ಸೇವಾ ಕೂಟದ ಶೆಡ್ಯೂಲ್
ಡಿಸೆಂಬರ್ 10ರಿಂದ ಆರಂಭವಾಗುವ ವಾರ
ಗೀತೆ 46
10 ನಿ: ಸ್ಥಳಿಕ ಪ್ರಕಟನೆಗಳು. ಪುಟ 6ರಲ್ಲಿರುವ ಸಲಹೆಗಳನ್ನು ಅಥವಾ ನಿಮ್ಮ ಟೆರಿಟೊರಿಗೆ ಸೂಕ್ತವಾಗಿರುವ ಇತರ ನಿರೂಪಣೆಗಳನ್ನು ಉಪಯೋಗಿಸುತ್ತಾ ಅಕ್ಟೋಬರ್-ಡಿಸೆಂಬರ್ ಎಚ್ಚರ! ಮತ್ತು ಡಿಸೆಂಬರ್ 1ರ ಕಾವಲಿನಬುರುಜು ಪತ್ರಿಕೆಗಳನ್ನು ಹೇಗೆ ನೀಡಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ.
20 ನಿ: 2008ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ. ಶಾಲಾ ಮೇಲ್ವಿಚಾರಕನಿಂದ ಭಾಷಣ. ಅಕ್ಟೋಬರ್ 2007ರ ನಮ್ಮ ರಾಜ್ಯದ ಸೇವೆಯ ಪುರವಣಿಯಿಂದ ಸ್ಥಳಿಕವಾಗಿ ಒತ್ತಿಹೇಳಬೇಕಾದ ಅಂಶಗಳನ್ನು ಚರ್ಚಿಸಿರಿ. ಸಹಾಯಕ ಸಲಹೆಗಾರನ ಪಾತ್ರವನ್ನು ಪರಿಶೀಲಿಸಿರಿ. ಪ್ರತಿಯೊಬ್ಬರು ಶ್ರದ್ಧೆಯಿಂದ ತಮ್ಮ ನೇಮಕಗಳನ್ನು ಪೂರೈಸುವಂತೆ, ಬೈಬಲ್ ಮುಖ್ಯಾಂಶಗಳಲ್ಲಿ ಭಾಗವಹಿಸುವಂತೆ, ಪ್ರತಿ ವಾರ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ ಪುಸ್ತಕದಿಂದ ಕೊಡಲ್ಪಡುವ ಸಲಹೆಗಳನ್ನು ಅನ್ವಯಿಸಿಕೊಳ್ಳುವಂತೆ ಉತ್ತೇಜಿಸಿರಿ.
15 ನಿ: “ಮನಮುರಿದವರಿಗೆ ಸಾಂತ್ವನ.”a ಒಂದೆರಡು ಸ್ಥಳಿಕ ಅನುಭವಗಳನ್ನು ಸಂಕ್ಷಿಪ್ತವಾಗಿ ತಿಳಿಸಿರಿ.
ಗೀತೆ 34
ಡಿಸೆಂಬರ್ 17ರಿಂದ ಆರಂಭವಾಗುವ ವಾರ
ಗೀತೆ 28
10 ನಿ: ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
15 ನಿ: “ಶುಶ್ರೂಷೆಗಾಗಿ ನಮ್ಮ ಹುರುಪನ್ನು ಕಾಪಾಡಿಕೊಳ್ಳಬೇಕು.”b ಶುಶ್ರೂಷೆಯಲ್ಲಿ ಹುರುಪುಳ್ಳವನಾಗಿರುವ ಒಬ್ಬ ಪ್ರಚಾರಕನನ್ನು ಇಂಟರ್‌ವ್ಯೂ ಮಾಡಿರಿ. ಕೇಳಬೇಕಾದ ಪ್ರಶ್ನೆಗಳು: ನಿಮ್ಮ ಹುರುಪನ್ನು ಕಾಪಾಡಿಕೊಳ್ಳಲು ನೀವು ಯಾವ ಪ್ರಯತ್ನಗಳನ್ನು ಮಾಡಬೇಕಾಯಿತು? ನಿಮ್ಮ ಹುರುಪನ್ನು ಕಾಪಾಡಿಕೊಳ್ಳಲು ನಿಮಗೆ ಯಾವುದು ಸಹಾಯಮಾಡಿದೆ?
