ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 10/07 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2007 ನಮ್ಮ ರಾಜ್ಯದ ಸೇವೆ
2007 ನಮ್ಮ ರಾಜ್ಯದ ಸೇವೆ
km 10/07 ಪು. 7

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸುವ ಗುರಿಯೊಂದಿಗೆ ಬೈಬಲಿನ ಕುರಿತು ಹೆಚ್ಚನ್ನು ತಿಳಿದುಕೊಳ್ಳಲು ನೀವು ಬಯಸುವಿರೋ? ಎಂಬ ಟ್ರ್ಯಾಕ್ಟ್‌ ಕೊಟ್ಟು ಅದನ್ನು ಚರ್ಚಿಸಿರಿ. ನವೆಂಬರ್‌: ಬೈಬಲ್‌ ಕಥೆಗಳ ನನ್ನ ಪುಸ್ತಕ. ಮನೆಯವರು ತಮಗೆ ಮಕ್ಕಳಿಲ್ಲವೆಂದು ಹೇಳುವಲ್ಲಿ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಿರಿ. ಡಿಸೆಂಬರ್‌: ಜೀವಿಸಿರುವವರಲ್ಲೇ ಅತ್ಯಂತ ಮಹಾನ್‌ ಪುರುಷ. ಬದಲಿ ನೀಡುವಿಕೆಯಾಗಿ ಯೆಹೋವನ ಸಮೀಪಕ್ಕೆ ಬನ್ನಿರಿ ಅಥವಾ ಕುಟುಂಬ ಸಂತೋಷದ ರಹಸ್ಯ ಪುಸ್ತಕಗಳನ್ನು ಉಪಯೋಗಿಸಬಹುದು. ಜನವರಿ: ಬಣ್ಣವನ್ನು ಕಳೆದುಕೊಳ್ಳುವಂಥ ಕಾಗದದ ಮೇಲೆ ಮುದ್ರಿಸಲ್ಪಟ್ಟಿರುವ 192 ಪುಟದ ಯಾವುದೇ ಪುಸ್ತಕ ಅಥವಾ 1991ಕ್ಕೆ ಮುಂಚೆ ಪ್ರಕಟಿಸಲ್ಪಟ್ಟ ಇತರ ಪುಸ್ತಕ. ಇಂಥ ಪುಸ್ತಕಗಳು ಇಲ್ಲದಿರುವ ಸಭೆಗಳು, ಜ್ಞಾನ ಪುಸ್ತಕ (ಲಭ್ಯವಿರುವಲ್ಲಿ) ಅಥವಾ ಎಚ್ಚರಿಕೆಯಿಂದಿರಿ! ಬ್ರೋಷರನ್ನು ನೀಡಬಹುದು.

◼ ಡಿಸೆಂಬರ್‌ ತಿಂಗಳಿನಲ್ಲಿ ಐದು ವಾರಾಂತ್ಯಗಳಿರುವುದರಿಂದ, ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಮಾಡಲು ಇದೊಂದು ಅತ್ಯುತ್ತಮ ತಿಂಗಳಾಗಿರುವುದು.

◼ ರಕ್ತಪೂರಣಕ್ಕೆ ಬದಲಿಯಾದ ಆರೋಗ್ಯಾರೈಕೆ​—⁠ರೋಗಿಯ ಅಗತ್ಯಗಳು ಮತ್ತು ಹಕ್ಕುಗಳನ್ನು ಪೂರೈಸುವುದು (ಇಂಗ್ಲಿಷ್‌) ವಿಡಿಯೋ ಕಾರ್ಯಕ್ರಮವನ್ನು ಜನವರಿಯ ಒಂದು ಸೇವಾ ಕೂಟದಲ್ಲಿ ಪರಿಗಣಿಲಾಗುವುದು. ಈ ವಿಡಿಯೋವಿನ ಪ್ರತಿಗಳು ಬೇಕಾಗಿರುವಲ್ಲಿ ಸಾಧ್ಯವಾದಷ್ಟು ಬೇಗನೆ ಸಭೆಗಳ ಮೂಲಕ ವಿನಂತಿಸಿಕೊಳ್ಳತಕ್ಕದ್ದು.

