ಸೇವಾ ಕೂಟದ ಶೆಡ್ಯೂಲ್
ಮೇ 12ರಿಂದ ಆರಂಭವಾಗುವ ವಾರ
ಗೀತೆ 134
10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. ಪುಟ 4ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಏಪ್ರಿಲ್-ಜೂನ್ ಕಾವಲಿನಬುರುಜು ಮತ್ತು ಏಪ್ರಿಲ್-ಜೂನ್ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ:ನಾವು ಯಾವುದೇ ಪರೀಕ್ಷೆಯನ್ನು ನಿಭಾಯಿಸಬಲ್ಲೆವು! 2005, ಜೂನ್ 15ರ ಕಾವಲಿನಬುರುಜು ಪುಟ 30-1ರ ಮೇಲೆ ಆಧಾರಿತವಾದ ಭಾಷಣ. ಒಂದು ಕಷ್ಟಪರೀಕ್ಷೆಯನ್ನು ನಿಭಾಯಿಸಲು ಯೆಹೋವನು ಹೇಗೆ ಸಹಾಯಮಾಡಿದನೆಂಬುದನ್ನು ತಿಳಿಸುವಂತೆ ನಿರ್ದಿಷ್ಟ ಪ್ರಚಾರಕರನ್ನು ಕೇಳಿಕೊಳ್ಳಿ.
20 ನಿ:ನೀವು ಬೇಸಗೆಯಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಬಲ್ಲಿರೋ? ಸಭಿಕರೊಂದಿಗಿನ ಚರ್ಚೆ. ಸಂಘಟಿತರು ಪುಸ್ತಕದ ಪುಟ 112-13ನ್ನು ಪರಿಗಣಿಸಿರಿ. ಆಕ್ಸಿಲಿಯರಿ ಪಯನೀಯರರಾಗಲು ತಲಪಬೇಕಾದ ಆವಶ್ಯಕತೆಗಳನ್ನು ತಿಳಿಸಿರಿ. ತಮ್ಮ ಕೆಲಸದ ರಜೆಯನ್ನು ಆಕ್ಸಿಲಿಯರಿ ಪಯನೀರ್ ಸೇವೆ ಮಾಡಲು ಬಳಸಿದವರಿಗೆ ಯಾವ ಆಶೀರ್ವಾದಗಳು ಸಿಕ್ಕಿದವೆಂದು ತಿಳಿಸುವಂತೆ ಕೇಳಿಕೊಳ್ಳಿರಿ. ಶಾಲೆಯಲ್ಲಿನ ರಜಾ ದಿನಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದವರನ್ನು, ಇತರರು ಹೇಗೆ ಪ್ರೋತ್ಸಾಹಿಸಿದರು ಹಾಗೂ ಸಹಾಯ ನೀಡಿದರೆಂದು ತಿಳಿಸುವಂತೆ ಕೇಳಿಕೊಳ್ಳಿ. ಆಧ್ಯಾತ್ಮಿಕವಾಗಿ ಪ್ರಗತಿಹೊಂದಲು ಆಕ್ಸಿಲಿಯರಿ ಪಯನೀಯರ್ ಸೇವೆ ಅವರಿಗೆ ಹೇಗೆ ಸಹಾಯ ನೀಡಿತು? ಯಾವ ಸಂತೋಷಗಳನ್ನು ಪಡೆದುಕೊಂಡರು? ಬೇಸಗೆಯ ತಿಂಗಳುಗಳಲ್ಲಿ ಪಯನೀಯರ್ ಸೇವೆಮಾಡಲು ಅರ್ಹರಾದವರೆಲ್ಲರನ್ನೂ ಉತ್ತೇಜಿಸಿರಿ.
ಗೀತೆ 187
ಮೇ 19ರಿಂದ ಆರಂಭವಾಗುವ ವಾರ
ಗೀತೆ 47
10 ನಿ:ಸ್ಥಳಿಕ ಪ್ರಕಟನೆಗಳು. ಪ್ರಶ್ನಾ ಚೌಕವನ್ನು ಪರಿಗಣಿಸಿರಿ.
10 ನಿ:ಸ್ಥಳಿಕ ಅಗತ್ಯಗಳು.
25 ನಿ:“ಉತ್ತರಹೇಳಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ.’’a ಒಬ್ಬ ಹಿರಿಯನು ನಿರ್ವಹಿಸತಕ್ಕದ್ದು. ಟೆರಿಟೊರಿಯಲ್ಲಿ ಎದುರಾಗುವ ಸಾಮಾನ್ಯ ಆಕ್ಷೇಪಣೆಗೆ ಹೇಗೆ ಸೌಜನ್ಯದಿಂದ ಪ್ರತಿಕ್ರಿಯಿಸಬೇಕೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
ಗೀತೆ 51
ಮೇ 26ರಿಂದ ಆರಂಭವಾಗುವ ವಾರ
ಗೀತೆ 103
10 ನಿ:ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಮೇ ತಿಂಗಳ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪುಹುಟ್ಟಿಸಿರಿ.