20 ನಿ: “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವ ಪತ್ರಿಕೆಗಳನ್ನು ನೀಡಿರಿ.”c 2006, ನವೆಂಬರ್ ತಿಂಗಳ ನಮ್ಮ ರಾಜ್ಯದ ಸೇವೆಯ ಪುಟ 8ರಿಂದ ಹೇಳಿಕೆಗಳನ್ನು ನೀಡುವಂತೆ ಕೇಳಿರಿ. ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ತಿಂಗಳ ಎಚ್ಚರ! ಪತ್ರಿಕೆಗಳನ್ನು ಓದುವಂತೆ ಸಭಿಕರನ್ನು ಉತ್ತೇಜಿಸಿರಿ. ಮುಂದಿನ ವಾರದ ಕೂಟಕ್ಕೆ ಆ ಪತ್ರಿಕೆಗಳನ್ನು ತರುವಂತೆ ತಿಳಿಸಿರಿ.
ಗೀತೆ 139
ಡಿಸೆಂಬರ್ 24ರಿಂದ ಆರಂಭವಾಗುವ ವಾರ
ಗೀತೆ 212
10 ನಿ: ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್ ವರದಿ ಮತ್ತು ದಾನಗಳ ಅಂಗೀಕಾರ ಪತ್ರಗಳನ್ನು ಓದಿರಿ. ಜನವರಿ ತಿಂಗಳ ಸಾಹಿತ್ಯ ನೀಡುವಿಕೆಯನ್ನು ತಿಳಿಸಿರಿ ಮತ್ತು ಸೂಕ್ತ ನಿರೂಪಣೆಯೊಂದನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ಪ್ರಸ್ತುತ ಪತ್ರಿಕೆಗಳನ್ನು ನೀಡಲು ತಯಾರಿ. ಜನವರಿ-ಮಾರ್ಚ್ ಕಾವಲಿನಬುರುಜು ಮತ್ತು ಜನವರಿ-ಮಾರ್ಚ್ ಎಚ್ಚರ! ಪತ್ರಿಕೆಗಳ ಮೇಲೆ ಆಧಾರಿತವಾದ ಸಭಿಕರೊಂದಿಗಿನ ಚರ್ಚೆ. ಪ್ರತಿಯೊಂದು ಸಂಚಿಕೆಯ ಸಂಕ್ಷಿಪ್ತ ವಿವರಣೆಯನ್ನು ನೀಡಿದ ಬಳಿಕ, ಟೆರಿಟೊರಿಯಲ್ಲಿರುವ ಜನರಿಗೆ ಯಾವ ಲೇಖನಗಳು ಇಷ್ಟವಾಗಬಹುದು ಮತ್ತು ಏಕೆ ಎಂದು ಸಭಿಕರನ್ನು ಕೇಳಿರಿ. ತಾವು ಪರಿಚಯಪಡಿಸಲು ಯೋಜಿಸಿರುವ ಕೆಲವು ಲೇಖನಗಳ ಕುರಿತು ಸಲಹೆಗಳನ್ನು ನೀಡುವಂತೆ ಸಭಿಕರನ್ನು ಕೇಳಿಕೊಳ್ಳಿರಿ. ಸಂಭಾಷಣೆಯನ್ನು ಆರಂಭಿಸಲು ಯಾವ ಪ್ರಶ್ನೆಯನ್ನು ಕೇಳಸಾಧ್ಯವಿದೆ? ತದನಂತರ ಲೇಖನದಲ್ಲಿರುವ ಯಾವ ವಚನವನ್ನು ಓದಸಾಧ್ಯವಿದೆ? ಆ ವಚನವನ್ನು ಲೇಖನಕ್ಕೆ ಹೇಗೆ ಜೋಡಿಸಸಾಧ್ಯವಿದೆ? ನಮ್ಮ ರಾಜ್ಯದ ಸೇವೆಯಲ್ಲಿರುವ ಮಾದರಿ ನಿರೂಪಣೆಗಳನ್ನು ಅಥವಾ ಸಭಿಕರು ತಿಳಿಸುವ ಯಾವುದಾದರು ಒಂದು ನಿರೂಪಣೆಯನ್ನು ಉಪಯೋಗಿಸುತ್ತಾ ಪ್ರತಿಯೊಂದು ಪತ್ರಿಕೆಯನ್ನು ಹೇಗೆ ನೀಡಬಹುದೆಂದು ಪ್ರತ್ಯಕ್ಷಾಭಿನಯಿಸಿರಿ.
