ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಪುನರ್ವಿಮರ್ಶೆ
ಇಸವಿ 2007ರ ಡಿಸೆಂಬರ್ 31ರಿಂದ ಆರಂಭವಾಗುವ ವಾರದಲ್ಲಿನ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಪರಿಗಣಿಸಲಾಗುವುದು. 2007ರ ನವೆಂಬರ್ 5ರಿಂದ ಡಿಸೆಂಬರ್ 31ರ ತನಕದ ವಾರಗಳಿಗಾಗಿರುವ ನೇಮಕಗಳಲ್ಲಿ ಆವರಿಸಲ್ಪಟ್ಟ ವಿಷಯಭಾಗದ ಮೇಲೆ ಆಧರಿತವಾದ 30 ನಿಮಿಷಗಳ ಪುನರ್ವಿಮರ್ಶೆಯನ್ನು ಶಾಲಾ ಮೇಲ್ವಿಚಾರಕನು ನಡೆಸುವನು.
ಭಾಷಣ ಗುಣಗಳು
1. ಪರಿಣಾಮಕಾರಿಯಾದ ಸಮಾಪ್ತಿ ಇರುವಂತೆ ಖಚಿತಮಾಡಿಕೊಳ್ಳಲು ನಾವು ಯಾವ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು? [be-KA ಪು. 220 ಪ್ಯಾರ 4-ಪು. 221 ಪ್ಯಾರ 3]
2. ನಾವು ಕ್ಷೇತ್ರ ಸೇವೆಯಲ್ಲಿ ಹೇಳುವ ವಿಷಯವು ನಿಷ್ಕೃಷ್ಟವಾಗಿದೆ ಎಂದು ಹೇಗೆ ಖಚಿತಮಾಡಿಕೊಳ್ಳಬಹುದು? [be-KA ಪು. 223 ಪ್ಯಾರ 2-4]
3. ಸಭಾ ಕೂಟಗಳಲ್ಲಿ ನಾವು ಕೊಡುವ ಭಾಷಣಗಳಲ್ಲಿ, “ಸತ್ಯಕ್ಕೆ ಸ್ತಂಭವೂ ಆಧಾರವೂ” ಆದ ಸಭೆಯ ಪಾತ್ರಕ್ಕೆ ನಾವು ಹೇಗೆ ಅತ್ಯಧಿಕ ಗೌರವವನ್ನು ತೋರಿಸಬಲ್ಲೆವು? (1 ತಿಮೊ. 3:15) [be-KA ಪು. 224 ಪ್ಯಾರ 1-4]
4. ನಾವು ನೀಡುವ ಮಾಹಿತಿಯ ನಂಬಲರ್ಹತೆಯನ್ನು ಪರೀಕ್ಷಿಸಿ ನೋಡುವುದು ಏಕೆ ಪ್ರಾಮುಖ್ಯ, ಮತ್ತು ನಾವು ಇದನ್ನು ಹೇಗೆ ಮಾಡಬಲ್ಲೆವು? [be-KA ಪು. 225 ಪ್ಯಾರ 1-2]
5. ಬೋಧಿಸುವಾಗ ನಮ್ಮ ವಿಷಯಭಾಗವು ಇತರರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ನಾವು ಏನು ಮಾಡಬಹುದು? [be-KA ಪು. 226 ಪ್ಯಾರ 3-ಪು. 227 ಪ್ಯಾರ. 1]
ನೇಮಕ ನಂ. 1
6. ಯೋನ ಪುಸ್ತಕದ ವಿಶ್ವಾಸಾರ್ಹತೆಯನ್ನು ಯಾವುದು ರುಜುಪಡಿಸುತ್ತದೆ? [bsi07-KA ಪು. 18 ಪ್ಯಾರ 3]