15 ನಿ:‘ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಳ್ಳಿ.’b ಸಮಯವಿರುವಲ್ಲಿ ಕೊಡಲಾಗಿರುವ ವಚನಗಳ ಕುರಿತು ಹೇಳಿಕೆ ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.
20 ನಿ:“ಐಶ್ವರ್ಯ ನಿಮ್ಮದಾಗಬಲ್ಲದು!” c ಸಂಘಟಿತರು ಪುಸ್ತಕದ 113-14ರಲ್ಲಿ, ರೆಗ್ಯುಲರ್ ಪಯನೀಯರರಾಗಲು ಇರಬೇಕಾದ ಅರ್ಹತೆಗಳ ಕುರಿತು ತಿಳಿಸಿರುವ ವಿಷಯಗಳ ಬಗ್ಗೆ ಹೇಳಿಕೆ ನೀಡಿರಿ. ಸೆಪ್ಟೆಂಬರ್ 1ರಿಂದ ಪಯನೀಯರರಾಗಲು ಬಯಸುವವರು ಸಾಧ್ಯವಾದಷ್ಟು ಬೇಗನೆ ಅರ್ಜಿಗಳನ್ನು ಸಲ್ಲಿಸತಕ್ಕದ್ದು.
ಗೀತೆ 169
ಜೂನ್ 2ರಿಂದ ಆರಂಭವಾಗುವ ವಾರ
ಗೀತೆ 221
10 ನಿ:ಸ್ಥಳಿಕ ಪ್ರಕಟನೆಗಳು.
20 ನಿ:ನಂಬಿಗಸ್ತನು ಆಶೀರ್ವಾದಪೂರ್ಣನಾಗುವನು. (ಜ್ಞಾನೋ. 28:20) ಸಭೆಯ ಕಾರ್ಯದರ್ಶಿಯಿಂದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಸಭೆಯ ಚಟುವಟಿಕೆಯನ್ನು ಹೆಚ್ಚಿಸಲು ಮಾಡಿದ ಪ್ರಯತ್ನಗಳನ್ನು ಯೆಹೋವನು ಹೇಗೆ ಆಶೀರ್ವದಿಸಿದ್ದಾನೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಿರಿ ಮತ್ತು ಶ್ಲಾಘನೆ ನೀಡಿರಿ. ಎಷ್ಟು ಮಂದಿ ಆಕ್ಸಿಲಿಯರಿ ಪಯನೀಯರ್ ಸೇವೆಮಾಡಿದರು, ಎಷ್ಟು ಬೈಬಲ್ ಅಧ್ಯಯನಗಳನ್ನು ಆರಂಭಿಸಿದರು ಮತ್ತು ಶುಶ್ರೂಷೆಯಲ್ಲಿ ಸಾಧಿಸಲಾದ ಇತರ ಒಳ್ಳೇ ವಿಷಯಗಳ ಕುರಿತು ತಿಳಿಸಿರಿ. ಜ್ಞಾಪಕಾಚರಣೆಗೆ ಮತ್ತು ಆಮಂತ್ರಣ ಪತ್ರಗಳನ್ನು ವಿತರಿಸುವ ಕಾರ್ಯಾಚರಣೆಗೆ ಸಂಬಂಧಿಸಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಕ್ಷೇತ್ರ ಸೇವೆಯಲ್ಲಿ ಸಿಕ್ಕಿದ ಗಮನಾರ್ಹ ಅನುಭವಗಳನ್ನು ಅಭಿನಯಿಸಿ ತೋರಿಸಬಹುದು. ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದರ ಫಲವಾಗಿ ಸಿಕ್ಕಿದ ಆಶೀರ್ವಾದಗಳ ಕುರಿತು ತಿಳಿಸುವ ಇಬ್ಬರು ಮೂವರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ.
15 ನಿ:‘ಸಕಲಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿರಿ.’d ಮನೆಮನೆಯ ಶುಶ್ರೂಷೆಗಾಗಿ ಯಾವಾಗ ಮತ್ತು ಹೇಗೆ ತಯಾರಿಸುತ್ತಾರೆಂಬುದನ್ನು ತಿಳಿಸುವಂತೆ ಸಭಿಕರನ್ನು ಕೇಳಿಕೊಳ್ಳಿ.
ಗೀತೆ 44
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.