◼ ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯ ಪುರವಣಿಯಲ್ಲಿ “2008ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶೆಡ್ಯೂಲ್‌” ಇದೆ. ಇದನ್ನು 2008ನೇ ಇಸವಿಯಾದ್ಯಂತ ಉಪಯೋಗಿಸಲಿಕ್ಕಾಗಿ ಜೋಪಾನವಾಗಿ ಇಟ್ಟುಕೊಳ್ಳತಕ್ಕದ್ದು.

◼ ದಯವಿಟ್ಟು ಗಮನಿಸಿ: ಸೇವಾ ಕೂಟದ ಕೊನೆಯ ಭಾಗವನ್ನು ನಿರ್ವಹಿಸುವ ಸಹೋದರನೇ ಸಮಾಪ್ತಿಯ ಗೀತೆಯನ್ನು ಪರಿಚಯಿಸಬೇಕು. ಬಳಿಕ ಅವನು ಅಥವಾ ಮುಂಚಿತವಾಗಿಯೇ ನೇಮಿಸಲ್ಪಟ್ಟ ಇನ್ನೊಬ್ಬ ಅರ್ಹ ಸಹೋದರನು ಸಮಾಪ್ತಿಯ ಪ್ರಾರ್ಥನೆಮಾಡುವನು.

◼ ಹೊಸ ಸೇವಾ ವರ್ಷದಲ್ಲಿ ಉಪಯೋಗಿಸಲಿಕ್ಕಾಗಿ ಆ್ಯನ್ಯುಅಲ್‌ ಸರ್ವಿಸ್‌ ಫಾರ್ಮ್‌ನ ಸಾಕಷ್ಟು ಸರಬರಾಜನ್ನು ಪ್ರತಿಯೊಂದು ಸಭೆಗೆ ಕಳುಹಿಸಲಾಗುತ್ತದೆ. ಕಳುಹಿಸಲಾದ ಮೊತ್ತವು ಮುಂದಿನ ಸೇವಾ ವರ್ಷಕ್ಕೆ ಸಾಕಾಗುವುದೋ ಎಂಬುದನ್ನು ಕಾರ್ಯದರ್ಶಿಗಳು ಖಾತ್ರಿಪಡಿಸಿಕೊಳ್ಳತಕ್ಕದ್ದು. ಒಂದು ವೇಳೆ ಹೆಚ್ಚು ಮೊತ್ತವು ಬೇಕಿದ್ದಲ್ಲಿ ಅದನ್ನು ಕೂಡಲೆ ವಿನಂತಿಸಿಕೊಳ್ಳಬಹುದಾಗಿದೆ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ​—⁠ಉರ್ದು

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ​—⁠ಆ್ಯರಬಿಕ್‌

ದೇವರ ಮಾರ್ಗದರ್ಶನ​—⁠ಪರದೈಸಕ್ಕೆ ನಡೆಸುವ ಮಾರ್ಗ ​—⁠ಆ್ಯರಬಿಕ್‌

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ (ಟ್ರ್ಯಾಕ್ಟ್‌ ನಂ. 15) ​—⁠ಆ್ಯರಬಿಕ್‌

ಮನಗುಂದಿದವರಿಗೆ ಸಾಂತ್ವನ (ಟ್ರ್ಯಾಕ್ಟ್‌ ನಂ. 20) ​—⁠ಆ್ಯರಬಿಕ್‌

ಎಲ್ಲ ಕಷ್ಟಸಂಕಟಗಳು ಬೇಗನೆ ಕೊನೆಗೊಳ್ಳಲಿವೆ! (ಟ್ರ್ಯಾಕ್ಟ್‌ ನಂ. 27) ​—⁠ಆ್ಯರಬಿಕ್‌

◼ ಪುನಃ ಲಭ್ಯವಿರುವ ಪ್ರಕಾಶನಗಳು:

“ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ​—⁠ಹಿಂದಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