20 ನಿ: “ಬೈಬಲ್ ಅಧ್ಯಯನವೊಂದನ್ನು ನಡೆಸುವ ಗುರಿಯನ್ನಿಡಿ.”d ಇತ್ತೀಚಿಗೆ ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಿದ ಒಬ್ಬಿಬ್ಬರನ್ನು ಇಂಟರ್‌ವ್ಯೂ ಮಾಡಿ. ಆ ಅಧ್ಯಯನವನ್ನು ಹೇಗೆ ಆರಂಭಿಸಿದಿರಿ? ಅದು ಹೇಗೆ ಪ್ರಗತಿ ಹೊಂದುತ್ತಿದೆ?
ಗೀತೆ 21
ಡಿಸೆಂಬರ್ 31ರಿಂದ ಆರಂಭವಾಗುವ ವಾರ
ಗೀತೆ 89
10 ನಿ: ಸ್ಥಳಿಕ ಪ್ರಕಟನೆಗಳು. ಡಿಸೆಂಬರ್ ತಿಂಗಳ ಕ್ಷೇತ್ರ ಸೇವಾ ವರದಿಯನ್ನು ನೀಡುವಂತೆ ಪ್ರಚಾರಕರಿಗೆ ನೆನಪು ಹುಟ್ಟಿಸಿರಿ.
15 ನಿ: ದೈವಿಕ ಭಕ್ತಿಯ ಪ್ರೇರಣ ಶಕ್ತಿ. 1990, ಜುಲೈ 1ರ ಕಾವಲಿನಬುರುಜು ಪುಟ 22-3ರ ಮೇಲೆ ಆಧಾರಿತವಾದ ಉತ್ತೇಜನದಾಯಕ ಭಾಷಣ.
20 ನಿ: ಕಷ್ಟಗಳನ್ನು ಎದುರಿಸುತ್ತಿರುವಾಗ ಆಧ್ಯಾತ್ಮಿಕ ಸಮತೋಲನವನ್ನು ಕಾಪಾಡಿಕೊಳ್ಳಿರಿ. 2006, ಸೆಪ್ಟೆಂಬರ್ 1ರ ಕಾವಲಿನಬುರುಜು ಪುಟ 14-15, ಪ್ಯಾರ 5-9ರ ಮೇಲೆ ಆಧಾರಿತವಾದ ಭಾಷಣ ಮತ್ತು ಸಭಿಕರೊಂದಿಗಿನ ಚರ್ಚೆ.
ಗೀತೆ 202
ಜನವರಿ 7ರಿಂದ ಆರಂಭವಾಗುವ ವಾರ
ಗೀತೆ 159
10 ನಿ: ಸ್ಥಳಿಕ ಪ್ರಕಟನೆಗಳು.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಎಟಕಿಸಿಕೊಳ್ಳುವುದು.”e ಶುಶ್ರೂಷೆಯಲ್ಲಿ ತಮ್ಮನ್ನು ಕೊಟ್ಟುಕೊಳ್ಳುತ್ತಿರುವ ಸಹೋದರ ಸಹೋದರಿಯರ ಹೇಳಿಕೆಗಳನ್ನು ಸೇರಿಸಿರಿ. ಅವರು ಶುಶ್ರೂಷೆಯಲ್ಲಿ ಹೆಚ್ಚನ್ನು ಮಾಡಲು ಹೇಗೆ ಮಾರ್ಗಗಳನ್ನು ಸದಾ ಹುಡುಕುತ್ತಾರೆಂದು ವಿವರಿಸಲಿ. ಒಂದೆರಡು ಹೇಳಿಕೆಗಳನ್ನು ಮುಂಚಿತವಾಗಿಯೇ ಏರ್ಪಡಿಸಬಹುದು.
ಗೀತೆ 102
[ಪಾದಟಿಪ್ಪಣಿಗಳು]
a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
c ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
d ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.
e ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಅನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.