ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/08 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2008 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಫೆಬ್ರವರಿ 11ರಿಂದ ಆರಂಭವಾಗುವ ವಾರ
  • ಫೆಬ್ರವರಿ 18ರಿಂದ ಆರಂಭವಾಗುವ ವಾರ
  • ಫೆಬ್ರವರಿ 25ರಿಂದ ಆರಂಭವಾಗುವ ವಾರ
  • ಮಾರ್ಚ್‌ 3ರಿಂದ ಆರಂಭವಾಗುವ ವಾರ
2008 ನಮ್ಮ ರಾಜ್ಯದ ಸೇವೆ
km 2/08 ಪು. 2

ಸೇವಾ ಕೂಟದ ಶೆಡ್ಯೂಲ್‌

ಫೆಬ್ರವರಿ 11ರಿಂದ ಆರಂಭವಾಗುವ ವಾರ

ಗೀತೆ 168

8 ನಿ:ಸ್ಥಳಿಕ ಪ್ರಕಟನೆಗಳು. ಪುಟ 12ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಜನವರಿ-ಮಾರ್ಚ್‌ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

15 ನಿ:“ನಮ್ಮ ಟೆರಿಟೊರಿಯಲ್ಲಿರುವ ಯೋಗ್ಯರನ್ನು ಹುಡುಕುವುದು.”a ಪ್ಯಾರ 3ನ್ನು ಪರಿಗಣಿಸಿದ ಬಳಿಕ ಒಂದು ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ. ಆ ಪ್ರತ್ಯಕ್ಷಾಭಿನಯದಲ್ಲಿ ಸಹೋದರನೊಬ್ಬನು ಸಾಮಾನ್ಯ ವಿಷಯಗಳ ಕುರಿತು ಚರ್ಚಿಸುತ್ತಾನೆ, ಮನೆಯವನ ಆಸಕ್ತಿಯನ್ನು ಗುರುತಿಸಿ ತನ್ನ ನಿರೂಪಣೆಯಲ್ಲಿ ಒಂದು ವಚನವನ್ನು ಪರಿಚಯಿಸುತ್ತಾನೆ.

22 ನಿ:“‘ಸುವಾರ್ತೆಯನ್ನು ಆಸಕ್ತಿಯಿಂದ’ ಪ್ರಕಟಿಸಿರಿ.”b (ಪ್ಯಾರ 1-10) ಸೇವಾ ಮೇಲ್ವಿಚಾರಕನು ನಿರ್ವಹಿಸತಕ್ಕದ್ದು. ಹೆಚ್ಚು ಕಾರ್ಯಮಗ್ನರಾಗಿದ್ದರೂ ಅಥವಾ ಅನಾರೋಗ್ಯದ ಸಮಸ್ಯೆಯಿದ್ದರೂ ಕಳೆದ ವರ್ಷ ಆಕ್ಸಿಲಿಯರಿ ಪಯನೀಯರ್‌ ಸೇವೆ ಮಾಡಿದ ಒಬ್ಬಿಬ್ಬರು ಪ್ರಚಾರಕರನ್ನು ಇಂಟರ್‌ವ್ಯೂ ಮಾಡಿರಿ. ಅವರದನ್ನು ಹೇಗೆ ಮಾಡಶಕ್ತರಾದರು? ಯಾವ ಸಂತೋಷಕರ ಅನುಭವಗಳನ್ನು ಪಡಕೊಂಡರು? ಪ್ಯಾರ 7ನ್ನು ಪರಿಗಣಿಸುವಾಗ ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಏರ್ಪಡಿಸಿರುವ ಕ್ಷೇತ್ರ ಸೇವೆಗಾಗಿರುವ ಕೂಟಗಳ ಬಗ್ಗೆ ಚುಟುಕಾಗಿ ತಿಳಿಸಿರಿ.

ಗೀತೆ 177

ಫೆಬ್ರವರಿ 18ರಿಂದ ಆರಂಭವಾಗುವ ವಾರ

ಗೀತೆ 17

10 ನಿ:ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.

15 ನಿ:ಸ್ಥಳಿಕ ಅಗತ್ಯಗಳು.

20 ನಿ:“‘ಸುವಾರ್ತೆಯನ್ನು ಆಸಕ್ತಿಯಿಂದ’ ಪ್ರಕಟಿಸಿರಿ.”c (ಪ್ಯಾರ. 11-17) ಜ್ಞಾಪಕಾಚರಣೆಯ ವಿಶೇಷ ಆಮಂತ್ರಣ ಪತ್ರಗಳು ಲಭ್ಯವಿರುವಲ್ಲಿ, ಪ್ಯಾರ 14ನ್ನು ಪರಿಗಣಿಸುವಾಗ ಸಭಿಕರೆಲ್ಲರಿಗೂ ಒಂದೊಂದು ಪ್ರತಿಯನ್ನು ವಿತರಿಸಿ. ಟೆರಿಟೊರಿಯನ್ನು ಆವರಿಸಲು ಸ್ಥಳಿಕವಾಗಿ ಮಾಡಿರುವ ಏರ್ಪಾಡುಗಳ ಬಗ್ಗೆ ತಿಳಿಸಿ.

ಗೀತೆ 119

ಫೆಬ್ರವರಿ 25ರಿಂದ ಆರಂಭವಾಗುವ ವಾರ

ಗೀತೆ 81

10 ನಿ:ಸ್ಥಳಿಕ ಪ್ರಕಟನೆಗಳು. ಫೆಬ್ರವರಿ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ನೀಡುವಂತೆ ಪ್ರಚಾರಕರಿಗೆ ನೆನಪಿಸಿರಿ. ಅಕೌಂಟ್ಸ್‌ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಜ್ಞಾಪಕಾಚರಣೆಗೆ ಕುಟುಂಬ ಸದಸ್ಯರನ್ನು ಅಥವಾ ನೆರೆಯವರನ್ನು ಆಮಂತ್ರಿಸಲು ಜ್ಞಾಪಕಾಚರಣೆಯ ಆಮಂತ್ರಣ ಪತ್ರವನ್ನು ಹೇಗೆ ಬಳಸುವುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.

20 ನಿ:“ವಿಮೋಚನಾ ಮೌಲ್ಯದ ಯಜ್ಞವನ್ನು ಕೃತಜ್ಞತೆಯಿಂದ ಸ್ಮರಿಸುವುದು.”d ಸಮಯವಿರುವಲ್ಲಿ, ಕೊಡಲಾಗಿರುವ ವಚನಗಳ ಕುರಿತು ಹೇಳಿಕೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿ.

15 ನಿ:ಶುಶ್ರೂಷಕರಾಗಿ ಪ್ರಗತಿಹೊಂದಲು ಹೊಸಬರಿಗೆ ಸಹಾಯಮಾಡಿರಿ. ಒಂದು ನಿಮಿಷದೊಳಗಿನ ಪೀಠಿಕೆಯ ಬಳಿಕ 2005, ಡಿಸೆಂಬರ್‌ 1ರ ಕಾವಲಿನಬುರುಜು, ಪುಟ 31ರಿಂದ ಅಧ್ಯಯನ ಪ್ರಶ್ನೆಗಳನ್ನು ಉಪಯೋಗಿಸುತ್ತಾ ಪ್ರಶ್ನೋತ್ತರ ಚರ್ಚೆ ನಡೆಸಿರಿ. ಪ್ಯಾರ 18ನ್ನು ಚರ್ಚಿಸಿದ ಬಳಿಕ, ಅನುಭವಸ್ಥ ಪ್ರಚಾರಕನೊಂದಿಗೆ ಸೇವೆ ಮಾಡುತ್ತಿರುವ ಒಬ್ಬ ಹೊಸ ಪ್ರಚಾರಕನಿಗೆ ಮನೆಯವನು ಆಕ್ಷೇಪವೆತ್ತುವುದನ್ನು ತೋರಿಸುವ ಒಂದು ಪ್ರತ್ಯಕ್ಷಾಭಿನಯವಿರಲಿ. ಹೊಸ ಪ್ರಚಾರಕನ ಪ್ರತಿಕ್ರಿಯೆಯು ಅಷ್ಟೊಂದು ಪರಿಣಾಮಕಾರಿಯಾಗಿರದ ಕಾರಣ ಮನೆಯವನು ಸಂಭಾಷಣೆಯನ್ನು ನಿಲ್ಲಿಸಿಬಿಡುತ್ತಾನೆ. ಆ ಮನೆಯಿಂದ ಹೊರಟುಬಂದ ಬಳಿಕ ಅನುಭವಸ್ಥ ಪ್ರಚಾರಕನು ಆ ಹೊಸಬನ ಪ್ರಯತ್ನವನ್ನು ಮನಃಪೂರ್ವಕವಾಗಿ ಪ್ರಶಂಸಿಸುತ್ತಾನೆ. ಬಳಿಕ, ಆ ಸಂಭಾಷಣಾ ತಡೆಗಟ್ಟನ್ನು ನಿಭಾಯಿಸಲು ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಪುಸ್ತಿಕೆಯನ್ನು ಹೇಗೆ ಉಪಯೋಗಿಸಬಹುದಿತ್ತು ಎಂದು ತೋರಿಸುತ್ತಾನೆ.

