಲಿ ಈ ರೀತಿ ಸೇವೆಮಾಡಿದ ಮೂಲಕ ತಮಗೆ ಹೇಗೆ ಭದ್ರತೆ ಸಿಕ್ಕಿತು ಎಂದವರು ಹೇಳಲಿ.

20 ನಿ:“ನಾವು ಕೋಟೆಗಳನ್ನು ಕೆಡವಿಹಾಕುತ್ತಿದ್ದೇವೆ.”d ಬಲವಾದ ಕೋಟೆಗಳಂತಿದ್ದ ಸುಳ್ಳು ಧಾರ್ಮಿಕ ನಂಬಿಕೆಗಳನ್ನು ತೊರೆದುಬಿಡುವಂತೆ ತಮ್ಮ ಬೈಬಲ್‌ ಬೋಧಕರು ತಾಳ್ಮೆಯಿಂದ ಹೇಗೆ ಸಹಾಯಮಾಡಿದರು ಎಂದು ಹೇಳುವಂತೆ ಸಭಿಕರನ್ನು ಆಮಂತ್ರಿಸಿರಿ.

ಗೀತೆ 83

[ಪಾದಟಿಪ್ಪಣಿಗಳು]

a ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

b ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

c ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

d ಪೀಠಿಕೆಯನ್ನು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಮುಗಿಸಿ ನಂತರ ಪ್ರಶ್ನೋತ್ತರ ಚರ್ಚೆ ಮಾಡಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