7. ಯೇಸು ಕ್ರಿಸ್ತನ ಮೂಲಕ ದೇವರ ರಾಜ್ಯದ ಆಳ್ವಿಕೆಯ ವಿಷಯದೊಂದಿಗೆ ಮೀಕನ ಯಾವ ಪ್ರವಾದನೆಯು ತಾಳೆಬೀಳುತ್ತದೆ? [bsi07-KA ಪು. 21 ಪ್ಯಾರ 18]
8. ಹಬಕ್ಕೂಕ ಪುಸ್ತಕವು ದೇವರಿಂದ ಪ್ರೇರಿತವಾಗಿದೆ ಎಂಬದನ್ನು ಯಾವುದು ರುಜುಪಡಿಸುತ್ತದೆ? [bsi07-KA ಪು. 24 ಪ್ಯಾರ 4]
9. ಯೆಹೂದ್ಯರು ತಾವು ಸೆರೆಯಿಂದ ಮರಳಿದ ಉದ್ದೇಶವನ್ನು ಸಾ.ಶ.ಪೂ. 520ರಲ್ಲೂ ಪೂರೈಸಿರಲಿಲ್ಲ ಎಂದು ಏಕೆ ಹೇಳಬಹುದು? (ಹಗ್ಗಾ. 1:4) [bsi07-KA ಪು. 27 ಪ್ಯಾರ 3]
10. ಜೆಕರ್ಯನು ಯಾವ ಮಹಿಮಾನ್ವಿತ ದಿನಕ್ಕೆ ಪದೇ ಪದೇ ಸೂಚಿಸುತ್ತಾನೆ? [bsi07-KA ಪು. 30 ಪ್ಯಾರ 26]
ವಾರದ ಬೈಬಲ್ ವಾಚನ
11. ಮಿಡತೆ ದಾಳಿಯ ಕುರಿತಾದ ಯೋವೇಲನ ಪ್ರವಾದನೆಯು ಮೊದಲನೇ ಶತಮಾನದಲ್ಲಿ ಹೇಗೆ ನೆರವೇರಿತು, ಮತ್ತು ಇಂದು ಹೇಗೆ ನೆರವೇರುತ್ತಿದೆ? (ಯೋವೇ. 2:1-10, 28) [w07-KA 10/1 “ಯೆಹೋವನ ವಾಕ್ಯವು ಸಜೀವವಾದದ್ದು—ಯೋವೇಲ ಹಾಗೂ ಆಮೋಸ ಪುಸ್ತಕಗಳ ಮುಖ್ಯಾಂಶಗಳು”]
12. “ಮಾಗಿದ ಹಣ್ಣಿನ ಪುಟ್ಟಿ” ಏನನ್ನು ಸೂಚಿಸಿತು? (ಆಮೋ. 8:1, 2) [w07-KA 10/1 “ಯೆಹೋವನ ವಾಕ್ಯವು ಸಜೀವವಾದದ್ದು—ಯೋವೇಲ ಹಾಗೂ ಆಮೋಸ ಪುಸ್ತಕಗಳ ಮುಖ್ಯಾಂಶಗಳು”]
13. ಯೆಹೋವನು ನಿನೆವೆಗೆ ‘ತಾನು ಮಾಡುವೆನೆಂದು ಪ್ರಕಟಿಸಿದ್ದ ಕೇಡಿನ ಕುರಿತು ಮನಮರುಗಿದ್ದು’ ಯಾವ ಅರ್ಥದಲ್ಲಿ, ಮತ್ತು ಇದು ನಮ್ಮನ್ನು ಹೇಗೆ ಪ್ರಭಾವಿಸಬೇಕು? (ಯೋನ 3:10) [w03-KA 7/15 ಪು. 17-18]
14. ಯೆಹೋವನ ಹೆಸರಿನಲ್ಲಿ ನಡೆಯುವುದರ ಅರ್ಥವೇನು? (ಮೀಕ 4:5) [w03-KA 8/15 ಪು. 17 ಪ್ಯಾರ 19]
15. ಆಧುನಿಕ ದಿನಗಳಲ್ಲಿ ಯೆಹೋವನು ನ್ಯಾಯತೀರಿಸಲಿಕ್ಕೆಂದು ತನ್ನ “ಆಲಯಕ್ಕೆ” ಬಂದದ್ದು ಯಾವಾಗ ಮತ್ತು ಹೇಗೆ? (ಮಲಾ. 3:1-3) [re-KA ಪು. 32 ಚೌಕ; jd ಪು. 179 ಪ್ಯಾರ 3-ಪು. 181 ಪ್ಯಾರ 6]