ಗೀತೆ 50

ಮಾರ್ಚ್‌ 3ರಿಂದ ಆರಂಭವಾಗುವ ವಾರ

ಗೀತೆ 223

10 ನಿ:ಸ್ಥಳಿಕ ಪ್ರಕಟನೆಗಳು. “ಜ್ಞಾಪಕಾಚರಣೆಯ ಮರುಜ್ಞಾಪನಗಳು” ಚೌಕದಿಂದ ಮುಖ್ಯ ಅಂಶಗಳನ್ನು ಪರಿಶೀಲಿಸಿರಿ.

15 ನಿ:ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ನೀವು ಸೇವೆ ಮಾಡುವಿರೋ? 2003, ಜುಲೈ 15ರ ಕಾವಲಿನಬುರುಜು ಪುಟ 20ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ. ಸಂಘಟಿತರು ಪುಸ್ತಕದ ಪುಟ 111, ಪ್ಯಾರ 1 ರಿಂದ ಪುಟ 112, ಪ್ಯಾರ 1ರಲ್ಲಿರುವ ವಿಷಯಗಳನ್ನು ಒಳಗೂಡಿಸಿರಿ. ಹೆಚ್ಚು ಅಗತ್ಯವಿರುವ ಸ್ಥಳಗಳಿಗೆ ಸ್ಥಳಾಂತರಿಸಿದವರನ್ನು ಚುಟುಕಾಗಿ ಇಂಟರ್‌ವ್ಯೂ ಮಾಡಿರಿ. ಅವರು ಯಾವ ಸಮಸ್ಯೆಗಳನ್ನು ಎದುರಿಸಿದರು ಮತ್ತು ಅವುಗಳನ್ನು ಹೇಗೆ ಜಯಿಸಿದರು? ಯಾವ ಆಶೀರ್ವಾದಗಳನ್ನು ಪಡಕೊಂಡರು? ಈ ದೇಶದಲ್ಲಿ, ಹೆಚ್ಚು ಅಗತ್ಯವಿರುವ ಸ್ಥಳಗಳಲ್ಲಿ ಸೇವೆಮಾಡಬಯಸುವ ಅರ್ಹ ಪ್ರಚಾರಕರ ಬಾರಿ ಅಗತ್ಯವಿದೆ. ಈ ವಿಷಯದ ಕುರಿತು ಪ್ರಾರ್ಥನಾಪೂರ್ವಕವಾಗಿ ಯೋಚಿಸುವಂತೆ ಸಹೋದರರನ್ನು ಉತ್ತೇಜಿಸಿರಿ. 2007, ಜುಲೈ ತಿಂಗಳ ನಮ್ಮ ರಾಜ್ಯದ ಸೇವೆಯಲ್ಲಿರುವ ಪ್ರಕಟನೆಯನ್ನು ನೋಡಿರಿ.

20 ನಿ:“ಬಲವಾದ ನಂಬಿಕೆಯ ರುಜುವಾತು!”e ಸೇವಾ ಮೇಲ್ವಿಚಾರಕನು ನಿರ್ವಹಿಸತಕ್ಕದ್ದು. ಕಳೆದ ಸೇವಾ ವರ್ಷದಲ್ಲಿ ಸಭೆಯು ಸಾಧಿಸಿದ ಸಕಾರಾತ್ಮಕ ವಿಷಯಗಳನ್ನು ತಿಳಿಸುತ್ತಾ ಭಾಗವನ್ನು ಸಮಾಪ್ತಿಗೊಳಿಸಿರಿ.

ಗೀತೆ 194

[ಪಾದಟಿಪ್ಪಣಿಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