ಪ್ರಕಟಣೆಗಳು
◼ ಸಾಹಿತ್ಯ ನೀಡುವಿಕೆ—ಡಿಸೆಂಬರ್: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ. ಬದಲಿ ನೀಡುವಿಕೆಯಾಗಿ ಯೆಹೋವನ ಸಮೀಪಕ್ಕೆ ಬನ್ನಿರಿ ಅಥವಾ ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ಉಪಯೋಗಿಸಬಹುದು. ಜನವರಿ: ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕ ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಯಾವುದೇ ಪುಸ್ತಕ. ಇಂಥ ಪುಸ್ತಕಗಳು ಇಲ್ಲದಿರುವ ಸಭೆಗಳು, ಜ್ಞಾನ ಪುಸ್ತಕ (ಲಭ್ಯವಿರುವಲ್ಲಿ) ಅಥವಾ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಬಹುದು. ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್) ಅಥವಾ ಕುಟುಂಬ ಸಂತೋಷದ ರಹಸ್ಯ. ಮಾರ್ಚ್: ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್ ಅಧ್ಯಯನವನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ.
◼ ಅಧ್ಯಕ್ಷ ಮೇಲ್ವಿಚಾರಕನು ನೇಮಿಸುವ ಯಾರಾದರೊಬ್ಬರು ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಸಭೆಯ ಅಕೌಂಟ್ಸ್ ಅನ್ನು ಆಡಿಟ್ ಮಾಡಬೇಕು. ಆಡಿಟ್ ಮಾಡಲು ಕ್ರಮವಾಗಿ ಅದೇ ಸಹೋದರನನ್ನು ಬಳಸಬಾರದು. ಆಡಿಟ್ ಆದ ಅನಂತರ ಅದನ್ನು ಮುಂದಿನ ಅಕೌಂಟ್ಸ್ ವರದಿಯೊಂದಿಗೆ ಸಭೆಗೆ ಪ್ರಕಟಿಸಬೇಕು.—ಇನ್‌ಸ್ಟ್ರಕ್ಷನ್ಸ್ ಫಾರ್ ಕಾಂಗ್ರಿಗೇಷನ್ ಅಕೌಟಿಂಗ್ (S-27)ನ್ನು ನೋಡಿರಿ.
◼ ಇಸವಿ 2009ಕ್ಕಾಗಿರುವ ಜ್ಞಾಪಕಾಚರಣೆಯು ಗುರುವಾರ, ಏಪ್ರಿಲ್ 9ರಂದು ಸೂರ್ಯಾಸ್ತಮಾನದ ನಂತರ ನಡೆಯಲಿರುವುದೆಂಬುದನ್ನು ದಯವಿಟ್ಟು ಗಮನಿಸಿರಿ. ಈ ಮುಂಗಡ ಸೂಚನೆಯು ಕೊಡಲ್ಪಟ್ಟಿರುವುದಕ್ಕೆ ಕಾರಣವೇನೆಂದರೆ, ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿದ್ದು, ಬೇರೆ ಸಭಾಂಗಣದ ವ್ಯವಸ್ಥೆ ಮಾಡಬೇಕಾಗಿರುವಲ್ಲಿ ಸಹೋದರರು ಲಭ್ಯವಿರುವ ಹಾಲ್‌ಗಳಿಗಾಗಿ ಮಾಡಬೇಕಾದ ಕಾಯ್ದಿರಿಸುವಿಕೆ ಇಲ್ಲವೆ ಕಾಂಟ್ರ್ಯಾಕ್ಟ್ ಅನ್ನು ಮುಂಚಿತವಾಗಿ ಮಾಡಬಹುದಾಗಿದೆ. ಇಂಥ ಸಂದರ್ಭಗಳಲ್ಲಿ, ಜ್ಞಾಪಕಾಚರಣೆಯು ಶಾಂತಿಯಿಂದ ಮತ್ತು ಕ್ರಮಬದ್ಧವಾಗಿ ನಡೆಯಲು ಸಾಧ್ಯವಾಗುವಂತೆ, ಕಟ್ಟಡದಲ್ಲಿ ಬೇರೆ ಯಾವುದೇ ರೀತಿಯ ಚಟುವಟಿಕೆಗಳಿಂದ ಅಡಚಣೆಯಾಗದಿರುವುದನ್ನು ಖಚಿತಪಡಿಸಿಕೊಳ್ಳಲು ಸಭಾಂಗಣದ ನಿರ್ವಾಹಕ ಮಂಡಲಿಯಿಂದ ಹಿರಿಯರು ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಬೈಬಲ್ ಕಥೆಗಳ ನನ್ನ ಪುಸ್ತಕ—ಚಿಕ್ಕ ಸೈಜ್ —ನೇಪಾಲಿ
◼ ಅಮೇರಿಕನ್ ಸನ್ನೆ ಭಾಷೆಗಳಲ್ಲಿ ಲಭ್ಯವಿರುವ ಹೊಸ ಡಿವಿಡಿಗಳು:
ಲೂಕನಿಗನುಸಾರ ಸುವಾರ್ತೆ
ಯೆಹೋವನ ಅಧಿಕಾರವನ್ನು ಗೌರವಿಸಿರಿ
ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು